For Quick Alerts
ALLOW NOTIFICATIONS  
For Daily Alerts

ಸುಲಭದ ಹೆರಿಗೆಗೆ ನೀವೇನು ಮಾಡಬೇಕು ತಿಳಿದಿದೆಯೇ?

By Sushma Charhra
|

ಪ್ರತಿಯೊಬ್ಬರ ಜೀವನದಲ್ಲೂ ಯಾವುದೇ ಒಂದು ಹಂತದಲ್ಲಿ ಒಂದು ಮೈಲುಗಲ್ಲಿರುತ್ತದೆ. ಈ ಮೈಲುಗಲ್ಲುಗಳು ಪ್ರಕೃತಿದತ್ತವಾದ ವಯಕ್ತಿಯವೂ ಆಗಿರಬಹುದು ಅಥವಾ ವೃತ್ತಿಪರವೂ ಆಗಿರಬಹುದು. ನೀವು ಪುರುಷನೇ ಆಗಿರಬಹುದು ಅಥವಾ ಮಹಿಳೆಯೇ ಆಗಿರಬಹುದು ಮಗು ಮಾಡಿಕೊಳ್ಳುವುದು ಅಂದರೆ ಅದು ಜೀವನದ ಒಂದು ಪ್ರಮುಖವಾದ ಬದಲಾವಣೆಯ ಕಾಲ.

ಅದು ನಿಮ್ಮ ಮೊದಲ ಮಗುವೇ ಆಗಿರಬಹುದು ಅಥವಾ 10 ನೇ ಮಗುವೇ ಆಗಿರಬಹುದು ಅದು ಮುಖ್ಯವಾಗುವುದಿಲ್ಲ. ಹೊಸ ಜೀವವೊಂದನ್ನು ಸೃಷ್ಟಿಸುತ್ತಿದ್ದೇವಲ್ಲ ಅದು ಬಹಳ ಮುಖ್ಯ ವಿಚಾರವಾಗುತ್ತದೆ. ನಿಮ್ಮ ಜೀವದೊಳಗೆ ಇನ್ನೊಂದು ಜೀವ ಸೃಷ್ಟಿಯಾಗುವ ಸಂದರ್ಬದಲ್ಲಿ ನಿಜಕ್ಕೂ ಜೀವನ ಸುಂದರಗೊಳ್ಳುತ್ತದೆ.

foods that make labor easier

ಗರ್ಭಾವಸ್ಥೆ ತರುವ ಎಲ್ಲಾ ರೀತಿಯ ಅಸ್ವಸ್ಥತೆಯನ್ನು ಬದಿಗಿಟ್ಟು ಹೇಳುವುದಾದರೆ, ಹೊಟ್ಟೆಯೊಳಗೆ ನಿಮ್ಮ ಮುದ್ದು ಕೂಸು ಬೆಳೆಯುವಾದ ಅದು ಒದೆಯುವ ಮತ್ತು ನಿಮ್ಮೊಳಗೆ ಬೆಳೆಯುವ ಹಂತಗಳು ನಿಜಕ್ಕೂ ತಾಯಿಗೆ ಅಹ್ಲಾದಕರ ಅನುಭವ ನೀಡುತ್ತದೆ.ನಿಮಗೆ ಹುಟ್ಟಲಿರುವ ಮಗು ನಿಮ್ಮ ಗರ್ಭದೊಳಗೆ ಆರೋಗ್ಯಯುತವಾಗಿ ಬೆಳೆಯುತ್ತಿದೆ ಎಂಬ ತೃಪ್ತಿಯೊಂದು ನಿಮಗೆ ನೀಡುವ ಖುಷಿ ನಿಜಕ್ಕೂ ಅಪಾರವಾದದ್ದು ಅದು ವರ್ಣಿಸಲು ಕೂಡ ಅಸಾಧ್ಯವಾಗುವಂತ ಅನುಭವ ಅದು.

