For Quick Alerts
ALLOW NOTIFICATIONS  
For Daily Alerts

ಖಾರ ನೆತ್ತಿಗೆ ಏರಿದರೆ ನಾವು ಹೊಣೆಯಲ್ಲ!?

By Staff
|

ಇದೇನಿದು ಮೆಣಸಿನಕಾಯನ್ನು ಬಿಡಿಬಿಡಿಯಾಗಿ ಉಪಯೋಗಿಸುದು ಗೊತ್ತು ಆದರೆ ಹಿಡಿಹಿಡಿಯಾಗಿ ತಿನ್ನಿ ಅಂತ ಹೇಳ್ತಿದ್ದೀರಲ್ಲಾ ಎಂದು ಆಶ್ಚರ್ಯ ಪಡಬೇಡಿ. ನೀವೇನಾದರೂ ಉತ್ತರ ಕನ್ನಡದ ಭೋಜನವನ್ನು ಸವಿದಿದ್ದರೆ ಖಾರದ ರುಚಿ ನಿಮ್ಮ ನಾಲಗೆಯ ಮೇಲೆ ಹೊರಳಿ ನೆತ್ತಿಗೆ ಹತ್ತಿದ್ದು ಇನ್ನೂ ಮರೆತಿರಲ್ಲ. ಅತಿಯಾದ ಖಾರ ಆರೋಗ್ಯಕ್ಕೆ ಒಳ್ಳೇದಲ್ಲ. ಆದರೆ ಇದನ್ನು ವ್ಯಂಜನವಾಗಿ ನಂಜಿಕೊಂಡು ತಿನ್ನಲು ಅಭ್ಯಂತರವಿಲ್ಲ. ಆಯುರ್ವೇದ ವೈದ್ಯಪದ್ದತಿಯಲ್ಲಿ ಮೆಣಸಿನಕಾಯಿಗೆ ವಿಶೇಷ ಸ್ಥಾನಮಾನವಿದೆ. ಲೈಂಗಿಕ ಶಕ್ತಿಯನ್ನು ವರ್ಧಿಸುತ್ತದೆ ಎಂದೂ ಹೇಳಲಾಗಿದೆ. ಈಗ ಹಸಿರು ಮೆಣಸಿನಕಾಯಿಗಳು ಹಣ್ಣಾಗುವ ಸಮಯ. ಹಣ್ಣಾದ ಕೆಂಪು ಮೆಣಸಿನ ಕಾಯಿಗಳಿಂದ ನಾನಾ ರೀತಿಯ ಚಟ್ನಿಗಳನ್ನು ಮಾಡಿ ಸವಿಯಬಹುದು.



ಬೇಕಾಗುವ ಸಾಮಗ್ರಿ:

ಹಣ್ಣಾದ ಮೆಣಸಿನಕಾಯಿ: 8
ಕಡ್ಲೆಬೇಳೆ: 1ಚಮಚ
ಉದ್ದಿನಬೇಳೆ:1 ಚಮಚ
ಎಲೆಕೋಸು: 1 ಬಟ್ಟಲು
ಕಾಯಿತುರಿ: ಅರ್ಧ ಕಪ್ಪು
ಜೀರಿಗೆ: ಅರ್ಧ ಚಮಚ
ಹೆಚ್ಚಿದ ಈರುಳ್ಳಿ: ಅರ್ಧ ಕಪ್ಪು
ಕರಿಬೇವು, ಕೊತ್ತಂಬರಿ, ಬೆಲ್ಲ, ಹುಣಸೆಹಣ್ಣು: ಸ್ವಲ್ಪ
ಸಾಸಿವೆ: 1 ಚಮಚ
ಎಳ್ಳು: 1ಚಮಚ
ಇಂಗು: ಚಿಟಿಕೆ
ಉಪ್ಪು: ರುಚಿಗೆ ತಕ್ಕಷ್ಟು


ಮಾಡುವ ವಿಧಾನ:

ಕಡ್ಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಮೆಣಸಿನಕಾಯಿ ಸೇರಿಸಿ ಎಣ್ಣೆಯಲ್ಲಿ ಹುರಿಯಿರಿ. ನಂತರ ಎಲ್ಲವನ್ನೂ ಸೇರಿಸಿ ರುಬ್ಬಿ ಕೊಳ್ಳಿ. ಇದರ ಮೇಲೆ ಸಾಸಿವೆ, ಎಳ್ಳು, ಇಂಗು, ಕರಿಬೇವು, ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿ. ಇದಕ್ಕೆ ಬೆಕಿದ್ದರೆ ನೀರನ್ನೂ ಸೇರಿಸಬಹುದು.

(ದಟ್ಸ್‌ಕನ್ನಡ ಪಾಕಶಾಲೆ)

English summary

Fiery chilli chutney -ಖಾರ ನೆತ್ತಿಗೆ ಏರಿದರೆ ನಾವು ಹೊಣೆಯಲ್ಲ!?

Recipe: Fiery chilli chutney
X
Desktop Bottom Promotion