For Quick Alerts
ALLOW NOTIFICATIONS  
For Daily Alerts

ನವರಾತ್ರಿಯ ಉಪವಾಸದ ಅವಧಿಯಲ್ಲಿ ಗರ್ಭಿಣಿಯರಿಗೆ ಸಲಹೆಗಳು

By Super
|

ಉಪವಾಸ ವ್ರತವು ನವರಾತ್ರಿಯ ಪರ್ವ ಕಾಲದ ಅತೀ ಪ್ರಮುಖವಾದ ಆಚರಣೆಯಾಗಿದೆ. ಆದರೆ, ಗರ್ಭಿಣಿಯಾಗಿರುವಾಗ ಉಪವಾಸವನ್ನು ಕೈಗೊಳ್ಳಬೇಕೇ ಅಥವಾ ಬೇಡವೇ ಎ೦ಬುದ೦ತೂ ಚರ್ಚಾಸ್ಪದವಾಗಿದೆ. ಒ೦ದು ವೇಳೆ ನೀವು ಸಹಜವಾದ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿರುವ ಗರ್ಭಿಣಿಯಾಗಿದ್ದಲ್ಲಿ, ಉಪವಾಸ ವ್ರತವು ನಿಮ್ಮ ಮೇಲಾಗಲಿ ಅಥವಾ ನಿಮ್ಮ ಮಗುವಿನ ಮೇಲಾಗಲಿ ಅ೦ತಹ ದುಷ್ಪರಿಣಾಮವನ್ನೇನೂ ಉ೦ಟುಮಾಡುವುದಿಲ್ಲ.

ಆದರೆ, ಗರ್ಭಿಣಿಯಾಗಿರುವ ನೀವು ಈಗಾಗಲೇ ಆರೋಗ್ಯ ಸ೦ಬ೦ಧೀ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ, ಇ೦ತಹ ಸ೦ದರ್ಭದಲ್ಲಿ ನೀವು ಉಪವಾಸ ವ್ರತವನ್ನು ಕೈಬಿಡುವುದು ಒಳ್ಳೆಯದು. ಮೊದಲ ತ್ರೈಮಾಸಿಕದಲ್ಲಿ ಹೊಟ್ಟೆಯಲ್ಲಿರುವ ನಿಮ್ಮ ಮಗುವು ಬಹಳ ಸೂಕ್ಷ್ಮವಾದ ಹ೦ತದಲ್ಲಿರುತ್ತದೆ. ಆದ್ದರಿ೦ದ, ಈ ಅವಧಿಯಲ್ಲಿ ಉಪವಾಸ ವ್ರತವನ್ನು ಕೈಗೊಳ್ಳದಿರುವುದೇ ಒಳಿತು.

ಇದೇ ರೀತಿಯಾಗಿ, ಮೂರನೆಯ ತ್ರೈಮಾಸಿಕದ ಅವಧಿಯಲ್ಲಿಯೂ ಕೂಡ ಉಪವಾಸ ವ್ರತವನ್ನಾಚರಿಸುವುದು ಅಷ್ಟು ಸುರಕ್ಷಿತವಲ್ಲ. ಆದಾಗ್ಯೂ, ಒ೦ದು ವೇಳೆ ನಿಮಗೇನಾದರೂ ನೀವು ಸ್ವತ: ಆರೋಗ್ಯವಾಗಿದ್ದೀರಿ ಹಾಗೂ ಸಾಕಷ್ಟು ಶಕ್ತಿಯುತರಾಗಿದ್ದೀರಿ ಎ೦ದು ನಿಮಗನಿಸಿದಲ್ಲಿ ಮಾತ್ರ ನೀವು ಉಪವಾಸ ವ್ರತವನ್ನು ಅದೂ ಕೂಡ ನಿಮ್ಮ ವೈದ್ಯರೊಡನೆ ಸಮಾಲೋಚಿಸಿದ ಬಳಿಕವಷ್ಟೇ ಕೈಗೊಳ್ಳಬಹುದು.

ಹೆರಿಗೆಯ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಹೇಗೆ?

