ಗರ್ಭಿಣಿಯರಿಗೆ ಲೋಹದ ರುಚಿ ಇಷ್ಟವಾಗುತ್ತದೆಯಂತೆ!! ಯಾಕೆ ಹೀಗೆ..?

By: Jaya subramanya
Subscribe to Boldsky

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಕೆಲವು ಮಹಿಳೆಯರಿಗೆ ಒಂಬತ್ತು ತಿಂಗಳು ಸುಲಭವಾಗಿ ಕಳೆದು ಹೋದರೆ ಇನ್ನು ಕೆಲವು ಮಹಿಳೆಯರು ದೇಹದಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಗಿ ಒಂಬತ್ತು ತಿಂಗಳನ್ನು ಒಂಬತ್ತು ಜನ್ಮಗಳಷ್ಟು ಅನುಭವಿಸಿ ಕಳೆಯುತ್ತಾರೆ. ವಾಂತಿ, ವಾಕರಿಕೆ, ಕೋಪ, ಒತ್ತಡ, ತಲೆನೋವು, ಮೈಕೈನೋವು, ಸೊಂಟ ನೋವು ಹೀಗೆ

ಒಂದೊಂದು ತಿಂಗಳು ಒಂದೊಂದು ಯಾತನೆಯನ್ನು ಅವರು ಅನುಭವಿಸಿಯೇ ತನ್ನ ಕಂದಮ್ಮನಿಗೆ ಜನ್ಮವನ್ನು ನೀಡುತ್ತಾರೆ. ಈ ಮೇಲೆ ಹೇಳಿದ ಸಮಸ್ಯೆಗಳಲ್ಲಿ ರುಚಿ ಇಲ್ಲದಿರುವುದು ಕೂಡ ಒಂದು ಸಮಸ್ಯೆಯಾಗುತ್ತದೆ. ಗರ್ಭಾವಸ್ಥೆಯ ಸಮಯಲ್ಲಿ ಕೆಲವು ಮಹಿಳೆಯರಿಗೆ ಯಾವುದೇ ಆಹಾರ ತಿಂದರೂ ರುಚಿ ಇಲ್ಲದೇ ಇರುವುದು ಸಮಸ್ಯೆಯಾಗಿ ಬಿಡುತ್ತದೆ. ತಳಹತ್ತಿದ, ಉಪ್ಪಿನ, ಮೆಟಲ್ ರುಚಿ ಹೀಗೆಯೇ ಅವರ ಬಾಯಿಯಲ್ಲಿ ಇಂತಹುದೇ ಸ್ವಾದ ಉಮ್ಮಳಿಸುತ್ತಿರುತ್ತದೆ. ಅದರಲ್ಲೂ ಮೆಟಾಲಿಕ್ ರುಚಿಯನ್ನು ಡೈಸೆಜೂಸಿಯಾ ಎಂದು ಕರೆಯುತ್ತಾರೆ. ಇದು ಮಹಿಳೆಯರಿಗೆ ಪ್ರಥಮ ತ್ರೈಮಾಸಿಕದಲ್ಲಿ ಕಂಡುಬರುತ್ತದೆ. ಅಲ್ಯುಮಿನಿಯಂ ಫಾಯಿಲ್ ಅನ್ನು ಬಾಯಿಯಲ್ಲಿ ಇಟ್ಟು ಜಗಿದಂತಹ ಅನುಭವವನ್ನು ಇದು ನೀಡುತ್ತದೆ.....

