Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಯಾರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು ಗೊತ್ತಾ?
ಇತ್ತೀಚೆಗೆ ಅವಳಿ ಮಕ್ಕಳ ಜನನ ಹೆಚ್ಚಾಗುತ್ತಿದೆ, ಮಗುವಿನ ನಿರೀಕ್ಷೆಯಲ್ಲಿರುವ ತಾಯಿಗೆ ಅವಳಿ ಮಕ್ಕಳಾಗುತ್ತಿದೆ ಎಂದು ಗೊತ್ತಾದಾಗ ಖುಷಿಯ ಜೊತೆಗೆ, ಇಬ್ಬರು ಮಕ್ಕಳನ್ನು ನಿಭಾಯಿಸುವುದು ಹೇಗೆ? ಎಂದು ಸ್ವಲ್ಪ ಆತಂಕವೂ ಕಾಡುವುದು. 1986-2009ರ ಅಂಕಿ ಅಂಶವು ಅವಳಿ ಮಕ್ಕಳ ಜನನ ಶೇ.75ರಷ್ಟು ಅಧಿಕವಾಗಿದೆ ಎಂದು ಹೇಳಿದೆ. 1000 ಮಕ್ಕಳು ಜನಿಸಿದರೆ ಅವರಲ್ಲಿ ಸುಮಾರು 32 ಅವಳಿ ಮಕ್ಕಳಾಗಿರುತ್ತವೆ.
ಅವಳಿ ಮಕ್ಕಳಾಗಲು ಕಾರಣವೇನು ಎಂದು ನೋಡುವುದಾದರೆ ಹಲವಾರು ಕಾರಣಗಳಿವೆ. ಯಾರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎಂದು ನೋಡುವುದಾದರೆ:

ಕುಟುಂಬದಲ್ಲಿ ಅವಳಿ ಮಕ್ಕಳಾಗಿದ್ದರೆ
ಕುಟುಂಬದಲ್ಲಿ ಯಾರಿಗಾದರೂ ಅವಳಿ ಮಕ್ಕಳಾಗಿದ್ದರೆ ನಮಗೂ ಅವಳಿ ಮಕ್ಕಳಾಗುವ ಸಾಧ್ಯತೆ ಇದೆ. ಆದರೆ ಈ ರೀತಿ ಪತ್ನಿ ಕುಟುಂಬದಲ್ಲಿ ಇದ್ದರೆ ಮಾತ್ರ ಆಗುತ್ತದೆ. ಅಂದರೆ ಪತ್ನಿ ಕಡೆ ಯಾರಿಗಾದರೂ ಅವಳಿ ಮಕ್ಕಳಾಗಿದ್ದರೆ ಆಗುವ ಸಾಧ್ಯತೆ ಇದೆ, ಅದೇ ಪತಿಯ ಕಡೆ ಇದ್ದರೆ ನಿಮಗೆ ಅವಳಿ ಮಕ್ಕಳಾಗುವುದಿಲ್ಲ.

ಇದಕ್ಕಿಂತ ಮೊದಲು ಅವಳಿ ಮಕ್ಕಳಾಗಿದ್ದರೆ
ಈಗಾಗಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ ಮತ್ತೊಮ್ಮೆ ಗರ್ಭ ಧರಿಸಿದಾಗ ಅವಳಿಯಾಗುವ ಸಾಧ್ಯತೆ ಹೆಚ್ಚು.

ಗರ್ಭಧಾರಣೆಯಾಗುವಾಗ ವಯಸ್ಸಾಗಿದ್ದರೆ
ವಯಸ್ಸಾದ ಮೇಲೆ ಗರ್ಭಧಾರಣೆಯಾದರೆ ಅಂದ್ರೆ ವಯಸ್ಸು 35 ದಾಟಿದ ಬಳಿಕ ಗರ್ಭಧಾರಣೆಯಾದರೆ ಅವಳಿ ಮಕ್ಕಳಾಗಬಹುದು.

ಈ ಗರ್ಭಧಾರಣೆಗೆ ಮೊದಲು ಮಕ್ಕಳಾಗಿದ್ದರೆ
ಒಂದು ಅಥವಾ ಎರಡು ಮಕ್ಕಳು ಹುಟ್ಟಿದ ಬಳಿಕ ಮತ್ತೊಮ್ಮೆ ಗರ್ಭಿಣಿಯಾದರೆ ಅಂಥವರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿದೆ.

ಸಂತಾನೋತ್ಪತ್ತಿ ಚಿಕಿತ್ಸೆ ಪಡೆದಿದ್ದರೆ
ಯಾರು IVF, ಮತ್ತಿತರ ಸಂತಾನೋತ್ಪತ್ತಿ ಚಿಕಿತ್ಸೆ ಪಡೆಯುತ್ತಾರೋ ಅವರಿಗೆ ಅವಳಿ ಅಥವಾ ತ್ರಿವಳಿ ಮಕ್ಕಳಾಗುವ ಸಾಧ್ಯತೆ ತುಂಬಾ ಅಧಿಕವಿದೆ. ಇದೀಗ ಫರ್ಟಿಲಿಟಿ ಚಿಕಿತ್ಸೆ ಮತ್ತಷ್ಟು ಅಡ್ವಾನ್ಸ್ ಆಗಿರುವುದರಿಂದ ಅವಳಿ ಮಕ್ಕಳ ಜನನವಾಗುವುದು ಕಡಿಮೆಯಾಗಿದೆ.

ಮೈ ತೂಕ ಹೆಚ್ಚಿದ್ದರೆ
ಯಾರು ಗರ್ಭಿಣಿಯಾಗುವ ಮುನ್ನ ಅಧಿಕ ಮೈ ತಕ ಹೊಂದಿರುತ್ತಾರೋ ಅವರು ಗರ್ಭಿಣಿಯಾದಾಗ ಅವಳಿ ಜನಿಸುವ ಸಾಧ್ಯತೆ ಹೆಚ್ಚು.



Click it and Unblock the Notifications
