For Quick Alerts
ALLOW NOTIFICATIONS  
For Daily Alerts

ಖಾರ ಹಾಗೂ ಸಿಹಿ ಮಿಶ್ರಿತ ಶುಂಠಿ ಉಪ್ಪಿನಕಾಯಿ

|
Ginger Pickle Recip
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಮಾತ್ರ ಊಟದ ರುಚಿ ಹೆಚ್ಚುವುದು. ಉಪ್ಪಿನಕಾಯಿಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇವತ್ತು ನಾವು ಶುಂಠಿಯಿಂದ ಖಾರ ಮತ್ತು ಸಿಹಿ ಮಿಶ್ರಿತ ಉಪ್ಪಿನಕಾಯಿ ಮಾಡುವ ವಿಧಾನ ತಿಳಿಯೋಣ. ಈ ಶುಂಠಿ ಉಪ್ಪಿನಕಾಯಿಯನ್ನು ಸುಲಭವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಶುಂಠಿ ಕಾಲು ಕೆಜಿ
* ಮೆಂತೆ 2 ಚಮಚ (ಹುರಿದಿದ್ದು)
* ಜೀರಿಗೆ 2 ಚಮಚ (ಹುರಿದಿದ್ದು)
* ಸಾಸಿವೆ ಒಂದು ಚಮಚ
* ಬೆಲ್ಲದ ಪಾಕ 2 ಚಮಚ
* ಚಿಟಿಕೆಯಷ್ಟು ಇಂಗು
* ನಿಂಬೆರಸ 2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ 1 ಕಪ್

ತಯಾರಿಸುವ ವಿಧಾನ:

1. ಶುಂಠಿಯನ್ನು ಉದ್ದಕ್ಕೆ , ತೆಳ್ಳಗಿನ ತುಂಡುಗಳಾಗಿ ಕತ್ತರಿಸಬೇಕು.

2. ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ಅದರಲ್ಲಿ ಮೆಂತೆ, ಜೀರಿಗೆ, ಸಾಸಿವೆ ಹಾಗೂ ಕೆಂಪು ಮೆಣಸನ್ನು ಹಾಕಬೇಕು(ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇಡಬೇಕು).

3. ಸಾಸಿವೆ ಚಟಾಪಟ ಶಬ್ದ ಬರುವಾಗ ಶುಂಠಿ ಹಾಕಿ ಶುಂಠಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

4. ಈಗ ಬೆಲ್ಲದ ಪಾಕ ಹಾಕಿ ಒಮ್ಮೆ ಸೌಟ್ ನಿಂದ ತಿರುಗಿಸಬೇಕು, ನಂತರ ಚಿಟಿಕೆಯಷ್ಟು ಇಂಗು, ಅರಿಶಿಣ ಪುಡಿ ಮತ್ತು ನಿಂಬೆ ರಸ, ರುಚಿಗೆ ತಕ್ಕ ಉಪ್ಪು ಹಾಕಿ 2-3 ನಿಮಿಷ ಸೌಟ್ ನಿಂದ ತಿರುಗಿಸುತ್ತಾ ಬಿಸಿ ಮಾಡಬೇಕು.

5. ನಂತರ ಗ್ಯಾಸ್ ಆಫ್ ಮಾಡಿ ಉಪ್ಪಿನಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿಲಿನಲ್ಲಿ 5-6 ಗಂಟೆಕಾಲ ಇಡಬೇಕು. ನಂತರ ಒಂದು ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಿಟ್ಟು ಬೇಕಾದಾಗ ಬಳಸಿಕೊಳ್ಳಬಹುದು.

English summary

Ginger Pickle Recipe | Variety Of Pickle Recipe | ಶುಂಠಿ ಉಪ್ಪಿನಕಾಯಿ ರೆಸಿಪಿ | ಅನೇಕ ಬಗೆಯ ಉಪ್ಪಿನಕಾಯಿ ರೆಸಿಪಿ

This ginger recipe is very simple and can easily be prepared by you. In India we call a pickle as achar. And almost all Indians love to have the sweet and sour taste of an achar recipe.
X
Desktop Bottom Promotion