For Quick Alerts
ALLOW NOTIFICATIONS  
For Daily Alerts

ಬಂಜೆತನದಿಂದ ಬೇಸತ್ತಿದ್ದೀರಾ ಎಂದಾದರೆ ಈ ಐದು ಪ್ರಯತ್ನಗಳನ್ನು ಮಾಡಿ

By Divya Pandith
|

ಕಲುಷಿತ ಗಾಳಿ, ಪೋಷಕಾಂಶ ರಹಿತ ಆಹಾರ, ಅತಿಯಾದ ಮಸಾಲಯುಕ್ತ ತಿಂಡಿಗಳು ಹಾಗೂ ಅನುಚಿತ ಜೀವನ ಶೈಲಿಯಿಂದ ಇಂದು ಅನೇಕ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತಿದೆ. ತಿಂಗಳ ಋತುಚಕ್ರದಲ್ಲಿ ಕ್ರಮ ಬದ್ಧತೆ ಇಲ್ಲದಿರುವುದು, ಆರೋಗ್ಯಕರ ಮೊಟ್ಟೆ ಬಿಡುಗಡೆಯಾಗದಿರುವುದು ಹಾಗೂ ಓವೆರೆಸಿಯಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಗಳಿಂದ ಗರ್ಭಕೋಶವು ಫಲವತ್ತತೆಯಿಂದ ಕೂಡಿಲ್ಲ ಎನ್ನಲಾಗುತ್ತದೆ. ಹೀಗಿರುವಾಗ ತಾಯ್ತನವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

ಆಧುನಿಕ ಶಸ್ತ್ರ ಚಿಕಿತ್ಸೆ ಹಾಗೂ ಆರೈಕೆಗಳಿಂದ ಗರ್ಭಕೋಶವನ್ನು ಫಲವತ್ತೆಯಿಂದ ಕೂಡಿರುವಂತೆ ಮಾಡಬಹುದು. ಜೀವನದಲ್ಲಿ ಮಕ್ಕಳನ್ನು ಪಡೆಯುವ ಆಸೆಯನ್ನು ಬಿಟ್ಟವರು ಸಹ ಪುನಃ ತಮ್ಮ ಕನಸನ್ನು ನಸಾಗಿಸಿಕೊಳ್ಳಬಹುದು. ಅದಕ್ಕೆ ವಿಟ್ರೋ ಫಲೀಕರಣ(ಐವಿಎಫ್) ಎನ್ನುತ್ತಾರೆ. ಈ ಕ್ರಮದಿಂದ ಆಶ್ಚರ್ಯಕರ ಬದಲಾವಣೆ ಹಾಗೂ ಫಲಿತಾಂಶವನ್ನು ಕಾಣಬಹುದು. ನಿಮ್ಮಲ್ಲೂ ಈ ರೀತಿಯ ಸಮಸ್ಯೆಯಿದೆ ಎಂದರೆ ಬೇಗನೆ ಎಚ್ಚೆತ್ತುಕೊಳ್ಳಿ ಹಾಗೂ ನಾವಿಲ್ಲಿ ಹೇಳುತ್ತಿರುವ ಐದು ಬಗೆಯ ವಿಧಾನವನ್ನು ಅನುಸರಿಸಿ. ಸಮಸ್ಯೆಯು ಪರಿಹಾರವಾಗುವುದು. ಜೊತೆಗೆ ನಿಮ್ಮ ಕನಸು ನನಸಾಗುವುದು.

testing with doctor

ವೈದ್ಯರ ಭೇಟಿಯನ್ನು ತಪ್ಪಿಸಬೇಡಿ
ನೈಸರ್ಗಿಕವಾಗಿಯೇ ನೀವು ಮಗುವಿಗೆ ತಾಯಿಯಾಗುತ್ತೀರಿ ಅಥವಾ ನಿಮ್ಮ ಗರ್ಭಾವಸ್ಥೆ ಸುಲಭವಾಗುತ್ತದೆ ನ್ನುವ ನಿರೀಕ್ಷೆಯಲ್ಲಿಯೇ ಕಾಲ ಕಳೆಯದಿರಿ. ನೀವು ಚಿಕ್ಕ ವಯಸ್ಸಿನಲ್ಲಿದ್ದಷ್ಟು ಐವಿಎಫ್ ಚಿಕಿತ್ಸೆ ಫಲಕಾರಿಯಾಗುತ್ತದೆ. ಹಾಗಾಗಿ ವೈದ್ಯರನ್ನು ಭೇಟಿಯಾಗಿ ನಿಮ್ಮ ಆರೋಗ್ಯ ಸಮಸ್ಯೆ ಏನು ಎನ್ನುವುದನ್ನು ದೃಢಪಡಿಸಿಕೊಳ್ಳಿ.

