For Quick Alerts
ALLOW NOTIFICATIONS  
For Daily Alerts

ಮಗುವಿಗಾಗಿ ಪ್ರಯತ್ನಿಸಿ ಗರ್ಭಧಾರಣೆಯಾಗದೇ ಇದ್ದರೆ ಮಾಡಬೇಕಾದ 8 ಪರೀಕ್ಷೆಗಳು

|

ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಿನ ದಂಪತಿಗಳಿಗೆ ಇರುವ ಪ್ರಮುಖ ಸಮಸ್ಯೆಯೆಂದರೆ ಮಕ್ಕಳಾಗದೇ ಇರುವುದು. ಕೆಲವರಿಗೆ ಅನಾರೋಗ್ಯದ ಕಾರಣದಿಂದ ಮಕ್ಕಳಾಗದಿದ್ದರೆ ಮತ್ತೆ ಕೆಲವರಿಗೆ ಮಕ್ಕಳಾಗದಿರಲು ಏನು ಕಾರಣವೆಂಬುವುದೇ ತಿಳಿದಿರುವುದಿಲ್ಲ.

ಅನೇಕ ಕಾರಣಗಳಿಂದ ಮಹಿಳೆಗೆ ಗರ್ಭಧಾರಣೆಯಾಗುವುದಿಲ್ಲ. ಕೆಲವೊಮ್ಮೆ ಆಕೆಯ ಅಂಡೋತ್ಪತ್ತಿಯಲ್ಲಿ ತೊಂದರೆ ಅಥವಾ ಹಾರ್ಮೋನ್‌ಗಳ ಕಾರಣದಿಂದಾಗಿ ಗರ್ಭಧಾರಣೆಯಾಗದೇ, ಇನ್ನು ಕೆಲವೊಂದು ಕೇಸ್‌ಗಳಲ್ಲಿ ಪುರುಷರಲ್ಲಿ ವೀರ್ಯಾಣು ಸಾಮಾರ್ಥ್ಯ ಕಡಿಮೆ ಇರುವುದರಿಂದ ಅಥವಾ ಮತ್ತಿತರ ಜೀವನಶೈಲಿ ಸಂಬಂಧಿತ ಸಮಸ್ಯೆಗಳಿಂದಾಗಿ ಮಕ್ಕಳಾಗುವುದಿಲ್ಲ.

ವಿಶ್ವದಲ್ಲಿ ಸುಮಾರು 60-80 ಮಿಲಿಯನ್ ದಂಪತಿ ಮಕ್ಕಳಾಗದಿರುವ ಸಮಸ್ಯೆ ಎದುರಿಸುತ್ತಿದ್ದಾರೆ, ಅದರಲ್ಲಿ 15-20 ಮಿಲಿಯನ್ ದಂಪತಿ ಭಾರತೀಯರಾಗಿದ್ದಾರೆ. ವಯಸ್ಸು ಹೆಚ್ಚಾಗಿರುವುದು, ಆರೋಗ್ಯ ಸಂಬಂಧಿತ ಸಮಸ್ಯೆ, ಅನಾರೋಗ್ಯಕರ ಜೀವನಶೈಲಿ ಇವೆಲ್ಲಾ ಮಕ್ಕಳಾಗದಿರಲು ಪ್ರಮುಖ ಕಾರಣಗಳಾಗಿವೆ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಸಮಸ್ಯೆಯನ್ನುಮೊದಲಿಗೆ ಗುರುತಿಸಿದರೆ ಸೂಕ್ತ ಚಿಕಿತ್ಸೆಯ ಮೂಲಕ ಮಕ್ಕಳನ್ನು ಪಡೆಯಬಹುದು. ಒಂದು ವರ್ಷಕ್ಕಿಂತ ಅಧಿಕ ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದು, ಗರ್ಭಧಾರಣೆಯಾಗದೇ ಇದ್ದರೆ ಈ ಪರೀಕ್ಷೆಗಳನ್ನು ಮಾಡಿಸಿ ಸೂಕ್ತ ಕಾರಣ ತಿಳಿದುಕೊಳ್ಳಿ:

1. ಸಿಬಿಸಿ (ಕಂಪ್ಲೀಟ್ ಬ್ಲಡ್ ಕೌಂಟ್)

1. ಸಿಬಿಸಿ (ಕಂಪ್ಲೀಟ್ ಬ್ಲಡ್ ಕೌಂಟ್)