ಮಗು ಹುಟ್ಟಿದ ನಂತರದ ದಿನಗಳೂ ಕೂಡ ಬಹಳ ಸುಖಕರವಾಗಿರುವಂತದ್ದು. ನಿಮ್ಮ ತೋಳುಗಳು ನಿಮ್ಮ ಕಂದಮ್ಮನನ್ನು ಅಪ್ಪಿ ಬಾಚುವ ಆ ಸಂದರ್ಬ ನಿಜಕ್ಕೂ ತಾಯಿಗೆ ಸ್ವರ್ಗದ ಅನುಭವ ನೀಡುತ್ತದೆ. ಈ ಎರಡೂ ಸಂದರ್ಬವನ್ನು ಬೇರ್ಪಡಿಸುವುದೇ ಪ್ರಸವ ಮತ್ತು ಮಗುವಿನ ಜನನ. ಇದು ಗರ್ಭಾವಸ್ಥೆಯ ಬಹಳ ಪ್ರಮುಖವಾದ ಘಟ್ಟ. ತಾಂತ್ರಿಕವಾಗಿ ಹೇಳುವುದಾದರೆ ಹಲವಾರು ವಿಚಾರಗಳು ಮಗು ಹುಟ್ಟುವ ಸಂದರ್ಭಲ್ಲಿ ತಪ್ಪಾಗಬಹುದು.
ಆದರೆ, ಹೆಚ್ಚಿನ ಮಹಿಳೆಯರಿಗೆ ಪ್ರಸವದ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ ಮತ್ತು ಭಯಗೊಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಪ್ರಸವ ಎಂದರೆ ಏನೋ ಆಗಬಾರದ್ದು ಆದರೆ ಎಂಬಂತ ಭಾವನೆಯೊಂದು ಹೆಚ್ಚಿನ ಮಹಿಳೆಯರನ್ನು ಕಾಡುತ್ತದೆ. ಅದರಲ್ಲೂ ಮೊದಲ ಬಾರಿ ಗರ್ಭಿಣಿಯಾಗಿರುವ ಮಹಿಳೆಯರನ್ನು ಇದು ಕಾಡುವುದು ಹೆಚ್ಚು.ಹಾಗಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನಿಮ್ಮ ಪ್ರಸವವು ಸುಲಭವಾಗಿರುತ್ತದೆ.

ಹೆರಿಗೆಯನ್ನು ಸುಲಭವಾಗಿಸುವ ಅಂಶಗಳು

ಈ ಲೇಖನವು 8 ಪ್ರಸವದ ಬಗೆಗಿನ ಸೀಕ್ರೆಟ್ ಅಂಶಗಳನ್ನು ನಿಮಗೆ ತಿಳಿಸಲಿದೆ., ಖಂಡಿತ ಇದು ನಿಮಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸುಲಭವಾಗುತ್ತದೆ.

• ಧನಾತ್ಮಕ ಆಲೋಚನೆಯಲ್ಲಿರಿ
• ನಿಮ್ಮ ಹೆರಿಗೆ ನೋವಿನ ಬಗ್ಗೆ ಅರ್ಥ ಮಾಡಿಕೊಂಡಿರಿ
• ಆರಾಮದಾಯಕ ಪರಿಸರವನ್ನು ಹುಡುಕಿ
• ಓಡಾಡುತ್ತಿರಿ
• ನಿಮ್ಮ ಭಯವನ್ನು ತೋಡಿಕೊಳ್ಳಿ
• ಬಿಸಿಯಾದ ಅಥವಾ ತಣ್ಣನೆಯ ಸಂಕೋಚನವನ್ನು ಬಳಸಿ
• ನಿಧಾನವಾದ ಮಸಾಜ್ ಮಾಡಿ
• ಬಿಸಿನೀರಿನಲ್ಲಿ ಸ್ನಾನ ಮಾಡಿ

