For Quick Alerts
ALLOW NOTIFICATIONS  
For Daily Alerts

6 ತಿಂಗಳ ಗರ್ಭಾವಸ್ಥೆ: ದೇಹದ ಬದಲಾವಣೆ

By Super
|

ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ, ನಿಮ್ಮ ಕುಟುಂಬದ ನೂತನ ಸದಸ್ಯನಾಗಲಿರುವ ಮಗುವಿನ ಬಗ್ಗೆ ನೀವು ಬಹಳಷ್ಟು ಆಶಾಗೋಪುರಗಳನ್ನು ಮತ್ತು ಕನಸುಗಳನ್ನು ಕಟ್ಟಿ ಕೊಂಡಿರುತ್ತೀರಿ. ಆದರೂ ಈ ಸಮಯದಲ್ಲಿ ನೀವು ನಿಮ್ಮ ಗರ್ಭಾವಸ್ಥೆಯ ಸ್ಥಿತಿ- ಗತಿಯ ಬಗ್ಗೆ ಅರಿವು ಇಟ್ಟು ಕೊಂಡಿರಬೇಕಾದುದು ಅನಿವಾರ್ಯ. ನಿಮ್ಮ ಗರ್ಭಾವಸ್ಥೆಯ ಎರಡನೆ ತ್ರೈಮಾಸಿಕ ಅವಧಿಯು ಮುಗಿದ ನಂತರದ ಅವಧಿಯಲ್ಲಿ ತಾಯಿ ಮತ್ತು ಮಗುವಿನ ದೇಹದಲ್ಲಿ ಗಣನೀಯವಾದ ಬದಲಾವಣೆಗಳು ಕಂಡು ಬರುತ್ತವೆ.

ಈ ಅವಧಿಯಲ್ಲಿ ನಿಮ್ಮ ಮಗುವು ಕಳೆದ ವಾರಕ್ಕಿಂತ ನಾಲ್ಕು ಔನ್ಸ್ ನಷ್ಟು ಹೆಚ್ಚಿನ ತೂಕವನ್ನು ಗಳಿಸಿದೆಯೇ? ಎಂಬ ಅಂಶವನ್ನು ನೀವು ದೃಢೀಕರಿಸಿಕೊಳ್ಳಬೇಕು. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಮಗುವು ತನ್ನ ತೂಕವನ್ನು ಪಡೆದುಕೊಳ್ಳುತ್ತದೆ. ಇದರ ಜೊತೆಗೆ ನಿಮ್ಮ ಮಗುವಿನ ಮೆದುಳು ಮತ್ತು ರುಚಿ ಗ್ರಂಥಿಗಳು ಸಹ ಬೆಳವಣಿಗೆಯಾಗುತ್ತವೆ. ಆರು ತಿಂಗಳು ಗರ್ಭಾವಸ್ಥೆಯು ನಿಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಕೊಡುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಗರ್ಭಾಶಯವು, ನಿಮ್ಮ ಹೊಟ್ಟೆಯ ಭಾಗದಲ್ಲಿ ಊದಿಕೊಂಡಂತೆ ಕಾಣುತ್ತದೆ. ಈ ಗರ್ಭಾಶಯವು ಅಂದಾಜು ನಿಮ್ಮ ಹೊಟ್ಟೆಯಷ್ಟೇ ಗಾತ್ರವಿರುತ್ತದೆ. ಇದೇ ಸಂದರ್ಭದಲ್ಲಿ ನಿಮ್ಮನ್ನು ಗರ್ಭಾಧಾರಣೆಯ ಅವಧಿಯ ಮಧುಮೇಹ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದೊಮ್ಮೆ ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ, ಪ್ರಸವದ ಸಂದರ್ಭದಲ್ಲಿ ತೊಂದರೆಯನ್ನು ಎದುರಿಸಬೇಕಾದೀತು.

