For Quick Alerts
ALLOW NOTIFICATIONS  
For Daily Alerts

ಯಾವ ತಿಂಗಳ ಗರ್ಭಧಾರಣೆಗೆ ತುಂಬಾ ಕೆಟ್ಟದು?

|

ವೇಗದ ಜೀವನದ ಓಘದಲ್ಲಿ ನಾವು ಪ್ರತಿಯೊಂದು ಕ್ಷಣವನ್ನು ತುಂಬಾ ಯೋಜನಾಬದ್ಧವಾಗಿಸಿಕೊಳ್ಳುತ್ತೇವೆ. ಅದು ಭವಿಷ್ಯದ ಯೋಜನೆಗಳು ಆಗಿದ್ದರೂ ನಾವು ಅದಕ್ಕೆ ಒಂದು ವೇಳಾಪಟ್ಟಿ ತಯಾರಿಸಿಕೊಳ್ಳುತ್ತೇವೆ. ಅಂದ ಮೇಲೆ ಕುಟುಂಬದ ಬಗ್ಗೆ ನಾವು ಯೋಜನೆಗಳನ್ನು ಮಾಡದೇ ಇರುತ್ತೇವೆಯೇ.

Which Month Is The Worst To Get Pregnant

ಆದಷ್ಟು ಬೇಗ ಮತ್ತು ವಿಳಂಬವಾಗಿ ಮಗು ಪಡೆಯಬೇಕೇ ಎನ್ನುವ ವಿಚಾರವನ್ನು ಖಂಡಿತವಾಗಿಯೂ ವೇಳಾಪಟ್ಟಿ ಮಾಡುತ್ತೇವೆ. ನಮ್ಮ ಜೀವನದ ಕೆಲವೊಂದು ಅಗತ್ಯ ಗುರಿ ಮುಟ್ಟಿದ ಬಳಿಕ ಮಗು ಪಡೆಯುವ ಬಗ್ಗೆ ಆಲೋಚನೆ ಮಾಡುತ್ತೇವೆ. ಆದರೆ ಗರ್ಭ ಧರಿಸಲು ಕೆಲವೊಂದು ತಿಂಗಳು ತುಂಬಾ ಕೆಟ್ಟದು ಎಂದು ಹೇಳಲಾಗುತ್ತದೆ. ಈ ತಿಂಗಳಲ್ಲಿ ಗರ್ಭ ಧರಿಸಿದರೆ ಆಗ ಅಕಾಲಿಕ ಹೆರಿಗೆ ಆಗಬಹುದು.

ಮೇನಲ್ಲಿ ಗರ್ಭಧರಿಸಿದರೆ ಅಕಾಲಿಕ ಹೆರಿಗೆ

ಮೇನಲ್ಲಿ ಗರ್ಭಧರಿಸಿದರೆ ಅಕಾಲಿಕ ಹೆರಿಗೆ

ಮೇನಲ್ಲಿ ಗರ್ಭಧರಿಸಿದರೆ ಆಗ ಖಂಡಿತವಾಗಿಯೂ ಮಗು ಅಕಾಲಿಕ ಹೆರಿಗೆಯಾಗುವುದು ಎಂದು ರಾಷ್ಟ್ರೀಯ ಅಕಾಡಮಿ ಆಫ್ ಸೈನ್ಸ್ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಈ ಅಧ್ಯಯನಕ್ಕಾಗಿ ಸುಮಾರು 657050 ತಾಯಂದಿರ 1.4 ಮಿಲಿಯನ್ ಮಕ್ಕಳನ್ನು ಒಳಪಡಿಸಲಾಯಿತು ಮತ್ತು ಇಲ್ಲಿ ಮಕ್ಕಳು ಜನಿಸಿದ ದಿನಾಂಕವನ್ನು ಆಧರಿಸಿಕೊಂಡು ತಾಯಂದಿರುವ ಗರ್ಭ ಧರಿಸಿದ ಸಮಯವನ್ನು ನೋಡಲಾಯಿತು. ಮೇಯಲ್ಲಿ ಗರ್ಭ ಧರಿಸಿದ ಮತ್ತು ಜನವರಿ ಮತ್ತು ಫೆಬ್ರವರಿಯಲ್ಲಿ ಮೂರನೇ ತ್ರೈಮಾಸಿಕಕ್ಕೆ ಒಳಗಾದ ತಾಯಂದಿರು ಅಕಾಲಿಕ ಹೆರಿಗೆ ಆಗಿರುವ ಪ್ರಮಾಣ ಶೇ.10ರಷ್ಟಿತ್ತು.