1. ಧನಾತ್ಮಕ ಆಲೋಚನೆಯಲ್ಲಿರಿ

1. ಧನಾತ್ಮಕ ಆಲೋಚನೆಯಲ್ಲಿರಿ

ಪ್ರಸವದ ನೋವು ಒಂದು ದೈಹಿಕ ಕಂಡೀಷನ್ ಆಗಿದ್ದರೂ ಕೂಡ ಇದು ನಿಮ್ಮ ಮನಸ್ಸಿನ ಆಲೋಚನೆಯನ್ನೂ ಕೂಡ ನಿರ್ಧರಿಸಿರುತ್ತದೆ. ಯಾವ ಮಹಿಳೆಯರು ಧನಾತ್ಮಕ ಆಲೋಚನೆಯಲ್ಲಿ ಪ್ರಸವಕ್ಕೆ ತೆರಳುತ್ತಾರೋ ಅಂತಹ ಮಹಿಳೆಯರಿಗೆ ಸುಲಭದಲ್ಲಿ ಪ್ರಸವವಾದ ಪ್ರಸಂಗಗಳು ಹಲವಾರು ನಡೆದಿದೆ. ನೀವು ಹಾಡುಗಳನ್ನು ಕೇಳುವುದು ಮತ್ತು ಸುತ್ತಮುತ್ತಲೂ ಇರುವ ನಿಮ್ಮ ಪ್ರೀತಿಪಾತ್ರರ ಮಾತುಗಳನ್ನು ಆಲಿಸಿ, ಪ್ರಸವದ ವೇದನೆಯನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.ಭಕ್ತಿ ಪ್ರಧಾನ ಸಂಗೀತ ಮತ್ತು ಮಹಾಕಾವ್ಯಗಳ ಕಥೆಗಳನ್ನು ಕೇಳುವುದು ಈ ಸಂದರ್ಬದಲ್ಲಿ ಸಹಾಯಕ್ಕೆ ಬರುತ್ತದೆಯಂತೆ.

2. ನಿಮ್ಮ ಹೆರಿಗೆ ನೋವಿನ ಬಗ್ಗೆ ಅರ್ಥ ಮಾಡಿಕೊಂಡಿರಿ

2. ನಿಮ್ಮ ಹೆರಿಗೆ ನೋವಿನ ಬಗ್ಗೆ ಅರ್ಥ ಮಾಡಿಕೊಂಡಿರಿ

ಒಂದು ನೆನಪಿನಲ್ಲಿ ಇಟ್ಟುಕೊಳ್ಳಿ. ಪ್ರತಿಯೊಂದು ಪ್ರಸವ ವೇದನೆಯೂ ಭಿನ್ನವಾಗಿರುತ್ತದೆ.ಇದು ನಿಮ್ಮ ಕೌಂಟುಂಬಿಕ ಇತಿಹಾಸ, ಹಿಂದಿನ ಗರ್ಭಧಾರಣೆಯ ವಿವರ, ನಿಮ್ಮ ಗರ್ಭಾವಸ್ಥೆಯ ಪರಿ ಮತ್ತು ನಿಮ್ಮದು ಕಷ್ಟದ ಗರ್ಭಧಾರಣೆಯ ಅಥವಾ ಅಲ್ಲವಾ ಇತ್ಯಾದಿ ಎಲ್ಲಾ ಅಂಶಗಳನ್ನು ಕೂಡ ಅವಲಂಬಿಸಿ ಇರುತ್ತದೆ. ನೀವು ನಿಮ್ಮ ವೈದ್ಯರ ಬಳಿ ಇಲ್ಲವೇ ನರ್ಸ್ ಬಳಿ ಹೆಚ್ಚಿನ ಮಾಹಿತಿಗಳನ್ನು ಚರ್ಚಿಸಿ ಮತ್ತು ಆದಷ್ಟು ಆರಾಮದಾಯಕವಾಗಿರಿ ಮತ್ತು ನಿಮ್ಮ ಹೆರಿಗೆ ನೋವಿನ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ..ಪ್ರಸವ ವೇದನೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದಿದ್ದರೆ ಅದು ನಿಮಗೆ ಆರಂಭವಾದಾಗ ನೀವು ಹೆಚ್ಚು ಆರಾಮದಾಯಕವಾಗಿ ಇರಲು ನೆರವಾಗುತ್ತದೆ.