ಕೊನೆಯ ಮಾತು; ನಿಮಗೆ ಗರ್ಭಧಾರಣೆಯ ಅವಧಿಯಲ್ಲಿ ಕಂಡು ಬರುವ ಪೂರ್ವಭಾವಿ ಹೊಟ್ಟೆ ನೋವಿನ ಕುರಿತು ತಿಳಿದಿಲ್ಲವಾದರೆ, ಗರ್ಭಧಾರಣೆಯ ಆರು ತಿಂಗಳ ಅವಧಿಯು ಅದರ ಕುರಿತಾಗಿ ತಿಳಿದುಕೊಳ್ಳಲು ಒಳ್ಳೆಯ ಸಮಯವಾಗಿರುತ್ತದೆ. ಇದರ ಜೊತೆಗೆ ನೀವು ಇನ್ನೂ ಕೆಲವಾರು ವಿಷಯಗಳನ್ನು ಈ ಅವಧಿಯಲ್ಲಿ ತಿಳಿದುಕೊಳ್ಳಬೇಕು. ಅದಕ್ಕಾಗಿ ನಾವು ಇಲ್ಲಿ ಕೆಲವೊಂದು ವಿಚಾರಗಳನ್ನು ಪಟ್ಟಿ ಮಾಡಿದ್ದೇವೆ ಓದಿಕೊಳ್ಳಿ.

1. ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ಏನಾಗುತ್ತಿದೆ?

1. ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೆ ಏನಾಗುತ್ತಿದೆ?

ಆರು ತಿಂಗಳ ಗರ್ಭಧಾರಣೆಯ ಅವಧಿಯಲ್ಲಿ ನಿಮ್ಮ ಮಗುವಿನ ಸ್ನಾಯುಗಳು ಬೆಳವಣಿಗೆಯಾಗುತ್ತವೆ. ಹೀಗಾಗಿ ಮಗು ನಿಮ್ಮ ಹೊಟ್ಟೆಯಲ್ಲಿ ತೀವ್ರತರವಾಗಿ ಓಡಾಡುತ್ತಿರುತ್ತದೆ. ಮಗು ಶಕ್ತಿ ಶಾಲಿಯಾಗಿ ಬೆಳೆಯಲು ಇದು ತೀರಾ ಅವಶ್ಯಕ. ಈ ಅವಧಿಯಲ್ಲಿ ನಿಮ್ಮ ಮಗುವು 14 ಔನ್ಸ್ ನಿಂದ 3 ಪೌಂಡ್‍ನಷ್ಟು ತೂಕವನ್ನು ಹೊಂದಿರುತ್ತದೆ ಮತ್ತು 11- 16 ಇಂಚಿನಷ್ಟು ಉದ್ದ ಸಹ ಬೆಳೆದಿರುತ್ತದೆ.

2. ನಿಮ್ಮಲ್ಲಿ ಕಂಡು ಬರುವ ಬದಲಾವಣೆಗಳು

2. ನಿಮ್ಮಲ್ಲಿ ಕಂಡು ಬರುವ ಬದಲಾವಣೆಗಳು

ಗರ್ಭಧಾರಣೆಯ ಆರು ತಿಂಗಳ ಅವಧಿಯಲ್ಲಿ ನಿಮ್ಮ ದೇಹದಲ್ಲಿ ಗುರುತರವಾದ ಬದಲಾವಣೆಗಳು ಕಂಡು ಬರುತ್ತವೆ. ಅದನ್ನು ನೀವು ಗಮನಿಸಬಹುದು ಮತ್ತು ಅದರ ಕುರಿತಾಗಿ ಗಮನ ನೀಡಬೇಕಾದುದು, ತೀರಾ ಅನಿವಾರ್ಯ ಎಂಬುದನ್ನು ಮರೆಯಬಾರದು. ಈ ಅವಧಿಯಲ್ಲಿ ನಿಮಗೆ ಮಲಬದ್ಧತೆ, ಊತ, ಎದೆ ಉರಿ, ಅಜೀರ್ಣ, ತಲೆ ನೋವು, ಮೂಗು ಕಟ್ಟುವಿಕೆ ಮುಂತಾದ ಸಮಸ್ಯೆಗಳು ಎದುರಾಗಬಹುದು. ತಾಯಿಯಾಗುವ ಪ್ರತಿ ಹೆಣ್ಣಿಗು ಈ ಸಮಸ್ಯೆಗಳು ಈ ಅವಧಿಯಲ್ಲಿ ಕಂಡು ಬರುವುದು ಸಾಮಾನ್ಯ ಎಂಬುದನ್ನು ಮರೆಯಬೇಡಿ.

3. ನಿಮ್ಮ ಆರೋಗ್ಯ ಮತ್ತು ಪೋಷಕಾಂಶದ ಕುರಿತು ಕಾಳಜಿವಹಿಸಿ.

