For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ನವಜಾತ ಶಿಶುಗಳ ಆರೈಕೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

|

ಚಳಿಗಾಲಕ್ಕೆ ಕಾಲಿಡುತ್ತಿರುವ ನಾವು, ಬೆವರುವ, ಸುಡುವ ಬಿಸಿಲಿನಿಂದ ಪರಿಹಾರ ಪಡೆಯಬಹುದು. ಆದರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ವಿಶೇಷವಾಗಿ ಮನೆಯ ಹಿರಿಯರು ಮತ್ತು ನವಜಾತ ಶಿಶುವನ್ನು ಈ ಋತುವಿನಲ್ಲಿ ರೋಗಗಳಿಂದ ರಕ್ಷಿಸಬೇಕು, ಏಕೆಂದರೆ ಅವರು ಬೇಗನೆ ಶೀತಕ್ಕೆ ಗುರಿಯಾಗುತ್ತಾರೆ.

ನಿಮ್ಮ ಮನೆಯಲ್ಲಿ ನವಜಾತ ಶಿಶು ಅಥವಾ ಸಣ್ಣ ಮಗು ಇದ್ದರೆ, ಚಳಿಗಾಲದಲ್ಲಿ ಅವುಗಳನ್ನು ಹೇಗೆ ಆರೋಗ್ಯವಾಗಿಡಬಹುದು ಎಂಬುದನ್ನು ಇಲ್ಲಿ ನೋಡೋಣ.

ಚಳಿಗಾಲದಲ್ಲಿ ನವಜಾತ ಶಿಶುಗಳ ರಕ್ಷಣೆ ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಕ್ಕಳನ್ನು ಚಳಿಯಿಂದ ರಕ್ಷಿಸುವುದು ಹೇಗೆ?

1. ಮನೆ ಬೆಚ್ಚಗಾಗಿಡಲು ಪ್ರಯತ್ನಿಸಿ:

1. ಮನೆ ಬೆಚ್ಚಗಾಗಿಡಲು ಪ್ರಯತ್ನಿಸಿ:

ಮನೆಯ ಎಲ್ಲಾ ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಇದರಿಂದ ಚಳಿಗಾಳಿ ಅಥವಾ ತಂಪು ಗಾಳಿ ಮನೆ ಪ್ರವೇಶಿಸುವುದಿಲ್ಲ ಅಥವಾ ಮನೆಯ ಕಿಟಕಿಗಳಿಗೆ ಪರದೆಯನ್ನು ಹಾಕುವುದು ಒಳ್ಳೆಯದು. ತುಂಬಾ ಹೆಚ್ಚು ತಂಪಿದ್ದರೆ, ಅಗ್ಗಿಷ್ಟಿಕೆಯನ್ನು ಹಾಕಬಹುದು.

2. ಏರ್ ಪ್ಯೂರಿಫೈಯರ್ಗಳನ್ನು ಬಳಸಿ :

2. ಏರ್ ಪ್ಯೂರಿಫೈಯರ್ಗಳನ್ನು ಬಳಸಿ :

ಮಗುವಿನ ಕೋಣೆಯಲ್ಲಿ ಏರ್ ಪ್ಯೂರಿಫೈಯರ್ಗಳನ್ನು ಬಳಸಿ. ಇದರಿಂದ ಮಕ್ಕಳು ಮಾಲಿನ್ಯ ಮತ್ತು ಹೊಗೆಯಿಂದ ಸುರಕ್ಷಿತವಾಗಿರುತ್ತಾರೆ.

3. ಕಂಬಳಿ ಬಳಸಿ:

3. ಕಂಬಳಿ ಬಳಸಿ:

ರಾತ್ರಿಯಲ್ಲಿ ಮಗುವಿನ ಮೇಲೆ ಹೆಚ್ಚು ಹೊದಿಕೆಗಳು ಅಥವಾ ರಗ್ಗಳನ್ನು ಹಾಕಬೇಡಿ. ಇದು ಅವರ ಉಸಿರು ಗಟ್ಟಿಸಬಹುದು. ಅದಕ್ಕೆ ಬದಲಾಗಿ, ಕೊಠಡಿಯನ್ನು ಬೆಚ್ಚಗಾಗಿಸಲು ಪ್ರಯತ್ನಿಸಿ ಮತ್ತು ಹಗುರವಾದ ಕಂಬಳಿ ಬಳಸಿ.

4. ಮೂಗಿನ ಸ್ಪ್ರೇ ಜೊತೆಗಿರಲಿ:

4. ಮೂಗಿನ ಸ್ಪ್ರೇ ಜೊತೆಗಿರಲಿ:

ಅತಿಯಾದ ತಂಪಿನಿಂದ ಮಕ್ಕಳು ಸುಲಭವಾಗಿ ಶೀತದಂತಹ ಸಮಸ್ಯೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಮೂಗು ಕಟ್ಟಿಕೊಳ್ಳುವುದು ಸಾಮಾನ್ಯ. ಇದಕ್ಕಾಗಿ ವೈದ್ಯರ ಸಲಹೆಯನ್ನು ಪಡೆದು ಮೂಗಿನ ಹನಿಗಳನ್ನು ಅಥವಾ ಸ್ಪ್ರೇ ಇಟ್ಟುಕೊಳ್ಳಿ.

