For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಕೋವಿಡ್ 19 ಬೂಸ್ಟರ್ ಶಾಟ್‌ ಪಡೆಯಬಹುದೇ?

|

ಕೊರೊನಾ 3ನೇ ಅಲೆಯಲ್ಲಿ ಸಾವು-ನೋವಿನ ಸಂಖ್ಯೆ ಕಡಿಮೆಯಿದ್ದರರೂ ಒಮಿಕ್ರಾನ್‌ ಮಾತ್ರ ಅತ್ಯಂತತ ವೇಗವಾಗಿ ಹರಡುತ್ತಿದೆ, ಭಾರತದಲ್ಲಿ ಬಹುತೇಕರಿಗೆ 2 ಡೋಸ್‌ ವ್ಯಾಕ್ಸಿನ್‌ ಆಗಿದೆ, ಆದರೆ 2 ಡೋಸ್‌ ಲಸಿಕೆ ಪಡೆದು 9 ತಿಂಗಳು ಕಳೆದಿದ್ದರೆ ಅದರ ಸಾಮರ್ಥ್ಯ ತಗ್ಗುವ ಸಾಧ್ಯತೆ ಇದೆ, ಹೀಗಾಗಿ ಬೂಸ್ಟರ್ ನೀಡಲಾಗುತ್ತಿದೆ. ಮೊದಲು ಯಾವ ಕೊರೊನಾ ಲಸಿಕೆ ಪಡೆದಿರುತ್ತಾರೋ ಅದನ್ನೇ ಬೂಸ್ಟರ್ ಆಗಿ ನೀಡಲಾಗುತ್ತಿದೆ.

ಆರೋಗ್ಯ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ನೀಡಲಾಗುತ್ತಿದೆ. ಆದರೆ ಗರ್ಭಿಣಿಯರು ಬೂಸ್ಟರ್ ಪಡೆಯಬಹುದೇ? ಎಂದು ಕೆಲವರು ಕೇಳುತ್ತಿದ್ದಾರೆ. ಅದರ ಕುರಿತ ಮಾಹಿತಿ ಇಲ್ಲಿದೆ ನೋಡಿ:

ಗರ್ಭಿಣಿಯರಿಗೆ ಕೊರೊನಾದ ಅಪಾಯ

ಗರ್ಭಿಣಿಯರಿಗೆ ಕೊರೊನಾದ ಅಪಾಯ

ಗರ್ಭಿಣಿಯರಿಗೆ ಕೋವಿಡ್ 19 ತಗುಲಿದರೆ ಅಪಾಯ ಹೆಚ್ಚು. ಕೆಲವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುವುದು. ಎರಡನೇ ಅಲೆಯಲ್ಲಿ ಎಷ್ಟೋ ಗರ್ಭಿಣಿಯರು ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇನ್ನು ಕೆಲವರಿಗೆ ಗರ್ಭಪಾತವಾಗಿದೆ. ಆದ್ದರಿಂದ ಗರ್ಭಿಣಿಯರಿಗೆ ಕೋವಿಡ್ 19 ತಗುಲುವುದು ಅಪಾಯಕಾರಿಯಾಗಿದೆ. ಅಲ್ಲದೆ ಗರ್ಭಿಣಿಯರಿಗೆ ಕೋವಿಡ್ 19 ತಗುಲುವುದು ತಪ್ಪಿಸಲು ಲಸಿಕೆ ಪಡೆಯುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.

