For Quick Alerts
ALLOW NOTIFICATIONS  
For Daily Alerts

ಗರ್ಭವತಿಯಾಗಿರುವುದನ್ನು ಖಚಿತಪಡಿಸುವ ಲಕ್ಷಣಗಳು

By Jaya Subramanya
|

ವಿವಾಹಿತ ಸ್ತ್ರೀಯು ತಾನು ಪುಟ್ಟ ಕಂದನಿಗೆ ಅಮ್ಮನಾಗುತ್ತಿದ್ದೇನೆ ಹಾಗೂ ತನ್ನ ಕುಟುಂಬಕ್ಕೆ ಒಲವಿನ ಕುಡಿಯನ್ನು, ವಾರಸುದಾರನನ್ನು ನೀಡುತ್ತಿದ್ದೇನೆ ಎಂಬ ಸಂಭ್ರಮ ಮುಗಿಲು ಮುಟ್ಟುವಂತಹದ್ದು. ಆನಂದ, ದುಃಖ, ಬಿಗುಮಾನ, ಹಮ್ಮು ಎಲ್ಲಾ ಭಾವನೆಗಳೂ ಈ ಸಮಯದಲ್ಲಿ ಮಿಶ್ರವಾಗಿಬಿಡುತ್ತದೆ. ಇನ್ನು ತಂದೆ ತಾಯಿ ಹೆಚ್ಚು ಸಂಭ್ರಮಿಸುವ ಸಮಯವೇ ಪುಟ್ಟ ಕಂದನು ಒಡಲಿನಲ್ಲಿ ತನ್ನ ಪುಟ್ಟ ಸ್ಪರ್ಶದಿಂದ ಕಚಗುಳಿಯನ್ನು ಇಡುವಂತಹದ್ದು.

ಇಂದಿನ ಒತ್ತಡದ ಜೀವನದಲ್ಲಿ ಸ್ತ್ರೀಯು ಗರ್ಭಿಣಿಯಾದ ಸಂದರ್ಭದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಹೆಣ್ಣು ಇಂದು ಮನೆಯ ಒಳಗೂ ಹೊರಗೂ ದುಡಿದು ಸಂಸಾರದ ಚುಕ್ಕಾಣಿಗೆ ಹೆಗಲು ನೀಡುತ್ತಿದ್ದಾರೆ. ಹಾಗಿದ್ದ ಸಂದರ್ಭದಲ್ಲಿ ಕಂದನನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಕಾಪಾಡುವುದು ಜೋಪಾನ ಮಾಡುವುದು ಎಂದರೆ ಹೆಚ್ಚು ನಾಜೂಕಿನ ಸಮಯವಾಗಿದೆ. ಈ ಸಮಯದಲ್ಲಿ ಒಮ್ಮೊಮ್ಮೆ ಹೆಚ್ಚು ಸುಸ್ತು ಒತ್ತಡ ಹೆಚ್ಚಾಗಿಬಿಡುತ್ತದೆ. ಆದರೆ ಹೆಚ್ಚಿನವರಿಗೆ 2,3 ತಿಂಗಳು ಆದದ್ದೇ ತಿಳಿದಿರುವುದಿಲ್ಲ. ಅವರಿಗೆ ತಮ್ಮ ದೇಹದ ಕಾಳಜಿಯತ್ತ ಗಮನ ಹರಿಸುವಷ್ಟು ಸಮಯಾವಕಾಶ ಕೂಡ ಇರುವುದಿಲ್ಲ.

ಇಂತಹ ಎಷ್ಟೋ ಘಟನೆಗಳು ನಮ್ಮ ಸುತ್ತ ನಡೆದಿದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಪೂರ್ವ ಗರ್ಭವತಿ ಸಲಹೆಗಳನ್ನು ನಾವು ನೀಡುತ್ತಿದ್ದು ನೀವು ಗರ್ಭಿಣಿಯಾದಲ್ಲಿ ಯಾವೆಲ್ಲಾ ಲಕ್ಷಣಗಳು ಗೋಚರಿಸಲಿವೆ ಎಂಬುದನ್ನು ತಿಳಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಇಂತಹ ಲಕ್ಷಣಗಳು ನಿಮಗುಂಟಾದಲ್ಲಿ ಹೆಚ್ಚಿನ ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ....

