For Quick Alerts
ALLOW NOTIFICATIONS  
For Daily Alerts

ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು? ಇದರ ನಿಯಂತ್ರಣ ಹೇಗೆ?

|

ಕಾರ್ಪಲ್ ಟನಲ್ ಸಿಂಡ್ರೋಮ್ (ಸಿ.ಟಿ.ಎಸ್)ಎಂಬುದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವೈದ್ಯಕೀಯ ಸ್ಥಿತಿಗಳಲ್ಲಿ ಒಂದಾಗಿದೆ. ನೀವು ಸರಿಯಾದ ಕಾಳಜಿಯನ್ನು ತೆಗೆದುಕೊಂಡರೆ ಇದು ಬರದಂತೆ ತಡೆಗಟ್ಟಬಹುದು ಹಾಗೂ ಅದರ ಚಿಕಿತ್ಸೆ ಕೂಡ ಮಾಡಬಹುದು.ಈ ಲೇಖನವು ಅದರ ಬಗ್ಗೆ ನಿಮಗೆ ಹೆಚ್ಚಿನ ಒಳನೋಟವನ್ನು ನೀಡುತ್ತದೆ.

ಗರ್ಭಿಣಿ ಮಹಿಳೆಯು ತನ್ನ ಆರೋಗ್ಯ ಹಾಗು ತನ್ನ ಹೊಟ್ಟೆಯಲ್ಲಿರುವ ಭ್ರೂಣದ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕಳಾಗಿರಬೇಕು.ಇದಕ್ಕಾಗಿ ಅವಳು ತನ್ನ ಆಹಾರ ಪದ್ಧತಿ,ಹವ್ಯಾಸಗಳು,ಜೀವನಶೈಲಿ ಮತ್ತು ಸುತ್ತಲಿನ ಪರಿಸರದ ಬಗ್ಗೆ ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕು.ನೀವು ಗರ್ಭಿಣಿಯಾಗಿದ್ದರೆ, ಕಾರ್ಪಲ್ ಟನಲ್ ಸಿಂಡ್ರೋಮ್ ಗರ್ಭಧಾರಣೆಯ ಸಮಯದಲ್ಲಿ ತೋರುವ ಪರಿಣಾಮಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ದಯವಿಟ್ಟುಈ ಲೇಖನವನ್ನು ಓದಿರಿ.

ways to manage carpal tunnel syndrome

ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು?

ಕಾರ್ಪಲ್ ಟನಲ್ ಸಿಂಡ್ರೋಮ್ನಲ್ಲಿ ನಿಮ್ಮ ಕೈಯಲ್ಲಿರುವ ಮಧ್ಯ ನರವು ಸಂಕುಚಿತಗೊಳ್ಳುತ್ತದೆ,ಇದು ಮಣಿಕಟ್ಟಿನ ಮೂಲಕ ಚಲಿಸುವ ಕಾರಣ ಇದರಿಂದ ನೋವು, ಜುಮ್ಮೆನಿಸುವಂತಹ ಸಂವೇದನೆ ಮತ್ತು ಕೈಗಳಲ್ಲಿ ಮರಗಟ್ಟುವಿಕೆ (ಬೆರಳುಗಳು ಕೂಡ ಸೇರಿದಂತೆ) ಮತ್ತು ತೋಳುಗಳಲ್ಲಿ ಕೂಡ ನೋವನ್ನು ಉಂಟುಮಾಡುತ್ತದೆ. ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ನಿಧಾನವಾಗಿ ಶುರುವಾಗಿ ತದನಂತರ ಹೆಚ್ಚಾಗುವಂತೆ ಕಾಣುತ್ತದೆ. ರೋಗಿಗಳು ಯಾವುದಾದರೂ ವಸ್ತುಗಳನ್ನು ಹಿಡಿದುಕೊಳ್ಳುವಾಗ ತಾವು ದುರ್ಬಲರಾದಂತೆ ಅನಿಸುತ್ತದೆ ಹಾಗೂ ಇದು ಕೆಲ ಸಮಯದ ಕಾಲ ಹೆಚ್ಚಾದ ನೋವನ್ನು ನೀಡುತ್ತದೆ.

