For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಕಾಡುವ ಆ ಭಯಗಳಾವುವು ಗೊತ್ತೇ?

|

ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಅತ್ಯಂತ ಸವಾಲಿನ ಜೊತೆಗೆ ಅತ್ಯಂತ ಸಂತೋಷದಾಯಕ ಸಮಯವಾಗಿದೆ. ಏಕೆಂದರೆ, ಇದು ಅತ್ಯಂತ ಅನಿರೀಕ್ಷಿತ ಹಂತವಾಗಿದ್ದು, ಅನೇಕ ಏರಿಳಿತಗಳಿಂದ ಕೂಡಿರುತ್ತದೆ. ಒಂಬತ್ತು ತಿಂಗಳ ಈ ಅವಧಿಯಲ್ಲಿ ದೇಹವು ತ್ವರಿತ ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಸಮಯದಲ್ಲಿ ಮಹಿಳೆಯರ ಮನಸ್ಸಿನಲ್ಲಿ ಕೆಲವು ಅಸಹಜ ಭಯ ಹುಟ್ಟಿಕೊಳ್ಳುವುದು ಸಹಜ. ಇವುಗಳಲ್ಲಿ ಕೆಲವು, ಅರ್ಥಪೂರ್ಣವಾದುದಾದರೂ, ಕೆಲವು ಆತಂಕಗಳಿಗೆ ಅರ್ಥವಿರುವುದಿಲ್ಲ.

ಆದ್ದರಿಂದ ನಾವಿಂದು, ಮಹಿಳೆಯರು ಎದುರಿಸುವ ಅಗ್ರ ಐದು ಗರ್ಭಾವಸ್ಥೆಯ 'ಭಯ'ಗಳನ್ನು ನಿಮ್ಮ ಮುಂದಿಡುತ್ತೇವೆ. ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.

ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಕಾಡುವ ಭಯಗಳಾವುವು ಎಂಬುದನ್ನು ಈ ಕೆಳಗೆ ನೀಡಲಗಿದೆ:

ನಾನೇನಾದರೂ ಮಗುವಿಗೆ ಹಾನಿ ಮಾಡುವಂತಹುದು ತಿಂದರೆ?:

ನಾನೇನಾದರೂ ಮಗುವಿಗೆ ಹಾನಿ ಮಾಡುವಂತಹುದು ತಿಂದರೆ?:

ಹೆಚ್ಚಿನ ಮಹಿಳೆಯರು ಏನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದಕ್ಕೆ ಹಲವಾರು ಸಲಹೆಯನ್ನು ಪಡೆಯುವುದರಿಂದ, ಏನನ್ನಾದರೂ ತಿನ್ನಲು ಯೋಚಿಸಿದಾಗ ಪ್ರತಿ ಬಾರಿ ಅತಿಯಾಗಿ ಯೋಚಿಸುವುದು ಸಹಜ. ಈ ಎಲ್ಲಾ ಸಲಹೆಗಳನ್ನು ಮನಸ್ಸಿನ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಆಲ್ಕೋಹಾಲ್, ಹಸಿ ಮಾಂಸ, ಹಸಿ ಸಮುದ್ರಾಹಾರ, ಪಾಶ್ಚರೀಕರಿಸದ ಹಾಲು ಅಥವಾ ಚೀಸ್ ಅನ್ನು ತಪ್ಪಿಸುವುದು ಮುಖ್ಯ, ಆದರೆ ನೀವು ಆಕಸ್ಮಿಕವಾಗಿ ಅಥವಾ ಅರಿವಿಲ್ಲದೇ ಸೇವಿಸಿದರೆ, ಅದಕ್ಕೆ ಅತಿಯಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ನನ್ನ ನೀರು ಸಾರ್ವಜನಿಕವಾಗಿ ಒಡೆದರೆ?:

ನನ್ನ ನೀರು ಸಾರ್ವಜನಿಕವಾಗಿ ಒಡೆದರೆ?:

ಇಲ್ಲಿಯವರೆಗೂ ಸಿನಿಮಾಗಳು ಮತ್ತು ಶೋಗಳಲ್ಲಿ ಇದನ್ನು ನೋಡಿ, ಭಯ ಹುಟ್ಟಿರುವುದು ಸಾಮಾನ್ಯ. ಆದಾಗ್ಯೂ, ಇದು ಹಾಗಲ್ಲ. 15 ಪ್ರತಿಶತಕ್ಕಿಂತ ಕಡಿಮೆ ಮಹಿಳೆಯರು ಇದನ್ನು ಅನುಭವಿಸುತ್ತಾರೆ ಎಂದು ಡೇಟಾ ಸೂಚಿಸುತ್ತದೆ. ಒಂದು ವೇಳೆ ಇದು ಸಂಭವಿಸಿದರೂ, ನೀರು ಪ್ರವಾಹದಂತೆ ಹೊರಬರುವುದಿಲ್ಲ. ಬದಲಾಗಿ ನೀರು ನಿಧಾನವಾಗಿ ಹರಿಯುವುದು, ಇದು ನಿಮಗೆ ಮಾತ್ರ ಅರಿವಿಗೆ ಬರುತ್ತದೆ.

