For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಬೆನ್ನು ನೋವು..ಇದಕ್ಕೆ ಪರಿಹಾರವೇನು?

By Hemanth
|

ಗರ್ಭಿಣೆ ಮಹಿಳೆಯರಲ್ಲಿ ಹಲವಾರು ರೀತಿಯ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುವುದರಿಂದ ಕೆಲವೊಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ದೇಹದ ಭಾರ ಹೆಚ್ಚಾಗುವ ಕಾರಣದಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಬೆನ್ನುನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆ ಆಗುವುದು ಕೂಡ ನೋವಿಗೆ ಪ್ರಮುಖ ಕಾರಣವಾಗಿದೆ.

ಗರ್ಭಿಣಿಯರೇ ನೆನಪಿಡಿ, ಆದಷ್ಟು ಮನೆಗೆಲಸಗಳಿಂದ ದೂರವಿರಿ!

ಹಾರ್ಮೋನುಗಳು ಅಸ್ಥಿರಜ್ಜು, ಸ್ನಾಯುಗಳು ಮತ್ತು ಭುಜಕ್ಕೆ ವಿರಾಮ ನೀಡುವುದು. ಇದರಿಂದ ದೇಹವು ಹಿಗ್ಗಿದಂತೆ ಆಗುವುದು. ಗರ್ಭದರಲ್ಲಿ ಮಗು ಬೆಳೆಯುತ್ತಿರುವ ಕಾರಣದಿಂದಾಗಿ ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ಬೆನ್ನುನೋವನ್ನು ಕಡಿಮೆ ಮಾಡಲು ಬೋಲ್ಡ್ ಸ್ಕೈ ಕೆಲವೊಂದು ಮನೆಮದ್ದನ್ನು ಹೇಳಿಕೊಡಲಿದೆ. ಇದನ್ನು ತಿಳಿದುಕೊಂಡು ಬಳಸಿ.....

ಒಂದು ಭಂಗಿಯನ್ನು ಅನುಸರಿಸಿ

ಒಂದು ಭಂಗಿಯನ್ನು ಅನುಸರಿಸಿ

ಗರ್ಭದಲ್ಲಿ ಮಗು ಬೆಳವಣಿಗೆಯಾಗುವ ಸಮಯದಲ್ಲಿ ಗುರುತ್ವಾಕರ್ಷಣೆ(ಮಗು ತಿರುಗುತ್ತಿರುವುದರಿಂದ) ಬದಲಾಗುತ್ತಾ ಇರುತ್ತದೆ. ಚಲನವಲನ ಮತ್ತು ಸ್ನಾಯುಗಳಲ್ಲಿ ಆಗಾಗ ಸಮಸ್ಯೆಯಾಗುವ ಕಾರಣದಿಂದ ಬೆನ್ನು ನೋವು ಕಾಣಿಸುತ್ತದೆ. ಇದರಿಂದ ಸರಿಯಾದ ಭಂಗಿ ಕಾಪಾಡಿಕೊಳ್ಳುವುದು ಅಗತ್ಯ. ನಡೆಯುವುದು ಮತ್ತು ನೇರವಾಗಿ ಕುಳಿತುಕೊಳ್ಳುವುದು, ಕಾಲುಗಳನ್ನು ಹಿಗ್ಗಿಸುವುದು, ಬಗ್ಗುವುದನ್ನು ಕಡೆಗಣಿಸಿದರೆ ಯಾವುದೇ ಒತ್ತಡ ಬೀಳುವುದಿಲ್ಲ ಮತ್ತು ಮೊಣಕೈಗೆ ಒತ್ತಡ ಬೀಳದೆ ಆರಾಮವಾಗಿರುವುದು. ಬೆನ್ನಿನ ಮೇಲೆ ಮಲಗುವುದನ್ನು ಕಡೆಗಣಿಸಿ. ಆದಷ್ಟು ಎರಡೂ ಬದಿಗೆ ಮಲಗಿಕೊಳ್ಳಿ.

ಮಸಾಜ್

ಮಸಾಜ್

ಸ್ವಲ್ಪ ಬಿಸಿ ಎಣ್ಣೆಗೆ ಲ್ಯೂಬ್ರಿಕೆಂಟ್ ಹಾಕಿಕೊಂಡು ಮಸಾಜ್ ಮಾಡಿದರೆ ಅದರಿಂದ ಸ್ನಾಯುಗಳು ತುಂಬಾ ಆರಾಮ ಪಡೆಯುವುದು. ಎಣ್ಣೆಯು ರಕ್ತ ಸಂಚಾರವನ್ನು ಉತ್ತಮಪಡಿಸುವ ಕಾರಣದಿಂದಾಗಿ ಸ್ನಾಯುಗಳ ಸೆಳೆತ ಮತ್ತು ಒತ್ತಡ ನಿವಾರಣೆ ಮಾಡುವುದು. ಹೆರಿಗೆಗೆ ತುಂಬಾ ಹತ್ತಿರವಾಗುವ ಸಮಯದಲ್ಲಿ ಹೆಚ್ಚು ಅತಿಯಾಗಿ ನಡೆಯಬೇಡಿ ಮತ್ತು ವ್ಯಾಯಾಮ ಮಾಡಬೇಡಿ. ಅಕ್ಯೂಪ್ರೆಷರ್ ಬಳಸಿಕೊಂಡು ಸ್ನಾಯುಗಳು ಆರಾಮವಾಗಿರುವಂತೆ ಮಾಡಿ.