ಹಾರ್ಮೋನುಗಳ ಏರಿಳಿತ

ಹಾರ್ಮೋನುಗಳ ಏರಿಳಿತ

ಗರ್ಭಿಣಿಯರ ದೇಹದಲ್ಲಿರುವ ಹಾರ್ಮೋನುಗಳು ತ್ವರಿತವಾಗಿ ಮೇಲಕ್ಕೇರಿ ಕೆಳಕ್ಕಿಳಿಯುತ್ತವೆ. ಅದರಲ್ಲೂ ಪ್ರಥಮ ತ್ರೈಮಾಸಿಕದಲ್ಲಿ ಇದು ಸಾಮಾನ್ಯ ವಾಗಿರುತ್ತದೆ. ಮಗುವನ್ನು ತನ್ನಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ದೇಹವು ಸಾಕಷ್ಟು ತಯಾರಿಯನ್ನು ನಡೆಸಬೇಕಾಗುತ್ತದೆ. ಇದರಲ್ಲಿ ಹಾರ್ಮೋನುಗಳ ಒಗ್ಗೂಡುವಿಕೆ ಮುಖ್ಯವಾಗುತ್ತದೆ. ಈಸ್ಟ್ರೋಜನ್ ಕಾರಣದಿಂದ ರುಚಿಯಲ್ಲಿ ವೈಪರೀತ್ಯಗಳು ಉಂಟಾಗುತ್ತವೆ. ಇದರ ಪರಿಣಾಮ ಆಹಾರಗಳ ಮೇಲೆ ಉಂಟಾಗುತ್ತವೆ. ಅಂತೆಯೇ ಸಿಹಿಯ ಸ್ಥಾನದಲ್ಲಿ ಖಾರ ತಿನ್ನಬೇಕೆಂಬ ಬಯಕೆ ಉಂಟಾಗುವುದೂ ಇದಕ್ಕೆ ಕಾರಣವಾಗಿದೆ.

ರುಚಿ ಮತ್ತು ವಾಸನೆಗಿರುವ ಸಂಬಂಧ

ರುಚಿ ಮತ್ತು ವಾಸನೆಗಿರುವ ಸಂಬಂಧ

ಸಾಮಾನ್ಯ ಮನುಷ್ಯರಿಗೆ ಆಹಾರದ ರುಚಿಯನ್ನು ತಿಳಿಯಲು ಹಲವಾರು ಜಿಹ್ವಾಗ್ರಂಥಿಗಳು ಸಹಾಯ ಮಾಡುತ್ತವೆ. ಗರ್ಭಿಣಿ ಮಹಿಳೆಯಲ್ಲಿ ವಾಸನೆಯನ್ನು ಗ್ರಹಿಸುವ ಶಕ್ತಿ ಅಧಿಕವಾಗಿರುತ್ತದೆ. ವಾಸನೆಯು ಅಧಿಕವಾದಲ್ಲಿ ನಾಲಗೆಯಲ್ಲಿ ಮೆಟಾಲಿಕ್ ರೀತಿಯ ರುಚಿ ಕಾಣಿಸಿಕೊಳ್ಳುತ್ತದೆ.

ದುಪ್ಪಟ್ಟು ಪ್ರಮಾಣದಲ್ಲಿ ನೀರು

ದುಪ್ಪಟ್ಟು ಪ್ರಮಾಣದಲ್ಲಿ ನೀರು

ಸಾಮಾನ್ಯರುವ ಕುಡಿಯುವ ನೀರಿನ ಪ್ರಮಾಣಕ್ಕಿಂತ ಗರ್ಭಿಣಿ ಸ್ತ್ರೀಯು ದುಪ್ಪಟ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಬೇಕು. ಒಮ್ಮೊಮ್ಮೆ ಬೇರೆ ಬೇರೆ ಕಾರಣಗಳಿಂದಾಗಿ ಕೂಡ ನೀರು ಮೆಟಾಲಿಕ್ ಮಾದರಿಯ ರುಚಿಯನ್ನು ನೀಡಬಲ್ಲುದು. ಕಬ್ಬಿಣ, ಮೆಗ್ನೇಶಿಯಂ, ಜಿಂಕ್ ಮತ್ತು ತಾಮ್ರದ ರುಚಿಯನ್ನು ನಿಮ್ಮ ನಾಲಗೆಯು ಹೊರಸೂಸುತ್ತದೆ.

