For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ವಾಕರಿಕೆ ಸಮಸ್ಯೆ-ಇಲ್ಲಿದೆ ಸಿಂಪಲ್ ಟಿಪ್ಸ್

By Suma
|

ತಾಯಿಯಾಗುವ ಆ ಮಹತ್ತರ ಕ್ಷಣ ಸ್ತ್ರೀಯ ಬಾಳಿನಲ್ಲಿ ಹೇಗೆ ತಂಪನ್ನೆರೆಯುತ್ತದೋ ಅಂತೆಯೇ ಅವರಿಗೆ ದೈಹಿಕ ಬಳಲಿಕೆಯನ್ನು ಉಂಟುಮಾಡುತ್ತದೆ. ತಾಯಿಯಾಗುವಾಗ ಅನುಭವಿಸುವ ಕೆಲವೊಂದು ಸಮಸ್ಯೆಗಳು ಸ್ತ್ರೀಗೆ ಮಾತ್ರವೇ ಗೊತ್ತಿರುತ್ತದೆ ಮತ್ತು ಅದನ್ನು ಆಕೆ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿರುತ್ತಾಳೆ. ಬೆಳಗ್ಗೆಯಾದೊಡನೆ ತಲೆಸುತ್ತು ವಾಕರಿಕೆ ಸರ್ವೇ ಸಾಮಾನ್ಯವಾಗಿ ಕಂಡುಬಂದು ಆಹಾರವನ್ನು ನೋಡಿದಾಗಲೆಲ್ಲಾ ವಾಕರಿಗೆ ಬಂದಂತಾಗುತ್ತದೆ.

ಸಾಮಾನ್ಯವಾಗಿ ಬೆಳಗ್ಗಿನ ಅಸ್ವಸ್ಥತೆ ಎಂಬುದಾಗಿ ಇದನ್ನು ಕರೆಯಲಾಗಿದ್ದು, ಗರ್ಭಾವಸ್ಥೆಯ ನಾಲ್ಕನೆಯ ವಾರದಲ್ಲಿ ಇದು ಆರಂಭಗೊಳ್ಳುತ್ತದೆ ಹಾಗೂ 14 ನೆಯ ವಾರದವರೆಗೆ ಮುಂದುವರಿಯುತ್ತದೆ. ವೃತ್ತಿಪರರು ಹೇಳುವಂತೆ ವಿಶ್ವದಾದ್ಯಂತ 50% ದಷ್ಟು ಗರ್ಭಿಣಿ ಸ್ತ್ರೀಯರು ಬೆಳಗ್ಗಿನ ಅಸ್ವಸ್ಥತೆಗೆ ಒಳಗಾಗುತ್ತಾರೆ ಎಂದಿದ್ದಾರೆ. ಗರ್ಭಿಣಿಯರಿಗೆ ಕಾಡುವ ವಾಂತಿಯ ಸಮಸ್ಯೆ: ಫಲಪ್ರದ ಮನೆಮದ್ದು

ಹಾಗಿದ್ದರೆ ಈ ರೀತಿಯ ಅಸ್ವಸ್ಥತೆಯನ್ನು ಪರಿಹರಿಸಿಕೊಳ್ಳುವ ವಿಧಾನಗಳು ಮತ್ತು ಕ್ರಮಗಳೇ ಇಲ್ಲವೇ ಎಂಬುದಾಗಿ ನಿಮಗೆ ಆಲೋಚನೆಯಾಗಬಹುದು. ಆದರೆ ಇದಕ್ಕೆ ತಕ್ಕ ಪರಿಹಾರ ಕ್ರಮಗಳಿವೆ ಎಂಬುದನ್ನೇ ಈ ಕೆಳಗಿನ ಸ್ಲೈಡರ್‎ಗಳಲ್ಲಿ ತಿಳಿಸಲಿದ್ದೇವೆ..ಮುಂದೆ ಓದಿ...

ಸಲಹೆ #1

ಸಲಹೆ #1

ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ದಿನದಲ್ಲಿ 3-4 ಭೂರೀ ಭೋಜವನ್ನು ಸೇವಿಸುವುದರ ಬದಲಿಗೆ ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ. ಇದು ಆಮ್ಲತೆ ಸಮಸ್ಯೆಯನ್ನು ನಿವಾರಿಸಿ ವಾಕರಿಕೆಯನ್ನು ದೂರಮಾಡುತ್ತದೆ.