3. ನಿಮ್ಮ ಆರೋಗ್ಯ ಮತ್ತು ಪೋಷಕಾಂಶದ ಕುರಿತು ಕಾಳಜಿವಹಿಸಿ.

ಆರು ತಿಂಗಳ ಗರ್ಭಾವಧಿಯಲ್ಲಿ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಗಳು ಕಂಡು ಬರುವುದಿಲ್ಲ. ಒಟ್ಟಾರೆ ನಿಮ್ಮ ಆರೋಗ್ಯದಲ್ಲಿ ಕೆಲವು ಏರು ಪೇರುಗಳು ಕಂಡುಬರುತ್ತವೆ. ಹಾಗಾಗಿ ಈ ಅವಧಿಗೆ ಸರಿ ಹೊಂದುವಂತೆ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸಿ. ಅಗತ್ಯವಿರುವ ಪೋಷಕಾಂಶಗಳನ್ನು ತಪ್ಪದೆ ಸೇವಿಸಿ. ಈ ಅವಧಿಯಲ್ಲಿ ನಿಮ್ಮ ದೇಹವು ನಿಮ್ಮಿಂದ ಹೆಚ್ಚಿನ ಕಾಳಜಿಯನ್ನು ಬಯಸುತ್ತದೆ ಎಂಬುದನ್ನು ಮರೆಯದಿರಿ. ಇದರ ಜೊತೆಗೆ ಈ ಅವಧಿಯಲ್ಲಿ ನಿಮ್ಮಲ್ಲಿನ ಹಾರ್ಮೋನುಗಳು ಸ್ವಲ್ಪ ಆಟವಾಡುತ್ತವೆ. ಇದರಿಂದಾಗಿ ನೀವು ಸಹ ಸೋಜಿಗಗೊಳ್ಳುವಂತಹ ಕೆಲವು ಪ್ರಸಂಗಗಳು ಎದುರಾಗಬಹುದು.

4. ಸಂಬಂಧ

4. ಸಂಬಂಧ

ಗರ್ಭಧಾರಣೆಯ ಅವಧಿಯು ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುತ್ತದೆ. ಇದಕ್ಕೆ ನಿಮ್ಮ ಸಂಬಂಧವು ಸಹ ಹೊರತಾಗಿಲ್ಲ. ಕೆಲವೊಮ್ಮೆ ಈ ಸಮಯದಲ್ಲಿ ಉಂಟಾಗುವ ವಿಪರೀತವಾದ ದೈಹಿಕ ಮತ್ತು ಭಾವನಾತ್ಮಕವಾದ ಬದಲಾವಣೆಗಳಿಂದಾಗಿ ಸಂಬಂಧದಲ್ಲಿ ಸ್ವಲ್ಪ ಒಡಕುಗಳು ಉಂಟಾಗಬಹುದು ಎಚ್ಚರವಿರಲಿ. ಏನೇ ಆದರು ಇಬ್ಬರು ಅನುಸರಿಸಿಕೊಂಡು ಹೋಗಿ, ಎಷ್ಟಾದರು ಮುಂದೆ ಕೆಲವೆ ತಿಂಗಳುಗಳಲ್ಲಿ ನಿಮ್ಮಿಬ್ಬರ ಪ್ರೀತಿಯ ಫಲ ಮಗುವಿನ ರೂಪದಲ್ಲಿ ಕಣ್ಣ ಮುಂದೆ ಬರುತ್ತದೆ.

5. ಅವಧಿ ಪೂರ್ವ ಹೊಟ್ಟೆ ನೋವಿನ ಚಿಹ್ನೆಗಳನ್ನು ಗುರುತಿಸಲು ಕಲಿಯಿರಿ.

5. ಅವಧಿ ಪೂರ್ವ ಹೊಟ್ಟೆ ನೋವಿನ ಚಿಹ್ನೆಗಳನ್ನು ಗುರುತಿಸಲು ಕಲಿಯಿರಿ.

