ಗರ್ಭಿಣಿಯರು ಜ್ವರಕ್ಕೆ ಔಷಧಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವೇ?

By Manu
Subscribe to Boldsky

ಗರ್ಭಾವಸ್ಥೆಯಲ್ಲಿದ್ದಾಗ ಯಾವುದಾದರೂ ಕಾಯಿಲೆ ಬಂದರೆ ಇದಕ್ಕೆ ತೆಗೆದುಕೊಳ್ಳುವ ಔಷಧಿಯಿಂದ ಗರ್ಭದಲ್ಲಿರುವ ಮಗುವಿಗೇನಾದರೂ ತೊಂದರೆಯಾಗುತ್ತದೆಯೋ ಎಂಬ ದುಗುಡವನ್ನು ಪ್ರತಿ ಗರ್ಭಿಣಿಯೂ ಅನುಭವಿಸುತ್ತಾಳೆ. ಇತರ ವೇಳೆಗಿಂತಲೂ ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ಮತ್ತು ಕಾಳಜಿ ವಹಿಸುವುದು ಅಗತ್ಯ.

ಏಕೆಂದರೆ ಈ ಅವಧಿಯಲ್ಲಿ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯವೂ ತಾಯಿಯ ಆರೋಗ್ಯವನ್ನೇ ಅವಲಂಬಿಸಿರುತ್ತದೆ ಹಾಗೂ ಗರ್ಭಾವಸ್ಥೆಯಲ್ಲಿ ದೇಹ ಹಲವಾರು ಬದಲಾವಣೆಗೆ ಒಳಗಾಗುತ್ತದೆ. ಈ ಅವಧಿಯಲ್ಲಿ ವಿಶೇಷವಾಗಿ ಸೋಂಕುಗಳ ಮೂಲಕ ಆವರಿಸುವ ಸಾಧ್ಯತೆ ತಾಯಿಯಾಗುವವಳಿಗೆ ಇತರರಿಗಿಂತ ಕೊಂಚ ಹೆಚ್ಚೇ ಇರುತ್ತದೆ. ಗರ್ಭಾವಸ್ಥೆಯ ಮೂರೂ ಅವಧಿಗಳಲ್ಲಿ (trimister) ವಿವಿಧ ರಸದೂತಗಳು ಸ್ರವಿಸುವ ಕಾರಣ ರೋಗ ನಿರೋಧಕ ಶಕ್ತಿ ಕೊಂಚ ಕುಂಠಿತಗೊಳ್ಳುವ ಕಾರಣ ಸೋಂಕುಗಳು ಥಟ್ಟನೇ ಆವರಿಸಿಬಿಡುತ್ತವೆ. ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಂಡರೆ, ಈ ಮನೆಮದ್ದು ಪ್ರಯತ್ನಿಸಿ...   

Pregnancy fever test
 

ಗರ್ಭಾವಸ್ಥೆಯಲ್ಲಿ ಅತಿ ಹೆಚ್ಚಾಗಿ ಆವರಿಸುವ ಸೋಂಕು ರೋಗಗಳೆಂದರೆ ಶೀತ, ಫ್ಲೂ ಜ್ವರ ಮತ್ತು ನೆಗಡಿ. ಇವುಗಳನ್ನು ನಿಗ್ರಹಿಸಲು ಕೊಂಚ ಪ್ರಬಲವೇ ಆದ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಈ ಔಷಧಿಗಳ ಪ್ರಾಬಲ್ಯ ತಾಯಿಯಾಗುವವಳಿಗೂ ಗರ್ಭದಲ್ಲಿರುವ ಮಗುವಿನ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರಬಲ್ಲುದು.ಒಂದು ವೇಳೆ ಗರ್ಭಿಣಿ ಫ್ಲೂ ಜ್ವರಪೀಡಿತಳಾದರೆ ಇತರ ಸಮಯದಲ್ಲಿ ತೆಗೆದುಕೊಳ್ಳುವ ಔಷಧಿಗಳನ್ನು ಈಗ ಸೇವಿಸಬಹುದೇ? ವೈದ್ಯರು ಇದಕ್ಕೆ ನೀಡುವ ಉತ್ತರಗಳನ್ನು ಈಗ ನೋಡೋಣ... 

