For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿ ಅರಳಿದ ಘಮಘಮಿಸುವ ರವೆ ಇಡ್ಲಿ!

|

ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂದು ಚಿಂತಿಸುವವರಿಗೆ, ಮನೆಯಲ್ಲಿ ನೆಂಟರಿಷ್ಟರು ತುಂಬಿದ್ದಾಗ, ಉದ್ದು ನೆನೆಹಾಕಲು ಮರೆತು ಪೇಚಾಡುವ ಪ್ರಸಂಗ ಎದುರಾದಾಗ ಈ ದಿಢೀರ್ ಮೊಸರು ರವಾ ಇಡ್ಲಿ ಅತ್ಯುತ್ತಮ ತಿಂಡಿ. ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ. ಆದರೆ ಇದನ್ನು ತಯಾರಿಸಲು ಪ್ರಮುಖವಾಗಿ ಸ್ವಲ್ಪ ಹೆಚ್ಚು ಮೊಸರು ಬೇಕಾಗುತ್ತದೆ. ಹೆಪ್ಪು ಹಾಕಿಡಲು ಮರೆತರೂ ಅಂಗಡಿಗಳಲ್ಲಿ ಮೊಸರು ಸಿಗುವುದರಿಂದ ತಯಾರಿಸಲು ಪರದಾಡಬೇಕೆಂದಿಲ್ಲ.

ಇಡ್ಲಿ ಯಾವತ್ತಿದ್ದರೂ ತಿನ್ನಲು ಬೇಜಾರಾಗದ ತಿನಿಸು. ಆರೋಗ್ಯದಿಂದಿರಲಿ, ಅನಾರೋಗ್ಯವಿರಲಿ ಇಡ್ಲಿ ವರ್ಜ್ಯವಲ್ಲ. ಆದರೂ, ಅಕ್ಕಿಯಿಂದ ತಯಾರಿಸಿದ ಇಡ್ಲಿ ತಿಂದುತಿಂದು ಬೇಜಾರಾದಾಗ ರುಚಿದಾಯಕವಾದ ರವೆ ಇಡ್ಲಿಯನ್ನು ಪ್ರಯತ್ನಿಸಿ ನೋಡಿ. ರವೆ ಇಡ್ಲಿ ಪೌಷ್ಟಿಕಾಂಶಭರಿತವಾಗಿದ್ದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ತಿನಿಸಾಗಿದೆ, ಹಾಗಾದರೆ ತಡ ಯಾಕೆ ರವೆ ಇಡ್ಲಿ ಮಾಡುವ ವಿಧಾನವನ್ನು ನೋಡೋಣ...

*ಪ್ರಮಾಣ: ಮೂರು ಮಂದಿಗೆ ಸಾಕಾಗುವಷ್ಟು

*ತಯಾರಿಸಲು ಹಿಡಿಯುವ ಸಮಯ: ಹದಿನೈದು ನಿಮಿಷಗಳು

*ಬೇಯಲು ಅಗತ್ಯವಾದ ಸಮಯ:

Tasty Rava Idli Recipe for breakfast

ಇಪ್ಪತ್ತು ನಿಮಿಷಗಳು ಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ

ಬೇಕಾಗುವ ಸಾಮಾಗ್ರಿಗಳು

*ರವೆ - ಒಂದೂವರೆ ಕಪ್

*ಕೊತ್ತೊಂಬರಿ ಸೊಪ್ಪು- ಸಲ್ಪ (ಸಣ್ಣಗೆ ಕತ್ತರಿಸಿರುವ)

*ಮೊಸರು- ಒಂದು ಕಪ್

*ಎಣ್ಣೆ - ಎರಡು ಟೀ. ಚಮಚ

*ಹಸಿ ಮೆಣಸಿನ ಕಾಯಿ- 5 (ಸಣ್ಣಗೆ ಕತ್ತರಿಸಿರುವ)

*ಹಸಿ ಶುಂಠಿ - ಒಂದು ತುಂಡು (ಸಣ್ಣಗೆ ಕತ್ತರಿಸಿರುವ)

