Just In
Don't Miss
- Automobiles
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
- News
ಭಾರತದಲ್ಲಿ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ಇಲ್ಲ
- Movies
ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು
- Sports
ಐಎಸ್ಎಲ್: ಕೇರಳಕ್ಕೆ ಸೋಲುಣಿಸಿದ ನಾರ್ಥ್ಈಸ್ಟ್ ಯುನೈಟೆಡ್ ಪ್ಲೇ ಆಫ್ ಗೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶ್ವ ಸ್ತನ್ಯಪಾನ ಸಪ್ತಾಹ 2020: ತಾಯಿ ಮಗುವಿಗೆ ಸ್ತನ್ಯಪಾನ ಮಾಡಿಸಲು ಉತ್ತಮ ಭಂಗಿಗಳಿವು
ತಾಯಿಯ ಎದೆಹಾಲಿನ ಮಹತ್ವವನ್ನು ಜಗತ್ತಿಗೆ ತಿಳಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ಒಂದು ವಾರಗಳ ಕಾಲ ವಿಶ್ವ ಸ್ತನ್ಯಪಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಗರ್ಭಾವಸ್ಥೆಮತ್ತು ಹೆರಿಗೆ ನಂತರ ತಾಯಿಗೆ ಎದುರಾಗುವ ಪ್ರಮುಖ ಘಟ್ಟವೇ ಸ್ತನ್ಯಪಾನ. ತಾಯಿ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಸೋಂಕುಗಳಿಂದ ರಕ್ಷಣೆ ದೊರೆಯುವುದಲ್ಲದೇ, ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಸುತ್ತದೆ. ಹೀಗೆ ತಾಯಿಯ ಎದೆಹಾಲು ಮಗುವಿನ ಪಾಲಿಗೆ ಸಂಜೀವಿನಿ ಎಂದರೆ ತಪ್ಪಾಗಲಾರದು. ಆದರೆ ಹೆರಿಗೆಯಾದ ಆರಂಭದ ದಿನಗಳಲ್ಲಿ ಅಥವಾ ಮೊದಲನೇ ಬಾರಿಗೆ ತಾಯಿಯಾದ ಮಹಿಳೆಯರಿಗೆ ಮಗುವಿಗೆ ಹೇಗೆ ಸ್ತನ್ಯಪಾನ ಮಾಡಿಸಬೇಕು, ಯಾವ ಭಂಗಿಯಲ್ಲಿ ಸ್ತನ್ಯಪಾನ ಮಾಡಿಸಿದರೆ ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಕ್ಷೇಮಕರ ಎಂದು ತಿಳಿದಿರುವುದಿಲ್ಲ.
ಈ ಲೇಖನದಲ್ಲಿ ತಾಯಿ ಮಗುವಿಗೆ ಯಾವೆಲ್ಲಾ ಭಂಗಿಯಲ್ಲಿ ಎದೆಹಾಲು ಉಣಿಸಿದರೆ ಉತ್ತಮ ಎಂದು ತಿಳಿಸಿಕೊಡಲಿದ್ದೇವೆ:

ಮಗ್ಗುಲಲ್ಲಿ ಮಲಗಿ ಎದೆಹಾಲು
ನೀವು ಎತ್ತರದ ದಿಂಬಿನ ಸಹಾಯದಿಂದ ಆರಾಮವಾಗಿ ಒಂದು ಮಗ್ಗುಲಿಗೆ ಮಲಗಿ. ಎದೆಹಾಲು ಉಣಿಸುವಾಗ ಮಧ್ಯೆ ಮಗುವಿಗೆ ತೊಂದರೆ ಆಗಬಾರದು, ಆದ್ದರಿಂದ ಆರಾಮವಾಗಿ, ಕಂಫರ್ಟ್ ಆಗಿ ಇದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ಮಗುವಿನ ಹಸಿವು ನೀಗುವವರೆಗೂ ಎದೆಹಾಲು ಉಣಿಸಿ.

ತೊಟ್ಟಿಲ ರೀತಿ ಸ್ತನ್ಯಪಾನ
ಈ ಭಂಗಿಯಲ್ಲಿ ಮಗುವಿಗೆ ಎದೆಹಾಲು ಉಣಿಸಲು ನೀವು ಮೊದಲು ಆರಾಮವಾಗಿ (ಬೆನ್ನಿನ ಭಾಗವನ್ನು ಸಮವಾಗಿ ಇರುವಂತೆ ನೋಡಿಕೊಳ್ಳಿ) ಕುಳಿಕೊಳ್ಳಿ. ನಂತರ ನಿಮ್ಮ ತೊಡೆಯ ಮೇಲೆ ಮಗುವನ್ನು ಇರಿಸಿಕೊಂಡು, ಮಗುವಿನ ತಲೆಯನ್ನು ನಿಮ್ಮ ಕೈಯಲ್ಲಿ ತೊಟ್ಟಿಲ ರೀತಿ ಎದೆಯ ಭಾಗಕ್ಕೆ ಹಿಡಿದು ಹಾಲುಣಿಸಬಹುದು.
ಇದೇ ಭಂಗಿಯಲ್ಲಿ ಎರಡೂ ಮಗ್ಗುಲುಗಳಲ್ಲೂ ಸ್ತನ್ಯಪಾನ ಮಾಡಿಸಬಹುದು.