ಸಿಬಿಸಿ ನಮ್ಮ ರಕ್ತದಲ್ಲಿ ಬಿಳಿ ರಕ್ತಕಣಗಳು ಎಷ್ಟಿವೆ, ಕೆಂಪು ರಕ್ತ ಕಣಗಳು ಎಷ್ಟಿವೆ ಹಾಗೂ ಪ್ಲೇಟ್‌ಲೆಟ್ಸ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ನೀಡುತ್ತದೆ. ಇದು ಸೋಂಕು ಉಂಟಾದಾಗ, ರಕ್ತ ಹೀನತೆ ಉಂಟಾದಾಗ ಅಥವಾ ರಕ್ತ ಸಂಬಂಧಿತ ಇತರ ಸಮಸ್ಯೆ ಉಂಟಾದಾಗ ದೇಹದ ಸ್ಥಿತಿಯ ಬಗ್ಗೆ ತಿಳಿಯಲು ಸಹಕಾರಿ. ಬಂಜೆತನ ಸಮಸ್ಯೆ ಇದ್ದು ಇನ್‌ ವಿಟ್ರೋ ಫರ್ಟಿಲಿಟಿ ಮಾಡಿಸುವುದಾದರೆ ಈ ಪರೀಕ್ಷೆ ಮಾಡಿಸಬೇಕು. IVF ಸರ್ಜಿಕಲ್ ಕಾರ್ಯವಿಧಾನವಾಗಿದ್ದು ಇದರಲ್ಲಿ ವೈದ್ಯರಿಗೆ ನಿಮ್ಮ ದೇಹದ ರಕ್ತದಲ್ಲಿ ಯಾವ ರಕ್ತ ಎಷ್ಟಿದೆ, ಪ್ಲೇಟ್‌ಲೆಟ್ಸ್ ಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಇದು ಅವಶ್ಯಕವಾಗಿದೆ.

2. ಇಎಸ್ಆರ್ (Erythrocyte sedimentation rate):

2. ಇಎಸ್ಆರ್ (Erythrocyte sedimentation rate):

ಇಎಸ್ಆರ್ ಎನ್ನುವುದು ದೇಹದಲ್ಲಿ ಕೆಂಪು ರಕ್ತಕಣಗಳು ಸರಿಯಾದ ಪ್ರಮಾಣದಲ್ಲಿ ಇದೆಯೇ ಎಂದು ತಿಳಿಯುವ ಪರೀಕ್ಷೆ ಆಗಿದೆ. ದೇಹದಲ್ಲಿ ಉರಿಯೂತದ ಸಮಸ್ಯೆಯಿದ್ದರೆ ರಕ್ತದಲ್ಲಿ ಇಎಸ್ಆರ್ ಹೆಚ್ಚಾಗುತ್ತದೆ. ಬಂಜೆತನ ಪರೀಕ್ಷೆಯಾದ HSG(hysterosalpinogogram)ಮಾಡುವ ಮುನ್ನ ಇಎಸ್ಆರ್‌ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು.

3. ರಕ್ತದಲ್ಲಿ ಸಕ್ಕರೆಯಂಶ:

3. ರಕ್ತದಲ್ಲಿ ಸಕ್ಕರೆಯಂಶ:

ಖಾಲಿ ಹೊಟ್ಟೆಯಲ್ಲಿ ಹಾಗೂ ಊಟವಾದ ಬಳಿಕ ರಕ್ತ ಪರೀಕ್ಷೆ ಮಾಡಿಸಿ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಮಧುಮೇಹ ಸಮಸ್ಯೆವಿದ್ದರೆ ಗರ್ಭಧಾರಣೆ ಸಾಧ್ಯತೆ ಕಡಿಮೆ. ಆದ್ದರಿಂದ ಬಂಜೆತನಕ್ಕೆ ಚಿಕಿತ್ಸೆ ನೀಡುವಾಗ ಈ ಪರೀಕ್ಷೆ ಮಾಡಲಾಗುವುದು.

4. ವಿಡಿಆರ್‌ಎಲ್‌ (syphilis testing):

4. ವಿಡಿಆರ್‌ಎಲ್‌ (syphilis testing):

ಸಿಫ್ಲಿಲಿಸ್ ಬಂಜೆತನ ಸಮಸ್ಯೆ ತರುವುದಿಲ್ಲ, ಆದರೆ ಇದಕ್ಕೆ ಚಿಕಿತ್ಸೆ ಮಾಡದಿದ್ದರೆ ಗರ್ಭದಲ್ಲಿರುವ ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಬಂಜೆತನ ಪರೀಕ್ಷೆ ಜೊತೆಗೆ ಈ ಪರೀಕ್ಷೆ ಕೂಡ ಮಾಡಿಸಬೇಕು.

5. ರುಬೆಲ್ಲಾ IgG:

5. ರುಬೆಲ್ಲಾ IgG:

ರುಬೆಲ್ಲಾ ವೈರಸ್ ತಡೆಗಟ್ಟುವ ಸಾಮಾರ್ಥ್ಯ ನಿಮ್ಮ ದೇಹಕ್ಕಿದೆಯೇ ಎಂಬುವುದು ಈ ಪರೀಕ್ಷೆಯಿಂದ ತಿಳಿಯುತ್ತದೆ ಬಂಜೆತನದ ಸಮಸ್ಯೆ ಇದೆ ಎಂದು ತಿಳಿಯಲು ಈ ಪರೀಕ್ಷೆ ಅಗ್ಯತವಿಲ್ಲ, ಆದರೆ ಗರ್ಭಿಣಿಯಾಗ ಬಯಸುವುದಾದರೆ ಈ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಏಕೆಂದರೆ ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಗೆ ರುಬೆಲ್ಲಾ ವೈರಸ್‌ ತೊಂದರೆ ಉಟಾಗುವ ಸಾಧ್ಯತೆ ಹೆಚ್ಚು.