ಮುಖ್ಯವಾಗಿ ಕಾರ್ಪಲ್ ಟನಲ್ ಸಿಂಡ್ರೋಮ್ನ ಅಪಾಯಕಾರಿ ಅಂಶಗಳು ನಿರಂತರ ಅಥವಾ ಪುನರಾವರ್ತಿತ ಮಣಿಕಟ್ಟಿಗೆ ಸಂಬಂಧಿಸಿದ ಕೆಲಸಗಳು, ಸಂಧಿವಾತ, ಬೊಜ್ಜು ಮತ್ತು ಗರ್ಭಧಾರಣೆಯ ಸಮಯದಲ್ಲಿ ಕಂಡುಬರುತ್ತವೆ. ಹೈಪೋಥೈರಾಯ್ಡಿಸಮ್ ಕೂಡ ತಾತ್ಕಾಲಿಕವಾಗಿ ಈ ಅಪಾಯದಿಂದ ಸಂಭವಿಸಬಹುದು.ಇದು ಕೂಡ ಮಧುಮೇಹದಂತೆಯೇ ಎಂದು ಕರೆಯಲಾಗಿದೆ.

ಡೆಸ್ಕ್ ಉದ್ಯೋಗಿಗಳು, ವಿಶೇಷವಾಗಿ ಕಂಪ್ಯೂಟರ್-ಸಂಬಂಧಿತ ಕೆಲಸಗಳಗಳನ್ನು ಮಾಡುವವರು ಅಥವಾ ಬಲವಾದ ಹಿಡಿತ ಬೇಕಾಗುವ ಕಂಪಿಸುವ ಸಾಧನಗಳಲ್ಲಿ ಕಾರ್ಯನಿರ್ವಹಿಸುವಂತಹ ಯಾವುದೇ ವೃತ್ತಿಗಳಲ್ಲಿ ಇರುವ ವ್ಯಕ್ತಿಗಳು ಕಾರ್ಪಲ್ ಟನಲ್ ಸಿಂಡ್ರೋಮ್ ಗೆ ಹೆಚ್ಚಾಗಿ ಒಳಗಾಗುತ್ತಾರೆ. ರೋಗಿಗಳು ಹೇಳಿದ ರೋಗಲಕ್ಷಣಗಳು ಮತ್ತು ಚಿಹ್ನೆಗಳ ಪ್ರಕಾರ ಇದರ ರೋಗ ನಿರ್ಣಯ ಮಾಡಿ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ಕಾರ್ಪಲ್‌ ಟನಲ್‌ ಸಿಂಡ್ರೋಮ್‌‌ನ‌ ರೋಗ ಲಕ್ಷಣಗಳು

ಗರ್ಭಾವಸ್ಥೆಯಲ್ಲಿ ಕಾರ್ಪಲ್ ಟನಲ್ ಸಿಂಡ್ರೋಮ್ ಉಂಟಾಗಲು ಇರಬಹುದಾದ ಕಾರಣಗಳು:

ಗರ್ಭಾವಸ್ಥೆಯಲ್ಲಿ ಕಾರ್ಪಲ್ ಟನಲ್ ಸಿಂಡ್ರೋಮ್ ಉಂಟಾಗಲು ಇರಬಹುದಾದ ಕಾರಣಗಳು:

ಕಾರ್ಪಲ್ ಟನಲ್ ಸಿಂಡ್ರೋಮ್ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಣಿಕಟ್ಟಿನ ಅಂಗಾಂಶಗಳಲ್ಲಿ ಎಡೆಮಾ ಎಂಬ ದ್ರವವು ನಿರ್ಮಾಣವಾಗುವ ಕಾರಣದಿಂದ ಉಂಟಾಗುತ್ತದೆ.ಅದರಿಂದ ನೋವು,ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಶುರುವಾಗುತ್ತದೆ.ಹೀಗೆ ಉಂಟಾಗಲು ಇರುವ ಇತರ ಕಾರಣಗಳೆಂದರೆ ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನಿನ ಬದಲಾವಣೆಗಳಿಂದ ಪ್ರೊಜೆಸ್ಟರಾನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಯಾಗುವುದು ಮತ್ತು ನೀರಿನಾಂಶ ಹೆಚ್ಚಾಗಿ ಉಳಿಯುವುದು. ಮಣಿಕಟ್ಟಿನಲ್ಲಿ ಉಂಟಾಗುವ ಊತವು ಮಧ್ಯಮ ನರವನ್ನು ಹಿಸುಕುತ್ತದೆ, ಇದರಿಂದ ನಿಮ್ಮ ಕೈಗೆ ಹಿಡಿತದ ಶಕ್ತಿ ದುರ್ಬಲಗೊಳ್ಳುತ್ತದೆ ಹಾಗೂ ನಿಮ್ಮ ಬೆರಳುಗಳು ತಮ್ಮ ಚಲನೆಯನ್ನು ನಡೆಸಲು ಅಸಮರ್ಥವಾಗುತ್ತವೆ.

ಕಾರ್ಪಲ್ ಟನಲ್ ಸಿಂಡ್ರೋಮ್ ಸಾಮಾನ್ಯವಾಗಿ ಗರ್ಭಧಾರಣೆಯ ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಉಂಟಾಗಬಹುದು.ಬಹಳಷ್ಟು ಜನರಲ್ಲಿ ಮಗುವಿನ ಜನನದ ನಂತರವೂ ಇದು ಸಂಭವಿಸಬಹುದು. ಇದಲ್ಲದೆ,ನೀವು ಮೊದಲ ಬಾರಿ ಗರ್ಭಿಣಿಯಾದಾಗ ಇದು ಕಂಡುಬಂದರೆ, ನಂತರದ ದಿನಗಳಲ್ಲಿ ನೀವು ಮತ್ತೊಮ್ಮೆ ಗರ್ಭವನ್ನು ಧರಿಸಿದಾಗ ಕೂಡ ಇದು ಸಂಭಿಸುವ ಅವಕಾಶಗಳು ಹೆಚ್ಚು.

ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಹೆಚ್ಚಿನ ತೂಕವನ್ನು ಪಡೆದರೆ ನೀವು ಕಾರ್ಪಲ್ ಟನಲ್ ಸಿಂಡ್ರೋಮ್ ಅನ್ನು ಹೊಂದುವ ಹೆಚ್ಚಿನ ಅವಕಾಶಗಳನ್ನು ಇರುತ್ತವೆ. ನಿಮ್ಮ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮಗು ಇದ್ದರೆ ನಿಮ್ಮ ತೂಕ ಹೆಚ್ಚಾಗಬಹುದು ಅಥವಾ ನೀವು ಗರ್ಭವತಿವಾಗುವ ಮುನ್ನವೇ ನೀವು ಹೆಚ್ಚು ತೂಕವನ್ನು ಹೊಂದಿದ್ದರೆ ಅದರಿಂದಲೂ ಹೀಗೆ ಆಗಬಹುದು.ಆದ್ದರಿಂದ ನೀವು ಸುಲಭವಾದ ಮತ್ತು ನಿಯಮಿತವಾದ ವ್ಯಾಯಾಮಗಳನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚಿನ ತೂಕ ಉಂಟಾಗುವುದನ್ನು ತಡೆಯಬಹುದು.

ಇದಕ್ಕೆ ಹೇಗೆ ಚಿಕಿತ್ಸೆ ನೀಡುವುದು?

ಇದಕ್ಕೆ ಹೇಗೆ ಚಿಕಿತ್ಸೆ ನೀಡುವುದು?

