For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ನೀರಿನ ಒಡೆತ ಎಂದರೇನು? ಇದರ ಲಕ್ಷಣಗಳೇನು

|

ಗರ್ಭಾವಸ್ಥೆಯ ಕಡೆಯ ದಿನಗಳು ಹತ್ತಿರಾದಂತೆ ಹೆರಿಗೆಯ ಸಮಯವನ್ನು ಕೆಲವು ಸೂಚನೆಗಳು ಸ್ಪಷ್ಟಪಡಿಸುತ್ತವೆ. ನೋವು ಒಂದು ಸ್ಪಷ್ಟ ಸೂಚನೆಯಾದರೆ ಇನ್ನೊಂದು ಸ್ಪಷ್ಟ ಸೂಚನೆ ಎಂದರೆ 'ನೀರಿನ ಒಡೆತ' (water breaking). ಹೆಸರೇ ಸೂಚಿಸುವಂತೆ ಇದುವರೆಗೆ ತಡೆಹಿಡಿದಿಟ್ಟಿದ್ದ ದ್ರವ ಒಮ್ಮೆಲೇ ಧಾರೆಯಾಗಿ ಹೊರಹೊಮ್ಮುತ್ತದೆ. ಪ್ರಸೂತಿ ಗೃಹಗಳಲ್ಲಿ ಈ ಸ್ಥಿತಿಯನ್ನು ಮೊದಲೇ ನಿರೀಕ್ಷಿಸಿರುವ ಕಾರಣ ಇದಕ್ಕೆ ವೈದ್ಯರು ಮತ್ತು ದಾದಿಯರು ತಯಾರಾಗಿಯೇ ಇರುತ್ತಾರೆ.

ಆದರೆ ಕೆಲವೊಮ್ಮೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೇ ನೀರಿನ ಒಡೆತ ಅತಿ ಅಸಹಜ ಸ್ಥಳಗಳಲ್ಲಾಗಬಹುದು. ಆಟೋ ರಿಕ್ಷಾ, ಟ್ಯಾಕ್ಸಿ, ಕಾಯುವ ಕೋಣೆ, ವಿಮಾನ ಗಳಲ್ಲಿಯೂ ಹೆರಿಗೆಯ ಮುನ್ನ ಜರುಗುವ ಈ ಕ್ರಿಯೆ ನಡೆದಿದೆ. ಆದರೆ ಸೂಕ್ತ ಎಚ್ಚರಿಕೆ ಹಾಗೂ ವೈದ್ಯರ ನಿಗಾ ವಹಿಸುವ ಮೂಲಕ ಈ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ನೀರಿನ ಒಡೆತ ಹೇಗೆ ಸಂಭವಿಸುತ್ತದೆ?

ನೀರಿನ ಒಡೆತ ಹೇಗೆ ಸಂಭವಿಸುತ್ತದೆ?

ನಿಮ್ಮ "ನೀರಿನ ಒಡೆತ" ಎಂಬುದು ನಿಮ್ಮ ಮಗು ಜನಿಸಲು ಬಹುತೇಕ ಸಿದ್ಧವಾಗಿದೆ ಎಂದು ಸಂಕೇತಿಸುವ ಆಮ್ನಿಯೋಟಿಕ್ ಚೀಲ (ಗರ್ಭಾಶಯವನ್ನು ಸುತ್ತುವರೆದಿರುವ ದ್ರವ ತುಂಬಿದ ಚೀಲ)ದ ಒಡೆಯುವಿಕೆಯಾಗಿದೆ. ಗರ್ಭಧಾರಣೆಯ 40 ನೇ ವಾರದಲ್ಲಿ ಹೆರಿಗೆಯನ್ನು ಪ್ರಾರಂಭಿಸುವ ರಾಸಾಯನಿಕ ಸರಪಳಿ ಕ್ರಿಯೆಯನ್ನು ಯಾವುದು ಪ್ರಚೋದಿಸುತ್ತದೆ ಎಂದು ಇದುವರೆಗೂ ಖಚಿತವಾಗಿ ತಿಳಿಸಲು ಸಾಧ್ಯವಾಗಿಲ್ಲ, ಆದರೆ ತಜ್ಞರು ಭ್ರೂಣದಿಂದ ಮೆದುಳಿನ ಸಂಕೇತಗಳು ಹೊರಡುವುದನ್ನು ಸೇರಿದಂತೆ ಹಲವಾರು ಸಂಕೀರ್ಣ ಅಂಶಗಳನ್ನು ಸೂಚಿಸುತ್ತಾರೆ.