6. ವಿಟಮಿನ್ ಬಿ12 ಹಾಗೂ ವಿಟಮಿನ್ ಡಿ3 ಪರೀಕ್ಷೆ:

6. ವಿಟಮಿನ್ ಬಿ12 ಹಾಗೂ ವಿಟಮಿನ್ ಡಿ3 ಪರೀಕ್ಷೆ:

ವಿಟಮಿನ್ ಬಿ 12 ಪರೀಕ್ಷೆಯಿಂದ ರಕ್ತಹೀನತೆ ಸಮಸ್ಯೆ ಇದೆಯೇ ಎಂದು ತಿಳಿಯುತ್ತದೆ, ವಿಟಮಿನ್ ಡಿ 3 ಪರೀಕ್ಷೆಯಿಂದ ಬಂಜೆತನಕ್ಕೆ ಸಂಬಂಧಿಸಿದ ಏನಾದರೂ ಸಮಸ್ಯೆ ಇದೆಯೇ ಎಂದು ತಿಳಿಯುತ್ತದೆ.

7. ಥೈರಾಯ್ಡ್ ಪರೀಕ್ಷೆ

7. ಥೈರಾಯ್ಡ್ ಪರೀಕ್ಷೆ

ಥೈರಾಯ್ಡ್ ಸಮಸ್ಯೆಯಿದ್ದರೂ ಗರ್ಭಧಾರಣೆಯಾಗುವುದಿಲ್ಲ, ಒಂದು ವೇಳೆ ಆದರೂ ಮಗುವಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ತುಂಬಾ ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸಿ ಆಗದಿದ್ದರೆ ಥೈರಾಯ್ಡ್ ಪರೀಕ್ಷೆ ಮಾಡಿಸಬೇಕು ಅಲ್ಲದೆ ಗರ್ಭಧಾರಣೆ ಮುನ್ನ ಥೈರಾಯ್ಡ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.

8. ಹಾರ್ಮೋನಲ್ ಪರೀಕ್ಷೆ

8. ಹಾರ್ಮೋನಲ್ ಪರೀಕ್ಷೆ

ಸಂತಾನೋತ್ಪತ್ತಿ ಸಾಮಾರ್ಥ್ಯದ ಬಗ್ಗೆ ತಿಳಿಯಲು ಹಾರ್ಮೋನ್ ಪರೀಕ್ಷೆ ಮಾಡಿಸಬೇಕು. ಇದರಿಂದ ಅಂಡೋತ್ಪತ್ತಿ ಬಗ್ಗೆ ತಿಳಿಯಲು ಸಹಕಾರಿ.

ಹಾರ್ಮೋನ್ ಪರೀಕ್ಷೆಯಲ್ಲಿ

*ಪ್ರೊಲ್ಯಾಕ್ಟಿನ್ (Prolactin)

ಎಎಂಹೆಚ್ (Anti Mullerian Hormone)

FSH ಟೆಸ್ಟ್

ಎಲ್‌ಹೆಚ್‌ (ಮುಟ್ಟಾದ 2 ಅಥವಾ 3 ದಿನಕ್ಕೆ ಈ ಪರೀಕ್ಷೆ ಮಾಡಬೇಕು)

E2 (ಇದನ್ನು ಕೂಡ ಮುಟ್ಟಾದ 2 ಅಥವಾ ಮೂರನೇ ದಿನ ಮಾಡಿಸಬೇಕು. ಇದರಿಂದ ಅಂಡೋತ್ಪತ್ತಿಗೆ ಅವಶ್ಯಕವಾದ ಈಸ್ಟ್ರೋಜಿನ್ ಹಾರ್ಮೋನ್ ತಿಳಿಯಲು ಸಹಕಾರಿ)

ಇದರ ಜೊತೆಗೆ ಹೆಚ್‌ಎಸ್‌ಜಿ (Hysterosalpingogram) ಪರೀಕ್ಷೆ ಮಾಡಿಸಲು ಹೇಳಬಹುದು. ಇದರಲ್ಲಿ ಜನನೇಂದ್ರೀಯ ಮುಖಾಂತರ ಟ್ಯೂಬ್ ಹಾಕಿ ಎಕ್ಸ್‌ರೇ ಸಹಾಯದಿಂದ ಫಾಲೋಪಿನ್ ಟ್ಯೂಬ್‌ ಓಪನ್‌ ಇದೆಯೇ, ಇಲ್ಲವೇ ಎಂದು ತಿಳಿಯಲಾಗುವುದು.

English summary

Tests To Check Why You Are Not Getting Pregnant

Fertility tests for women : Here we talking about the tests to check reasons why you are not getting pregnant. Read on.
X
Desktop Bottom Promotion