ಗರ್ಭಿಣಿ ಮಹಿಳೆಯರಲ್ಲಿ ಕಾರ್ಪಲ್ ಟನಲ್ ಸಿಂಡ್ರೋಮ್ನ ಸ್ಥಿತಿ ಕೆಲವು ಬಾರಿ ಒತ್ತಡಕಾರಿ ಮತ್ತು ತಪ್ಪಿಸಿಕೊಳ್ಳದಂತಹ ಸಮಸ್ಯೆಯಾಗುತ್ತದೆ.ಇದನ್ನು ಗುಣಪಡಿಸುವ ವಿಧಾನಗಳನ್ನು ತಿಳಿಯುವ ಮೊದಲು ನಾವು ಇದನ್ನು ತಡೆಗಟ್ಟುವುದರ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳೋಣ.

ಕಾರ್ಪಲ್ ಟನಲ್ ಸಿಂಡ್ರೋಮ್ ಅನ್ನು ತಡೆಗಟ್ಟಲು,ನಿಯಮಿತವಾಗಿ ದೇಹಕ್ಕೆ ಬೇಕಾದ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.ಒಟ್ಟಿಗೆ ಹೇಳಬೇಕೆಂದರೆ ಆರೋಗ್ಯಕರವಾದ ತೂಕವನ್ನು ಕಾಪಾಡುವುದು ಮತ್ತು ನಿರ್ವಹಿಸುವುದು ಈ ಚಿಂತನೆಯ ಉದ್ದೇಶವಾಗಿದೆ. ಸಕ್ಕರೆ, ಕೊಬ್ಬು, ಉಪ್ಪು ಮತ್ತು ಹೆಚ್ಚು ಎಣ್ಣೆಯ ಪದಾರ್ಥಗಳಿಂದ ದೂರವಿರುವುದು ನೀವು ಮಾಡಬಹುದಾದ ಒಂದು ಒಳ್ಳೆಯ ನಿರ್ಧಾರ.

ನಿಮ್ಮ ದೇಹವನ್ನು ಆದ್ರತೆಯಿಂದ ಇರುವಂತೆ ಕಾಪಾಡಲು ಹೆಚ್ಚು ನೀರು ಸೇವಿಸಿ.ಕನಿಷ್ಠ 4-5 ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತಿದಿನವೂ ಸೇವಿಸುವುದು ಒಳ್ಳೆಯದು.ಆರೋಗ್ಯಕರವಾದ ನರಮಂಡಲವನ್ನು ನಿರ್ಮಿಸಲು ಹೆಚ್ಚಾಗಿ ವಿಟಮಿನ್ B5- ಸಮೃದ್ಧ ಆಹಾರಗಳನ್ನು ಸೇವಿಸಿ.ಇದೂ ಕೂಡ ನಿಮಗೆ ಸಹಾಯ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು,ಆವಕಾಡೊಗಳು, ಸಾಲ್ಮನ್ ಮೀನುಗಳು, ಬೆಳ್ಳುಳ್ಳಿ, ಕೋಸುಗಡ್ಡೆ, ಹ್ಯಾಝೆಲ್ನಟ್ಸ್ ಮುಂತಾದ ಆಹಾರಗಳು ಕೂಡ ನಿಮ್ಮ ಆಹಾರ ಪಥ್ಯಕ್ಕೆ ಉತ್ತಮವಾದ ಆಯ್ಕೆ.

ನೀವು ಅದಾಗಲೇ ಕಾರ್ಪಲ್ ಟನಲ್ ಸಿಂಡ್ರೋಮ್ನಿಂದ ಬಳಲುತ್ತಿದ್ದರೆ ಅದರ ನೋವನ್ನು ಕಡಿಮೆ ಮಾಡಲು, ನೀವು ಪ್ರತಿದಿನವೂ ಕೆಲವು ಕೆಲಸಗಳನ್ನು ಮಾಡಬಹುದು.ಅವುಗಳಲ್ಲಿ ಕೆಲವೆಂದರೆ:

*ನಿಮ್ಮ ಕೈಗಳನ್ನು ತಂಪಾಗಿರುವ ನೀರಿನಲ್ಲಿ ಇರಿಸಿ.ಇದರಿಂದ ಶೀತ-ಸಂಕೋಚನ ಉಂಟಾಗುತ್ತದೆ ಮತ್ತು ಇದು ನಿಮ್ಮ ನೋವಿಗೆ ಪರಿಹಾರವನ್ನು ನೀಡುತ್ತದೆ.