3. ಆರಾಮದಾಯಕ ಪರಿಸರವನ್ನು ಹುಡುಕಿ

3. ಆರಾಮದಾಯಕ ಪರಿಸರವನ್ನು ಹುಡುಕಿ

ನೀವು ಎಲ್ಲಿ ಮಗುವಿಗೆ ಜನ್ಮ ನೀಡಲು ಇಚ್ಛಿಸುತ್ತಿದ್ದೀರಿ ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ ಮತ್ತು ನೀವು ನಿರ್ಧಾರ ಮಾಡಿದ ಜಾಗವು ಪ್ರಸವಕ್ಕೆ ಸಂಬಂಧಿಸಿದ ಎಲ್ಲಾ ಸಲಕರಣೆಗಳನ್ನು ಹೊಂದಿದೆಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಮೊದಲ ಮತ್ತು ಪ್ರಮುಖ ವಿಚಾರ ಏನು ಅಂದರೆ, ವೈದ್ಯಕೀಯ ಮಾರ್ಗದರ್ಶನ ಮತ್ತು ವೈದ್ಯಕೀಯ ಸಲಹೆಗಳು ನಿಮಗೆ ಹತ್ತಿರವಾಗಿರಬೇಕು, ಒಂದು ವೇಳೆ ಪ್ರಸವದಲ್ಲಿ ಯಾವುದೇ ಸಮಸ್ಯೆ ಕಾಣಿಸಿದರೂ ಕೂಡ ಕೂಡಲೇ ವೈದ್ಯಕೀಯವಾಗಿ ಅದನ್ನು ನಿವಾರಿಸುವ ವೈದ್ಯರು ಹತ್ತಿರದಲ್ಲೇ ಇರಬೇಕು.ನೀವು ಪ್ರಸವಕ್ಕೆ ತೆರಳುವ ಜಾಗವು ನಿಮಗೆ ಸುರಕ್ಷಿತವಾದ ಮತ್ತು ಆರಾಮದಾಯಕವಾದ ಭಾವನೆಯನ್ನು ನೀಡಬೇಕು.

4. ಓಡಾಡುತ್ತಿರಿ

4. ಓಡಾಡುತ್ತಿರಿ

ಗರ್ಭಾವಸ್ಥೆಯ ಕೊನೆಯ ಹಂತಗಳಲ್ಲಿ ನೀವು ನಿಜಕ್ಕೂ ಬಹಳ ದೊಡ್ಡದಾಗಿದ್ದೀರಿ ಎಂಬ ಭಾವನೆ ಬರುತ್ತದೆ ಮತ್ತು ಸರಿಯಾಗಿ ನಡೆದಾಡಲು ಕೂಡ ಅಸಾಧ್ಯವಾಗುತ್ತಿರುತ್ತದೆ ಎಂಬುದು ಸತ್ಯ ವಿಚಾರವೇ ಆಗಿದೆ.ಆದರೆ ದೈಹಿಕ ಮತ್ತು ಪ್ರಾಯೋಗಿಕ ಕಾರಣಗಳಿಂದ ಹೇಳುವುದಾದರೆ, ಆರಾಮಾಗಿ ಹಾಸಿಗೆಯ ಮೇಲೆ ಮಲಗಿ ವಿಶ್ರಮಿಸುವುದು ಒಳ್ಳೆಯದೇ ಆಗಿರುತ್ತದೆ. ಆದರೆ ವೈದ್ಯಕೀಯ ಕಾರಣಗಳಿಂದ ಹೇಳುವುದಾದರೆ, ಹೀಗೆ ಮಾಡುವುದು ನಿಮ್ಮ ಪ್ರಸವ ವೇದನೆಯನ್ನು ಹೆಚ್ಚು ಕಠಿಣಗೊಳಿಸಬಹುದು. ಪ್ರಸವವು ನಿಮ್ಮ ದೇಹವನ್ನು ಸಾಕಷ್ಟು ಅಶಕ್ತಗೊಳಿಸುತ್ತದೆ. ಹಾಗಾಗಿ ಅದಕ್ಕೆ ನೀವು ಮೊದಲೇ ಸಿದ್ಧವಾಗಿರಬೇಕಾಗುತ್ತದೆ. ಆದರೆ, ನಿಧಾನವಾಗಿ ನಡೆದಾಡುವುದು, ಸಣ್ಣಪುಟ್ಟ ಮನೆಕೆಲಸಗಳನ್ನು ಮಾಡುವುದು ಮತ್ತು ನಿತ್ಯದ ಚಟುವಟಿಕೆಯಲ್ಲಿ ಅಲ್ಪಮಟ್ಟಿಗೆ ಪಾಲ್ಗೊಳ್ಳುವಿಕೆಯು ಪ್ರಸವದ ಸಂದರ್ಭದಲ್ಲಿ ಬರುವ ನೋವನ್ನು ಸಹಿಸಿಕೊಳ್ಳುವ ತಾಕತ್ತು ನಿಮ್ಮ ದೇಹಕ್ಕೆ ನೀಡುತ್ತದೆ.

