For Quick Alerts
ALLOW NOTIFICATIONS  
For Daily Alerts

ರಕ್ತದ ಗುಂಪು ಒಂದೇ ಆಗಿದ್ದರೆ ಮಕ್ಕಳಾಗುವುದಿಲ್ಲವೇ?

By Hemanth
|

ಮಹಿಳೆ ಗರ್ಭಿಣಿಯಾದ ಬಳಿಕ ಆಕೆಯಲ್ಲಿ ಹಲವಾರು ರೀತಿಯ ಪ್ರಶ್ನೆಗಳು ಇರುವುದು. ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೂ ಇನ್ನು ಕೆಲವು ಪ್ರಶ್ನೆಗಳು ಹಾಗೆ ಪ್ರಶ್ನೆಗಳಾಗಿಯೇ ಉಳಿದುಕೊಳ್ಳುವುದು. ಗರ್ಭಧಾರಣೆ ಸಮಯದಲ್ಲಿ ಮಗು ಹಾಗೂ ಮಹಿಳೆಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದರಿಂದ ಹುಟ್ಟುಲಿರುವ ಮಗು ತುಂಬಾ ಆರೋಗ್ಯವಂತವಾಗಿರುವುದು. ಇನ್ನೊಂದು ಕಡೆ ಹುಟ್ಟಿದ ಬಳಿಕವೂ ಮಗುವಿನ ಲಾಲನೆ ಪಾಲನೆ ಸರಿಯಾಗಿರಬೇಕು. ಆದರೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಪ್ರಶ್ನೆಯೆಂದರೆ ಪತಿ ಹಾಗೂ ಪತ್ನಿಯ ರಕ್ತದ ಗುಂಪು ಒಂದೇ ಆಗಿದ್ದರೆ ಅದರಿಂದ ಗರ್ಭಧಾರಣೆಗೆ ಸಮಸ್ಯೆಯಾಗುತ್ತದೆಯಾ ಅಥವಾ ಹುಟ್ಟುವ ಮಗುವಿಗೆ ಏನಾದರೂ ತೊಂದರೆ ಬರುತ್ತದೆಯಾ ಎನ್ನುವುದು.

ದೀರ್ಘ ಸಮಯದಿಂದ ನಿಮಗೆ ಮಕ್ಕಳಾಗದೆ ಇದ್ದರೆ ಆಗ ನೀವು ನಿಮ್ಮ ಹಾಗೂ ಸಂಗಾತಿಯ ರಕ್ತದ ಗುಂಪನ್ನು ದೂಷಿಸಬೇಕು. ಯಾಕೆಂದರೆ ಕೆಲವೊಂದು ಸಲ ರಕ್ತದ ಗುಂಪು ಕೂಡ ಪರಿಣಾಮ ಬೀರುವುದು.ಸಾಮಾನ್ಯ ರಕ್ತದ ಗುಂಪುಗಳನ್ನು ಮತ್ತು ಅದರ ಕ್ರಿಯೆ ಅರ್ಥೈಸಿಕೊಳ್ಳುವುದು.
ರಕ್ತದ ಗುಂಪುಗಳನ್ನು ಅರ್ಥೈಸಿಕೊಳ್ಳುವುದು.ಪತ್ನಿ ಹಾಗೂ ಪತಿಯ ರಕ್ತದ ಗುಂಪಿನ ಸಂಬಂಧಗಳು.

Does The Same Blood Group Affect Pregnancy?

ಆರ್ ಎಚ್ ಹೊಂದಿಕೆಯಾಗದೆ ಇರುವುದು. ಎರಿಥ್ರೊಬ್ಲಾಸ್ಟೋಸಿಸ್ ಫೆಟಾಲಿಸ್ ತಡೆಯುವುದು ಹೀಗೆ ಇವೆಲ್ಲವನ್ನು ನೀವು ಅರ್ಥ ಮಾಡಿಕೊಂಡರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುವುದು. ಅರ್ಥ ಮಾಡಿಕೊಳ್ಳಲು ಈ ಲೇಖನ ಓದುತ್ತಾ ಸಾಗಿ.