ರಗ್ಬಿ ಬಾಲ್ ಭಂಗಿ
ನಿಮ್ಮ ತೊಡೆಗೆ ಸಮಾನಾಂತರವಾದ ಕುಶನ್ ರೀತಿಯ ಉತ್ತಮ ದಿಂಬಿನ ಮೇಲೆ ನಿಮ್ಮ ಮಗುವನ್ನು ಮಲಗಿಸಿ ಮಗುವಿನ ಎದೆ ಭಾಗವನ್ನು ಮಾತ್ರ ಹಿಡಿದು ಎದೆಹಾಲು ಉಣಿಸಿ. ತಾಯಿ ಹೆಚ್ಚು ನಿರಾಯಾಸಗೊಂಡಿದ್ದಾಗ ಇಂಥಾ ಭಂಗಿ ಹೆಚ್ಚು ಸೂಕ್ತ.

ತೊಡೆಯ ಮೇಲೆ ದಿಂಬಿರಿಸಿ ಎದೆಹಾಲು
ನಿಮ್ಮ ತೊಡೆಯ ಮೇಲೆ ಮೆತ್ತನೆಯ ದಿಂಬನ್ನು ಇರಿಸಿ ಅದರ ಮೇಲೆ ಮಗುವನ್ನು ಮಲಗಿಸಿ, ಸುಲಭವಾಗಿ ನಿಮ್ಮ ಕೈಯ ಸಹಾಯದಿಂದ ಎದೆಹಾಲು ಉಣಿಸಬಹುದು. ಇದು ಮಗುವನ್ನು ಎದೆಗೆ ಹತ್ತರವಾಗಿ ತಾಗುವಂತೆ ಸಹಾಯ ಮಾಡುವ ಭಂಗಿಯಾಗಿದೆ.

ಕಾಲುಗಳ ಮೇಲೆ ಕೂರಿಸಿ ಎದೆಹಾಲು
ಈ ಭಂಗಿಯನ್ನು ಕನಿಷ್ಠ ಗರಿಷ್ಠ 6ತಿಂಗಳ ನಂತರದ ಮಗುವಿಗೆ ಸೂಕ್ತ ಎನ್ನಬಹುದು. ತಾಯಿ ಸುಖಾಸೀನವಾಗಿ ಬೆನ್ನಿಗೆ ಒರಗಿ ಕೂತು ಮಗುವನ್ನು ತನ್ನ ಕಾಲುಗಳ ಮೇಲೆ ಕೂರಿಸಿಕೊಂಡು ಎದೆಹಾಲು ನೀಡಬಹುದು. ಆದರೆ ಈ ಭಂಗಿಯಲ್ಲಿ ಮಗು ಚೆನ್ನಾಗಿ ಹಾಲು ಕುಡಿಯುತ್ತಿದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಸಿಸೇರಿಯನ್ ನಂತರ ಎದೆಹಾಲು
ಸಿಸೇರಿಯನ್ ನಂತರ ತಾಯಿಗೆ ಸಾಕಷ್ಟು ನೋವು ಇರುತ್ತದೆ. ಆದ್ದರಿಂದ ಬೆನ್ನಿಗೆ ಹೆಚ್ಚು ಒತ್ತಡ ಹಾಕದಂತೆ ಆರಾಮವಾಗಿ ಕುಳಿತು ಮಗುವನ್ನು ಎದೆಯ ಮೇಲೆ ಹಾಕಿಕೊಂಡು ಹಾಲುಣಿಸುವುದು ಸೂಕ್ತ ಭಂಗಿ. ಕಾರಣ ಈ ಸಂದರ್ಭದಲ್ಲಿ ಒಂದು ಭಾಗದಲ್ಲಿ ಮಲಗಿ ಅಥವಾ ಕುಳಿತು ಎದೆಹಾಲು ನೀಡುವುದು ಬಹಳ ಕಷ್ಟ ಆದ್ದರಿಂದ ಇದು ಆರಾಮದಾಯಕ ಭಂಗಿ.
ನಿಮಗಾಗಿ ಮತ್ತು ನಿಮ್ಮ ಮಗುವಿಗೆ ಕೆಲಸ ಮಾಡುವ ಸ್ಥಾನವನ್ನು ನೀವು ಕಂಡುಕೊಂಡರೆ, ಅದರೊಂದಿಗೆ ಅಂಟಿಕೊಳ್ಳುವುದು ಒಳ್ಳೆಯದು. ಆದರೆ ಮಗುವಿನ ನೋವಿನಿಂದ ಕೂಡಿದ ನೋಯುತ್ತಿರುವ ಮೊಲೆತೊಟ್ಟುಗಳು ಅಥವಾ ಇತರ ಚಿಹ್ನೆಗಳು ನಿಮ್ಮಲ್ಲಿದ್ದರೆ, ಅದು ವಿಭಿನ್ನ ಸ್ಥಾನಗಳನ್ನು ಪ್ರಯತ್ನಿಸಲು ಸಹಾಯ ಮಾಡುತ್ತದೆ.
ನಿಮ್ಮ ಮಗು ಬೆಳೆದಂತೆ, ಅದಕ್ಕೆ ಹೆಚ್ಚು ಅಭ್ಯಾಸವಾದಂತೆ ಮಗುವೇ ತನ್ನ ಆರಾಮದಾಯಕ ಭಂಗಿಯನ್ನು ಅನುಸರಿಸುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ನೀವು ಸ್ತನ್ಯಪಾನ ಮಾಡುವಾಗ ಎಲ್ಲಿದ್ದೀರಿ, ಯಾವ ಸ್ಥಳದಲ್ಲಿ ಇದ್ದೀರಿ ಎಂಬುದರ ಮೇಲೆ ಭಂಗಿಯು ಅವಲಂಬಿತವಾಗಿರುತ್ತದೆ.