For Quick Alerts
ALLOW NOTIFICATIONS  
For Daily Alerts

ಖಂಡಾಂತರ ಉಪಾಹಾರ ಮತ್ತು ಗಂಜಿಊಟ ನಮಗೆ ಗೊತ್ತಿಲ್ಲ

By Super
|

ಗೋಸಿಯವರ ಮನೆ ತಿಂಡಿ ವಿವರಣೆ ಓದಿದರೆ ಉತ್ತರ ಕರ್ನಾಟಕದ ಕಡೆಯವರು ಅನ್ನಿಸುತ್ತೆ. ಇವರ ಮನೆಯಲ್ಲಿ ಒಂದ್ಸಲ ಮಂಡಕ್ಕಿ ಒಗ್ಗರಣೆ ತಿನ್ನಬೇಕ್ರೀ... ಸರ s!

ಗಂಜಿ ಉಪ್ಪಿನಕಾಯಿ ಮತ್ತು ಖಂಡಾಂತರ ಉಪಾಹಾರ ಹಾಗೂ ಪೆಜತ್ತಾಯ-ಸರೋಜಮ್ಮ ಅವರ ಮನೆಯ ಬೆಳಗಿನ ಉಪಾಹಾರದ ಬಾಯಿನೀರೂರಿಸುವ ಪುರಾಣ ಓದಿದೆ. ಚೆನ್ನಾಗಿದೆ. ನಮ್ಮ ಮನೆಯ ತಿಂಡಿ ಪುರಾಣವೂ ನಿಮಗೆ ಗೊತ್ತಿರಲಿ.

ನಮ್ಮ ಮನೆಯಲ್ಲಿ ಕಾಂಟಿನೆಂಟಲ್‌ ಬ್ರೇಕ್‌ಫಾಸ್ಟ್‌ ವಿಚಾರ ಗೊತ್ತೇ ಇಲ್ಲ. ನಾವು ಮಾಡುವ ಬೆಳಗಿನ ಆಹಾರದ ವಿವರಣೆ ಇಂತಿದೆ :

  • ಸೋಮವಾರ - ಉಪ್ಪಿಟ್ಟು
  • ಮಂಗಳವಾರ - ಅವಲಕ್ಕಿ
  • ಬುಧವಾರ - ಇಡ್ಲಿ + ಚಟ್ನಿ
  • ಗುರುವಾರ -ಮಂಡಕ್ಕಿ ಒಗ್ಗರಣೆ
  • ಶುಕ್ರವಾರ - ಶ್ಯಾವಿಗೆ ಉಪ್ಪಿಟ್ಟು
  • ಶನಿವಾರ - ಇಡ್ಲಿ + ಸಾಂಬಾರ್‌
  • ಭಾನುವಾರ -ಮಸಾಲೆದೋಸೆ +ಆಲೂಗೆಡ್ಡೆ ಪಲ್ಯ + ಚಟ್ನಿ

ಇವೆಲ್ಲ ಬೋರ್‌ ಆದಾಗ ಮ್ಯಾಗಿ ನ್ಯೂಡಲ್ಸ್‌, ಬ್ರೆಡ್‌ ಆಮ್ಲೆಟ್‌, ಬ್ರೆಡ್‌ ಒಗ್ಗರಣೆ, ಊತಪ್ಪ, ಪೂರಿ ಮೊಸರು ಚಟ್ನಿ, ಮತ್ತು ವಾರಕ್ಕೊಮ್ಮೆ ಮೆಣಸಿನಕಾಯಿ ಬಜ್ಜಿ, ಮಸಾಲೆ ವಡೆ, ಈರುಳ್ಳಿ ವಡೆ, ಏನಾದರೊಂದು ಕರಿದ ತಿಂಡಿ.

ಮೇಲೆ ಹೇಳಿದ ಯಾವುದಾದರೊಂದು ಪದಾರ್ಥ ಬೆಳಗಿನ ತಿಂಡಿಯಾಗುತ್ತದೆ ನಮ್ಮ ಮನೆಯಲ್ಲಿ. ಪಂಚತಾರಾ ಹೋಟೆಲುಗಳಿಗೆ ಹೋದಾಗಲೂ ಸಹ ಹಚ್ಚಿದ ಅವಲಕ್ಕಿ ಅಥವಾ ಮಂಡಕ್ಕಿ ಜತೆಗೆ ಇದ್ದೇ ಇರುತ್ತದೆ. ಆದ್ದರಿಂದ, ಕಾಂಟಿನೆಂಟಲ್‌ ಬ್ರೇಕ್‌ ಫಾಸ್ಟ್‌ ಆಗಲೀ ಅಥವಾ ಗಂಜಿ ಊಟವೇ ಆಗಲೀ ನಮ್ಮಿಂದ ದೂರವೇ ಉಳಿದಿದೆ.

X
Desktop Bottom Promotion