ಐವಿಎಫ್ ಚಿಕಿತ್ಸೆಯು ಫಲಕಾರಿಯಾಗಬೇಕು ಎನ್ನುವುದಾದರೆ ಫಲವತ್ತತೆಯ ತಜ್ಞರನ್ನು ಭೇಟಿಯಾಗಲು ತಡಮಾಡಬೇಡಿ. ಆದಷ್ಟು ಬೇಗ ಸಮಸ್ಯೆಗೆ ಸಲಹೆ ಪಡೆದುಕೊಳ್ಳುವುದು ಉತ್ತಮ. ನೈಸರ್ಗಿಕವಾಗಿ ಅಥವಾ ಸಾಮಾನ್ಯವಾಗಿಯೇ ಗರ್ಭಧಾರಣೆ ಹೊಂದಲು ನಿಮಗೆ ಸಾಧ್ಯವಿಲ್ಲ ಎಂದಾದರೆ ತಜ್ಞರು ಈ ಕೆಳಗಿನ ಶಿಫಾರಸ್ಸು ಮಾಡುತ್ತಾರೆ. ನೀವು 35 ವರ್ಷಕ್ಕಿಂತ ಒಳಗಿನವಾಗಿದ್ದರೆ ಒಂದು ವರ್ಷದ ಬಳಿಕ ಸಹಾಯವನ್ನು ಪಡೆದುಕೊಳ್ಳಿ. ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ 6 ತಿಂಗಳ ನಂತರ ಸಹಾಯ ಪಡೆದುಕೊಳ್ಳಿ ಎನ್ನುತ್ತಾರೆ.

ಸ್ತ್ರೀ ಫಲವತ್ತತೆಯ ಪರೀಕ್ಷೆ
ಗರ್ಭಾವಸ್ಥೆ ಎನ್ನುವುದು ಸುಲಭವಾಗಿ ಆಗುವಂತಹದ್ದಲ್ಲ. ಆರೋಗ್ಯದ ಸಮಸ್ಯೆಯಿಂದ ನಿಮಗೆ ಫಲವತ್ತತೆಯ ಕೊರತೆ ಉಂಟಾಗಿದೆಯೇ ಎನ್ನುವುದನ್ನು ವೈದ್ಯರು ಪರೀಕ್ಷಿಸುವುದು ಮುಖ್ಯ. ನಿಮ್ಮ ಓಬಿ/ ಜಿವೈಎನ್ ಅಥವಾ ಸಂತಾನೋತ್ಪತ್ತಿಯ ಸಾಮಥ್ರ್ಯದ ಕುರಿತು ತಜ್ಞರು ಅನೇಕ ಪರೀಕ್ಷೆಗಳನ್ನು ನಡೆಸಬಹುದು. ಬಂಜೆತನಕ್ಕೆ ಕಾರಣವೇನು? ರಚನಾತ್ಮಕ ಸಮಸ್ಯೆಗಳು, ಹಾರ್ಮೋನು ವ್ಯತ್ಯಾಸ ಅಥವಾ ಅಂಡೋತ್ಪತ್ತಿಯ ಕ್ರಮಗಳ ಬಗ್ಗೆ ಪರೀಕ್ಷೆ ಹಾಗೂ ಸಲಹೆಯನ್ನು ನೀಡುವರು.

ಪುರುಷ ಫಲವತ್ತತೆಯ ಪರೀಕ್ಷೆ
ಗರ್ಭಿಣಿಯಾಗಲು ಸಾಧ್ಯವಾಗದ ಅನೇಕ ದಂಪತಿಗಳಲ್ಲಿ ಕೇವಲ ಮಹಿಳೆಯ ಫಲವತ್ತತೆಯ ಸಮಸ್ಯೆಯೊಂದೇ ಕಾರಣವಾಗಿಲ್ಲ. ಪುರುಷರ ಫಲವತ್ತತೆಯ ದೌರ್ಬಲ್ಯದಿಂದಲೂ ಬಂಜೆತನವನ್ನು ಅನುಭವಿಸುತ್ತಿದ್ದಾರೆ. ಪುರುಷರಲ್ಲಿ ಇರುವ ಬಂಜೆತನವು ಅರ್ಧದಷ್ಟು ಬಂಜರುತನಕ್ಕೆ ಕಾರಣ ಎಂದು ಹೇಳಬಹುದು. ಪುರುಷರ ಫಲವತ್ತತೆ ಸೂಕ್ತವಾಗಿದೆಯೇ? ಇಲ್ಲವೇ? ಎನ್ನುವುದನ್ನು ತಿಳಿಯಲು ವೀರ್ಯ ವಿಶ್ಲೇಷಣೆ ನಡೆಸಬೇಕು. ಅವರು ಈ ಪರೀಕ್ಷೆಗೆ ಹಿಂದೇಟು ಹಾಕಬಹುದು. ಐವಿಎಫ್ ಚಿಕಿತ್ಸೆ ಫಲಕಾರಿಯಾಗಬೇಕು ಎಂದಾದರೆ ಪರೀಕ್ಷೆಯನ್ನು ಮೊದಲು ಮಾಡಿಸಬೇಕು.

