ಗರ್ಭಾವಸ್ಥೆಯ ಮೊದಲು ತುಂಬಾ ತೂಕ ಹೊಂದಿದ್ದರೆ ನಂತರ ಕಷ್ಟವಾಗುವುದು

By: manu
Subscribe to Boldsky

ಗರ್ಭಧಾರಣೆಯ ಮುಂಚೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾವು ಆರೋಗ್ಯವಾಗಿದ್ದೇವೆಯೇ ಎನ್ನುವುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು. ಇಲ್ಲವಾದರೆ ಗರ್ಭಧಾರಣೆಯ ನಂತರ ಉಂಟಾಗುವ ಆರೋಗ್ಯ ತೊಂದರೆಗಳಿಗೆ ಸೂಕ್ತವಾದ ಔಷಧಗಳನ್ನು ನೀಡಲಾಗುವುದಿಲ್ಲ. ಕೆಲವು ಅನಾರೋಗ್ಯವು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಪ್ರಭಾವ ಬೀರುವುದು. ಅಲ್ಲದೆ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಕಿರಿ ಕಿರಿ ಉಂಟಾಗುವುದು.

ಗರ್ಭಿಣಿಯಾಗುವ ಮುಂಚೆ ಅತಿಯಾದ ತೂಕ ಹೊಂದಿರುವುದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅಲ್ಲದೆ ಗರ್ಭಾವಸ್ಥೆಯ ಅವಧಿಯಲ್ಲಿ ಕೆಲವು ಆರೋಗ್ಯ ಸಮಸ್ಯೆಗಳ ಉದ್ಭವ ಹಾಗೂ ಪ್ರಸವದ ಸಮಯದಲ್ಲಿ ತೊಂದರೆ ಉಂಟಾಗುವುದು. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕೆಂದರೆ ಮುಂದೆ ಓದಿ...

ಜನನದ ತೊಡಕು

ಜನನದ ತೊಡಕು

ಗರ್ಭಾವಸ್ಥೆಯ ಮೊದಲು ಅತಿಯಾದ ತೂಕ ಹೊಂದಿದ್ದರೆ ಮಗುವಿನ ಜನನದಲ್ಲಿ ತೊಡಕುಂಟಾಗುವುದು. ಗರ್ಭಪಾತ ಹಾಗೂ ಇನ್ನಿತರ ದೋಷಗಳು ತಲೆ ದೂರ ಬಹುದು.

ಅಕಾಲಿಕ ಮುಟ್ಟು

ಅಕಾಲಿಕ ಮುಟ್ಟು

ಗರ್ಭಾವಸ್ಥೆಯ ಮೊದಲು ಪ್ರತಿ ತಿಂಗಳು ಸೂಕ್ತ ರೀತಿಯಲ್ಲಿ ಋತುಚಕ್ರ ಉಂಟಾಗದಿದ್ದರೆ ಫಲವತ್ತತೆಯ ಕೊರತೆ ಇರುತ್ತದೆ. ಆಗ ಮಗುವಿನ ಬೆಳವಣಿಗೆಯಲ್ಲಿ ದೋಷ ಉಂಟಾಗುವುದು.

ಮಧುಮೇಹ

ಮಧುಮೇಹ

ಅತಿಯಾದ ತೂಕ ಹೊಂದಿದ್ದರೆ ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ ಮತ್ತು ಇತರ ತೊಡಕುಗಳು ಅಪಾಯಗಳನ್ನು ಹೆಚ್ಚಿಸುವುದು.

ಬಾಲ್ಯದ ಮಧುಮೇಹ

ಬಾಲ್ಯದ ಮಧುಮೇಹ

ಬಾಲ್ಯದಿಂದಲೇ ಇರುವ ಸಕ್ಕರೆ ಕಾಯಿಲೆಯು ಗರ್ಭಾವಸ್ಥೆಯ ಸಮಯದಲ್ಲಿ ತೊಡಕುಂಟು ಮಾಡುವುದು. ಮಗುವಿನ ಜೀವಿತಾವಧಿಯಲ್ಲೂ ಕೆಲವು ಆರೋಗ್ಯ ಸಮಸ್ಯೆ ಉಂಟಾಗಬಹುದು.

ತೂಕ ಇಳಿಸಿ

ತೂಕ ಇಳಿಸಿ

ಅತಿಯಾದ ತೂಕ ಇಳಿಸಿಕೊಳ್ಳಬೇಕೆಂದೇನೂ ಇಲ್ಲ. ಆರೋಗ್ಯಕರವಾದ ತೂಕ ಹೊಂದಿದ್ದರೆ ಸಾಕು. ಅವು ನಿಮ್ಮ ದೇಹಕ್ಕೆ ಸೂಕ್ತ ಹಾಗೂ ಪೋಷಕಾಂಶ ಪೂರ್ಣವಾಗಿದ್ದರೆ ಸಾಕು.

ಗರ್ಭಾವಸ್ಥೆಯಲ್ಲಿ ತೂಕ ಏರಿಕೆ

ಗರ್ಭಾವಸ್ಥೆಯಲ್ಲಿ ತೂಕ ಏರಿಕೆ

ಗರ್ಭಾವಸ್ಥೆಯಲ್ಲಿ ತೂಕವು ಹೆಚ್ಚಾಗಬೇಕು. ಮೊದಲೇ ಸ್ವಲ್ಪ ಸಣ್ಣಗಿದ್ದರೆ ಈ ಸಮಯದಲ್ಲಿ ತೊಂದರೆ ಉಂಟಾಗದು. ಮೊದಲೇ ಹೆಚ್ಚು ತೂಕ ಹೊಂದಿದ್ದರೆ ಗರ್ಭಾವಸ್ಥೆಯಲ್ಲಿ ತೂಕದ ಏರಿಕೆಯು ತೊಡಕುಂಟು ಮಾಡಬಹುದು.

ಪ್ರಸವದ ನಂತರ

ಪ್ರಸವದ ನಂತರ

ಆರೋಗ್ಯಕರ ತೂಕದ ಮಹಿಳೆಯರು ಗರ್ಭಧಾರಣೆಯ ಸಂದರ್ಭದಲ್ಲಿ ಸ್ಥೂಲಕಾಯದವರಿಗಿಂತ ಉತ್ತಮವಾಗಿ ಗರ್ಭಧಾರಣೆಯನ್ನು ಎದುರಿಸಲು ಸಮರ್ಥರಾಗಿರುತ್ತಾರೆ ಎನ್ನುತ್ತಾರೆ ವೈದ್ಯರು. ಮೊದಲೇ ಸಣ್ಣಗಿದ್ದರೆ ಪ್ರಸವದ ನಂತರ ತೂಕ ಇಳಿಸುವುದು ಸುಲಭ ಎನ್ನಲಾಗುತ್ತದೆ.

English summary

Why It Is Good Lose Weight Before Pregnancy

Before getting pregnant, it is better to ensure that you are healthy on many levels. This includes body weight. When you are planning to conceive, it is wiser to lose unwanted weight first. Being overweight before pregnancy may cause several issues during pregnancy. Losing a few pounds and then getting pregnant will reduce several health risks for you and your baby too.
Story first published: Thursday, July 27, 2017, 23:23 [IST]
Subscribe Newsletter