ಜೂನ್ ನಲ್ಲಿ ಗರ್ಭ ಧರಿಸಿದರೆ ತಾಯಿಗೇ ಕಂಟಕ

ಜೂನ್ ನಲ್ಲಿ ಗರ್ಭ ಧರಿಸಿದರೆ ತಾಯಿಗೇ ಕಂಟಕ

ಜೂನ್ ಮಾಸ ಸಹ ಗರ್ಭ ಧರಿಸಲು ಸೂಕ್ತ ಸಮಯವಲ್ಲ. ಈ ತಿಂಗಳಲ್ಲಿ ಗರ್ಭ ಧರಿಸಿದ ತಾಯಂದಿರಿಗೆ ಗರ್ಭಧಾರಣೆ ವೇಳೆ ಮಾರಣಾಂತಿಕ ಸಮಸ್ಯೆ ಎದುರಾಗಬಹುದು ಅಥವಾ ಸಾವನ್ನಪ್ಪಬಹುದು. ಅಲ್ಲದೇ ಮಕ್ಕಳು ಅವಧಿಗೂ ಮುನ್ನವೇ ಹುಟ್ಟವ ಸಾಧ್ಯತೆ ಸಹ ಹೆಚ್ಚಿದೆ ಎಂದು ತಜ್ಞ ವೈದ್ಯರು ಸೂಚಿಸಿದ್ದಾರೆ. ಇದಕ್ಕೆ ವಿಟಮಿನ್ ಡಿ ಪ್ರಮಾಣ ಮತ್ತು ಕೀಟನಾಶಕಗಳು ಕಾರಣವಿರಬಹುದು ಎನ್ನುತ್ತಾರೆ.

ಇದು ಯಾಕೆ ಸಂಭವಿಸುವುದು?

ಇದು ಯಾಕೆ ಸಂಭವಿಸುವುದು?

ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಅತೀವ ಚಳಿಗಾಲದ ತಿಂಗಳುಗಳಾಗಿರುವುದು. ಹೀಗಾಗಿ ಈ ತಿಂಗಳುಗಳಲ್ಲಿ ಜ್ವರ ಮತ್ತು ಉರಿಯೂತದ ಸಮಸ್ಯೆಯು ಹೆಚ್ಚಾಗಿ ಇರುವುದು. ಇದರಿಂದಾಗಿ ಅಕಾಲಿಕ ಹೆರಿಗೆ ಆಗುವ ಸಾಧ್ಯತೆಯು ಇರುವುದು ಎಂದು ಅಧ್ಯಯನಗಳು ಹೇಳಿವೆ.

ಅಕಾಲಿಕ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಅಕಾಲಿಕ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಅಕಾಲಿಕ ಹೆರಿಗೆ ಆಗಿರುವ ಮಕ್ಕಳಲ್ಲಿ ಶ್ವಾಸಕೋಶ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿ ಇರುವುದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಶನ್ ಪ್ರಕಾರ, ಈ ಮಕ್ಕಳಿಗೆ ಜನನದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿರುವುದು.

ನೀವು ಏನು ಮಾಡಬಹುದು?

ನೀವು ಏನು ಮಾಡಬಹುದು?

ವೈದ್ಯರಲ್ಲಿ ನೀವು ಜ್ವರದ ಔಷಧಿಯನ್ನು ಕೇಳಿ ಪಡೆಯಬಹುದು. ಗರ್ಭಿಣಿಯರು ಯಾವಾಗಲೂ ರೋಗಿಗಳಿಂದ ಹಾಗೂ ರೋಗಗಳಿಂದ ದೂರವಿರಬೇಕು. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಮತ್ತು ಕಣ್ಣು, ಬಾಯಿ ಮತ್ತು ಮೂಗಿನಿಂದ ಕೈಗಳನ್ನು ದೂರವಿಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಯಾವುದೇ ಆರೋಗ್ಯಕಾರಿ ಸಮಸ್ಯೆ ಎದುರಾದರೂ ಮನೆಮದ್ದಿಗೆ ಪ್ರಯತ್ನಿಸದೇ, ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಕಾಣಬೇಕು. ಇದೆಲ್ಲದರ ಪರಿಣಾಮವಾಗಿ ನೀವು ಆರೋಗ್ಯಕಾರಿ ಗರ್ಭಧಾರಣೆ ಮತ್ತು ಸಂಪೂರ್ಣ ಗರ್ಭಧಾರಣೆ ಸಮಯವನ್ನು ಆನಂದಿಸಬಹುದು.

English summary

Which Month Is The Worst To Get Pregnant

Due to our busy life schedules, we all have starting planning every minute little thing about our lives. And when it comes to having a baby, it’s the biggest and the toughest planning ever. We plan our babies depending on so many factors – financial, physiological and physical health. But did you know there is also a time of the year when it's considered worst to have a baby? It is said that conceiving at this time can lead to premature birth. Read ahead to know more:
X
Desktop Bottom Promotion