ಸೂಕ್ತವಾದ ಆಸ್ಪತ್ರೆಗಳ ಆಯ್ಕೆಯೂ ಮುಖ್ಯ
ಫಲವತ್ತತೆಯ ಚಿಕಿತ್ಸೆ ಪಡೆಯುವ ಮೊದಲು ನುರಿತ ತಜ್ಞರು ಹಾಗೂ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯ. ನಿಮ್ಮ ಮೊದಲ ಅಪಾಯಿಂಟ್ಮೆಂಟ್‍ನಲ್ಲಿ ಸೂಕ್ತ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಿ. ನೀವು ನಿಮ್ಮ ಐವಿಎಫ್ ಚಿಕಿತ್ಸೆಯ ದರ ನಿಮಗೆ ಹೊಂದಿಕೆಯಾಗುವಂತಹ ಆಸ್ಪತ್ರೆ ನೋಡುವುದು ಸಹ ಮುಖ್ಯ. ನಿಮ್ಮ ಚಿಕಿತ್ಸೆಗೆ ಒಳಪಡಿಸುವ ವೈದ್ಯರಲ್ಲಿ ಚಿಕಿತ್ಸಾ ಕ್ರಮಗಳೇನು ಎನ್ನುವುದನ್ನು ಸಹ ತಿಳಿದುಕೊಳ್ಳಬೇಕು. ವೈದ್ಯರು ನಿರ್ದಿಷ್ಟ ವಯಸ್ಸಿನವರೇ? ಸೂಕ್ತ ಅನುಭವ ಹೊಂದಿದ್ದಾರೆಯೇ? ನಿಮ್ಮ ಬಗ್ಗೆಯೂ ಸರಿಯಾದ ಕಾಳಜಿ ವಹಿಸುತ್ತಾರೆಯೇ ಎನ್ನುವುದನ್ನು ಮೊದಲು ತಿಳಿಸುಕೊಳ್ಳುವುದು ಮುಖ್ಯ ಹಾಗೂ ಅದು ನಿಮ್ಮ ಬುದ್ಧಿವಂತಿಕೆಯೂ ಹೌದು.

ಭ್ರೂಣದ ವರ್ಗಾವಣೆಯ ಬಗ್ಗೆ ತಿಳಿದಿರಿ
ಭ್ರೂಣದ ವರ್ಗಾವಣೆಗೆ ಸಂಬಂಧಿಸಿದಂತೆ "ಸೊಸೈಟಿ ಫಾರ್ ಅಸಿಸ್ಟೆ ರಿಪ್ರೊಡಕ್ಟಿವ್ ಟೆಕ್ನಾಲಜಿ(ಎಸ್‍ಎಆರ್‍ಟಿ)ಯ ಸ್ಪಸ್ಟ ಶಿಫಾರಸ್ಸನ್ನು ಹೊಂದಿರಬೇಕು. ಕಡಿಮೆ ವಯಸ್ಸಿನ ಮಹಿಳೆಯರಾಗಿದ್ದರೆ ಗರ್ಭಿಣಿಯಾಗಲು ಹೆಚ್ಚಿನ ಅವಕಾಶಗಳಿರುತ್ತವೆ. ವಯಸ್ಸು ಏನೇ ಇದ್ದರೂ ಭ್ರೂಣದ ವರ್ಗಾವಣೆಗೆ ತೊಂದರೆಯೇನು? ಭ್ರೂಣಗಳನ್ನು ವರ್ಗಾವಣೆ ಮಾಡುವುದರಿಂದ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು ಎನಿಸಬಹುದು. ಇದರಿಂದ ಭವಿಷ್ಯದಲ್ಲಿ ಅಕಾಲಿಕ ಪ್ರಸವ ಅಥವಾ ಶಿಶುವಿನ ಆರೋಗ್ಯದಲ್ಲಿ ಗಭೀರ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

English summary

HOW TO BOOST IVF SUCCESS THE FIRST TIME

Are you wondering about your personal chances of pregnancy success with in vitro fertilization (IVF)? We share five tips to help you make the most out of your IVF cycle. Whether conceiving on your own or with fertility treatments, do not wait until it is too late to seek help for pregnancy. The younger you are, the more likely it is that you will achieve pregnancy success with IVF.
X
Desktop Bottom Promotion