 ನೀರಿನ ಒಡೆತದಿಂದ ಯಾವ ಬಗೆಯ ಅನುಭವವಾಗುತ್ತದೆ?

ನೀರಿನ ಒಡೆತದಿಂದ ಯಾವ ಬಗೆಯ ಅನುಭವವಾಗುತ್ತದೆ?

ನಿಮ್ಮ ನೀರಿನ ಒಡೆತ ಹೆಚ್ಚಿನವರು ಉತ್ಪ್ರೇಕ್ಷಿಸುವಂತೆ ಜಲಪಾತದಂತೆ ದ್ರವದ ಪ್ರವಾಹವಾಗಿ ಏನೂ ಬರುವುದಿಲ್ಲ, ಆದರೆ ಬಣ್ಣವಿಲ್ಲದ, ವಾಸನೆಯಿಲ್ಲದ ಆಮ್ನಿಯೋಟಿಕ್ ದ್ರವದ ನಿಧಾನವಾದ ಧಾರೆಯಂತೆ (ಅಥವಾ ಚಿಕ್ಕ ಜಲಪಾತದಂತೆ) ಹೊರ ಹರಿಯುತ್ತದೆ. ಇದು ಕೆಲವೊಮ್ಮೆ ಸಿಹಿಯಾದ ವಾಸನೆಯನ್ನೂ ಹೊಂದಿರುತ್ತದೆ.

ನೀರಿನ ಒಡೆತಕ್ಕೂ ಸಾಮಾನ್ಯ ಸ್ರಾವಕ್ಕೂ ಏನು ವ್ಯತ್ಯಾಸ?

ನೀರಿನ ಒಡೆತಕ್ಕೂ ಸಾಮಾನ್ಯ ಸ್ರಾವಕ್ಕೂ ಏನು ವ್ಯತ್ಯಾಸ?

ಆಮ್ನಿಯಾಟಿಕ್ ದ್ರವ ತಿಳಿಯಾದ ಹುಲ್ಲಿನ ಬಣ್ಣದ ದ್ರವವಾಗಿದೆ. ಆದರೆ ಜನನಾಂಗದ ಸ್ರಾವ ಲೋಳೆಲೋಳೆಯಾದ, ಹಾಲು ಬಿಳುಪಿನ ದ್ರವವಾಗಿದೆ. ಸಾಮಾನ್ಯವಾಗಿ ಮಾಸಿಕ ಸ್ರಾವಗಳ ನಡುವಣ ಅವಧಿಯಲ್ಲಿಯೂ ಈ ಸ್ರಾವವನ್ನು ಕಾಣಬಹುದು. ಆದರೆ ಸಾಮಾನ್ಯ ಸ್ರಾವದ ಬಳಿಕ ರಕ್ತಸ್ರಾವ ಆಗುವುದಿಲ್ಲ. ನೀರಿನ ಒಡೆತ ಮುಗಿದ ಬಳಿಕ ಹೆರಿಗೆಯ ಸ್ಪಷ್ಟ ಸೂಚನೆಯಾಗಿ ಗುಲಾಬಿ ಅಥವಾ ಕಂದು ಮಿಶ್ರಿತ ಕೆಂಪು ಬಣ್ಣದ ರಕ್ತಸ್ರಾವ ಹೊರಹರಿಯತೊಡಗುತ್ತದೆ. ಹೆರಿಗೆಯ ಇನ್ನೊಂದು ಸ್ಪಷ್ಟ ಸೂಚನೆ ಎಂದರೆ ಗರ್ಭಕಂಠವನ್ನು ಮುಚ್ಚಿದ್ದ ಸ್ನಿಗ್ಧವಾದ ಮುಚ್ಚಳ (mucous plug) ಈಗ ತೆರೆದು ಒಳಗಿನ ಒತ್ತಡ ಹೊರಹರಿಯತೊಡಗುತ್ತದೆ. ಈ ಮುಚ್ಚಳ ಗಟ್ಟಿಯಾದ ಕಫದಂತಿದ್ದು ಶೌಚಾಲಯದಲ್ಲಿ ಇದನ್ನು ಗಮನಿಸಲೂಬಹುದು.