*ಸಾಸಿವೆ - ಒಂದು ಚಮಚ

*ಕರಿಬೇವಿನ ಸೊಪ್ಪು-ಎರಡು ಎಸಳು

*ಕ್ಯಾರೆಟ್- ಒಂದು (ತುರಿದಿರುವ)

*ಉಪ್ಪು ರುಚಿಗೆ ತಕ್ಕಷ್ಟು

ಮಕ್ಕಳ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರ ಮೆಕ್ಕೆಜೋಳದ ಇಡ್ಲಿ

ಮಾಡುವ ವಿಧಾನ:

* ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಸಿಡಿಸಿ, ಇದಕ್ಕೆ ಕತ್ತರಿಸಲಾಗಿರುವ ಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, ಕರಿಬೇವಿನ ಎಲೆಗಳನ್ನು ಹಾಕಿ ದೊಡ್ಡ ಮತ್ತು ಅಗಲವಾದ ಚಮಚದಿಂದ ಚೆನ್ನಾಗಿ ಕಲಸಿಕೊಳ್ಳಿ

* ತದನಂತರ ರವೆಯನ್ನು ಇದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ, ಹಾಗೂ ಹತ್ತು ನಿಮಿಷ ತಣ್ಣಗಾಗಲು ಬಿಡಿ

* ಹುರಿದ ಮಿಶ್ರಣ ತಣಿದ ಮೇಲೆ ಅದಕ್ಕೆ ಮೊಸರನ್ನು ಹಾಕಿ ಗಟ್ಟಿಯಾಗಿ ಇಡ್ಲಿ ಹಿಟ್ಟಿನ ಹದಕ್ಕೇ ಕಲಸಬೇಕು. ನೀರು ಹಾಕದಿದ್ದರೆ ಉತ್ತಮ. ಒಂದೊಮ್ಮೆ ಮೊಸರು ಸ್ವಲ್ಪ ಕಡಿಮೆ ಬಿದ್ದಲ್ಲಿ ಅರ್ಧ ಲೋಟ ನೀರು ಹಾಕೊಕೊಳ್ಳಿ. ಹಿಟ್ಟು ಮಾತ್ರ ತೆಳ್ಳಗಾಗಬಾರದು, ಇಡ್ಲಿ ಹಿಟ್ಟಿನ ಹದಕ್ಕೇ ಬರಬೇಕು.

* ಇಡ್ಲಿ ಹಿಟ್ಟನ್ನು ಇಡ್ಲಿಪಾತ್ರೆಗೆ ಹೊಯ್ದು ಬೇಯಿಸಿದರೆ ಬಿಸಿ ಬಿಸಿ ಮೊಸರು ರವಾ ಇಡ್ಲಿ ತಿನ್ನಲು ತಯಾರು. ಸಾಂಬಾರ್ ಅಥವಾ ಸಾರಿಗಿಂತಲೂ ತೆಂಗಿನಕಾಯಿಚಟ್ನಿಯೊಂದಿಗೆ ಇದನ್ನು ಸೇವಿಸಲು ಬಲು ರುಚಿಕರ.

* ಬೆಂದ ಬಳಿಕ ಇಳಿಸಿ ಬಿಸಿಯಿರುವಾಗಲೇ ಬಡಿಸಿ

ಸಲಹೆ:

*ಮಧುಮೇಹಿಗಳಿಗೆ ಮತ್ತು ಅತಿ ಒತ್ತಡದಿಂದ ಬಳಲುತ್ತಿರುವವರಿಗೆ ಇದು ಸೂಕ್ತವಾದ ರೆಸಿಪಿಯಾಗಿದೆ

*ಉತ್ತಮ ಫಲಿತಾಂಶಕ್ಕಾಗಿ ಇಡ್ಲಿಯ ಹಿಟ್ಟು ತಯಾರಾದ ತಕ್ಷಣ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಿ. ತಡವಾದಷ್ಟೂ ಇಡ್ಲಿ ಹೆಚ್ಚು ಧೃಢವಾಗುತ್ತಾ ಹೋಗುತ್ತದೆ.

English summary

Tasty Rava Idli Recipe for breakfast

Here's a delicious, appetizing south indian dish, rawa idli recipe out of rava and is easy to make. Learn how to make rawa idli.
Story first published: Friday, February 13, 2015, 23:24 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more