ಗರ್ಭಿಣಿಯರು ಕೋವಿಡ್ 19 ಲಸಿಕೆ ಪಡೆಯುವುದು ಸುರಕ್ಷಿತ, ಇದರಿಂದ ಮಗು ಹಾಗೂ ತಾಯಿಯ ಮೇಲೆ ಯಾವುದೇ ಅಡ್ಡಪರಿಣಾಮ ಬೀರಿಲ್ಲ ಎಂಬುವುದಾಗಿ ಅಧ್ಯಯನ ವರದಿಗಳು ತಿಳಿಸಿವೆ. ಲಸಿಕೆ ಪಡೆದಾಗ ಇತರರಿಗೆ ಉಂಟಾದಂತೆ ಸಣ್ಣ-ಪುಟ್ಟ ಅಡ್ಡಪರಿಣಾಮ ಕಾಣಿಸಬಹುದು, ಆದರೆ ಗಂಭೀರವಾದ ಸಮಸ್ಯೆಗಳಾಗಿಲ್ಲ. ಕೊರೊನಾ ಲಸಿಕೆಗಳು ಕೋವಿಡ್ 19 ವಿರುದ್ಧ ಗರ್ಭಿಣಿ ಮಹಿಳೆಯರಿಗೆ ಸುರಕ್ಷತೆಯನ್ನು ನೀಡುತ್ತದೆ.

ಗರ್ಭಿಣಿಯಾಗಿದ್ದರೆ ಬೂಸ್ಟರ್ ಪಡೆಯಬಹುದಾ?

ಗರ್ಭಿಣಿಯಾಗಿದ್ದರೆ ಬೂಸ್ಟರ್ ಪಡೆಯಬಹುದಾ?

ಹೌದು, ನೀವು ಬೂಸ್ಟರ್ ಪಡೆಯಲು ಅರ್ಹರಾಗಿದ್ದರೆ ಗರ್ಭಿಣಿಯಾದವರೂ ಬೂಸ್ಟರ್ ಪಡೆಯಬಹುದು. ಬೂಸ್ಟರ್ ಪಡೆಯುವುದರಿಂದ ನಿಮ್ಮ ಹಾಗೂ ಮಗುವಿನ ಸುರಕ್ಷತೆಗೆ ಒಳ್ಳೆಯದು, ನೀವು ಕೋವಿಡ್ 19 2ನೇ ಲಸಿಕೆ ಪಡೆದು 9 ತಿಂಗಳು ಕಳೆದಿದ್ದರೆ ಬೂಸ್ಟರ್ ಅಥವಾ ಪ್ರಿವೆನ್ಷನ್ ಡೋಸ್ ಪಡೆಯುವುದರಿಂದ ಸುರಕ್ಷತೆ ಹೆಚ್ಚು.

ಬೂಸ್ಟರ್ ಪಡೆಯುವುದು ಅವಶ್ಯಕ ಏಕೆ?

ಬೂಸ್ಟರ್ ಪಡೆಯುವುದು ಅವಶ್ಯಕ ಏಕೆ?

* ಕೋವಿಡ್ 19 ಎರಡು ಲಸಿಕೆ ಪಡೆದು 6 ತಿಂಗಳು ಕಳೆದವರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿರುವುದು ತಿಳಿದು ಬಂದಿದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಬೂಸ್ಟರ್ ಅಗ್ಯತವಾಗಿದೆ.

* ಬೂಸ್ಟರ್ ಪಡೆಯುವುದರಿಂದ ಕೋವಿಡ್ 19 ಅಪಾಯ ಕಡಿಮೆಯಾಗುವುದು.

* ಗರ್ಭಿಣಿಯರು ಬೂಸ್ಟರ್‌ ಪಡೆಯುವ ಮೂಲಕ ಹುಟ್ಟಲಿರುವ ಮಗುವಿನ ಸುರಕ್ಷತೆ ಸಿಗುವುದು.

ಬೂಸ್ಟರ್ಗೆ ಸಿಡಿಸಿಯಿಂದ ಅನುಮತಿ ಸಿಕ್ಕಿದ್ದು ಎಲ್ಲಾ ಗರ್ಭಿಣಿಯರು ಸೇರಿದಂತೆ ಎಲ್ಲಾ ವಯಸ್ಕರು ಪಡೆದುಕೊಳ್ಳಬಹುದು ಎಂದು ಹೇಳಿದೆ.

English summary

Is It Safe To Get the COVID-19 Booster Shot If You're Pregnant in Kannada

Is It Safe To Get the COVID-19 Booster Shot If You're Pregnant in Kannada,
Story first published: Saturday, January 22, 2022, 12:30 [IST]
X
Desktop Bottom Promotion