ಅಕಾಲಿಕ ಹೆರಿಗೆ ನೋವು ಶುರುವಾದರೆ?:

ಅಕಾಲಿಕ ಹೆರಿಗೆ ನೋವು ಶುರುವಾದರೆ?:

ಈ ಅಪಾಯವು ನಿಜ, ವಿಶೇಷವಾಗಿ ನೀವು ಧೂಮಪಾನ ಅಥವಾ ಸೋಂಕಿನಿಂದ ಬಳಲುತ್ತಿದ್ದರೆ, ಅಥವಾ ಒಂದಕ್ಕಿಂತ ಹೆಚ್ಚು ಶಿಶುಗಳನ್ನು ಹೊತ್ತಿದ್ದರೆ ಅಥವಾ ಇದೇ ರೀತಿಯ ಹಿಂದಿನ ಅನುಭವವನ್ನು ಹೊಂದಿದ್ದರೆ, ನೀವು ಅವಧಿಪೂರ್ವ ಹೆರಿಗೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಅವಧಿಗೆ ಮುಂಚಿನ ಹೆರಿಗೆ ನೋವು ಯಾವಾಗಲೂ ಅವಧಿಪೂರ್ವ ಜನನದಲ್ಲಿ ಕೊನೆಗೊಳ್ಳುವುದಿಲ್ಲ ಮತ್ತು ಜನನವನ್ನು ದೀರ್ಘಗೊಳಿಸಲು ಸಹಾಯ ಮಾಡುವ ಹಲವಾರು ತಂತ್ರಗಳಿವೆ. ಆದಾಗ್ಯೂ, ನೀವು ಅಂತಹ ಆತಂಕಗಳನ್ನು ಹೊಂದಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಮಲಗುವಾಗ ಆಕಸ್ಮಿಕವಾಗಿ ಮಗುವಿಗೆ ಹಾನಿಯಾದರೆ?:

ಮಲಗುವಾಗ ಆಕಸ್ಮಿಕವಾಗಿ ಮಗುವಿಗೆ ಹಾನಿಯಾದರೆ?:

ಮಲಗುವ ಸಮಯದಲ್ಲಿ ಹೊಟ್ಟೆಯ ಮೇಲೆ ಉರುಳಿದರೆ, ಅವರು ತಮ್ಮ ಮಗುವಿಗೆ ಹಾನಿಯಾಗಬಹುದು ಎಂಬ ಭಯವನ್ನು ಬಹಳಷ್ಟು ಮಹಿಳೆಯರು ಹೊಂದಿದ್ದಾರೆ. ಆದಾಗ್ಯೂ, ನಿಮ್ಮ ದೇಹವು ನಿಮ್ಮ ಮಗುವನ್ನು ತನ್ನದೇ ಆದ ರೀತಿ ರಕ್ಷಿಸುವುದರಿಂದ ನೀವು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯ. ಒಂದು ವೇಳೆ ನೀವು ನಿಮ್ಮ ಹೊಟ್ಟೆ ಮೇಲೆ ಮಲಗಿದರೆ, ಸ್ವಲ್ಪ ಸಮಯದ ನಂತರ ಅದನ್ನು ಉರುಳಿಸಲು ತುಂಬಾ ಕಷ್ಟವಾಗುತ್ತದೆ.

ನನ್ನ ಮಗುವನ್ನು ಕಳೆದುಕೊಂಡರೆ?:

ನನ್ನ ಮಗುವನ್ನು ಕಳೆದುಕೊಂಡರೆ?:

ಈ ಭಯವು ನಿಜವಾಗಿದ್ದು, ಬಹಳಷ್ಟು ನಿರೀಕ್ಷಿತ ತಾಯಂದಿರನ್ನು ಕಾಡಬಹುದು. ಮೊದಲ ತ್ರೈಮಾಸಿಕವು ಮಗುವಿಗೆ ಅಪಾಯಕಾರಿ ಸಮಯ ಮತ್ತು ಗರ್ಭಪಾತದ ಸಾಧ್ಯತೆಗಳು ಈ ಸಮಯದಲ್ಲಿ ಇರುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಮ್ಮೆ ನೀವು ಅದನ್ನು ದಾಟಿದರೆ, ಅಂತಹ ಯಾವುದೇ ಅಪಘಾತದ ಸಾಧ್ಯತೆಗಳು ಸುಮಾರು ಶೇಕಡಾ ಒಂದಕ್ಕಿಂತ ಕಡಿಮೆಯಾಗುತ್ತದೆ. ಆದ್ದರಿಂದ ಭಯ ಪಡುವ ಅಗತ್ಯವಿಲ್ಲ, ಧನಾತ್ಮಕವಾಗಿರಿ.

English summary

Pregnancy Fears: Know which are Real and Which are not in Kannada

Here we talking about Pregnancy fears: Know which are real and which are not in kannada, read on
Story first published: Tuesday, January 18, 2022, 16:31 [IST]
X
Desktop Bottom Promotion