For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕಾಡುವ ಲೂಸ್ 'ಮೋಷನ್ ಸಮಸ್ಯೆ'- ಇಲ್ಲಿದೆ ನೋಡಿ ಇದಕ್ಕೆ ಪರಿಹಾರಗಳು

|

ಗರ್ಭಧಾರಣೆ ವೇಳೆ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಈ ವೇಳೆ ಮತ್ತೊಂದು ಜೀವವು ಗರ್ಭದಲ್ಲಿ ಇರುವ ಕಾರಣದಿಂದ ಏನೇ ಆರೋಗ್ಯ ಸಮಸ್ಯೆಗಳು ಆದರೂ ಅದು ನೇರವಾಗಿ ಮಗುವಿನ ಮೇಲೆ ಕೂಡ ಪರಿಣಾಮ ಬಿರುವುದು. ಹೀಗಾಗಿ ಗರ್ಭಿಣಿಯರು ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ಹೋಗಿ, ಆರೋಗ್ಯ ಕಾಪಾಡಬೇಕು. ಗರ್ಭಿಣಿಯರಿಗೆ ಮಲಬದ್ಧತೆಯಂತಹ ಸಮಸ್ಯೆಯು ಕಂಡುಬರುವುದು. ಅದೇ ರೀತಿಯಾಗಿ ಭೇದಿಯ ಸಮಸ್ಯೆ ಕೂಡ ಕಾಡುವುದು. ಭೇದಿ ಅಥವಾ ಲೂಸ್ ಮೋಷನ್ ಕಂಡುಬರಲು ಕೆಲವೊಂದು ಬಾಹ್ಯ ಅಂಶಗಳು ಕಾರಣವಾಗಿದೆ. ಇದನ್ನು ಗರ್ಭಿಣಿಯರು ಲಘುವಾಗಿ ಪರಿಗಣಿಸಬಾರದು. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಇದ್ದರೆ ಆಗ ಪೋಷಕಾಂಶಗಳ ಕೊರತೆ ಮತ್ತು ನಿರ್ಜಲೀಕರಣವು ಉಮಟಾಗಬಹುದು. ಎರಡು ಪರಿಸ್ಥಿತಿಯು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು.

ಗರ್ಭಿಣಿಯರಲ್ಲಿ ಕಂಡುಬರುವಂತಹ ಭೇದಿಗೆ ಕೆಲವು ಕಾರಣಗಳು

ಗರ್ಭಿಣಿಯರಲ್ಲಿ ಕಂಡುಬರುವಂತಹ ಭೇದಿಗೆ ಕೆಲವು ಕಾರಣಗಳು

ಗರ್ಭಧಾರಣೆ ವೇಳೆ ಕಂಡುಬರುವಂತಹ ಭೇದಿಗೆ ಸರಿಯಾಗಿದ ಕಾರಣ ಕಂಡು ಹುಡುಕುವುದು ಅತೀ ಅಗತ್ಯವಾಗಿರುವುದು. ನಿಯಮಿತ ಮಲದ ಪರೀಕ್ಷೆ, ಹೊಟ್ಟೆಯ ಅಲ್ಟ್ರಾಸೊನೊಗ್ರಾಫಿ ಮತ್ತು ರಕ್ತ ಪರೀಕ್ಷೆಯಿಂದ ಭೇದಿಗೆ ನಿಖರ ಕಾರಣ ತಿಳಿಯಬಹುದು. ಗರ್ಭಧಾರಣೆ ವೇಳೆ ಉಂಟಾಗುವ ಭೇದಿಗೆ ಹಲವಾರು ಕಾರಣಗಳು ಇರಬಹುದು.

