Latest Updates
-
ದೆಹಲಿ ಮಾಲಿನ್ಯ: ಉಸಿರುಗಟ್ಟುವ ಗಾಳಿಯಲ್ಲಿ ಆರೋಗ್ಯ ರಕ್ಷಣೆ ಹೇಗೆ? 12 ನಿಮಿಷದ ವರ್ಕೌಟ್ ಮತ್ತು ಮಾಸ್ಕ್ ಟಿಪ್ಸ್ -
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ
ಅಧಿಕ ಪ್ರೊಟೀನ್ ಇರುವ ನುಗ್ಗೆ ಸೊಪ್ಪಿನ ಚಟ್ನಿ

ಬಾಳೆ ಗಿಡ, ತೆಂಗಿನ ಮರದಂತೆ ನುಗ್ಗೆ ಮರದ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ. ನುಗ್ಗೆ ಕಾಯಿ ಹುಳಿ ಬಲು ರುಚಿಕರ. ಹಾಗೆಯೇ ನುಗ್ಗೆ ಮರದ ಎಲೆಯ ಚಟ್ನಿ ಕೂಡ ಚಪಾತಿ, ದೋಸೆಗೆ ಹೇಳಿ ಮಾಡಿಸಿದ್ದು. ನುಗ್ಗೆ ಮರದ ಕಾಂಡವನ್ನು ಔಷಧ ತಯಾರಿಸಲು ಬಳಸುತ್ತಾರೆ. ನುಗ್ಗೆ ಕಾಯಿಯಲ್ಲಿ ಅನ್ನಾಂಗ ಎ, ಬಿ1, ಬಿ2, ಬಿ3, ಸಿ, ಮತ್ತು ಕ್ಯಾಲ್ಸಿಯಂ ಹಾಗು ಕಬ್ಬಿಣದ ಅಂಶ ಅತ್ಯಧಿಕವಾಗಿರುತ್ತದೆ.
ಹಸಿರು ನುಗ್ಗೆ ಎಲೆಯಲ್ಲಿನ ಪ್ರೊಟೀನ್ ಪ್ರಮಾಣ ಭೂಮಿಯ ಮೇಲಿನ ಯಾವುದೇ ಹಸಿರೆಲೆಗಿಂತ ಅಧಿಕ. ಇದರಲ್ಲಿನ ಕಬ್ಬಿಣದ ಅಂಶ ಕೂಡ ಉಳಿದ ಹಸಿರೆಲೆಗಳಿಗೆ ಹೋಲಿಸಿದರೆ ಜಾಸ್ತಿ. ಕಬ್ಬಿಣದ ಅಂಶ ಕಡಿಮೆಯಾಗಿ ಆರೋಗ್ಯ ಏರುಪೇರಾದರೆ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಅತ್ಯುಪಯುಕ್ತ. ಈಗ ಚಟ್ನಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು
ನುಗ್ಗೆ ಸೊಪ್ಪು - 1 ಬಟ್ಟಲು
ಕೆಂಪು ಮೆಣಸಿನಕಾಯಿ - 6
ಕರಿ ಮೆಣಸು - 4
ಜೀರಿಗೆ - 1 ಚಮಚ
ಹುಣಸೆಹಣ್ಣು - ಸಣ್ಣ ಉಂಡೆಯಷ್ಟು
ತೆಂಗಿನಕಾಯಿ ತುರಿ - ಅರ್ಧ ಬಟ್ಟಲು
ತಯಾರಿಸುವ ವಿಧಾನ
* ಒಂದು ಬೋಗುಣಿಯಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೆಣಸಿನಕಾಯಿ, ಕರಿ ಮೆಣಸು, ಜೀರಿಗೆ, ನುಗ್ಗೆ ಸೊಪ್ಪು ಹಾಕಿ ಹುರಿಯಿರಿ.
* ಇದಕ್ಕೆ ಉಪ್ಪು, ಹುಣಸೆಹಣ್ಣು, ತೆಂಗಿನಕಾಯಿ ತುರಿ ಬೆರೆಸಿ, ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಈ ಚಟ್ನಿಯನ್ನು ಚಪಾತಿ ಅಥವಾ ದೋಸೆಯೊಡನೆ ತಿನ್ನಲು ಚೆನ್ನಾಗಿರುತ್ತದೆ. ಅಥವಾ ಬಿಸಿ ಅನ್ನದ ಜೊತೆಯೂ ಒಂದು ಚಮಚ ತುಪ್ಪ ಬೆರೆಸಿ ಉಣ್ಣಬಹುದು.



Click it and Unblock the Notifications