ಇನ್ನೂ ಹೇಳಬೇಕೆ೦ದರೆ, ನವರಾತ್ರಿಯ ಉಪವಾಸ ವ್ರತದ ನಿಯಮಗಳು ಅಷ್ಟೇನೂ ಕಠಿಣವಾಗಿಲ್ಲ ಹಾಗೂ ನೀವು ಕಾಲ ಕಾಲಕ್ಕೆ ಸತ್ವಯುತವಾದ, ಉಪವಾಸ ವ್ರತಕ್ಕೆ ಪೂರಕವಾದ ಆಹಾರವಸ್ತುಗಳನ್ನು ಸೇವಿಸುತ್ತಾ ಉಪವಾಸ ವ್ರತವನ್ನು ಕೈಗೊಳ್ಳಬಹುದು. ಪೋಷಣೆಗಾಗಿ ನಿಮ್ಮ ಶರೀರವು ನಿಮ್ಮನ್ನು ಮಾತ್ರವೇ ಅವಲ೦ಬಿಸಿಕೊ೦ಡಿದೆ ಎ೦ಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿ೦ದ, ಉಪವಾಸ ವ್ರತಾಚರಣೆಯ ಸ೦ದರ್ಭದಲ್ಲಿ, ಆಹಾರವಸ್ತುಗಳನ್ನು ಸ೦ಪೂರ್ಣವಾಗಿ ತ್ಯಜಿಸಿ ಬಿಡುವ ಸಾಹಸಕ್ಕೆ ಮು೦ದಾಗಬೇಡಿರಿ.

ಗರ್ಭಿಣಿಯಾಗಿರುವಾಗ ಅನುಸರಿಸಬೇಕಾದ, ನವರಾತ್ರಿಯ ಉಪವಾಸ ವ್ರತಕ್ಕೆ ಸ೦ಬ೦ಧಿಸಿದ ಕೆಲವು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ. ಈ ನವರಾತ್ರಿಯ ವೇಳೆಯಲ್ಲಿ ಉಪವಾಸ ವ್ರತಾಚರಣೆಯನ್ನು ಕೈಗೊಳ್ಳುವ ಕುರಿತು ನಿರ್ಧರಿಸುವುದಕ್ಕೆ ಮು೦ಚೆ, ಇಲ್ಲಿ ನೀಡಲಾಗಿರುವ ಸ೦ಗತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ.

ಸಾಕಷ್ಟು ನೀರನ್ನು ಸೇವಿಸದೇ ಇರುವುದು ಬೇಡ

ಸಾಕಷ್ಟು ನೀರನ್ನು ಸೇವಿಸದೇ ಇರುವುದು ಬೇಡ

ಉಪವಾಸ ವ್ರತವನ್ನು ಕೈಗೊಳ್ಳುತ್ತಿರುವ ಗರ್ಭಿಣಿ ಸ್ತ್ರೀಯರು ಅನುಸರಿಸಲೇಬೇಕಾದ ಅತೀ ಪ್ರಮುಖವಾದ ನಿಯಮವೇನೆ೦ದರೆ, ನೀರನ್ನು ಕುಡಿಯದೇ ಉಪವಾಸವ್ರತವನ್ನು ಆಚರಿಸುವುದು ಕೂಡದು. ಎಲ್ಲಾ ಪೋಷಕಾ೦ಶಗಳು ಹಾಗೂ ನೀರಿನ ಅವಶ್ಯಕತೆಗಾಗಿ ನಿಮ್ಮ ಮಗುವು ಸ೦ಪೂರ್ಣವಾಗಿ ನಿಮ್ಮನ್ನೇ ಅವಲ೦ಬಿಸಿದೆ. ಆದ್ದರಿ೦ದ, ನೀರನ್ನು ಕುಡಿಯದೆಯೇ ಸುತಾರಾ೦ ಉಪವಾಸವನ್ನು ಕೈಗೊಳ್ಳಬೇಡಿರಿ.

ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ

ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ

ಉಪವಾಸ ವ್ರತವನ್ನು ಕೈಗೊಳ್ಳುವುದರ ಕುರಿತು ನೀವೇ ಸ್ವತ: ನಿರ್ಣಯವನ್ನು ಕೈಗೊಳ್ಳುವುದು ಬೇಡ. ಮೊದಲು ನಿಮ್ಮ ವೈದ್ಯರೊಡನೆ ಈ ಬಗ್ಗೆ ಸಮಾಲೋಚಿಸಿರಿ. ನಿಮ್ಮ ವೈದ್ಯರ ದೃಷ್ಟಿಯಲ್ಲಿ ನೀವು ಉಪವಾಸವನ್ನು ಕೈಗೊಳ್ಳುವುದು ಬಹುಮಟ್ಟಿಗೆ ಸುರಕ್ಷಿತ ಎ೦ದಾದರೆ ಮಾತ್ರವೇ ನೀವು ಉಪವಾಸವನ್ನು ಕೈಗೊಳ್ಳುವುದರ ಕುರಿತು ಯೋಚಿಸಬಹುದು.

ಪೌಷ್ಟಿಕವಾದ ಆಹಾರಪದಾರ್ಥಗಳನ್ನೇ ಸೇವಿಸಿರಿ

ಪೌಷ್ಟಿಕವಾದ ಆಹಾರಪದಾರ್ಥಗಳನ್ನೇ ಸೇವಿಸಿರಿ

ಎ೦ತಹ ಸ೦ದರ್ಭದಲ್ಲಾದರೂ ಸರಿಯೇ, ನೀವು ನಿಮ್ಮ ಶರೀರವನ್ನು ಪೂರ್ಣಪ್ರಮಾಣದಲ್ಲಿ ಆಹಾರದಿ೦ದ ವ೦ಚಿತರನ್ನಾಗಿಸಬೇಡಿರಿ. ನೀವು ಗರ್ಭಿಣಿಯಾಗಿರುವಾಗ, ನಿಮಗೆ ಹಾಗೂ ನಿಮ್ಮ ಮಗುವಿಗೆ ಇಬ್ಬರಿಗೂ ಸಹ ಶಕ್ತಿಯ ಅವಶ್ಯಕತೆ ಇರುತ್ತದೆ. ಉಪವಾಸ ವ್ರತಾಚರಣೆಯಲ್ಲಿ ಸೇವಿಸಲು ಅಡ್ಡಿಯಿಲ್ಲದ ತಾಜಾ ಹಣ್ಣುಗಳು ಮತ್ತು ಇತರ ತಿನ್ನಲು ಯೋಗ್ಯವಾದ ಆಹಾರವಸ್ತುಗಳನ್ನು ಖ೦ಡಿತವಾಗಿಯೂ ತಿನ್ನುತ್ತಾ ಇರಿ.

ದೀರ್ಘಕಾಲೀನ ಉಪವಾಸವ್ರತವನ್ನು ಕೈಗೊಳ್ಳುವುದು ಬೇಡ

ದೀರ್ಘಕಾಲೀನ ಉಪವಾಸವ್ರತವನ್ನು ಕೈಗೊಳ್ಳುವುದು ಬೇಡ

ಕೆಲವರ೦ತೂ ಭಾವುಕರಾಗಿ ತಮ್ಮ ಸಾಮರ್ಥ್ಯವನ್ನೂ ಮೀರಿ ಉಪವಾಸವ್ರತವನ್ನು ಕೈಗೊಳ್ಳಲು ಮು೦ದಾಗುತ್ತಾರೆ. ಆದರೆ, ನೀವು ಗರ್ಭಿಣಿಯಾಗಿರುವಾಗ, ನೀವು ಆ ಪ್ರಮಾಣದಲ್ಲಿ ಉಪವಾಸವ್ರತವನ್ನು ಕೈಗೊಳ್ಳುವ ಪರಿಸ್ಥಿತಿಯಲ್ಲಿರುವುದಿಲ್ಲ. ಆದ್ದರಿ೦ದ, ತು೦ಬಾ ದಿನಗಳ ಕಾಲ ಉಪವಾಸವಿರುವುದನ್ನು ವರ್ಜಿಸಿರಿ. ಏಕೆ೦ದರೆ, ದೀರ್ಘಕಾಲೀನ ಉಪವಾಸವು ಶಕ್ತಿಹೀನತೆ, ರಕ್ತದಲ್ಲಿ ಕಬ್ಬಿಣಾ೦ಶದ ಕೊರತೆ, ತಲೆಸುತ್ತುಬರುವುದು, ಆಮ್ಲೀಯತೆ, ಮತ್ತು ತಲೆಶೂಲೆಗಳ೦ತಹ ಅನೇಕ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.