 ಕಿಬ್ಬೊಟ್ಟೆ ಸೆಳೆತ

ಕಿಬ್ಬೊಟ್ಟೆ ಸೆಳೆತ

ಭ್ರೂಣವು ರಚನೆಯಾಗುವ ಸಮಯ ಇದಾಗಿದೆ. ಮೊಟ್ಟೆಯು ಫಾಲೊಪಿಯನ್ ಟ್ಯೂಬ್‌ಗಳಿಂದ ಗರ್ಭಾಶಯದವರೆಗೆ ಅಳವಡಿಸಿಕೊಳ್ಳಲು ಪ್ರಯಾಣಿಸುತ್ತದೆ. ಇದು ಕುಗ್ಗುವಿಕೆ ಮತ್ತು ಕಡಿಮೆ ಚುರುಕುಗೊಳಿಸುವಿಕೆಯನ್ನು ಉಂಟುಮಾಡುತ್ತದೆ. ಆದರೆ ಇದು ಎಲ್ಲಾ ಗರ್ಭಿಣಿಯರಲ್ಲಿ ಉಂಟಾಗುವುದಿಲ್ಲ.

ಊದಿಕೊಂಡ ಸ್ತನ

ಊದಿಕೊಂಡ ಸ್ತನ

ಗರ್ಭಾವಸ್ಥೆಯ ಸಂದರ್ಭದಲ್ಲಿ ಸ್ತನದಲ್ಲಿ ಬದಲಾಣೆಯುಂಟಾಗುತ್ತದೆ. ಗರ್ಭಧಾರಣೆಯ ಹಾರ್ಮೋನುಗಳ ಸ್ರವಿಸುವಿಕೆಯಿಂದ ಸ್ತನದಲ್ಲಿ ಬದಲಾವಣೆಯುಂಟಾಗುತ್ತದೆ. ಈ ಸಮಯದಲ್ಲಿ ಸ್ತನ ತುಂಬಾ ಮೃದುವಾಗಿರುತ್ತದೆ.

ಮುಟ್ಟಿನಲ್ಲಿ ಏರಿಳಿತ

ಮುಟ್ಟಿನಲ್ಲಿ ಏರಿಳಿತ

ಗರ್ಭಾವಸ್ಥೆಯ ಮುಖ್ಯ ಲಕ್ಷಣಗಳಲ್ಲಿ ಇದೂ ಒಂದಾಗಿದೆ. ನಿಮಗೆ ತಿಂಗಳ ಮುಟ್ಟಿನಲ್ಲಿ ಏರುಪೇರಾಗಿದ್ದರೆ ನೀವು ಗರ್ಭವತಿಯಾಗಿದ್ದೀರಿ ಎಂದಲ್ಲ. ಮುಟ್ಟು ನಿಂತ ಮೊದಲನೇ ದಿನದಿಂದ ಕನಿಷ್ಠ ಪಕ್ಷ ಒಂದು ವಾರದವರೆಗಾದರೂ ಕಾಯಿರಿ ನಂತರ ಗರ್ಭಾವಸ್ಥೆ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

ಆಯಾಸ ಮತ್ತು ನಿದ್ದೆ ಬರುವಿಕೆ

ಆಯಾಸ ಮತ್ತು ನಿದ್ದೆ ಬರುವಿಕೆ

ನೀವು ಗರ್ಭಿಣಿಯಾಗಿದ್ದಾಗ ನಿಮಗೆ ಆಯಾಸವುಂಟಾಗುತ್ತದೆ ಮತ್ತು ನಿದ್ದೆ ಕಾಡುತ್ತದೆ. ಈ ಸಂದರ್ಭದಲ್ಲಿ ನಿಮ್ಮ ದೇಹವು ಹೆಚ್ಚು ಪ್ರೊಗೊಸ್ಟ್ರೊನ್ ಅನ್ನು ಉತ್ಪಾದಿಸುತ್ತದೆ. ಪೂರ್ವ ಗರ್ಭಾವಸ್ಥೆಯ ಕಡಿಮೆ ರಕ್ತದೊತ್ತಡದಿಂದ ಇದು ಉಂಟಾಗುತ್ತದೆ.