*ರಾತ್ರಿ ನೀವು ಮಲಗುವಾಗ ಕೈಗಳಿಗೆ ಸ್ಪ್ಲಿಂಟ್ಗಳನ್ನು ಧರಿಸಿ, ಇದರಿಂದ ನೀವು ನಿದ್ದೆ ಮಾಡುವಾಗ ನಿಮ್ಮ ಕೈಗಳು ಸುತ್ತಿಕೊಳ್ಳುವುದನ್ನು ತಪ್ಪಿಸುತ್ತದೆ . ಹಾಗಾಗಿ ಬೆಳಿಗ್ಗೆ ನೀವು ಎದ್ದಾಗ ನೋವನ್ನು ಇದು ಕಡಿಮೆ ಮಾಡುತ್ತದೆ.

*ಮಣಿಕಟ್ಟು ಮತ್ತು ಕೈಗಳ ಸರಳ ವ್ಯಾಯಾಮಗಳನ್ನು ನಿಯಮಿತವಾಗಿ ಪ್ರತಿದಿನವೂ ಮಾಡಿರಿ.

*ನಿಮ್ಮ ಕೈಗಳು,ಮಣಿಕಟ್ಟುಗಳು, ತೋಳುಗಳು,ಭುಜಗಳು, ಕುತ್ತಿಗೆ ಮತ್ತು ಬೆನ್ನನ್ನು ಮಸಾಜ್ ಮಾಡಿರಿ ಅಥವಾ ಯಾರದ್ದಾದರೂ ಸಹಾಯ ತೆಗೆದುಕೊಡು ಮಸಾಜ್ ಮಾಡಿಸಿಕೊಳ್ಳಿ. ಇದಲ್ಲದೇ ಹೆಚ್ಚುವರಿಯಾಗಿ, ನೀವು ಆರಿಸಿಕೊಳ್ಳಬಹುದಾದ ಔಪಚಾರಿಕ ಚಿಕಿತ್ಸೆಗಳು ಕೆಳಗಿವೆ.ಅದರಲ್ಲಿ ಯಾವುದಾದರನ್ನು ನೀವು ಆರಿಸಿಕೊಳ್ಳಬಹುದು.

ಆಕ್ಯುಪ್ರೆಶರ್ ಮತ್ತು ಅಕ್ಯುಪಂಕ್ಚರ್

ಆಕ್ಯುಪ್ರೆಶರ್ ಮತ್ತು ಅಕ್ಯುಪಂಕ್ಚರ್

ಅಕ್ಯುಪಂಕ್ಚರ್ನಲ್ಲಿ ದೇಹದಲ್ಲಿ ನಿರಂತರವಾಗಿ ಅಥವಾ ದೀರ್ಘಕಾಲದಿಂದ ಇರುವ ನೋವನ್ನು ತೊಡೆದುಹಾಕಲು ಚರ್ಮದಲ್ಲಿ ನೋವು ಸಂಬಂಧಿಸಿದ ಪ್ರದೇಶಗಳಿಗೆ ಸೂಜಿಯನ್ನು ನೀಡುತ್ತಾರೆ.ಆಕ್ಯುಪ್ರೆಶರ್ ಮತ್ತು ಅಕ್ಯುಪಂಕ್ಚರ್ ಎರಡೂ ಚಿಕಿತ್ಸೆಗಳು ಸಾಂಪ್ರದಾಯಿಕ ಚೀನೀ ಔಷಧಿಗಳಲ್ಲಿ ಬರುತ್ತವೆ,ಇವನ್ನು ಸಂಬಂಧಪಟ್ಟ ವೃತ್ತಿಪರರಿಂದ ಪಡೆದುಕೊಳ್ಳಬಹುದು.