ಭೇದಿಯು ಗರ್ಭಿಣಿಯರ ಮೇಲೆ ಹೇಗೆ ಪರಿಣಾಮ ಬೀರುವುದು

ಭೇದಿಯು ಗರ್ಭಿಣಿಯರ ಮೇಲೆ ಹೇಗೆ ಪರಿಣಾಮ ಬೀರುವುದು

ಭೇದಿಯಿಂದಾಗಿ ಗರ್ಭಿಣಿಯರಿಗೆ ತುಂಬಾ ಬಳಲಿಕೆ ಮತ್ತು ನಿಶ್ಯಕ್ತಿಯು ಕಾಡಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಆಗ ನಿರ್ಜಲೀಕರಣ ಉಂಟಾಗಬಹುದು. ಭೇದಿಯು ಎರಡು ಅಥವಾ ಮೂರು ದಿನಗಳ ಕಾಲ ಮುಂದುವರಿದರೆ ಆಗ ಅದರಿಂದ ನಿರ್ಜಲೀಕರಣವು ಉಂಟಾಗುವುದು ಮತ್ತು ಮೃತ ಶಿಶುವಿನ ಜನನವಾಗುವ ಸಾಧ್ಯತೆಯು ಈ ವೇಳೆ ಇರುವುದು. ಅವಧಿಗೆ ಮೊದಲೇ ಹೆರಿಗೆ ನೋವು ಕಾಣಿಸಿಕೊಳ್ಳಬಹುದು. ಭೇದಿಯಿಂದಾಗಿ ದೇಹದಲ್ಲಿನ ನೀರಿನಾಂಶವು ಕಡಿಮೆಯಾಗಿರುವ ಕಾರಣದಿಂದ ನೀವು ದ್ರವಾಹಾರವನ್ನು ಹೆಚ್ಚು ಸೇವಿಸಬೇಕು.

Most Read: ಗರ್ಭಿಣಿಯರು ನಿಯಮಿತವಾಗಿ ಜೇನುತುಪ್ಪದ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು

ಭೇದಿಯಿಂದ ಮಗುವಿನ ಮೇಲೆ ಹೇಗೆ ಪರಿಣಾಮವಾಗುವುದು

ಭೇದಿಯಿಂದ ಮಗುವಿನ ಮೇಲೆ ಹೇಗೆ ಪರಿಣಾಮವಾಗುವುದು

ಗರ್ಭಧಾರಣೆ ವೇಳೆ ಭೇದಿಯಿಂದಾಗಿ ಗರ್ಭದಲ್ಲಿರುವ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದು. ಗರ್ಭಧಾರಣೆ ವೇಳೆ ಭೇದಿಗೆ ಸರಿಯಾದ ಚಿಕಿತ್ಸೆ ಮಾಡಿಕೊಳ್ಳದೆ ಇದ್ದರೆ ಆಗ ದೇಹದಲ್ಲಿ ಉಪ್ಪಿನಾಂಶವು ಕಡಿಮೆ ಆಗುವುದು. ಉಪ್ಪಿನಾಂಶದ ಕೊರತೆಯಿಂದಾಗಿ ದೇಹದ ಇತರ ಕೆಲವೊಂದು ಅಂಗಾಂಶಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದು. ಇದನ್ನು ದೀರ್ಘಕಾಲದ ತನಕ ಕಡೆಗಣಿಸಿದರೆ, ಆಗ ಭ್ರೂಣದಲ್ಲಿ ಮಗುವಿನ ಬೆಳವಣಿಗೆ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು.

ಗರ್ಭಧಾರಣೆ ವೇಳೆ ಭೇದಿ ಸಮಸ್ಯೆ ನಿಭಾಯಿಸುವುದು ಹೇಗೆ?

ಗರ್ಭಧಾರಣೆ ವೇಳೆ ಭೇದಿ ಸಮಸ್ಯೆ ನಿಭಾಯಿಸುವುದು ಹೇಗೆ?

•ಗರ್ಭಧಾರಣೆ ವೇಳೆ ಸೋಂಕು ನಿಮ್ಮನ್ನು ಕಾಡದಂತೆ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿ. ಒಂದು ವೇಳೆ ಸೋಂಕು ಬಂದರೂ ಅದನ್ನು ನೈಸರ್ಗಿಕ ವಿಧಾನದ ಮೂಲಕ ಪರಿಹಾರ ಮಾಡಲು ಪ್ರಯತ್ನಿಸಿ.

•ಶುದ್ಧೀಕರಿಸಿರುವ ನೀರು ಕುಡಿಯಿರಿ ಮತ್ತು ಬೇಯಿಸಿದ ಆಹಾರವನ್ನೇ ಸೇವನೆ ಮಾಡಿ.

•ಆಹಾರ ಸೇವನೆಗೆ ಮೊದಲು ಮತ್ತು ಬಳಿಕ ಕೈಗಳನ್ನು ಸರಿಯಾಗಿ ತೊಳೆಯಿರಿ.

•ನಿರ್ಜಲೀಕರಣ ತಡೆಯುವಂತಹ ಸೊಲ್ಯುಷನ್ ನ್ನು ನಿರಂತರವಾಗಿ ಸೇವಿಸಿ.