ಆರು ತಿಂಗಳ ಗರ್ಭಾವಧಿಯಲ್ಲಿ ಕಂಡು ಬರುವ ಒಂದು ರೀತಿಯ ಹೊಟ್ಟೆ ನೋವನ್ನು ಮತ್ತು ಅದರ ಚಿಹ್ನೆಗಳನ್ನು ತಿಳಿದುಕೊಂಡಿರಬೇಕಾದುದು ಅನಿವಾರ್ಯ. ಇದರ ಜೊತೆಗೆ ಯೋನಿಯಲ್ಲಿ ರಕ್ತ ಸ್ರಾವ ಅಥವಾ ರಕ್ತದ ಕಲೆಗಳು, ಯೋನಿಯಲ್ಲಿ ಏನಾದರು ದ್ರವ ಸ್ರವಿಸುವಿಕೆ, ಪೆಲ್ವಿಕ್ ಭಾಗದಲ್ಲಿ ಅಧಿಕ ಒತ್ತಡ ಕಂಡುಬರುವುದು, ಸೊಂಟ ನೋವು ಅಥವಾ ಅಬ್ಡೋಮಿನಲ್ ನೋವು ಸಹ ಈ ಅವಧಿಯಲ್ಲಿ ಕಂಡು ಬರಬಹುದು.

6. ಈ ಅವಧಿಯಲ್ಲಿ ನೀವು ನಿಯಂತ್ರಿಸಬೇಕಾದ ಆಹಾರಗಳು

6. ಈ ಅವಧಿಯಲ್ಲಿ ನೀವು ನಿಯಂತ್ರಿಸಬೇಕಾದ ಆಹಾರಗಳು

ಬೆಂದಿರದ ಮಾಂಸ, ಪಾಶ್ಚರೀಕರಣಗೊಳ್ಳದ ಚೀಸ್, ಕಚ್ಛಾ ಆಹಾರಗಳನ್ನು ಈ ಅವಧಿಯಲ್ಲಿ ಖಡಾಖಂಡಿತವಾಗಿ ಸೇವಿಸಬಾರದು. ಈ ತರದ ಆಹಾರಗಳು ಆರು ತಿಂಗಳ ಗರ್ಭಿಣಿಯರಿಗೆ ಅಪಾಯವನ್ನು ತಂದೊಡ್ಡುತ್ತವೆ. ಈ ಆಹಾರಗಳಲ್ಲಿ ಕೆಲವೊಂದು ಅಪಾಯಕಾರಿ ಬ್ಯಾಕ್ಟೀರಿಯಾಗಳು ಇದ್ದು, ಇವು ತಾಯಿ ಮತ್ತು ಮಗುವಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿರುತ್ತದೆ.

7. ಒಂದು ಸಣ್ಣ ಸಲಹೆ

7. ಒಂದು ಸಣ್ಣ ಸಲಹೆ

ನಿಮ್ಮ ಜೀವನದಲ್ಲಿ ಗರ್ಭಧಾರಣೆಯ ಅವಧಿ ಅತ್ಯಂತ ಅಪೂರ್ವವಾದ ಅವಧಿಯಾಗಿರುತ್ತದೆ. ಅದರಲ್ಲೂ ಗರ್ಭಾವಧಿಯ ಆರನೆ ತಿಂಗಳು ಮತ್ತಷ್ಟು ಮಹತ್ವದ ಅವಧಿಯಾಗಿರುತ್ತದೆ. ಈ ಅವಧಿಯಲ್ಲಿ ನೇರವಾಗಿ ನಿಲ್ಲಿ. ನಡೆಯುವಾಗ ಸಮಾನಾಂತರವಾದ ಹೆಜ್ಜೆಗಳನ್ನು ಇಡಿ. ನಿಮ್ಮ ಬೆನ್ನು ಮೂಳೆಯ ಕೆಳಗಿನ ಭಾಗವು ಆದಷ್ಟು ನೇರವಾಗಿರುವಂತೆ ನೋಡಿಕೊಳ್ಳಿ. ಕುಳಿತುಕೊಂಡಾಗ ನಿಮ್ಮ ಕಾಲುಗಳನ್ನು ನೆಲಕ್ಕೆ ಸಮನಾಂತರವಾಗಿ ಇಟ್ಟುಕೊಂಡು ಕೂರಿ. ಈ ಮೇಲಿನ ಎಲ್ಲಾ ಸಲಹೆ ಸೂಚನೆಗಳನ್ನು ಸರಿಯಾಗಿ ತುಂಬು ಹೃದಯದಿಂದ ಪಾಲಿಸಿ, ಆರೋಗ್ಯವಂತವಾದ ಮಗುವನ್ನು ಹಡೆಯಿರಿ.

X
Desktop Bottom Promotion