ಗರ್ಭಾವಸ್ಥೆಯಲ್ಲಿ ಮಾಡುವ ಸಣ್ಣ ತಪ್ಪೂ ಸಹ ದೊಡ್ಡ ಪರಿಣಾಮವನ್ನು ಬೀರುತ್ತವೆ

By: Divya
Subscribe to Boldsky

ತನ್ನ ಜೀವದಲ್ಲೇ ಇನ್ನೊಂದು ಜೀವವನ್ನಿಟ್ಟುಕೊಂಡು, ಆರೈಕೆ ಮಾಡುವುದು ಹೆಣ್ಣಿಗೆ ಒಂದು ಪ್ರಕೃತಿ ದತ್ತವಾದ ಕೊಡುಗೆಯಾಗಿರಬಹುದು. ಆದರೆ ಆ ಸಮಯದಲ್ಲಿ ಆಕೆಗೆ  ಪತಿ ಹಾಗೂ ಕುಟುಂಬ ಸದಸ್ಯರ ಸಹಕಾರ ಮತ್ತು ಸಹಾಯದ ಅಗತ್ಯವಿರುತ್ತದೆ. ಗರ್ಭಿಣಿಯರಿಗೆ ಗರ್ಭಾವಸ್ಥೆಯ ಆರೈಕೆ, ಪ್ರಸವ ಪೂರ್ವ ಹಾಗೂ ಪ್ರಸವದ ನಂತರದ ಆರೈಕೆಯ ಬಗ್ಗೆಯೂ ಕೆಲವು ಜ್ಞಾನವನ್ನು ಹೊಂದಿರಬೇಕಾಗುವ ಅನಿವಾರ್ಯತೆ ಇರುತ್ತದೆ.

ಗರ್ಭಿಣಿಯರು ತಪ್ಪದೇ ಸೇವಿಸಬೇಕಾದ 12 ಆಹಾರ ಪದಾರ್ಥಗಳು

ಗರ್ಭಾವಸ್ಥೆ ಎನ್ನುವುದು ನೈಸರ್ಗಿಕ ಕ್ರಿಯೆ ಎನ್ನುವ ಗುಂಗಿನಲ್ಲಿ ಹಲವು ಮಹಿಳೆಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳು ಮಗುವಿನ ಆರೋಗ್ಯದ ಮೇಲೆ ಹಾಗೂ ತಾಯಿ ಆರೋಗ್ಯದ ಮೇಲೂ ಪ್ರಭಾವ ಬೀಳುತ್ತದೆ. ಅವು ಸಣ್ಣ ಪುಟ್ಟ ತಪ್ಪುಗಳು ಎನಿಸಿದರೂ ಅನೇಕ ತೊಂದರೆಗಳುಂಟಾಗುತ್ತವೆ. ಹಾಗಾದರೆ ಅವರು ಮಾಡುವ ಸಾಮಾನ್ಯ ತಪ್ಪುಗಳು ಯಾವವು? ಅವುಗಳ ಪರಿಣಾಮ ಏನು ಎನ್ನುವ ಬಗ್ಗೆ ವಿವರಣೆ ಇಲ್ಲಿದೆ ನೋಡಿ... 

ಸೀಟ್ ಬೆಲ್ಟ್

ಸೀಟ್ ಬೆಲ್ಟ್

ಗರ್ಭಿಣಿ ಕಾರ್ ಓಡಿಸುವಾಗ ಬೆಲ್ಟ್ ಧರಿಸುವುದು ಒಂದು ಬಗೆಯ ಕಿರಿಕಿರಿ ಎಂದು ಭಾವಿಸುತ್ತಾಳೆ. ಜೊತೆಗೆ ಅದರಿಂದ ಹೊಟ್ಟೆಗೆ ಬಿಗಿತ ಉಂಟಾಗುವುದು ಎಂದು ಭಾವಿಸುತ್ತಾಳೆ. ಆದರೆ ಆ ರೀತಿ ಬೆಲ್ಟ್ ಧರಿಸದೇ ಇದ್ದರೆ ಸಣ್ಣ ಅಪಘಾತದಲ್ಲೂ ಸಹ ಭ್ರೂಣ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕುರಿತು ವೈದ್ಯರಲ್ಲಿ ಸೂಕ್ತ ಸಲಹೆ ಪಡೆದುಕೊಳ್ಳಬೇಕು.