ಈಗ ಹೊರ ಹರಿದಿರುವುದು ನೀರಿನ ಒಡೆತವೂ ಮೂತ್ರವೋ ಎಂದು ಖಚಿತಪಡಿಸುವುದು ಹೇಗೆ?

ಈಗ ಹೊರ ಹರಿದಿರುವುದು ನೀರಿನ ಒಡೆತವೂ ಮೂತ್ರವೋ ಎಂದು ಖಚಿತಪಡಿಸುವುದು ಹೇಗೆ?

ಅನೇಕ ಗರ್ಭಿಣಿಯರ ಮೂತ್ರವಿಸರ್ಜನೆಗೂ ನೀರಿನ ಒಡೆತಕ್ಕೂ ವ್ಯತ್ಯಾಸವನ್ನು ಕಂಡುಕೊಳ್ಳುವುದರಲ್ಲಿ ಸೋಲುತ್ತಾರೆ. ವಿಶೇಷವಾಗಿ ಮೂರನೇ ತ್ರೈಮಾಸಿಕದ ಕೊನೆಯ ದಿನಗಳಲ್ಲಿ ಮೂತ್ರದ ವಾಸನೆ ನಿಮಗೆ ಸುಳಿವು ನೀಡುತ್ತದೆ: ಒಂದು ವೇಳೆ ಮೂತ್ರದ ದ್ರವವು ಹಳದಿ ಬಣ್ಣದ್ದಾಗಿದ್ದರೆ ಮತ್ತು ಅಮೋನಿಯಾದ ವಾಸನೆಯಿದ್ದರೆ, ಅದು ಬಹುಶಃ ಮೂತ್ರ. ಇದರಲ್ಲಿ ಮೂತ್ರದ ಯಾವುದೇ ವಾಸನೆ ಇರದಿದ್ದರೆ (ಅಥವಾ ಒಂದು ರೀತಿಯ ಸಿಹಿ ವಾಸನೆ ಇದ್ದರೆ), ಅದು ಬಹುಶಃ ಆಮ್ನಿಯೋಟಿಕ್ ದ್ರವವಾಗಿದೆ.

ಗರ್ಭವತಿ ಹೆರಿಗೆಗೆ ಹೋಗುವ ಮೊದಲೇ ಆಕೆಗೆ ನೀರಿನ ಒಡೆತ ಕಾಣಿಸಿಕೊಳ್ಳುತ್ತದೆಯೇ?

ಗರ್ಭವತಿ ಹೆರಿಗೆಗೆ ಹೋಗುವ ಮೊದಲೇ ಆಕೆಗೆ ನೀರಿನ ಒಡೆತ ಕಾಣಿಸಿಕೊಳ್ಳುತ್ತದೆಯೇ?

ನೀವು ಹೆರಿಗೆಗಾಗಿ ಕಾಯುತ್ತಿರುವ ಸಾಲಿನಲ್ಲಿದ್ದರೆ ನಿಮ್ಮ ನೀರಿನ ಒಡೆತದ ಬಗ್ಗೆ ಹೆಚ್ಚು ಚಿಂತಿಸಬೇಡಿ: ಹೆರಿಗೆಗೆ ಹೋಗುವ ಮೊದಲು ಕೇವಲ 15 ಶೇಖಡಾದಷ್ಟು ಮಹಿಳೆಯರು ಮಾತ್ರ ಆಮ್ನಿಯೋಟಿಕ್ ಚೀಲದ ಒಡೆಯುವಿಕೆಯನ್ನು ಅನುಭವಿಸುತ್ತಾರೆ. ಆದ್ದರಿಂದ ನಿಮಗೆ ಈಗಾಗಲೇ ಸಾಕಷ್ಟು ಎಚ್ಚರಿಕೆ ನೀಡಲಾಗಿರುತ್ತದೆ(ಅಥವಾ ನೀವು ಈಗಾಗಲೇ ಆಸ್ಪತ್ರೆಯಲ್ಲಿರುತ್ತೀರಿ). ಮತ್ತು ಸಾಕಷ್ಟು ಮಹಿಳೆಯರು ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಈ ಪೊರೆಗಳನ್ನು ಕೃತಕವಾಗಿ ತೆರೆದು ಹೆರಿಗೆಯನ್ನು ಪ್ರಾರಂಭಿಸುವ ಅನುಭವನ್ನು ಪಡೆಯುತ್ತಾರೆ.

