For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಹೈಹೀಲ್ಡ್‌ ಧರಿಸುವುದು ಸುರಕ್ಷಿತವೇ?

By Manohar.v
|

ಗರ್ಭಿಣಿಯಾಗಿರುವಾಗ ಹೈ ಹೀಲ್ಡ್ ಧರಿಸುವ ಹಲವಾರು ಹೆಂಗಸರನ್ನು ನೀವು ನೋಡಿರಬಹುದು. ಒಬ್ಬ ಗರ್ಭಿಣಿ ಮಹಿಳೆ ಹೈ ಹೀಲ್ಡ್ ಅನ್ನು ಧರಿಸುವುದು ಮಗುವಿಗೆ ಕ್ಷೇಮಕರವೇ? ಕೆಲವು ತಿಂಗಳುಗಳ ಹಿಂದೆ ಬ್ರಿಟಿಷ್ ರಾಜಮನೆತನದ ಕೇಟ್ ಮಿಡ್ಲಿಟನ್ ಮತ್ತು ಹೌತೆ ಕಿಮ್ ಕರ್ದಿಶಿಯಾನ್ ಗರ್ಭಿಣಿಯಾಗಿದ್ದಂತಹ ಸಂದರ್ಭದಲ್ಲಿ ಹೈಹೀಲ್ಡ್ ಧರಿಸಿದನ್ನು ನೀವು ನೋಡಿರಬಹುದು.

ತಜ್ಞರ ಪ್ರಕಾರ, ಗರ್ಭಿಣಿ ಸ್ತ್ರೀಯರು ಹೈಹೀಲ್ಡ್ ಧರಿಸಬಾರದೆಂಬ ಯಾವುದೇ ವೈದ್ಯಕೀಯ ಕಾರಣಗಳಿಲ್ಲ. ಆದರೆ ಗರ್ಭಿಣಿಯರಿಗೆ ದಿನಗಳೆದಂತೆ ಹೈಹೀಲ್ಡ್ ಧರಿಸಿ ನಡೆಯುವುದು ಅಷ್ಟೊಂದು ಸುಲಭವಾಗಿರುವುದಿಲ್ಲ. ಗರ್ಭಾವಸ್ಥೆಯ ಎರಡನೆಯ ಮತ್ತು ಮೂರನೆಯ ತಿಂಗಳುಗಳಲ್ಲಿ ಸಾಮಾನ್ಯವಾಗಿ ಹೈ ಹೀಲ್ಡ್ ಧರಿಸಿ ನಡೆಯುವುದು ಆರಾಮದಾಯಕವಾಗಿರುವುದಿಲ್ಲ. ನಿಮ್ಮ ಪಾದಗಳಲ್ಲಿ ನೀರು ಉಂಟಾಗುವುದು ಪಾದ ಊತವಾಗುವುದು ಉಂಟಾಗಿಲ್ಲದಿದ್ದರೆ ಹೈಹೀಲ್ಡ್ ಧರಿಸುವುದರಿಂದ ಏನೂ ಸಮಸ್ಯೆಯಿಲ್ಲ ಎಂಬುದು ಕೆಲವು ಮಹಿಳೆಯರ ಇರಾದೆಯಾಗಿದೆ.

Wearing Heels During Pregnancy: Safe Or Not?

ಗರ್ಭಾವಸ್ಥೆಯ ಎರಡನೆಯ ತಿಂಗಳಲ್ಲಿ, ರಿಲಾಕ್ಸಿನ್ ಎಂದು ಕರೆಯಲಾಗುವ ಹಾರ್ಮೋನ್‌ಗಳ ಉತ್ಪತ್ತಿಯನ್ನು ಗರ್ಭಿಣಿ ಮಹಿಳೆಯ ದೇಹವು ಅಧಿಕಗೊಳಿಸುತ್ತದೆ. ಈ ಹಾರ್ಮೋನುಗಳು ಮೂಳೆನಾರುಗಳನ್ನು ಹಗುರಗೊಳಿಸುವುದರಿಂದ ನಿಮ್ಮ ಮಗು ನಿಮ್ಮ ಸೊಂಟದ ಮೂಲಕ ಸುಲಭವಾಗಿ ರವಾನೆಯಾಗುತ್ತದೆ, ಹಾಗೂ ಗರ್ಭಾವಸ್ಥೆಯ ಈ ಸಮಯದಲ್ಲಿ ನೀವು ಹೀಲ್ಡ್ ಧರಿಸುವುದರಿಂದ ತೀವ್ರವಾದ ಬೆನ್ನು ನೋವು ನಿಮ್ಮನ್ನು ಕಾಡುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ಹೀಲ್ಡ್ ಧರಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ಇಲ್ಲಿ ನೀಡಲಾಗಿದೆ:

ನೀವು ಗರ್ಭಿಣಿಯಾಗಿರುವಾಗ ಹೈ ಹೀಲ್ಡ್‌ಗಳನ್ನು ಧರಿಸುವುದು ನಿಮ್ಮ ಸ್ನಾಯುಗಳನ್ನು ಬಿಗಿಗೊಳಿಸಿ ನಿಮ್ಮ ಕಾಲುಗಳಲ್ಲಿ ಅಸಹನೀಯ ಸೆಳೆತವನ್ನುಂಟು ಮಾಡುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ಹೈ ಹೀಲ್ಡ್ ಧರಿಸುವುದರಿಂದ ಉಂಟಾಗುವ ಇನ್ನೊಂದು ಸಮಸ್ಯೆಯೆಂದರೆ ಹೆರಿಗೆಯ ನಂತರ ನಿಮ್ಮ ಹಿಂಭಾಗವು ಹೆಚ್ಚು ಅಂಟಿಕೊಂಡಂತೆ ಕಾಣುತ್ತದೆ. ನಿಮ್ಮ ಗರ್ಭದಲ್ಲಿರುವ ಮಗುವಿನ ತೂಕದಿಂದಾಗಿ ನಿಮ್ಮ ಹಿಂಭಾಗದ ಮೂಳೆಗಳು ಮೇಲಕ್ಕೆ ದೂಡಲ್ಪಡುತ್ತವೆ. ನಿರಂತರವಾಗಿ ಹೈ ಹೀಲ್ಡ್‌ಗಳನ್ನು ಧರಿಸುವುದರಿಂದ, ನಿಮ್ಮ ಕಾಲುಗಳು ನಿಮ್ಮ ದೇಹವನ್ನು ಮೇಲಕ್ಕೆ ದೂಡುವುದರಿಂದ ನಿಮ್ಮ ಹಿಂಭಾಗವು ಹೆರಿಗೆಯ ನಂತರ ದೊಡ್ಡದಾಗುತ್ತದೆ.

ಇದು ಗರ್ಭಿಣಿ ಸ್ತ್ರೀಯರ ದೇಹಸ್ಥಿತಿಯ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಹೈ ಹೀಲ್ಡ್‌ಗಳನ್ನು ಧರಿಸುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೊಂಟವು ಮುಂದಕ್ಕೆ ಚಾಚಿಕೊಳ್ಳುವುದರಿಂದ ಬೆನ್ನಿನಲ್ಲಿ ಉಂಟಾಗುವ ಬಾಗುವಿಕೆಯು ಗರ್ಭಿಣಿ ಸ್ತ್ರೀಯರಿಗೆ ನಡೆಯಲು ಕಷ್ಟಸಾಧ್ಯವಾಗುವಂತೆ ದೇಹಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

ಈ ಕೆಲವು ತೊಂದರೆಗಳು ಗರ್ಭಾವಸ್ಥೆಯ ಸಂದರ್ಭದಲ್ಲಿ ಹೈಹೀಲ್ಡ್‌ಗಳನ್ನು ಧರಿಸುವುದರಿಂದ ಉಂಟಾಗುವುದಾಗಿದೆ. ಈ ಸಮಸ್ಯೆಗಳನ್ನು ನಿವಾರಿಸಲು, ಗರ್ಭಿಣಿಯರು ಹೈ ಹೀಲ್ಡ್‌ಗಳನ್ನು ಮಗುವಿನ ಹೆರಿಗೆಯಾಗುವವರೆಗೆ ಧರಿಸದಿರುವುದು ಉತ್ತಮ.

English summary

Wearing Heels During Pregnancy: Safe Or Not?

You might have seen a lot of women who wear high heels during pregnancy. But is it safe for the growing foetus if the mother wears high heels while she is pregnant?
Story first published: Thursday, January 9, 2014, 13:45 [IST]
X
Desktop Bottom Promotion