For Quick Alerts
ALLOW NOTIFICATIONS  
For Daily Alerts

ಬ್ರೇಕ್‌ಫಾಸ್ಟ್‌ಗಾಗಿ ಆಲೂ ಭಟೂರಾ ರೆಸಿಪಿ!

|

ನೀವೆಲ್ಲರೂ ಚೋಲೆ ಭಟೂರಾ ಹೆಸರನ್ನು ಕೇಳಿಸಿಕೊಂಡಿರಬಹುದು. ಪಂಜಾಬ್ ಸಿಜ್ವನ್‌ನಲ್ಲಿ ಹೆಸರು ಗಳಿಸಿದ ಡಿಶ್ ಇದಾಗಿದೆ. ಚೋಲೆ ಮೂಲತಃ ಚಿಕ್‌ಪೀಸ್ ಕರಿಯಾಗಿದ್ದು ಭಟೂರಾ ಒಂದು ಪ್ರಕಾರದ ಪೂರಿಯಾಗಿದೆ. ದೈನಂದಿನ ಭಟೂರಾವನ್ನು ಮೈದಾದಿಂದ ತಯಾರಿಸಲಾಗುತ್ತದೆ. ಆದರೆ ನಾವು ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸುವ ಮೂಲಕ ನಾವಿಂದು ರೆಸಿಪಿಯಲ್ಲಿ ವೈವಿಧ್ಯತೆಯನ್ನು ತರುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯಮ್ಮಿ ಗೋಧಿ ರವೆ ಉಪ್ಮಾ ರೆಸಿಪಿ!

ನಿಮ್ಮ ನಾಲಿಗೆಯನ್ನು ತಣಿಸುವ ರುಚಿಯನ್ನು ಹೊಂದಿರುವ ಈ ಆಲೂ ಭಟೂರಾ ರೆಸಿಪಿ ಹೊಟ್ಟೆ ಹಸಿವನ್ನು ತಣಿಸುವ ಮತ್ತು ನಿಮ್ಮ ಬ್ರೇಕ್‌ಫಾಸ್ಟ್‌ಗೆ ಪರ್ಫೆಕ್ಟ್ ಆಗಿದೆ. ನಿಮ್ಮ ಕುಟುಂಬದ ಪ್ರತಿಯೊಬ್ಬರೂ ವಿಶೇಷವಾಗಿ ಮಕ್ಕಳು ಖಂಡಿತ ಈ ರೆಸಿಪಿಯನ್ನು ಇಷ್ಟಪಡುತ್ತಾರೆ. ಆದ್ದರಿಂದ ಇನ್ನೇಕೆ ತಡ, ಕ್ರಿಸ್ಪಿಯಾಗಿರುವ ಆಲೂ ಭಟೂರಾ ರೆಸಿಪಿಯನ್ನು ಪ್ರಯತ್ನಿಸಿ.

Aloo Bhatura Recipe For Breakfast

ಪ್ರಮಾಣ: 3
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
.ಮೈದಾ - 2 ಕಪ್
.ಆಲೂಗಡ್ಡೆ - 2 ( ಬೇಯಿಸಿದ್ದು)
.ಮೊಸರು - 1/2 ಕಪ್
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 1 ಸ್ಪೂನ್
.ಎಣ್ಣೆ - ಕರಿಯಲು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯಮ್ಮಿ ಬ್ರೇಕ್‌ಫಾಸ್ಟ್ ಡಿಶ್ ಮಶ್ರೂಮ್ ಟೊಮೇಟೊ ಪರೋಟಾ

ಮಾಡುವ ವಿಧಾನ:
1. ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿ ಪಕ್ಕದಲ್ಲಿಡಿ.

2.ಬೌಲ್‌ನಲ್ಲಿ ಮೈದಾ ತೆಗೆದುಕೊಂಡು, ಹಿಸುಕಿದ ಆಲೂಗಡ್ಡೆ, ಮೊಸರು, ಒಂದು ಸ್ಪೂನ್‌ನಷ್ಟು ಎಣ್ಣೆ, ಮತ್ತು ಉಪ್ಪು ಸೇರಿಸಿ. ನಿಮ್ಮ ಕೈಗಳಿಂದ ಅವುಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

3.ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿಕೊಂಡು ಮೃದುವಾದ ಹಿಟ್ಟು ತಯಾರಿಸಿಕೊಳ್ಳಿ.

4.ಒದ್ದೆ ಮಸ್ಲಿನ್ ಬಟ್ಟೆಯಿಂದ ಹಿಟ್ಟನ್ನು 15 - 20 ನಿಮಿಷಗಳವರೆಗೆ ಕವರ್ ಮಾಡಿ.

5.ನಂತರ, ಪ್ಯಾನ್‌ನಲ್ಲಿ ಎಣ್ಣೆ ಬಿಸಿಮಾಡಿಕೊಳ್ಳಿ.

6.ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.

7.ಚಪಾತಿ ಆಕಾರದಲ್ಲಿ ಉಂಡೆಗಳನ್ನು ಲಟ್ಟಿಸಿಕೊಳ್ಳಿ.

8.ಚಪಾತಿ ಆಕಾರದ ಭಟೂರಾಗಳನ್ನು ಬಿಸಿ ಎಣ್ಣೆಗೆ ಜಾಗರೂಕತೆಯಿಂದ ಹಾಕಿ.

9.ಭಟೂರಾದ ಎರಡೂ ಬದಿ ಚೆನ್ನಾಗಿ ಕಾಯುವವರೆಗೆ ಕರಿಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ

10.ನಂತರ ಭಟೂರಾವನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ.

11.ಉಳಿದ ಭಟೂರಾಗಳನ್ನು ಈ ವಿಧಾನವನ್ನು ಅನುಸರಿಸಿ ತಯಾರಿಸಿ.

ಬಿಸಿಯಾದ ಆಲೂ ಭಟೂರಾ ಸವಿಯಲು ಸಿದ್ಧವಾಗಿದೆ. ಚೋಲೆ ಅಥವಾ ಚನ್ನಾ ಸಬ್ಜಿ ಈ ಭಟೂರಾವನ್ನು ಸವಿಯಲು ಉತ್ತಮ ಸೈಡ್‌ಡಿಶ್ ಆಗಿದೆ.

English summary

Aloo Bhatura Recipe For Breakfast

We are sure most of you must have heard about chole bhature. It is one of the signature dishes of the Punjabi cuisine. The chole is basically the chickpeas curry and bhatura is a kind of poori or deep fried Indian bread which is slightly bigger in size.
Story first published: Friday, March 21, 2014, 11:35 [IST]
X
Desktop Bottom Promotion