ನೀರಿನ ಒಡೆತ ಕಾಣಿಸಿಕೊಂಡರೂ ನನಗೆ ಯಾವುದೇ ಸಂಕೋಚನವಿಲ್ಲದಿದ್ದರೇನು ಮಾಡಲಿ?

ನೀರಿನ ಒಡೆತ ಕಾಣಿಸಿಕೊಂಡರೂ ನನಗೆ ಯಾವುದೇ ಸಂಕೋಚನವಿಲ್ಲದಿದ್ದರೇನು ಮಾಡಲಿ?

ಈ ಸೂಚನೆ ಹೆರಿಗೆ ಇನ್ನೇನು ಜರುಗುವ ಹಾದಿಯಲ್ಲಿದೆ ಎಂದು ಸೂಚಿಸುತ್ತದೆ. ಆಮ್ನಿಯಾಟಿಕ್ ಪೊರೆ ಹರಿಯುವ ಮೊದಲೂ ಹೆಚ್ಚಿನ ಮಹಿಳೆಯರಿಗೆ ಮೊದಲ ಸಂಕುಚನ 12 ಗಂಟೆಗಳ ಒಳಗೆ ಅನುಭವಕ್ಕೆ ಬರುತ್ತದೆ ಎಂದು ನಿರೀಕ್ಷಿಸಬಹುದು, ಆದರೆ ಹೆಚ್ಚಿನವರಿಗೆ 24 ಗಂಟೆಗೂ ಮುನ್ನವೇ ಅದನ್ನು ಅನುಭವಿಸುವ ನಿರೀಕ್ಷೆಯಿದೆ. ಒಂದು ವೇಳೆ ಆಮ್ನಿಯಾಟಿಕ್ ದ್ರವ ನಿಧಾನವಾಗಿ ಸೋರಿಕೆಯಾಗಿ ಹೆರಿಗೆಯ ಸಂಕುಚನಗಳು ಕಾಣಿಸಿಕೊಳ್ಳದೇ ಇದ್ದರೂ ತೊಂದರೆಯಿಲ್ಲ, ಈ ಕೊರತೆಯನ್ನು ತಕ್ಷಣವೇ ದೇಹ ತುಂಬಿಸಿಕೊಳ್ಳುತ್ತದೆ. ಹೆರಿಗೆ ಪೂರ್ಣವಾಗುವವರೆಗೂ ಈ ದ್ರವ ಉತ್ಪತ್ತಿಯಾಗುತ್ತಲೇ ಇರುತ್ತದೆ.

ಆದರೂ, ಅನೇಕ ಗರ್ಭವತಿಯರಿಗೆ, ಹೆರಿಗೆಯಾಗಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಒಡೆದ ಆಮ್ನಿಯೋಟಿಕ್ ಚೀಲದ ಮೂಲಕ ಸೋಂಕನ್ನು ತಡೆಗಟ್ಟಲು (ಹೆರಿಗೆಯಾಗುವ ಸಮಯ ಹೆಚ್ಚಿದಷ್ಟೂ ಸೋಂಕು ಎದುರಾಗುವ ಅಪಾಯವೂ ಹೆಚ್ಚು), ಹೆಚ್ಚಿನ ವೈದ್ಯರು ನಿಮ್ಮ ನಿಗದಿತ ದಿನಾಂಕದ ಸಮೀಪದಲ್ಲಿದ್ದರೆ ಈ ಚೀಲ ಒಡೆದ 24 ಗಂಟೆಗಳ ಒಳಗೆ ಹೆರಿಗೆಯಾಗುವಂತೆ ಪ್ರೇರೇಪಿಸುತ್ತಾರೆ. ಹೆಚ್ಚಿನ ಗರ್ಭವತಿಯರಲ್ಲಿ ಈ ನೀರಿನ ಒಡೆತ ಕಂಡುಬಂದ ಬಳಿಕ ಸುಮಾರು ಆರು ಗಂಟೆಗಳ ನಂತರ ಹೆರಿಗೆಯಾಗುತ್ತದೆ.