•ನೆಲ್ಲಿಕಾಯಿ, ಸೇಬು ಮತ್ತು ದಾಳಿಂಬೆಯು ನೈಸರ್ಗಿಕ ವಿಧಾನದಿಂದ ಭೇದಿ ತಡೆಯಲು ನೆರವಾಗುವುದು.

•ಮೊಸರಿಗೆ ಬಾಳೆಹಣ್ಣು ಹಾಕಿಕೊಂಡು ಸೇವನೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುವುದು.

•ಮಾಂಸಾಹಾರ ಮತ್ತು ನಾರಿನಾಂಶ ಅಧಿಕವಾಗಿರುವಂತಹ ಆಹಾರವನ್ನು ಕೆಲವು ದಿನಗಳ ಕಾಲ ಸೇವಿಸಬೇಡಿ.

ಗರ್ಭಧಾರಣೆ ವೇಳೆ ಭೇದಿ ಉಂಟಾಗಲು ಕಾರಣಗಳು ಏನು?

ಗರ್ಭಧಾರಣೆ ವೇಳೆ ಭೇದಿ ಉಂಟಾಗಲು ಕಾರಣಗಳು ಏನು?

ಗರ್ಭಧಾರಣೆ ವೇಳೆ ಭೇದಿ ಉಂಟಾಗಲು ಹಲವಾರು ಕಾರಣಗಳು ಇರಬಹುದು.

ಇದರಲ್ಲಿ ಕೆಲವೊಂದನ್ನು ಇಲ್ಲಿ ನೀಡಲಾಗಿದೆ.

ಹಾರ್ಮೋನು ಬದಲಾವಣೆಗಳು

ಹಾರ್ಮೋನು ಬದಲಾವಣೆಗಳು

ಗರ್ಭಧಾರಣೆ ವೇಳೆ ದೇಹದಲ್ಲಿ ಹಾರ್ಮೋನು ಉತ್ಪತ್ತಿಯಿಂದಾಗಿ ಜೀರ್ಣಕ್ರಿಯೆ ಕಾರ್ಯಗಳು ತುಂಬಾ ನಿಧಾನವಾಗುವುದು. ಆಹಾರದಲ್ಲಿರುವಂತಹ ಪೋಷಕಾಂಶಗಳನ್ನು ತುಂಬಾ ಪರಿಣಾಮಕಾರಿಯಾಗಿ ಹೊರತೆಗೆಯುವ ಮೂಲಕ ಇದು ಭ್ರೂಣದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿಭಾಯಿಸುವುದು. ಅದಾಗ್ಯೂ, ಜೀರ್ಣಕ್ರಿಯೆ ಕಾರ್ಯವು ನಿಧಾನವಾಗುವ ಕಾರಣದಿಂದಾಗಿ ಮಲಬದ್ಧತೆಯಂತಹ ಸಮಸ್ಯೆಯು ಕಂಡುಬರುವುದು. ಇನ್ನೊಂದು ಕಡೆಯಲ್ಲಿ ಹಾರ್ಮೋನುಗಳು ಜೀರ್ಣಕ್ರಿಯೆ ವ್ಯವಸ್ಥೆಯನ್ನು ವೇಗವಾಗಿ ಮಾಡಿದರೆ ಅದರಿಂದ ಭೇದಿ ಸಮಸ್ಯೆ ಕಂಡುಬರುವುದು.