ಫಿಸಿಯೋಥೆರಪಿ

ಫಿಸಿಯೋಥೆರಪಿ

ಈ ವಿಧಾನವು ಮಸಾಜ್, ಶಾಖ ಚಿಕಿತ್ಸೆ ಮತ್ತು ನೋವನ್ನು ನಿವಾರಿಸಲು ಇರುವ ವ್ಯಾಯಾಮಗಳನ್ನು ಹೊಂದಿರುತ್ತದೆ.ವೃತ್ತಿಪರ ಭೌತಚಿಕಿತ್ಸೆಯ ಸೆಶನ್ ಗಳು ಕಾರ್ಪಲ್ ಟನಲ್ ಸಿಂಡ್ರೋಮ್ ಗೆ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆ ನೀಡುವಲ್ಲಿ ಫಲಕಾರಿಯಾಗಿವೆ.

ಔಷಧಿ ಅಥವಾ ಶಸ್ತ್ರಚಿಕಿತ್ಸೆ

ಔಷಧಿ ಅಥವಾ ಶಸ್ತ್ರಚಿಕಿತ್ಸೆ

ನಿಮಗೆ ಉಂಟಾದ ನೋವಿನ ತೀವ್ರತೆಗೆ ಅನುಗುಣವಾಗಿ ಕಾರ್ಪಲ್ ಟನಲ್ ಸಿಂಡ್ರೋಮ್ ನ ಗುಣಪಡಿಸಿಕೊಳ್ಳಲು ಸಂಬಂಧಪಟ್ಟ ಔಷಧಿಗೆ ಅಥವಾ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲು ವೈದ್ಯರನ್ನು ಸಂಪರ್ಕಿಸಿ.

ನೈಸರ್ಗಿಕ ಪರಿಹಾರ

ನೈಸರ್ಗಿಕ ಪರಿಹಾರ

ಚಾಮೊಮಿಲ್ ಚಹಾವು ದೇಹದಲ್ಲಿನ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ,ಕನಿಷ್ಟ ದಿನಕ್ಕೆ ಒಂದು ಬಾರಿ ಅದನ್ನು ಸೇವಿಸುವುದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.ಇನ್ನೂ ಒಳ್ಳೆಯ ಉಪಶಮನಕ್ಕಾಗಿ ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ.

ಗರ್ಭವಾಸ್ಥೆಯ ನಂತರ ಕಾರ್ಪಲ್ ಟನಲ್ ಸಿಂಡ್ರೋಮ್ ಗುಣವಾಗುತ್ತದೆಯೇ ?

ಗರ್ಭವಾಸ್ಥೆಯ ನಂತರ ಕಾರ್ಪಲ್ ಟನಲ್ ಸಿಂಡ್ರೋಮ್ ಗುಣವಾಗುತ್ತದೆಯೇ ?

ಇದು ಸಂಪೂರ್ಣವಾಗಿ ಮಹಿಳೆಯರ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ಮಗುವಿನ ಜನನದ ನಂತರದಲ್ಲಿ ಗರ್ಭಾವಸ್ಥೆಯ ಊತವು ಕ್ರಮೇಣ ಕಡಿಮೆಯಾಗಿ ಹೋಗುತ್ತದೆ.ಅದರಿಂದ ಕಾರ್ಪಲ್ ಟನಲ್ ಸಿಂಡ್ರೋಮ್ನ ನೋವು ಕಡಿಮೆಯಾಗುತ್ತದೆ.ಆದರೂ ಕೆಲವು ಸಂದರ್ಭಗಳಲ್ಲಿ ಮಗುವಿನ ಜನನದ ನಂತರವೂ ನೋವು ಮುಂದುವರೆಯಬಹುದು.