ನೀವು ಮನೆಯಲ್ಲಿದ್ದಾಗ ನೀರಿನ ಒಡೆತ ಕಂಡು ಬಂದರೆ ನೀವು ಏನು ಮಾಡಬಹುದು

ನೀವು ಮನೆಯಲ್ಲಿದ್ದಾಗ ನೀರಿನ ಒಡೆತ ಕಂಡು ಬಂದರೆ ನೀವು ಏನು ಮಾಡಬಹುದು

ನಿಮ್ಮ ಆರೋಗ್ಯದ ಕಾಳಜಿ ವಹಿಸಿರುವ ತಜ್ಞರು ನಿಮಗೆ ನೀರಿನ ಒಡೆತ ಕಾಣಿಸಿಕೊಂಡಾಗ ಅನುಸರಿಸಬೇಕಾದ ಸೂಚನೆಗಳನ್ನು ನಿಮಗೆ ಈಗಾಗಲೇ ನೀಡಿರಬಹುದು. ಅವರನ್ನು ಅನುಸರಿಸಿ. ನಿಮಗೆ ಸೂಚನೆಗಳು ನೆನಪಿಲ್ಲದಿದ್ದರೆ ಅಥವಾ ಮುಂದುವರಿಯುವುದು ಹೇಗೆ ಎಂಬ ಗೊಂದಲ ಕಂಡು ಬಂದರೆ ರಾತ್ರಿಯೇ ಆಗಲಿ, ಹಗಲೇ ಆಗಲಿ, ತಕ್ಷಣ ನೆರವಿಗಾಗಿ ಕರೆ ಮಾಡಿ.

ಒಂದು ವೇಳೆ ನೀರಿನ ಒಡೆತ ಕಂಡು ಬಂದ ಸೂಚನೆಯ ಬಳಿಕ ಮುಂದಿನ 12 ಗಂಟೆಗಳಲ್ಲಿ ಸಂಕೋಚನಕ್ಕಾಗಿ ಕಾಯಬೇಕಾದರೆ, ಆಮ್ನಿಯೋಟಿಕ್ ಚೀಲದ ರಕ್ಷಣಾತ್ಮಕ ತಡೆಗೋಡೆ ಈಗ ಒಡೆದಿರುವುದರಿಂದ ನೀವು ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಸೋಂಕಿನ ವಿರುದ್ಧ ಕಾಪಾಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು. ನಿಮ್ಮ ಬಟ್ಟೆಗಳನ್ನು ಒದ್ದೆ ಮಾಡದಂತೆ ಆಮ್ನಿಯೋಟಿಕ್ ದ್ರವವನ್ನು ಹೀರಿಕೊಳ್ಳುವ ಪ್ಯಾಂಟಿ ಲೈನರ್‌ಗಳು ಅಥವಾ ಮ್ಯಾಕ್ಸಿ ಪ್ಯಾಡ್‌ಗಳನ್ನು ಬಳಸಿ, ಟ್ಯಾಂಪೂನ್‌ ಬಳಕೆ ಸಲ್ಲದು, ಮತ್ತು ನಿಮ್ಮ ಜನನಾಂಗದ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಿ. ನೀವು ಸ್ನಾನಗೃಹಕ್ಕೆ ಹೋದಾಗ, ಮುಂಭಾಗದಿಂದ ಹಿಂಭಾಗಕ್ಕೆ ಒರೆಸಿಕೊಳ್ಳುವ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಮತ್ತು ಈಗ ನಿಮಗೆ ಮನಸ್ಸಾದರೂ ಲೈಂಗಿಕ ಕ್ರಿಯೆಗೆ ಯಾವುದೇ ಅವಕಾಶವಿಲ್ಲ.

ಹೆರಿಗೆಯ ಅಂದಾಜು ದಿನವನ್ನು ಪರಿಗಣಿಸುವಾಗ ನಿಮ್ಮನ್ನು ಬಿ ಗುಂಪಿಗೆ ಸೇರಿಸಿದ್ದರೆ ನೀರಿನ ಒಡೆತ ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸುತ್ತಾರೆ. (ಅಂದರೆ ಮೊದಲ ಸಂಕುಚನ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ ನೀವು ಆಸ್ಪತ್ರೆಯಲ್ಲಿದ್ದಷ್ಟೂ ಒಳ್ಳೆಯದು). ಏಕೆಂದರೆ ಈ ಸಮಯದಲ್ಲಿ ನಿಮಗೆ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚು.