ಪ್ರಸವಪೂರ್ವ ವಿಟಮಿನ್ ಗಳು

ಪ್ರಸವಪೂರ್ವ ವಿಟಮಿನ್ ಗಳು

ಪ್ರಸವಪೂರ್ವ ವಿಟಮಿನ್ ಗಳು ಶಿಶುವಿನ ಬೆಳವಣಿಗೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು. ಈ ಸಪ್ಲಿಮೆಂಟ್ ಗಳು ಕೆಲವೊಂದು ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸಮಸ್ಯೆ ಉಂಟು ಮಾಡಿ ಅದರಿಂದ ಭೇದಿ ಶುರುವಾಗಬಹುದು. ಪ್ರಸವಪೂರ್ವ ನೀಡಲಾಗುವಂತಹ ವಿಟಮಿನ್ ಸಪ್ಲಿಮೆಂಟ್ ಗಳು ನಿಮ್ಮ ಹೊಟ್ಟೆಗೆ ಸರಿಯಾಗಿ ಹೊಂದಿಕೊಳ್ಳದೆ ಇದ್ದರೆ ಆಗ ನೀವು ಇದರ ಬಗ್ಗೆ ವೈದ್ಯರೊಂದಿಗೆ ಮಾತನಾಡಿ, ಅವರ ಸಲಹೆ ಮೇರೆಗೆ ನೀವು ಈ ವಿಟಮಿನ್ ಗಳ ಸೇವನೆ ನಿಲ್ಲಿಸಿಬಿಡಿ. ಇದರ ಬಳಿಕ ಭೇದಿ ಕಡಿಮೆಯಾಗಿದೆಯಾ ಎಂದು ನೀವು ತಿಳಿಯಬಹುದು.

Most Read: ಗರ್ಭಿಣಿಯರ ಆರೋಗ್ಯಕ್ಕೆ 'ಪಂಚಾಮೃತ' ಸೇವನೆ ಬಹಳ ಒಳ್ಳೆಯದು

ಆಹಾರ ಕ್ರಮದಲ್ಲಿ ವ್ಯತ್ಯಯ

ಆಹಾರ ಕ್ರಮದಲ್ಲಿ ವ್ಯತ್ಯಯ

ಗರ್ಭ ಧರಿಸಿದ ಬಳಿಕ ನೀವು ಹೆಚ್ಚಿನ ಪೋಷಕಾಂಶ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಆಹಾರದ ಬಗ್ಗೆ ತುಂಬಾ ಜಾಗರೂಕರಾಗುವಿರಿ. ಇದರಿಂದಾಗಿ ನಿಮ್ಮ ಆಹಾರ ಕ್ರಮವು ಬದಲಾಗುವುದು. ಆಹಾರ ಕ್ರಮದಲ್ಲಿ ಹಠಾತ್ ಬದಲಾವಣೆಯಿಂದಾಗಿ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಭೇದಿ ಸಂಭವಿಸುವುದು.

ಆಹಾರ ಸೂಕ್ಷ್ಮತೆ

ಆಹಾರ ಸೂಕ್ಷ್ಮತೆ

ಕೆಲವೊಂದು ಆಹಾರದ ಬಗ್ಗೆ ಸೂಕ್ಷ್ಮತೆಯಿದ್ದರೆ, ಗರ್ಭಧಾರಣೆ ವೇಳೆ ಅದನ್ನು ಸೇವನೆ ಮಾಡುವುದು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಜೀರ್ಣಕ್ರಿಯೆಗೆ ಸಮಸ್ಯೆ ಆಗುವ ಮತ್ತು ಹೊಟ್ಟೆ ಉಬ್ಬರ ಉಂಟು ಮಾಡುವ ಆಹಾರಗಳ ಬಗ್ಗೆ ಗಮನಿಸಿ.