ನೋವು, ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಮಗುವಿನ ಜನನದ ನಂತರ ವಾಸಿಯಾಗದೇ ಇದ್ದಲ್ಲಿ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.ಹಾಲುಣಿಸುವ ತಾಯಂದಿರಿಗೆ ಯಾವುದೇ ಅಡ್ಡ ಪರಿಣಾಮಗಳನ್ನು ನೀಡದಂತಹ ಕೆಲವು ಕೊರ್ಟಿಸೊನ್ ಚುಚ್ಚುಮದ್ದುಗಳನ್ನು ಅವರು ನಿಮಗೆ ಶಿಫಾರಸು ಮಾಡಬಹುದು,ಅಥವಾ ನೀವು ನೋವನ್ನು ಕಡಿಮೆಗೊಳಿಸಲು ಮಣಿಕಟ್ಟಿನ ಬ್ರೇಸ್ಗಳನ್ನು ಧರಿಸುವಂತೆ ಅವರು ನಿಮಗೆ ಸೂಚಿಸಬಹುದು. ನೋವು ಇನ್ನೂ ಮುಂದುವರಿದರೆ, ನಿಮ್ಮ ಅಂಗೈಯಲ್ಲಿ ಸಣ್ಣ ಛೇದನ ಮಾಡುವ ಮೂಲಕ ಮಧ್ಯ ನರದ ಮೇಲೆ ಒತ್ತಡ ನಿವಾರಣೆಯನ್ನು ಕಡಿಮೆ ಮಾಡುವ ಚಿಕ್ಕ ಶಸ್ತ್ರಚಿಕಿತ್ಸೆಯನ್ನಾದರೂ ಅವರು ಸೂಚಿಸಬಹುದು.ಒತ್ತಡ ಕಡಿಮೆಯಾದಾಗ, ಮಧ್ಯ ನರವು ಮುಂಚಿನ ರೀತಿಯಲ್ಲಿ ಸಾಮಾನ್ಯವಾಗುತ್ತದೆ.ಇದೊಂದು ನೋವುರಹಿತ ವಿಧಾನವಾಗಿದ್ದು ಇದರಿಂದ ನಿಮಗೆ ಆರಾಮವಾಗುತ್ತದೆ.ತದನಂತರ ಇದರ ಚೇತರಿಕೆಗೆ ಕೆಲವು ವಾರಗಳ ಸಮಯ ಬೇಕಾಗಬಹುದು.

ಕೊನೆಯಲ್ಲಿ ನಾವು ಹೇಳುವುದೇನೆಂದರೆ ನೀವು ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ಮೊದಲೇ ತೆಗೆದುಕೊಳ್ಳುವದು ನಿಮಗೇ ಒಳ್ಳೆಯದು,ನಿಮ್ಮ ಆಹಾರ ಪದ್ಧತಿಗಳ ಮೇಲೆ ಗಮನವನ್ನು ಕೊಡಿ.ನಿಮ್ಮ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಸೇರಿಸಿಕೊಳ್ಳಿ, ನಿಮ್ಮ ವೈದ್ಯರು ಅಥವಾ ಯಾವುದೇ ಇತರ ವೃತ್ತಿಪರರು ಸೂಚಿಸಿದ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ ಮತ್ತು ನಿಮ್ಮ ತೂಕವನ್ನು ಆಗಾಗ್ಗೆ ಪರಿಶೀಲಿಸುತ್ತಾ ಇರಿ.

English summary

Carpal Tunnel Syndrome During Pregnancy

Carpal Tunnel Syndrome (CTS) is one of the commonly occurring medical conditions diagnosed during pregnancy and can be prevented as well as treated, if proper care is taken. This article would provide more insight into it. It is imperative for a pregnant woman to be careful and conscious of her diet, habits, lifestyle and environment around her, in the interest of her own health as well as the health of her foetus.
Story first published: Friday, September 14, 2018, 15:27 [IST]
X
Desktop Bottom Promotion