ವ್ಯಾಯಮ

ವ್ಯಾಯಮ

ಗರ್ಭಧಾರಣೆಯ ಸಮಯದಲ್ಲಿ ವ್ಯಾಯಾಮವು ತುಂಬಾ ಸರಳ ಮತ್ತು ಆರಾಮವಾಗಿರುವಂತದ್ದಾಗಿರಬೇಕು. ನಡೆಯುವುದು ಮತ್ತು ಹಿಗ್ಗಿಸುವುದರಿಂದ ದೇಹದ ಕೆಳಭಾಗದ ಅರ್ಧದಷ್ಟು ಒತ್ತಡವನ್ನು ತಡೆಯಬಹುದು. ಅಸ್ಥಿರಜ್ಜುಗಳಿಗೆ ಹಚ್ಚಿನ ಒತ್ತಡ ಹಾಕಬೇಡಿ. ಈಜುವುದು ಈ ಸಮಯದಲ್ಲಿ ಒಳ್ಳೆಯ ವ್ಯಾಯಾಮವಾಗಿದೆ. ಯಾಕೆಂದರೆ ನೀರಿನಲ್ಲಿರುವಾಗ ದೇಹದ ಅರ್ಧ ಭಾರ ಕಡಿಮೆಯಾಗುವುದು. ಕೈ ಹಾಗೂ ಕಾಲುಗಳನ್ನು ಒಳ್ಳೆಯ ರೀತಿಯಿಂದ ಹಿಗ್ಗಿಸಬಹುದು.

ನೋವು ನಿವಾರಣೆಗೆ ಉಡುಗೆ

ನೋವು ನಿವಾರಣೆಗೆ ಉಡುಗೆ

ಗರ್ಭಧಾರಣೆ ಸಮಯದಲ್ಲಿ ಉಡುಗೆಯು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಆರಾಮದಾಯಕವಾಗಿರುವ ಹತ್ತಿ ಬಟ್ಟೆಯನ್ನು ಧರಿಸಿದರೆ ಅದರಿಂದ ಸ್ನಾಯುಗಳು ಕುಗ್ಗುವುದಿಲ್ಲ ಮತ್ತು ನೋವು ಉಂಟಾಗದು. ಬಿಗಿಯಾದ ಬಟ್ಟೆ ಧರಿಸಿದರೆ ಅದರಿಂದ ರಕ್ತ ಸಂಚಾರಕ್ಕೆ ತೊಂದರೆ ಆಗಬಹುದು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಹೈಹೀಲ್ಡ್ ನ ಶೂ ಅಥವಾ ಇತರ ಪಾದರಕ್ಷೆ ಧರಿಸುವುದರಿಂದ ಮಣಿಗಂಟಿನ ಸ್ನಾಯುಗಳ ಮೇಲೆ ಒತ್ತಡ ಬೀಳಬಹುದು ಮತ್ತು ಬೆನ್ನು ನೋವು ಕಾಣಿಸಬಹುದು. ಹೈಹೀಲ್ಡ್ ಇಲ್ಲದೆ ಇರುವ ಚಪ್ಪಲಿಗಳನ್ನು ಧರಿಸಿ. ಗರ್ಭಿಣಿಯರಿಗಾಗಿ ಸಿಗುವ ಬೆಲ್ಟ್ ಧರಿಸಿದರೂ ನೋವು ಕಡಿಮೆ ಮಾಡಬಹುದು.

ಇತರ ಸಲಹೆಗಳು

ಇತರ ಸಲಹೆಗಳು

ಮಲಗುವ ವೇಳೆ ತಲೆದಿಂಬು ಇಟ್ಟುಕೊಳ್ಳಿ. ಬೆನ್ನು ನೋವು ಇದ್ದರೆ ಬಿಸಿ ನೀರಿನ ಬ್ಯಾಗ್ ಅಥವಾ ಐಸ್ ಬ್ಯಾಗ್ ಬಳಸಿ. ಆದರೆ ಅದರ ಮೇಲೆ ಜೋತುಬೀಳಬೇಡಿ.

English summary

Back Pain During Pregnancy: Tips To Prevent & Cure

As the body bears the baby weight, pregnant women face a lot of body pain, the prominent one being back pain. The variation in pregnancy hormones are also a cause for the pain. Since the hormones relax the ligament, muscles and shoulders, the body tends to stretch, particularly the baby bump, putting all the stress on the lower back.
X
Desktop Bottom Promotion