ಗರ್ಭಾವಸ್ಥೆಯಲ್ಲಿ ಕಾಡುವ ಫ್ಲೂ ಜ್ವರ

ಫ್ಲೂ ಜ್ವರಕ್ಕೆ ಇನ್ಫ್ಲುಯೆಂಜಾ ಎಂಬ ವೈರಸ್ಸು ಕಾರಣ. ಈ ವೈರಸ್ಸು ಗಾಳಿಯಲ್ಲಿ ತೇಲುತ್ತಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾರಣ ಸುಲಭವಾಗಿ ಎಲ್ಲಾ ವಯಸ್ಸಿನವರಿಗೂ ಅಂಟಿಕೊಳ್ಳುತ್ತದೆ. ಇದಕ್ಕೆ ಗರ್ಭವತಿಯರೂ ಹೊರತಲ್ಲ. ಈ ವೈರಸ್ಸು ಆಹಾರ ಮತ್ತು ನೀರಿನ ಮೂಲಕವೂ ಹರಡುತ್ತದೆ. ಈ ವೈರಸ್ಸು ದೇಹ ಪ್ರವೇಶಿಸಿದ ಬಳಿಕ ಇದನ್ನು ಎದುರಿಸಲು ದೇಹದ ರೋಗ ನಿರೋಧಕ ಶಕ್ತಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತದೆ. ದೇಹದ ತಾಪಮಾನವನ್ನು ಏರಿಸುವುದೂ ಇದರಲ್ಲಿ ಒಂದು. ಇದೇ ಫ್ಲೂ ಜ್ವರ. ಇದರೊಂದಿಗೆ ಶೀತ, ಮೈ ಕೈ ನೋವು, ಸುಸ್ತು, ಕೆಮ್ಮು ಮೊದಲಾದವೂ ಆವರಿಸುತ್ತವೆ. 

Tablets 2
 

ಈ ಲಕ್ಷಣಗಳು ಗರ್ಭವತಿಯಲ್ಲಿ ಕಾಣಿಸಿಕೊಂಡರೆ ಇದು ಗರ್ಭದಲ್ಲಿರುವ ಮಗುವಿನ ಮೇಲೂ ಪ್ರಭಾವ ಬೀರಬಲ್ಲದು. ಫ್ಲೂ ಜ್ವರಕ್ಕೆ ಔಷಧಿಗಳು ಇವೆಯಾದರೂ ಇವುಗಳಲ್ಲಿ ಕೆಲವು ಔಷಧಿಗಳ ಪ್ರಾಬಲ್ಯ ಗರ್ಭದಲ್ಲಿರುವ ಮಗುವಿಗೆ ಭಾರಿಯಾಗಬಹುದು. ಆದರೆ ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಈ ಔಷಧಿಗಳು ಗರ್ಭವತಿ ಮತ್ತು ಮಗುವಿಗೆ ಸುರಕ್ಷಿತವಾಗಿವೆ. 

Tablets
 

ಸ್ಕ್ಯಾಂಡಿನೇವಿಯಾ ಮತ್ತು ಫ್ರಾನ್ಸ್‌‌ನಲ್ಲಿ ಸುಮಾರು ಆರು ಸಾವಿರ ಗರ್ಭವತಿಯರಿಗೆ ಫ್ಲೂಜ್ವರ ಬಂದಾಗ ಕಡಿಮೆ ಪ್ರಾಬಲ್ಯದ ಔಷಧಿಗಳನ್ನು ನೀಡಿದ ಬಳಿಕ ಅವರ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಿ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ ಈ ಔಷಧಿಗಳನ್ನು ಸೇವಿಸಿದ ಬಳಿಕ ಫ್ಲೂ ಜ್ವರ ಕಡಿಮೆಯಾಗಿದ್ದು ಯಾವುದೇ ಅಡ್ಡ ಪರಿಣಾಮವನ್ನು ಕಂಡುಕೊಳ್ಳಲಾಗಿಲ್ಲ. ಆದರೆ ಈ ಔಷಧಿಗಳ ಪ್ರಮಾಣ ಮತ್ತು ಪ್ರಾಬಲ್ಯ ಚಿಕಿತ್ಸೆ ನೀಡುವ ವೈದ್ಯರೇ ನಿರ್ಧರಿಸುವುದು ಅಗತ್ಯ....

For Quick Alerts
ALLOW NOTIFICATIONS
For Daily Alerts

    English summary

    Is It Safe To Take Flu Medicines During Pregnancy?

    It is believed that some pregnant women tend to get afflicted with diseases quite often, as their immunity can be low during this phase, due to the hormonal fluctuations. When a pregnant woman is affected with infectious diseases like flu, she may have to take certain strong medications to treat the diseases and these medications can have negative effects on her unborn.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more