ಹೆಚ್ಚುವರಿ ಆಹಾರ ಸೇವನೆ

ಹೆಚ್ಚುವರಿ ಆಹಾರ ಸೇವನೆ

ಗುಣಮಟ್ಟದ ಪ್ರೋಟೀನ್ ಮತ್ತು ವಿಟಮಿನ್ ಒಳಗೊಂಡಿರುವ 300 ಹೆಚ್ಚುವರಿ ಕ್ಯಾಲೋರಿಗಳನ್ನು ತಿನ್ನಬೇಕು. ಆದರೆ ಕೆಲವರು ಎರಡು ಜೀವಕ್ಕೆ ಸಾಕಾಗುವಷ್ಟು ತಿನ್ನಬೇಕು ಎನ್ನುವ ಗುಂಗಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಹಾಗೂ ಪ್ರೋಟೀನ್ ರಹಿತವಾದ ಆಹಾರವನ್ನು ಸೇವಿಸುತ್ತಾರೆ. ಇದು ಅಧಿಕ ರಕ್ತದೊತ್ತಡ ಮತ್ತು ಗರ್ಭಧಾರಣೆಯ ಮಧುಮೇಹವನ್ನು ಉಂಟುಮಾಡುತ್ತದೆ.

ಬ್ರೇಕ್‍ಫಾಸ್ಟ್

ಬ್ರೇಕ್‍ಫಾಸ್ಟ್

ಕೆಲವರು ಮುಂಜಾನೆ ಒಂದು ಬಗೆಯ ಆಯಾಸ ಹಾಗೂ ಅನಾರೋಗ್ಯದ ಕಾರಣಕ್ಕೆ ಬೆಳಗಿನ ತಿಂಡಿಯನ್ನು ಸೇವಿಸುವುದಿಲ್ಲ. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಮೂರು ಹೊತ್ತಿನ ಊಟ ಹಾಗೂ ಎರಡು ಹೊತ್ತಿನ ತಿಂಡಿಯನ್ನು ಸೇವಿಸಬೇಕಾಗುವುದು.

ಔಷಧಗಳು

ಔಷಧಗಳು

ಕೆಲವರು ಗರ್ಭಾವಸ್ಥೆಯ ಸಮಯದಲ್ಲಿ ಮನಸ್ಸಿಗೆ ಬಂದ ಔಷಧವನ್ನು ಸ್ವೀಕರಿಸುವುದು ಅಥವಾ ಈ ಮೊದಲು ಇರುವ ಆರೋಗ್ಯ ಸಮಸ್ಯೆಗೆ ತೆಗೆದುಕೊಳ್ಳುತ್ತಿದ್ದ ಔಷಧಿಯ ಸೇವನೆಯನ್ನು ನಿಲ್ಲಿಸುತ್ತಾರೆ. ಗರ್ಭಾವಸ್ಥೆಗೆ ಕಾಲಿಟ್ಟ ಮೇಲೆ ವೈದ್ಯರ ಸಲಹೆ ಪಡೆದು ಔಷಧವನ್ನು ಸೇವಿಸಬೇಕು.

ಸಿ ವಿಭಾಗ

ಸಿ ವಿಭಾಗ

ಗರ್ಭಿಣಿಯರ ಸುರಕ್ಷತೆಗೆ ಬೇಕಾದ ಒಂದು ಆಯಾಮದಲ್ಲಿ ಸಿ ವಿಭಾಗದ ಸುರಕ್ಷತೆಯೂ ಒಂದು. ಹಾಗಾಗಿ ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಸಿ ವಿಭಾಗದ ತಪಾಸಣೆಯನ್ನು ಹೊಂದಬೇಕು.

ವ್ಯಾಯಾಮ

ವ್ಯಾಯಾಮ

ಗರ್ಭಾವಸ್ಥೆಯಲ್ಲಿ ಸರಳ ಹಾಗೂ ಸುಲಭವಾದ ಲಘು ವ್ಯಾಯಾಮದ ಅಗತ್ಯವಿರುತ್ತದೆ. ಹಾಗಾಗಿ ದೇಹದ ವ್ಯಾಯಾಮವನ್ನು ನಿರ್ಲಕ್ಷಿಸದೆ, ಸೂಕ್ತ ವ್ಯಾಯಾಮದ ಕುರಿತು ವೈದ್ಯರಲ್ಲಿ ಸಲಹೆ ಪಡೆದು ಮುಂದುವರಿಯಬೇಕು.

ಒತ್ತಡ

ಒತ್ತಡ

ಒತ್ತಡಕ್ಕೆ ಒಳಗಾದರೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಒತ್ತಡಕ್ಕೆ ಒಳಗಾದಾಗ ಮಗುವು ಪೌಷ್ಟಿಕಾಂಶವನ್ನು ಹೀರಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಇದು ಗರ್ಭಪಾತಕ್ಕೆ ಎಡೆಮಾಡಿಕೊಡುತ್ತದೆ.

English summary

Common Mistakes During Pregnancy

Handling pregnancy isn't an easy job especially if it is for the first time in your life. Actually, that is when you need the support of your spouse and family members. There are so many mistakes that people tend to make during pregnancy. Here are a few such mistakes which can be avoided.
Subscribe Newsletter