5. ನಿಮ್ಮ ಭಯವನ್ನು ತೋಡಿಕೊಳ್ಳಿ

5. ನಿಮ್ಮ ಭಯವನ್ನು ತೋಡಿಕೊಳ್ಳಿ

ಒಂದು ವೇಳೆ ನೀವು ಮೊದಲ ಬಾರಿ ತಾಯಿಯಾಗುತ್ತಿದ್ದರೆ ಅಥವಾ ನೀವು ತಾಯಿಯಾಗಿದ್ದರೆ ಕೂಡ, ನಿಮ್ಮ ಗರ್ಭಾವಸ್ಥೆಯ ಬಗ್ಗೆ ಕೆಲವು ಅನುಮಾನಗಳಿರುವುದು ಸಹಜವೇ ಆಗಿದೆ. ಆದರೆ ಅನುಮಾನಗಳನ್ನು ನಿಮ್ಮೊಳಗೆ ಇಟ್ಟುಕೊಂಡು ಇರಬೇಡಿ. ಬದಲಾಗಿ ಅದನ್ನು ಮತ್ತೊಬ್ಬರ ಬಳಿ ಚರ್ಚಿಸಿ. ಮತ್ತೊಬ್ಬರ ಬಳಿ ಅನ್ನುವುದಕ್ಕಿಂತ ನಿಮ್ಮ ವೈದ್ಯರ ಬಳಿ ಚರ್ಚಿಸುವುದು ಬಹಳ ಸೂಕ್ತವಾದುದ್ದಾಗಿದೆ. ನಿಮ್ಮೊಳಗೆ ಇಟ್ಟುಕೊಂಡು ಯಾವುದೇ ವಿಚಾರದ ಬಗ್ಗೆಯೂ ಭಯ ಹೊಂದಬೇಡಿ ಮತ್ತು ಹೀಗೆ ನಿಮ್ಮ ಸಂಗಾತಿಯ ಬಳಿಯಾಗಲಿ, ವೈದ್ಯರ ಬಳಿಯಾಗಲಿ ಚರ್ಚೆ ನಡೆಸಿ. ಇಲ್ಲದೇ ಇದ್ದರೆ ಆ ವಿಚಾರಗಳು ನಿಮಗೆ ಸಮಸ್ಯೆ ಅನ್ನಿಸಬಹುದು. ಹೀದೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುವುದರಿಂದಾಗಿ ಸರಿಯಾದ ಬರ್ತ್ ಪ್ಲಾನ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