ಸಾಮಾನ್ಯ ರಕ್ತದ ಗುಂಪುಗಳು ಮತ್ತು ಅದರ ಕ್ರಿಯೆ ಅರ್ಥ ಮಾಡಿಕೊಳ್ಳುವುದು

ಪತ್ನಿ ಹಾಗೂ ಪತಿಯ ರಕ್ತದ ಗುಂಪು ಒಂದೇ ಆಗಿದ್ದರೆ ಆಗ ಅವರಿಗೆ ಹುಟ್ಟುವ ಮಗುವಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಅಧ್ಯಯನಗಳು ಹೇಳಿವೆ.

ರಕ್ತದ ಗುಂಪುಗಳನ್ನು ಎರಡು ವಿಧದಿಂದ ವರ್ಗೀಕರಿಸಲಾಗುವುದು. ಮೊದಲನೇಯದಾಗಿ ಎಬಿಒ ವ್ಯವಸ್ಥೆ. ಇದರಿಂದ ಎ, ಬಿ, ಎಬಿ ಮತ್ತು ಒ ಪತ್ತೆ ಮಾಡಲಾಗುವುದು. ಎರಡನೇ ವಿಧಾನವು ಆರ್ ಎಚ್(ರೀಸ್ ಫ್ಯಾಕ್ಟರ್) ಆಗಿದೆ. ಆರ್ ಎಚ್ ನಲ್ಲಿ ಪಾಸಿಟಿನ್ ಮತ್ತು ನೆಗೆಟಿವ್ ಎನ್ನುವುದು ಇದೆ. ಎಬಿಒ ವ್ಯವಸ್ಥೆ ಮತ್ತು ಆರ್ ಎಚ್ ನ್ನು ಜತೆ ಸೇರಿಸಿದಾಗ ರಕ್ತದ ಗುಂಪು ಪತ್ತೆ ಮಾಡಬಹುದು.

ರಕ್ತದ ಗುಂಪುಗಳನ್ನು ಅರ್ಥ ಮಾಡಿಕೊಳ್ಳುವುದು

ಒಬ್ಬ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿದಾಗ ಉಂಟಾಗುವುದೇ ಪ್ರತಿಕಾಯ ಪ್ರಕ್ರಿಯೆಯು ಉಂಟಾಗುವುದು. ಆದರೆ ಒಂದು ಗುಂಪಿನ ರಕ್ತವನ್ನು ಬೇರೊಂದು ಗುಂಪಿನ ವ್ಯಕ್ತಿಗೆ ನೀಡಿದಾಗ ರಕ್ತದ ಅಂಟಿಕೊಳ್ಳುವಿಕೆ ಆರಂಭವಾಗುವುದು ಮತ್ತು ಕೋಶಗಳು ವಿಘಟನೆಯಾಗಬಹುದು. ಇದರಿಂದ ರಕ್ತದ ಕೋಶಗಳು ವಿಘಟನೆಯಾಗಿ ವ್ಯಕ್ತಿಯ ಸಾಗುವ ಸಂಭವಿಸಬಹುದು. ಇದು ಎಬಿಒ ಹೊಂದಾಣಿಕೆಯಾಗದೆ ಇರುವುದು. ಆರ್ ಎಚ್ ಪಾಸಿಟಿವ್ ಆಗಿರುವ ವ್ಯಕ್ತಿಯು ಆರ್ ಎಚ್ ಪಾಸಿಟಿವ್ ಆಗಿರುವ ರಕ್ತವನ್ನೇ ಪಡೆಯಬೇಕು. ಅದೇ ರೀತಿ ನೆಗೆಟಿವ್ ಕೂಡ.

ಪತಿ ಹಾಗೂ ಪತ್ನಿಯ ರಕ್ತದ ಗುಂಪಿನ ಸಂಬಂಧಗಳು

ಗರ್ಭಧಾರಣೆಯ ವೇಳೆ ಸಮಸ್ಯೆಯು ಬರದೇ ಇರಬೇಕೆಂದಿದ್ದರೆ ಆಗ ನೀವು ಇದನ್ನು ಸುರಕ್ಷಿತವೆಂದು ಪರಿಗಣಿಸಬೇಕು. ಪತ್ನಿಯ ರಕ್ತದ ಗುಂಪು ಪಾಸಿಟಿವ್ ಅಥವಾ ನೆಗೆಟಿವ್ ಆಗಿದ್ದರೆ ಪತಿಯ ರಕ್ತದ ಗುಂಪು ನೆಗೆಟಿವ್ ಆಗಿರಬೇಕು. ಪತಿಯ ರಕ್ತದ ಗುಂಪು ಪಾಸಿಟಿವ್ ಆಗಿದ್ದರೆ ಆಗ ಪತ್ನಿಯ ರಕ್ತದ ಗುಂಪು ಕೂಡ ಪಾಸಿಟಿವ್ ಆಗಿರಬೇಕು.

