For Quick Alerts
ALLOW NOTIFICATIONS  
For Daily Alerts

ವೆರಿಸಿಂಪಲ್ ಮಾವಿನಕಾಯಿ ಚಟ್ನಿ

By Prasad
|
Raw mango for summer special chutney
ಮಿಡಿಗಾಯಿ, ಮಾವಿನಕಾಯಿ, ಮಾವಿನಹಣ್ಣು, ಮಾವು ಜ್ಯೂಸು, ಮಾವಿನಕಾಯಿ ಉಪ್ಪಿನಕಾಯಿ, ಮಾವಿನಹಣ್ಣಿನ ಸೀಕರಣೆ, ಮಾವಿನಕಾಯಿ ಸಾರು ಮುಂತಾದ ಮಾವು ಆಧಾರಿತ ಆಹಾರ ಪದಾರ್ಥಗಳ ಸೇವನೆಯಿಲ್ಲದೆ ಬೇಸಿಗೆ ಕಳೆಯುವುದಿಲ್ಲ. ಜಾಣ ಜಾಣೆಯರು ಮಾವಿನ ಅಡುಗೆಗಳನ್ನು ಒಂದೊಂದಾಗಿ ಮಾಡುತ್ತಾ ಬರುತ್ತಾರೆ. ನೀವು?

ಹದಿಹರೆಯದ ಹುಡುಗಿಯರು ಪುರುಸೊತ್ತು ಮಾಡಿಕೊಂಡು ಮಾವಿನಕಾಯಿ ಚಟ್ನಿ ಮಾಡುವುದಕ್ಕೆ ಇಲ್ಲೊಂದು ಸಿಂಪಲ್ ರೆಸಿಪಿ ಸಲಹೆಯಿದೆ. ಇದನ್ನು ತಯಾರಿಸಿ ಅಪ್ಪ ಅಮ್ಮ ಅಜ್ಜಿಯನ್ನೂ ಚಕಿತಗೊಳಿಸುವ ಪ್ಲ್ಯಾನ್ ಇದೆ. ಜತೆಗೆ, ನಾಳೆ ಮದುವೆಯಾದನಂತರ ಎಲ್ಲಾ ಅಡುಗೆ ಕೆಲಸಗಳನ್ನು ನೀವೇ ಮಾಡಬೇಕಾಗಿರುವುದರಿಂದ ಈಗಿಂದಲೇ ಒಂದೊಂದಾಗಿ ಅಡುಗೆ ಕಲೆಯನ್ನು ಕಲಿಯುವುದು ಯಾವುದಕ್ಕೂ ಒಳ್ಳೆಯದು. ನಾಳೆ ಬೇಕೇಬೇಕಾಗುತ್ತೆ, ನೆನಪಿಡಿ. ಇಲ್ಲಿ ಕೊಟ್ಟಿರುವ ಮಾವಿನಕಾಯಿ ಚಟ್ನಿ ರೆಸಿಪಿ ವಿಧಾನ ತುಂಬಾ ಸರಳವಾಗಿದೆ. ಬೇಗ ಮಾಡಿ!

ಬೇಕಾಗುವ ಪದಾರ್ಥಗಳು

ಎರಡು ಮಾವಿನಕಾಯಿ
ಎರಡು ಸಣ್ಣ ತುಂಡು ಬೆಲ್ಲ
ಅರ್ಧ ಚಮಚ ಮೆಣಸಿನಪುಡಿ
ಒಂದು ಚಮಚ ಉಪ್ಪು

ಮಾಡುವ ವಿಧಾನ

ಮಾವಿನಕಾಯಿ ಸಿಪ್ಪೆಯನ್ನು ಸುಲಿದುಕೊಳ್ಳಿ. ಅಂದರೆ peel ಮಾಡುವುದು. ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿರಿ. ಎಳೆ ಮಾವಿನಕಾಯಿ ಬೀಜಗಳನ್ನು ಬಿಸಾಕಬಾರದು. ಮಾವಿನಹೋಳುಗಳು ಮತ್ತು ಬೀಜ ಎರಡನ್ನೂ ಕುಕ್ಕರ್ ನಲ್ಲಿ ಎರಡು ಕೂಗು ಬೇಯಿಸಿ ಆಮೇಲೆ ಮಿಕ್ಸಿಗೆ ಹಾಕಿ ರುಬ್ಬಿರಿ. ಇದಕ್ಕೆ ಮೆಣಸಿನಪುಡಿ, ಉಪ್ಪು, ಸಣ್ಣಗೆ ಪುಡಿ ಮಾಡಿದ ಬೆಲ್ಲ ಹಾಕಿ ಕಲಸಿರಿ. ಸಮಯ ಇದ್ದರೆ ಸಾಸಿವೆ, ಕರಿಬೇವು ಇಂಗು ಒಗ್ಗರಣೆ ಕೊಟ್ಟರೆ ರುಚಿ ಡಬ್ಬಲ್ ಆಗುತ್ತದೆ. ಚಪಾತಿ ಜತೆ ತಿನ್ನುವುದಕ್ಕೆ ಇದು ಹೇಳಿಮಾಡಿಸಿದ ಚಟ್ನಿ.

Story first published: Tuesday, April 27, 2010, 12:05 [IST]
X
Desktop Bottom Promotion