6. ಬಿಸಿಯಾದ ಅಥವಾ ತಣ್ಣನೆಯ ಸಂಕೋಚನವನ್ನು ಬಳಸಿ

6. ಬಿಸಿಯಾದ ಅಥವಾ ತಣ್ಣನೆಯ ಸಂಕೋಚನವನ್ನು ಬಳಸಿ

ಬಹುಷ್ಯ ಈ ವಿಚಾರ ನಿಮಗೆ ತಿಳಿದಿರಬಹುದು. ಬೆನ್ನಿನ ಕೆಳಭಾಗದ ನೋವು, ಸೊಂಟ ಭಾಗದ ನೋವು ಇಲ್ಲವೇ ತೋಳುಗಳ ನೋವಿನ ಪರಿಹಾರಕ್ಕಾಗಿ ಬೆಚ್ಚನೆಯ ಪ್ಯಾಕ್ ತಯಾರಿಸಿಕೊಳ್ಳಬಹುದು. ಹಾಗಾಗಿ, ಇದನ್ನು ಯಾವಾಗಲೂ ನಿಮ್ಮ ಜೊತೆಯಲ್ಲೇ ಇಟ್ಟುಕೊಂಡಿರುವು ಸೂಕ್ತ ಮತ್ತು ನೀವು ಪ್ರಸವದ ಕೋಣೆಗೆ ತೆರಳುವಾಗಲೂ ಇಟ್ಟುಕೊಂಡಿರಿ. ಒಂದು ವೇಳೆ ಬಿಸಿಯಾದ ಪ್ಯಾಕ್ ಇಲ್ಲದೇ ಇದ್ದಲ್ಲಿ ತಣ್ಣನೆಯ ಪ್ಯಾಕ್ ಕೂಡ ನಿಮ್ಮ ನೆರವಿಗೆ ಬರುತ್ತದೆ. (ಲೇಟೆಕ್ಸ್ ಗ್ಲೋ, ಐಸ್ ಕ್ಯೂಬ್ ಗಳಿಂದ ತುಂಬಿರುತ್ತದೆ) ಇದು ಹಲವರಿಗೆ ಜಾಯಿಂಟ್ ನೋವುಗಳನ್ನು ಶಮನ ಮಾಡಲು ಈ ಸಂದರ್ಬದಲ್ಲಿ ನೆರವಿಗೆ ಬರುತ್ತದೆ. ಈ ತಣ್ಣನೆಯ ಬಟ್ಟೆಗಳು ನಿಮ್ಮ ಮುಖದಲ್ಲಿ, ಎದೆಯಲ್ಲಿ ಮತ್ತು ಕುತ್ತಿಗೆಯಲ್ಲಿ ಬೆವರುವುದನ್ನು ಒರೆಸಿಕೊಳ್ಳಲು ಸಹಾಯಕವಾಗುತ್ತದೆ.

7. ನಿಧಾನವಾದ ಮಸಾಜ್ ಮಾಡಿ

7. ನಿಧಾನವಾದ ಮಸಾಜ್ ಮಾಡಿ

ಮನುಷ್ಯರಿಗೆ ಆರೈಕೆ, ತಿಳುವಳಿಕೆ ಮತ್ತು ಸೂಕ್ಷ್ಮ ಸ್ಪರ್ಷವು ಹಿತವಾದ ಅನುಭವವನ್ನು ನೀಡುತ್ತದೆ. ಅದರಲ್ಲೂ ಪ್ರಸವದಂತಹ ಪ್ರಮುಖ ಸನ್ನಿವೇಶಗಳಲ್ಲಿ ನಿಜಕ್ಕೂ ಇದು ಮಹಿಳೆಯರಿಗೆ ಬಹಳ ಪ್ರಯೋಜನಕಾರಿಯಾಗಿರುತ್ತದೆ. ನಿಮ್ಮ ಕೆನ್ನೆಗಳನ್ನು ಹಿಡಿದು ಮುದ್ದಾಡುವುದು, ಭುಜ ಮತ್ತು ಕೂದಲನ್ನು ಮುಟ್ಟಿ ಸಮಾಧಾನಿಸುವುದು ಬಹಳ ಹಿತಾನುಭವ ನೀಡುತ್ತದೆ.ಇದು ನಿಮ್ಮನ್ನು ಹೆಚ್ಚು ಆತ್ಮವಿಶ್ವಾಸದಿಂದ ಪ್ರಸವದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ ಮತ್ತು ನಿಮ್ಮನ್ನು ಆದಷ್ಟು ಆರಾಮದಾಯಕವಾಗಿ ಇರಲು ಸಹಾಯ ಹಸ್ತ ನೀಡುತ್ತದೆ. ಇದನ್ನು ನಿಮ್ಮ ಸಂಗಾತಿ ಮಾಡಬಹುದು ಇಲ್ಲವೇ ನಿಮ್ಮ ಪೋಷಕರು ಮಾಡುವುದು ಬಹಳ ಒಳ್ಳೆಯದು. ಅವರು ನೀಡುವ ಸಮಾಧಾನ ಖಂಡಿತ ನಿಮಗೆ ಹೆಚ್ಚಿನ ಧೈರ್ಯವನ್ನು ತುಂಬುತ್ತದೆ.ನಿಮ್ಮನ್ನು ಯಾರು ಸಂತೈಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಎಣ್ಣೆ, ಅಥವಾ ಲೋಷನ್ ಬಳಸಿ ಸಮಾಧಾನ ನೀಡುವಂತ ಮಸಾಜ್ ಮಾಡಿಸಿಕೊಳ್ಳಿ. ಖಂಡಿತ ಇದು ನಿಮಗೆ ಪ್ರಸವವನ್ನು ಸುಲಭದಲ್ಲಿ ಎದುರಿಸುವ ಶಕ್ತಿಯನ್ನು ಒದಗಿಸುತ್ತದೆ.