ಲ್ಯಾಕ್ಟೋಸ್ ಅಸಹಿಷ್ಣುತೆ

ಲ್ಯಾಕ್ಟೋಸ್ ಅಸಹಿಷ್ಣುತೆ

ಹೊಟ್ಟೆಯು ಸರಿಯಾಗಿ ಇಲ್ಲದೆ ಇದ್ದರೆ ಆಗ ಮಕ್ಕಳಿಗೆ ಹಾಲು ಕುಡಿಯಲು ನೀಡಬಾರದು ಎಂದು ಹೆಚ್ಚಿನ ವೈದ್ಯರು ಸಲಹೆ ಮಾಡುವರು. ಯಾಕೆಂದರೆ ಇದು ನೈಸರ್ಗಿಕ ವಿರೇಚಕವಾಗಿದೆ. ಇದೇ ಸಲಹೆಯು ನಿಮಗೆ ಕೂಡ ಅನ್ವಯವಾಗುವುದು. ಆಹಾರ ಕ್ರಮದಲ್ಲಿ ನೀವು ಹಾಲನ್ನು ಸೇರಿಸಿಕೊಂಡರೆ ಆಗ ಅದರಿಂದ ಮತ್ತಷ್ಟು ಬದಲಾವಣೆಗಳು ಆಗಿ, ಗರ್ಭಧಾರಣೆ ವೇಳೆ ಭೇದಿ ಸಮಸ್ಯೆಯು ಕಾಡುವುದು. ಗರ್ಭ ಧರಿಸಿದ್ದೇವೆಂದು ತಿಳಿದ ಕೂಡಲೇ ಹೆಚ್ಚಿನ ಮಹಿಳೆಯರು ಹಾಲಿನ ಸೇವನೆ ಹೆಚ್ಚು ಮಾಡುವರು. ಹಾಲಿನ ಸೇವನೆಯಿಂದಾಗಿ ಗರ್ಭಿಣಿಯರಲ್ಲಿ ಭೇದಿ ಸಮಸ್ಯೆಯು ಕಾಡಬಹುದು. ಲ್ಯಾಕ್ಟೋಸ್ ಅಸಹಿಷ್ಣುತೆಯಿಂದಾಗಿ ಭೇದಿ ಸಮಸ್ಯೆ ಕಾಡಬಹುದು. ಕೆಲವು ದಿನಗಳ ಕಾಲ ಹಾಲಿನ ಸೇವನೆ ಕಡಿಮೆ ಮಾಡಿದರೆ ಆಗ ಲ್ಯಾಕ್ಟೋಸ್ ಅಸಹಿಷ್ಣುತೆ ಲಕ್ಷಣಗಳು ತಗ್ಗುವುದು. ಅದಾಗ್ಯೂ, ನೀವು ಹಾಲಿನ ಉತ್ಪನ್ನಗಳಾಗಿರುವಂತಹ ಚೀಸ್ ಮತ್ತು ಮೊಸರನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದರಿಂದ ಕ್ಯಾಲ್ಸಿಯಂ ಕೊರತೆ ನಿವಾರಣೆ ಮಾಡಬಹುದು. ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಭೇದಿಗೆ ಚಿಕಿತ್ಸೆ ಗರ್ಭಧಾರಣೆ ವೇಳೆ ಭೇದಿ ಸಮಸ್ಯೆ ಕಾಡುತ್ತಲದ್ದರೆ ಆಗ ಇಲ್ಲಿ ಕೊಟ್ಟಿರುವಂತಹ ಕೆಲವೊಂದು ವಿಧಾನಗಳನ್ನು ಪಾಳಿಸಿಕೊಂಡು ಹೋದರೆ ಸಮಸ್ಯೆ ನಿವಾರಣೆ ಮಾಡಬಹುದು.

ಕೆಲವೊಂದು ಆಹಾರವನ್ನು ಕಡೆಗಣಿಸಿ

ಕೆಲವೊಂದು ಆಹಾರವನ್ನು ಕಡೆಗಣಿಸಿ

ನಿಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಕಾರಣದಿಂದಾಗಿ ಪರಿಹಾರ ಕಂಡುಕೊಳ್ಳಬಹುದು. ಯಾಕೆಂದರೆ ಕೆಲವು ಆಹಾರಗಳು ಭೇದಿ ಸಮಸ್ಯೆಯನ್ನು ಹೆಚ್ಚಿಸುವುದು. ತುಂಬಾ ಖಾರ, ಕರಿದ, ಅಧಿಕಕೊಬ್ಬು, ಅಧಿಕನಾರಿನಾಂಶ, ಬೇಕರಿ ಉತ್ಪನ್ನ ಮತ್ತು ಹಾಲಿನ ಉತ್ಪನ್ನಗಳನ್ನು ಗರ್ಭಿಣಿಯರು ಕಡೆಗಣಿಸಬೇಕು. ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ಆಗ ನೀವು ದೇಹಕ್ಕೆ ಬೇಕಾಗುವಂತಹ ಕ್ಯಾಲ್ಸಿಯಂನ್ನು ಕೆಲವೊಂದು ಕ್ಯಾಲ್ಸಿಯಂ ಅಧಿಕವಾಗಿರುವ ಹಣ್ಣುಗಳು ಮತ್ತು ಹಸಿರೆಲೆಗಳಿಂದ ಪಡೆಯಲು ಪ್ರಯತ್ನಿಸಿ.