ಪತಿ ಹಾಗೂ ಪತ್ನಿ ಒಂದೇ ರೀತಿಯ ರಕ್ತದ ಗುಂಪು ಹೊಂದಿದ್ದರೆ ಆಗುವ ಸಮಸ್ಯೆಗಳು.

*ಪತಿಯ ರಕ್ತದ ಗುಂಪು ಪಾಸಿಟಿವ್ ಮತ್ತು ಪತ್ನಿಯ ರಕ್ತದ ಗುಂಪು ನೆಗೆಟಿವ್ ಆಗಿದ್ದರೆ ಆಗ ಪ್ರಾಣಾಂತಿಕ ಜೀನ್ ನಿರ್ಮಾಣವಾಗುವುದು. ಇದು ಜಮೆಯಾಗಿರುವ ಸೈಗೋಟ್ ನ್ನು ಧ್ವಂಸ ಮಾಡುವುದು. ಇದರಿಂದ ಗರ್ಭದಲ್ಲಿ ಮಗುವಿನ ಮೃತ್ಯು ಸಂಭವಿಸಬಹುದು.
*ಪತಿಯ ರಕ್ತದ ಗುಂಪು ಪಾಸಿಟಿವ್ ಮತ್ತು ಪತ್ನಿಯ ರಕ್ತದ ಗುಂಪು ನೆಗೆಟಿವ್ ಆಗಿದ್ದರೆ ಹುಟ್ಟಲಿರುವ ಮಗುವಿನ ಗುಂಪು ಪಾಸಿಟಿವ್ ಆಗುವುದು. ಜರಾಯು ಪ್ರತಿಬಂಧಕ ಅಥವಾ ಪ್ರಸವದ ವೇಳೆ ಅನುವಂಶೀಯ ಸ್ಥಳಾಂತರವಾಗಬಹುದು.

ಆರ್ ಎಚ್ ಹೊಂದಾಣಿಕೆಯಾಗದೆ ಇರುವುದು.

ತಾಯಿಯ ಆರ್ ಎಚ್ ನೆಗೆಟಿವ್ ಆಗಿದ್ದು, ಹುಟ್ಟುವ ಮಗು ಆರ್ ಎಚ್ ಪಾಸಿಟಿವ್ ಆದರೆ ಆಗ ತಾಯಿಯ ದೇಹದಲ್ಲಿ ಎಚ್-ಪ್ರತಿಕಾಯ ಉಂಟಾಗುವುದು. ಇದು ಮೊದಲ ಮಗುವಿನ ಜನನದ ವೇಳೆ ಯಾವುದೇ ರೀತಿಯ ಸಮಸ್ಯೆ ಉಂಟು ಮಾಡುವುದಿಲ್ಲ. ಆದರೆ ತಾಯಿಯು ಎರಡನೇ ಮಗುವಿಗೆ ಜನ್ಮ ನೀಡುವ ವೇಳೆ ಮೊದಲ ಮಗುವಿನ ಜನ್ಮದ ವೇಳೆ ನಿರ್ಮಾಣವಾಗಿದ್ದ ಪ್ರತಿಕಾಯವು ಭ್ರೂಣ ಜರಾಯು ಪ್ರತಿಬಂಧಕ ಛೇದಿಸುವುದು.
ಇದರಿಂದಾಗಿ ಎರಡನೇ ಮಗುವಿನ ಸಾವು ಸಂಭವಿಸಬಹುದು ಅಥವಾ ಪ್ರಸವದ ವೇಳೆ ಅತಿಯಾದ ರಕ್ತಸ್ರಾವವಾಗಬಹುದು. ಇದನ್ನು ವೈದ್ಯಕೀಯ ಪದಗಳಲ್ಲಿ ಆರ್ ಎಚ್ ಹೊಂದಾಣಿಕೆಯಾಗದೆ ಇರುವುದು ಎನ್ನುತ್ತಾರೆ.

ಆರ್ ಎಚ್ ಹೊಂದಾಣಿಕೆಯಾಗದೆ ಇರುವುದಕ್ಕೆ ಪರಿಹಾರಗಳು.