8. ಬಿಸಿನೀರಿನಲ್ಲಿ ಸ್ನಾನ ಮಾಡಿ

8. ಬಿಸಿನೀರಿನಲ್ಲಿ ಸ್ನಾನ ಮಾಡಿ

ಎಲ್ಲರಿಗೂ ಕೂಡ ಬಿಸಿ ನೀರಿನಲ್ಲಿ ಪ್ರತಿದಿನ ಸುಸ್ತಾಗಿ ಕೆಲಸ ಮುಗಿಸಿ ಬಂದಾಗ ಸ್ನಾನ ಮಾಡಿದರೆ ಎಷ್ಟು ಆರಾಮದಾಯಕವಾಗಿರುತ್ತದೆ ಎಂಬುದು ತಿಳಿದೇ ಇದೆ. ಇದು ಗರ್ಭಾವಸ್ಥೆಯಲ್ಲೂ ಕೂಡ ಅನ್ವಯಿಸುತ್ತದೆ.ನಿಮ್ಮ ಬೆನ್ನಿನ ಭಾಗಕ್ಕೆ ಮತ್ತು ಸೊಂಟದ ಭಾಗಕ್ಕೆ ಬಿಸಿಯಾದ ನೀರು ಬೀಳುವಂತೆ ಸ್ನಾನ ಮಾಡಿ. ಇದು ಪ್ರಸವದ ನೋವನ್ನು ಸಹಿಸಿಕೊಳ್ಳುವ ತಾಕತ್ತನ್ನು ಬೆಳೆಸುತ್ತದೆ. ಇದು ಕೇವಲ ನಿಮಗೆ ತಾಜಾ ಭಾವನೆ ನೀಡುವುದು ಮಾತ್ರವಲ್ಲ, ನೊವನ್ನು ಕಡಿಮೆ ಮಾಡಲು ಕೂಡ ನೆರವಿಗೆ ಬರುತ್ತದೆ. ಆದರೆ, ಬಿಸಿ ನೀರಿನ ಸ್ನಾನವನ್ನು ಮಾಡುವಾಗ ನೀರು ಸರಿಯಾದ ಪ್ರಮಾಣದಲ್ಲಿ ಬಿಸಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ಇದೇ ಕಾರಣಕ್ಕೆ ನೀವು ಯಾವುದೇ ಸೋಂಕಿಗೆ ಒಳಗಾಗಬಾರದು ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.

English summary

What Are The Secrets To An Easier Labor?

Every individual has certain milestones in his or her life. These milestones may be personal or professional in nature. Irrespective of whether you are a man or woman, having a child will be one of the important turning points in your life.Whether it is your first child or your tenth, it does not really matter; the beginning of a new life is always important. The situation becomes all the way beautiful if the life is being created within you.
X
Desktop Bottom Promotion