Most Read: ಮಗುವಿನ ಆಗಮನದ ನಂತರ ಲೈಂಗಿಕ ಜೀವನ ಹೇಗೆ ಬದಲಾಗುವುದು ನೋಡಿ

ನೀವು ಏನು ಕುಡಿಯುತ್ತಿದ್ದೀರಿ ಎನ್ನುವುದರ ಕಡೆ ಗಮನಹರಿಸಿ

ನೀವು ಏನು ಕುಡಿಯುತ್ತಿದ್ದೀರಿ ಎನ್ನುವುದರ ಕಡೆ ಗಮನಹರಿಸಿ

ಗರ್ಭಿಣಿಯರಲ್ಲಿ ಭೇದಿ ಸಮಸ್ಯೆಯು ಕಾಣಿಸಿಕೊಂಡಿದ್ದರೆ ಆಗ ಕಾಫಿ, ಚಹಾ ಮತ್ತು ದ್ರಾಕ್ಷಿ ಜ್ಯೂಸ್ ನ್ನು ಕಡೆಗಣಿಸಬೇಕು. ಕೆಫಿನ್ ಮತ್ತು ಕಾರ್ಬೊನೇಟೆಡ್ ಪಾನೀಯಗಳು, ಒಣ ಹಣ್ಣುಗಳು, ಮಾಂಸ, ಖಾರ ಮತ್ತು ಸಕ್ಕರೆ ಹೆಚ್ಚಿರುವಂತಹ ಕ್ಯಾಂಡಿ ಹಾಗೂ ಚಾಕಲೇಟ್ ಗಳನ್ನು ಕಡೆಗಣಿಸಬೇಕು.

ತೇವಾಂಶದಿಂದ ಇರಲು ಪ್ರಯತ್ನಿಸಿ

ತೇವಾಂಶದಿಂದ ಇರಲು ಪ್ರಯತ್ನಿಸಿ

ಗರ್ಭಿಣಿಯರಲ್ಲಿ ಭೇದಿ ಸಮಸ್ಯೆಯು ಕಾಡುತ್ತಲಿದ್ದರೆ ಆಗ ನೀರು, ಜ್ಯೂಸ್ ಗಳು ಮತ್ತು ಸೂಪ್ ಸೇವನೆಯನ್ನು ಹೆಚ್ಚಿಸಬೇಕು. ಯಾಕೆಂದರೆ ವಿದ್ಯುದ್ವಿಚ್ಛೇದಗಳು ನಷ್ಟವಾಗುವುದಕ್ಕೆ ಇದು ಪರಿಹಾರವಾಗುವುದು. ನೀರಿನಿಂದ ಕಳಕೊಂಡಿರುವ ದ್ರವಾಂಶವು ಮರಳುವುದು, ಜ್ಯೂಸ್ ಮತ್ತು ಸೂಪ್ ನಿಂದ ದೇಹದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಮಟ್ಟವನ್ನು ಮರಳಿ ಪಡೆಯಲು ನೆರವಾಗುವುದು. ನೀವು ಬಾಯಿ ಮೂಲಕ ದ್ರವಾಹಾರ ಸೇವನೆ ಮಾಡಿ ಅದರಿಂದ ನಿರ್ಜಲೀಕರಣ ತಪ್ಪಿಸಬೇಕು. ಯಾಕೆಂದರೆ ಇದು ಭೇದಿ ನಿವಾರಣೆ ಮಾಡಲು ತುಂಬಾ ಪರೀಕ್ಷಿತವಾದ ವಿಧಾನವಾಗಿದೆ. ಭೇದಿ ಸಂದರ್ಭದಲ್ಲಿ ಗರ್ಭಿಣಿಯರು ಸಕ್ಕರೆ ಮತ್ತು ಉಪ್ಪು ಹಾಕಿದಂತಹ ನೀರು ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಸತುವಿನ ಸಪ್ಲಿಮೆಂಟ್ ನ್ನು ಎರಡು ವಾರಗಳ ತನಕ ಸೇವಿಸಬೇಕು. ಭೇದಿಯಿಂದಾಗಿ ತುಂಬಾ ನೀರಿನಾಂಶ ಕಳೆದುಕೊಂಡಿರುವ ಕಾರಣದಿಂದಾಗಿ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ನೀರನ್ನು ಹೀರಿಕೊಳ್ಳಲು ಸತು ನೆರವಾಗುವುದು.

English summary

Loose Motions during Pregnancy

During pregnancy loose motions are always caused due to some external cause, therefore it must never be taken lightly. If not treated on time it can lead to mal absorption of food and dehydration, both the conditions can adversely affect the developing foetus.It is very important to know the cause of loose motions during pregnancy. Routine stool examination, abdomen ultrasonography and blood tests can be used to detect cause of loose motion. Loose motions during pregnancy can be caused due to various reasons:
Story first published: Thursday, March 7, 2019, 13:20 [IST]
X
Desktop Bottom Promotion