ಹೆರಿಗೆಯಾದ 72 ಗಂಟೆಗಳ ಒಳಗಡೆ ತಾಯಿಗೆ ಆ್ಯಂಟಿ ಡಿ ಇಂಜೆಕ್ಷನ್ ನ್ನು ಚುಚ್ಚಿದರೆ ಆಗ ಆರ್ ಎಚ್ ಹೊಂದಾಣಿಕೆಯಾಗದೆ ಇರುವ ಸಮಸ್ಯೆ ನಿವಾರಣೆ ಮಾಡಬಹುದು. ಇದು ಮುಂದೆ ಬರುವ ಸಮಸ್ಯೆ ಕೂಡ ನಿವಾರಣೆ ಮಾಡುವುದು. ಪ್ರತೀ ಸಲ ತಾಯಿಯು ಮಗುವಿಗೆ ಜನ್ಮ ನೀಡಿದ ಬಳಿಕ ಇದನ್ನು ನೀಡಬೇಕು. ಗರ್ಭಪಾತ ಮಾಡಿಸಿದಾಗಲೂ ಇದನ್ನು ಚುಚ್ಚಿಸಬೇಕು.

ಎರಿಥ್ರೊಬ್ಲಾಸ್ಟೋಸಿಸ್ ಫೆಟಾಲಿಸ್

ತಾಯಿಯ ರಕ್ತದೊಂದಿಗೆ ಮಗುವಿನ ರಕ್ತವು ಹೊಂದಾಣಿಕೆಯಾಗದೆ ಇದ್ರೆ ಎರಿಥ್ರೊಬ್ಲಾಸ್ಟೋಸಿಸ್ ಫೆಟಾಲಿಸ್ ಸಮಸ್ಯೆಯು ಕಾಣಿಸಿಕೊಳ್ಳುವುದು. ತಾಯಿಯ ಬಿಳಿ ರಕ್ತದ ಕಣಗಳು ಮಗುವಿನ ಕೆಂಪು ರಕ್ತದ ಕಣಗಳ ಮೇಲೆ ದಾಳಿ ಮಾಡುವುದು. ಇದನ್ನು ವಿದೇಶಿ ಆಕ್ರಮಣವೆನ್ನಬಹುದು.
ಇಂತಹ ಪರಿಸ್ಥಿತಿಯಲ್ಲಿ ತಾಯಿಗೆ ರಕ್ತ ನಿರೋಧಕ ಚಿಕಿತ್ಸೆ ನೀಡಲಾಗುವುದು. ಇದು ಗರ್ಭಿಣಿ ತಾಯಿಯ ನಿಷ್ಕ್ರೀಯ ಪ್ರತಿರಕ್ಷಣೆ ಒಳಗೊಂಡಿರುವುದು. ಈ ನಿಷ್ಕ್ರೀಯ ಪ್ರತಿರಕ್ಷಣೆಯನ್ನು ಆ್ಯಂಟಿ ಆರ್ ಎಚ್ ಅಗ್ಗ್ಲುಟಿನಿನ್(ರೋಗಮ್) ಎನ್ನಲಾಗುವುದು. ಇದನ್ನು ಮಗು ಹುಟ್ಟಿದ ಕೂಡಲೇ ನೀಡಬೇಕು.

ಇದು ಆರ್ ಎಚ್ ನೆಗೆಟಿವ್ ಹೊಂದಿರುವ ತಾಯಿಯಲ್ಲಿ ಸಂವೇದನಾಶೀಲತೆ ತಡೆಯಲು ನೆರವಾಗುವುದು. ತಾಯಿಯ ಆರ್ ಎಚ್ ಅಗ್ಗ್ಲುಟಿನಿನ್ ನ್ನು ತಟಸ್ಥ ಗೊಳಿಸಿ ಹೀಗೆ ಮಾಡಬಹುದು. ಆ್ಯಂಟಿ ಡಿ ಆ್ಯಂಟಿ ಬಾಡಿಯನ್ನು ಗರ್ಭಿಣಿಗೆ 28-30ನೇ ವಾರದಲ್ಲಿ ನೀಡಬೇಕು.

English summary

Does The Same Blood Group Affect Pregnancy?

When pregnant, the safety of the unborn child is of utmost priority for the parents. Every parent is concerned about the well-being of their child. There are plenty of questions and doubts that might pop up in the minds of the parents every now and then. Although health-care practitioners who check you when pregnant/trying to conceive are there to clarify each and every doubt of yours, there could be days when simple thoughts may pop up in your mind and stress you out.
X
Desktop Bottom Promotion