ಪೂರಕ ಆಹಾರಗಳ ಸೇವನೆ

ಪೂರಕ ಆಹಾರಗಳ ಸೇವನೆ

ದೇಹಕ್ಕೆ ಬೇಕಾದ ಸೂಕ್ತ ಪೋಷಕಾಂಶಗಳನ್ನು ನೀಡುವುದಕ್ಕಾಗಿ ಪೂರಕ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಸುಲಲಿತ ಗರ್ಭಾವಸ್ಥೆಗಾಗಿ ಇರುವ ಈ ಆಹಾರಗಳಲ್ಲಿ, ಸತು, ಕಬ್ಬಿಣದ ಅಂಶಗಳು ಇರುತ್ತವೆ. ಇದರಿಂದಾಗಿ ಕೂಡ ಮೆಟಾಲಿಕ್ ರುಚಿ ನಿಮ್ಮ ಬಾಯಲ್ಲಿ ಬರಬಹುದು.

ಹಲ್ಲಿನ ಸಮಸ್ಯೆ

ಹಲ್ಲಿನ ಸಮಸ್ಯೆ

ದಿನದಲ್ಲಿ ಎರಡು ಬಾರಿ ಹಲ್ಲುಜ್ಜುವುದು ಮತ್ತು ಆಗಾಗ್ಗೆ ಬಾಯಿ ಮುಕ್ಕಳಿಸುವುದು ಅತ್ಯವಶ್ಯಕವಾಗಿದೆ. ನೀವು ಈ ಕ್ರಿಯೆಯನ್ನು ಮಾಡಿಲ್ಲ ಎಂದಾದಲ್ಲಿ ದಂತ ಕುಳಿಯ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಮತ್ತು ಮೆಟಾಲಿಕ್ ರುಚಿಯನ್ನು ನೀವು ಆಸ್ವಾದಿಸಬೇಕಾಗುತ್ತದೆ.

ಇತರ ಕಾರಣಗಳು

ಇತರ ಕಾರಣಗಳು

ಈ ರೀತಿಯ ರುಚಿಗಳು ಗರ್ಭಿಣಿಯರನ್ನು ಇತರ ಬೇಡದ ಆಹಾರಗಳ ಸೇವನೆಯಿಂದ ಕಾಪಾಡುತ್ತದೆ. ಇದು ತಾಯಿ ಮತ್ತು ಮಗುವಿಗೆ ರಕ್ಷಣೆಯನ್ನು ನೀಡುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ. ತಾಯಿಯು ಸಾಕಷ್ಟು ಪ್ರಮಾಣದಲ್ಲಿ ಐರನ್, ಸೋಡಿಯಂ ಮತ್ತು ಕ್ಯಾಲ್ಶಿಯಂ ಅನ್ನು ಸೇವಿಸಬೇಕು ಎಂಬುದು ಇದರ ಅರ್ಥವಾಗಿದೆ. ಅದಾಗ್ಯೂ ನೀವು ಗರ್ಭಾವಸ್ಥೆಯ ಸಮಯದಲ್ಲಿ ಈ ರೀತಿಯ ರುಚಿಯನ್ನು ಆಸ್ವಾದಿಸಬೇಕಾದ ಸಂದರ್ಭದಲ್ಲಿ ಗಾಬರಿಗೊಳ್ಳಬೇಕಾಗಿಲ್ಲ. ಇನ್ನು ರುಚಿ ಹೆಚ್ಚಾಗುತ್ತಿದೆ ಎಂದಾದಲ್ಲಿ ಕೂಡಲೇ ವೈದ್ಯರನ್ನು ಕಾಣಿ.

English summary

Reasons For Metallic Taste During Pregnancy

Changes in the nature of the body cannot be avoided when one turns pregnant. Some lucky ones sail through the nine months with ease but most women have had to adjust to the changes be it big or small. This one to be discussed is associated with taste. Women experience a change in taste, sometimes even without having any food.
Subscribe Newsletter