5. ಹಾಸಿಗೆ ಬೆಚ್ಚಗಾಗಿಸಿ:

5. ಹಾಸಿಗೆ ಬೆಚ್ಚಗಾಗಿಸಿ:

ಮಗುವಿನ ಹಾಸಿಗೆಯನ್ನು ಬೆಚ್ಚಗೆ ಇರಿಸಿ. ಸರಿಯಾಗಿ ಒಣಗದ ಹಾಸಿಗೆ ಅಥವಾ ಬಟ್ಟೆಯನ್ನು ಮಕ್ಕಳಿಗೆ ಮಲಗುವ ವೇಳೆ ಹಾಕಬೇಡಿ. ಇದು ಮಕ್ಕಳಿಗೆ ಶೀತವಾಗುವಂತೆ ಮಾಡಬಹುದು. ಆದ್ದರಿಂದ ಮಲಗುವ ಮೊದಲು, ಬಿಸಿನೀರಿನ ಬಾಟಲಿಯನ್ನು ಇಡುವ ಮೂಲಕ ಹಾಸಿಗೆಯನ್ನು ಬೆಚ್ಚಗಾಗಿಸಿ.

6. ಹೊಟ್ಟೆನೋವಿಗೆ ಓಂಕಾಳು:

6. ಹೊಟ್ಟೆನೋವಿಗೆ ಓಂಕಾಳು:

ಹೊಟ್ಟೆನೋವು ಮಕ್ಕಳಲ್ಲಿ ಸಾಮಾನ್ಯವಾಗಿರುತ್ತದೆ. ನಿಮ್ಮ ಮಗು ಚಳಿಯಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಅಥವಾ ಹೊಟ್ಟೆ ಕಿರಿಕಿರಿ ಹೊಂದಿದ್ದರೆ, ಓಂಕಾಳು ಅಥವಾ ಓಂಕಾಳು ನೀರು ಸ್ವಲ್ಪ ಕುಡಿಸುವುದು ಪ್ರಯೋಜನಕಾರಿಯಾಗಿದೆ. ಆದರೆ, ವೈದ್ಯರ ಸಲಹೆ ಪಡೆಯುವದನ್ನು ಮರೆಯಬೇಡಿ.

7. ಮಸಾಜ್ ಮಾಡಿ:

7. ಮಸಾಜ್ ಮಾಡಿ:

ಚಳಿಗಾಲದಲ್ಲಿ ಮಗುವಿಗೆ ಮಸಾಜ್ ಮಾಡುವುದನ್ನು ಮರೆಯಬೇಡಿ. ಇದಕ್ಕಾಗಿ ಉಗುರುಬೆಚ್ಚನೆಯ ಎಣ್ಣೆಯನ್ನು ಬಳಸಿ. ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಬೇಬಿ ಎಣ್ಣೆಯನ್ನು ಬಳಸಬಹುದು. ಬಿಸಿ ಎಣ್ಣೆಯ ಬಳಕೆಯು ಮಗುವಿನ ಸ್ನಾಯುಗಳನ್ನು ಬಲಪಡಿಸುತ್ತದೆ, ಜೊತೆಗೆ ಮಗುವಿನ ದೇಹವನ್ನು ಬೆಚ್ಚಗಾಗಿಸುತ್ತದೆ.

8. ತಣ್ಣನೆಯ ವಸ್ತು ನೀಡಬೇಡಿ:

8. ತಣ್ಣನೆಯ ವಸ್ತು ನೀಡಬೇಡಿ:

ಅಪ್ಪಿ-ತಪ್ಪಿಯೂ ಮಗುವಿಗೆ ತಣ್ಣನೆಯ ವಸ್ತುಗಳನ್ನು ತಿನ್ನಿಸಬೇಡಿ. ನಿಮ್ಮ ಮಗು 7 ತಿಂಗಳಿಗಿಂತ ಚಿಕ್ಕದಾಗಿದ್ದರೆ ಮತ್ತು ಅವರು ಆಹಾರವನ್ನು ಸೇವಿಸುತ್ತಿದ್ದರೆ, ಅವರಿಗೆ ಐಸ್ಕ್ರೀಮ್, ಜ್ಯೂಸ್ ನಂತಹ ತಣ್ಣನೆಯ ಆಹಾರವನ್ನು ನೀಡಬೇಡಿ. ಇದಲ್ಲದೆ, ಮಕ್ಕಳಿಗೆ ತಂಗಳು ಆಹಾರವನ್ನು ನೀಡಬೇಡಿ.

9. ಕಾಲೋಚಿತ ಹಣ್ಣು-ತರಕಾರಿ ನೀಡಿ:

ಮಗುವಿಗೆ ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡಿ. ಇದು ಚಳಿಗಾಲದಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಇದಲ್ಲದೇ ಮಕ್ಕಳಿಗೆ ಬಾದಾಮಿ, ಗೋಡಂಬಿ, ಒಣದ್ರಾಕ್ಷಿಗಳನ್ನು ಪ್ರತಿದಿನ ತಿನ್ನಿಸಬಹುದು. ಮಗುವಿಗೆ ಪ್ರತಿದಿನ ಮೊಟ್ಟೆಗಳನ್ನು ತಿನ್ನಿಸಿ. ಮೊಟ್ಟೆಗಳು ನಿಮ್ಮ ಮಗುವಿನ ದೇಹವನ್ನು ಬೆಚ್ಚಗಿಡುತ್ತದೆ.

English summary

Winter Baby Care : How to Take Care of Infants During Winter Season in Kannada

Here we talking about Winter Baby Care : How to Take Care of Infants During Winter Season in Kannada, read on
X
Desktop Bottom Promotion