ಯೋನಿ ಸ್ರಾವ

ಯೋನಿ ಸ್ರಾವ

ನಿಮ್ಮ ಯೋನಿಯಿಂದ ದಪ್ಪನೆಯ ಸ್ರಾವ ಹೊರಬೀಳುತ್ತದೆ. ಇದು ಪ್ರೊಜೆಸ್ಟರಾನ್ ಕಾರಣದಿಂದ ಉಂಟಾಗಿದೆ ಮತ್ತು ಸೋಂಕಿನಿಂದ ಮಗುವನ್ನು ಸಂರಕ್ಷಿಸಲು ಗರ್ಭಕಂಠದಿಂದ ಹೆಚ್ಚು ಸ್ರವಿಕೆಯ ಉತ್ಪಾದನೆಯಾಗುತ್ತದೆ.

ಮೂಡ್‌ನಲ್ಲಿ ಬದಲಾವಣೆ

ಮೂಡ್‌ನಲ್ಲಿ ಬದಲಾವಣೆ

ಗರ್ಭಾವಸ್ಥೆ ಹಾರ್ಮೋನುಗಳ ಕಾರಣದಿಂದ ಮೂಡ್‌ನಲ್ಲಿ ಬದಲಾವಣೆ ಉಂಟಾಗುತ್ತದೆ. ನಿಮಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಇದು ಸಾಮಾನ್ಯವಾಗಿರುತ್ತದೆ.

ಆಗಾಗ್ಗೆ ಮೂತ್ರವಿಸರ್ಜನೆ

ಆಗಾಗ್ಗೆ ಮೂತ್ರವಿಸರ್ಜನೆ

ಗಾಳಿಗುಳ್ಳೆಯ ಮೇಲೆ ಬೆಳೆಯುತ್ತಿರುವ ಗರ್ಭಾಶಯದ ಒತ್ತಡದಿಂದ ಇದು ಸಂಭವಿಸುತ್ತದೆ. ಗರ್ಭಾವಸ್ಥೆಯ ಐದರಿಂದ ಎಂಟು ವಾರಗಳಲ್ಲಿ ಇದು ಸಂಭವಿಸುತ್ತದೆ.

ಬೆನ್ನು ನೋವು

ಬೆನ್ನು ನೋವು

ಬೆನ್ನಿನ ಕೆಳಭಾಗದಲ್ಲಿ ಮೃದುವಾದ ನೋವು ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿನ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಇದು ಸಂಭವಿಸುತ್ತದೆ. ಕೆಲವು ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ಬೆನ್ನು ನೋವು ಅನುಭವಿಸುತ್ತಾರೆ.

ಬಾಯಿ ಚಪಲ

ಬಾಯಿ ಚಪಲ

ಸಾಮಾನ್ಯಕ್ಕಿಂತ ಹೆಚ್ಚಿನ ಹಸಿವು ನಿಮ್ಮನ್ನು ಕಾಡುತ್ತದೆ. ತಲೆನೋವಿನಿಂದ ಕೂಡಿದ ಖಾಲಿ ಹೊಟ್ಟೆಯಲ್ಲಿ ನೀವು ಏಳುತ್ತೀರಿ ಹಸಿವು ತೀರಿದ ನಂತರವೇ ನಿಮಗೆ ಸಮಾಧಾನವುಂಟಾಗುತ್ತದೆ. ನಿಮಗೆ ಮತ್ತು ನಿಮ್ಮ ಮಗುವಿಗೆ ಹೆಚ್ಚುವರಿ ನ್ಯೂಟ್ರಿಶಿಯನ್‌ನ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ.

English summary

early-pregnancy-symptoms-signs

Hearing the news of pregnancy has a mixed feelings for pregnant ladies. It brings joy, excitement, confusion and stress also. Waiting too long to get pregnant can cause fake symptoms also.Today, Boldsky will share with you some signs and symptoms of early pregnancy. Have a look at some of the confirmed pregnancy symptoms.
X
Desktop Bottom Promotion