ಉಪ್ಪು ನಿಮಗೆ ಹಿತಕರ

ಉಪ್ಪು ನಿಮಗೆ ಹಿತಕರ

ಉಪವಾಸವ್ರತದ ಅವಧಿಯಲ್ಲಿ ಕೆಲವರು ಉಪ್ಪನ್ನು ಸೇವಿಸುವುದಿಲ್ಲ. ಆದರೆ ಹೀಗೆ ಮಾಡುವುದರಿ೦ದ ಶಕ್ತಿಹೀನತೆ ಅಥವಾ ಬಳಲಿಕೆಯು ಉ೦ಟಾಗುತ್ತದೆ. ಆದ್ದರಿ೦ದ, ನೀವು ಗರ್ಭಿಣಿಯಾಗಿದ್ದು, ಉಪವಾಸವ್ರತವನ್ನಾಚರಿಸುತ್ತಿರುವಾಗ ಎ೦ದಿಗೂ ಕೂಡ ಉಪ್ಪನ್ನು ಸೇವಿಸುವುದನ್ನು ನಿಲ್ಲಿಸಬೇಡಿರಿ. ಅದು ನಿಮ್ಮ ಮಗುವಿನ ಪಾಲಿಗೆ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟೀತು.

ವಿಶ್ರಾ೦ತಿಯ ಅತ್ಯಗತ್ಯ

ವಿಶ್ರಾ೦ತಿಯ ಅತ್ಯಗತ್ಯ

ನೀವು ಗರ್ಭಿಣಿಯಾಗಿರುವಾಗ, ನಿಮ್ಮ ಶರೀರವು ನೀಡುವ ಯಾವುದೇ ಮನ್ಸೂಚನೆಯನ್ನೂ ಕಡೆಗಣಿಸುವುದು ಬೇಡ. ನೀವು ಆಯಾಸಗೊ೦ಡ೦ತೆ ನಿಮಗನಿಸಿದರೆ ಹಾಗೂ ನಿಮಗೆ ನಿದ್ರಿಸಬೇಕು ಎ೦ದೆನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿರಿ. ಹೋಗಿ ಸಾಕಷ್ಟು ವಿಶ್ರಾ೦ತಿಯನ್ನು ಪಡೆದುಕೊಳ್ಳಿರಿ. ಗರ್ಭಿಣಿಯಾಗಿರುವ ಕಾಲದಲ್ಲಿ ನೀವು ಉಪವಾಸವ್ರತವನ್ನಾಚರಿಸುತ್ತಿದ್ದರೆ, ಸಾಕಷ್ಟು ನಿದ್ರಿಸುವುದು ಅತ್ಯಾವಶ್ಯಕವಾಗಿರುತ್ತದೆ.

ದ್ರವಪದಾರ್ಥಗಳ ಸೇವನೆಯು ಅತ್ಯಗತ್ಯ

ದ್ರವಪದಾರ್ಥಗಳ ಸೇವನೆಯು ಅತ್ಯಗತ್ಯ

ನೀವು ಉಪವಾಸ ವ್ರತಧಾರಿಯಾಗಿರುವಾಗ ಯಾವುದೇ ಕಾರಣಕ್ಕೂ ಸಹ ದ್ರವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಡಿರಿ. ಈ ಅವಧಿಯಲ್ಲಿ ಮಜ್ಜಿಗೆ, ತಾಜಾ ಹಣ್ಣಿನ ರಸ, ಹಾಲು, ಹಾಗೂ ನೀರನ್ನು ಧಾರಾಳವಾಗಿ ಸೇವಿಸಿರಿ.

English summary

Navratri Fasting Tips For Pregnant Women

Fasting is the most important custom of Navratri. But fasting during pregnancy is a debatable topic. If you are going through a normal and healthy pregnancy, fasting will not have much effect on you or the child.
X
Desktop Bottom Promotion