ಸಲಹೆ #2

ಸಲಹೆ #2

ಆಹಾರದ ಮೇಲಿನ ಬಯಕೆ ಈ ಸಮಯದಲ್ಲಿ ಸರ್ವೇ ಸಾಮಾನ್ಯವಾಗಿರುತ್ತದೆ. ನೀವು ಅದಕ್ಕಾಗಿ ತಿಂಡಿಪೋತರಾದಲ್ಲಿ ನಿಮ್ಮ ವಾಕರಿಕೆಯನ್ನು ಇದು ಹೆಚ್ಚಿಸುತ್ತದೆ. ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಆಹಾರ ಸೇವಿಸಿ.

ಸಲಹೆ #3

ಸಲಹೆ #3

ತಾಜಾ ಹಣ್ಣು, ಸಲಾಡ್, ಮೊಸರು ಇತರ ಆರೋಗ್ಯಯುತ ಆಹಾರಗಳನ್ನು ಸೇವಿಸಿ. ನಿಮ್ಮ ಹೊಟ್ಟೆಗೆ ಇದು ತಂಪನ್ನು ಉಂಟುಮಾಡುವಂತಿರಲಿ, ದೇಹ ಬಿಸಿಯಾದಂತೆ ಬೆಳಗ್ಗಿನ ಅಸ್ವಸ್ಥತೆ ಕೂಡ ಹೆಚ್ಚಿರುತ್ತದೆ.

ಸಲಹೆ #4

ಸಲಹೆ #4

ನೀವು ಮಲಗುವುದಕ್ಕೆ ಮುನ್ನ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಬಹುದಾಗಿದೆ ಅಂದರೆ ಮೊಸರು, ಮ್ಯುಸೀಲ್, ಮೊದಲಾದವನ್ನು ಸೇವಿಸಿ. ಇದು ವಾಕರಿಕೆಯನ್ನು ತಡೆಗಟ್ಟುವ ಔಷಧ ಎಂದೆನಿಸಿದೆ.

ಸಲಹೆ #5

ಸಲಹೆ #5

ಹಣ್ಣಿನ ರಸಗಳು ಬೆಳಗ್ಗಿನ ಅಸ್ವಸ್ಥತೆ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಕೊಠಡಿಯ ಹವಾಮಾನಕ್ಕಿಂತಲೂ ಅವುಗಳು ತಂಪಾಗಿರುವಂತೆ ನೋಡಿಕೊಳ್ಳಿ. ಇದಕ್ಕೆ ಎರಡು ಮೂರು ಐಸ್ ತುಂಡುಗಳನ್ನು ಹಾಕಿ ನಿಧಾನವಾಗಿ ಸೇವಿಸಬಹುದಾಗಿದೆ.

ಸಲಹೆ #6

ಸಲಹೆ #6

ಬೆಳಗ್ಗಿನ ವಾಕರಿಕೆಯನ್ನು ತಡೆಗಟ್ಟುವಲ್ಲಿ ಸಿಟ್ರಸ್ ಅಂಶಗಳನ್ನು ಹೊಂದಿರುವ ಕಿತ್ತಳೆ, ಮುಸಂಬಿ, ಲಿಂಬೆ ಮಹತ್ತರವಾದುದಾಗಿದೆ. ಇದು ಬೆಳಗ್ಗಿನ ಅಸ್ವಸ್ಥತೆಗೆ ಉತ್ತಮ ಮದ್ದಾಗಿದ್ದು ನಿಮ್ಮನ್ನು ನಿರಾಳವಾಗಿರಿಸುತ್ತದೆ.

ಸಲಹೆ #7

ಸಲಹೆ #7

ನಿಮಗೆ ವಾಕರಿಕೆ ಬಂದಾಗ ಪುದೀನಾ ಎಣ್ಣೆಯನ್ನು ಆಘ್ರಾಣಿಸಬಹುದಾಗಿದೆ, ಇದು ವಾಕರಿಕೆ ಅನುಭವವನ್ನು ಕಡಿಮೆ ಮಾಡಿ ಇದನ್ನು ದೀರ್ಘ ಸಮಯದವರೆಗೆ ತಡೆಯುತ್ತದೆ.

English summary

Simple Ways To Reduce Morning Sickness, Which Really Work!

Usually, morning sickness starts around the 4th week of pregnancy and eases away around the 14th week. Professionals say that more than 50% of the pregnant women, across the globe, experience morning sickness. So, here are a few best tips to reduce morning sickness, which actually work, take a look!
X
Desktop Bottom Promotion