ಈ ಕೆಳಗಿನ ಯಾವುದೇ ಸೂಚನೆ ಕಂಡುಬಂದರೂ ವೈದ್ಯರನ್ನು ತಕ್ಷಣ ಕರೆ ಮಾಡಿ ಸಹಾಯ ಯಾಚಿಸಿ

ಈ ಕೆಳಗಿನ ಯಾವುದೇ ಸೂಚನೆ ಕಂಡುಬಂದರೂ ವೈದ್ಯರನ್ನು ತಕ್ಷಣ ಕರೆ ಮಾಡಿ ಸಹಾಯ ಯಾಚಿಸಿ

ನೀರಿನ ಒಡೆತ ಕಂಡುಬಂದ ಬಳಿಕ ಹೊರಬಂದ ದ್ರವ ಹಸಿರು ಅಥವಾ ಕಂದು ಬಣ್ಣದ್ದಾಗಿದ್ದರೆ, ನಿಮ್ಮ ಗರ್ಭದೊಳಗೇ ಮಗು ಕೊಂಚ ಚಲನೆಯನ್ನು ಪ್ರಕಟಿಸಿದೆ ಎಂದು ತಿಳಿಯಬಹುದು (ಈ ಸ್ಥಿತಿಗೆ meconium ಎಂದು ಕರೆಯುತ್ತಾರೆ)

ನೀವು 37 ವಾರಗಳ ಅಥವಾ ಅದಕ್ಕೂ ಕೊಂಚ ಕಡಿಮ ಅವಧಿಯ ಗರ್ಭಿಣಿಯಾಗಿದ್ದರೆ (ಇದು ಸಂಭವಿಸುವ ಸಾಧ್ಯತೆ ಅತ್ಯಪರೂಪ).

ನಿಮ್ಮ ಜನನಾಂಗದ ಒಳಭಾಗದಲ್ಲಿ ನೀವು ಏನನ್ನಾದರೂ ಅನುಭವಿಸುತ್ತೀರಿ ಅಥವಾ ಜನನಾಂಗವನ್ನು ಅಗಲಿಸಿದಾಗ ಹೊಕ್ಕುಳಬಳ್ಳಿಯ ಕುಣಿಕೆ ಕಾಣಿಸುತ್ತಿದೆಯೋ ಎಂದು ಗಮನಿಸಿ. ಹೌದು ಎಂದಾದರೆ ತಕ್ಷಣ ವೈದ್ಯರಿಗೆ ಕರೆ ಮಾಡಿ. ಅಪರೂಪವಾಗಿ, ಹೆರಿಗೆ ಪ್ರಾರಂಭವಾಗುವ ಮೊದಲು ಆಮ್ನಿಯಾಟಿಕ್ ಚೀಲ ಒಡೆದಾಗ ಮತ್ತು ಮಗು ಇನ್ನೂ ಸೊಂಟದ ಕೆಳಭಾಗಕ್ಕೆ ಬಂದಿರದೇ ಇದ್ದಾಗ (ಮಗು ಸಹಜ ಸ್ಥಿತಿಯಲ್ಲಿ ಇರದಿದ್ದರೆ ಅಥವಾ ಅವಧಿಪೂರ್ವ ಹೆರಿಗೆಯಾಗಿದ್ದರೆ), ಹೊಕ್ಕುಳಬಳ್ಳಿಯು ಈ ದ್ರವದೊಂದಿಗೆ ಹೊರ ಬರಬಹುದು. ಈ ಸ್ಥಿತಿಗೆ "prolapsed umbilical cord" ಎಂದು ಕರೆಯುತ್ತಾರೆ. ಈ ಕುಣಿಕೆ ಕೆಲವೊಮ್ಮೆ ನೀರಿನ ಒಡೆತದ ದ್ರವದ ಜೊತೆಗೇ ಜನನಾಂಗದಿಂದ ಹೊರ ಕಾಣುವಷ್ಟರ ಮಟ್ಟಿಗೂ ಹೊರಬರಬಹುದು.

English summary

What to Know About Your Water Breaking During Pregnancy in Kannada

Here we are discussing about During Pregnancy Water Breaking: Must Knowing Things. Read more.
X