For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಈ ಮಾತ್ರೆಗಳಿಂದ ಅಪಾಯವಿದೆಯೆ?

|
Safe Drugs For Pregnant Women
ಗರ್ಭಿಣಿಯಾಗಿದ್ದಾಗ ವೈದ್ಯರನ್ನು ಸಂಪರ್ಕಿಸದೆ ಯಾವುದೆ ಮಾತ್ರೆಯನ್ನು ಸೇವಿಸಬಾರದು. ಆದರೆ ಸಾಕಷ್ಟು ಬಾರಿ ತಲೆ ನೋವು, ಮೈಕೈ ನೋವಿಗೆ ಯಾರು ಡಾಕ್ಟರ್ ಬಳಿ ಹೋಗುತ್ತಾರೆ ಎಂದು ಉದಾಸೀನ ಬಿದ್ದು ಸ್ವ ಚಿಕಿತ್ಸೆ ಮಾಡುತ್ತೇವೆ. ಈ ರೀತಿ ಮಾಡಿದರೆ ಗರ್ಭಿಣಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆಯೆ ಎಂದು ತಿಳಿಯಲು ಮುಂದೆ ಓದಿ.

1. ನೋವು ನಿವಾರಕ ಮಾತ್ರೆ: ನೋವು ಅಂದ ಕ್ಷಣ ಡಾಕ್ಟರ್ ಗಿಂತ ಮೊದಲು ನೆನೆಪಾಗುವುದು ಪ್ಯಾರಾಸಿಟಮೋಲ್, ಆಸ್ಪಿರಿನ್ . ಆದರೆ ಈ ಮಾತ್ರೆಗಳನ್ನು ಸಣ್ಣ ಪುಟ್ಟ ನೋವುಗಳು ಬಂದಾಗ ಸೇವಿಸುವುದರ ಬದಲು ತುಂಬಾ ನೋವಿದ್ದಾಗಷ್ಟೆ ಸೇವಿಸಿ. ಆದರೆ ಯಾವುದಕ್ಕೂ ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು.

2. ತುರ್ತು ಪರಿಸ್ಥಿತಿಯಲ್ಲಿ: ಅಸ್ತಮಾ ಕಾಯಿಲೆಯಿಂದ ಇರುವವರು ಗರ್ಭಧರಿಸಿದಾಗ ಅಸ್ತಮಾ ನಿಯಂತ್ರಣಕ್ಕೆ ಬಳಸುವ ಮಾತ್ರೆಗಳನ್ನು ಬಳಸದಿರಲು ಸಾಧ್ಯವಿಲ್ಲ. ಗರ್ಭಿಣಿಯರ ಆರೋಗ್ಯಕ್ಕೆ ಸರಿಯಾದ ಉಸಿರಾಟಕ್ರಮ ಅಗತ್ಯ. ಆದ್ದರಿಂದ ವೈದ್ಯರನ್ನು ಸಂಪರ್ಕಿಸಿದರೆ ತಾಯಿ ಮತ್ತು ಮಗುವಿಗೆ ಹಾನಿಯಾಗದ ರೀತಿಯ ಔಷಧಿ ಕೊಡುತ್ತಾರೆ ಅವುಗಳನ್ನು ಮಾತ್ರೆ ಸೇವಿಸಬೇಕು. ಸ್ವತಃ ಯಾವುದೇ ಔಷಧಿ ತೆಗೆದುಕೊಳ್ಳುವುದು ಅಪಾಯಕಾರಿ.

3. ವಿಟಮಿನ್ ಮಾತ್ರೆಗಳು: ರಕ್ತ ಪರೀಕ್ಷೆ ಮಾಡಿಸಿದ ನಂತರವೆ ವಿಟಮಿನ್ ಮಾತ್ರೆಗಳನ್ನು ಸೇವಿಸಬೇಕು. ಶಕ್ತಿಗಾಗಿ ಅಥವಾ ವಿಟಮಿನ್ ಹೆಚ್ಚಾಗಿದುವ ಮಾತ್ರೆಗಳನ್ನು ಸೇವಿಸಿ, ಆರೋಗ್ಯ ಹೆಚ್ಚಿಸಿ ಮುಂತಾದ ಜಾಹೀರಾತು ನೋಡಿ ಮಾತ್ರೆ ಸೇವಿಸುವುದು ಒಳ್ಳೆಯದಲ್ಲ.

4. ಹಾರ್ಮೋನ್ ಸಮತೋಲನ: ಡಯಾಬಿಟಿಸ್ ಇರುವವರು ತಮ್ಮ ಹಾರ್ಮೋನ್ ಪ್ರಮಾಣವನ್ನು ಸಮತೋಲನದಲ್ಲಿಡಬೇಕು. ಅದಕ್ಕಾಗಿ ವೈದ್ಯರ ಬಳಿ ಕ್ರಮಬದ್ಧವಾದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಗರ್ಭಿಣಿಯರ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

5. ಕೆಮ್ಮು ನಿವಾರಣೆ ಮಾತ್ರೆ: ಕೆಮ್ಮು ನಿವಾರಣೆಗೆ ಮಾತ್ರೆ ಸೇವಿಸುವುದಾದರೆ ತುಂಬಾ ಎಚ್ಚರಿಕೆಯಿಂದ ಪರೀಕ್ಷಿಸಿ ಕೊಂಡುಕೊಳ್ಳಬೇಕು. ಏಕೆಂದರೆ ಕೆಲವು ಔಷಧಿಗಳಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಕೆಮ್ಮು ನಿವಾರಣೆಗೆ ಹರ್ಬಲ್ ಔಷಧಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು.

English summary

Can Women Take Drugs During Pregnancy | Tips For Pregnant Women | ಗರ್ಣಿಣಿಯರು ಮಾತ್ರೆ ಸೇವಿಸಿದರೆ ಆರೋಗ್ಯ ಕೆಡುವುದೆ? | ಗರ್ಭಿಣಿಯರ ಆರೋಗ್ಯಕ್ಕೆ ಕೆಲ ಸಲಹೆಗಳು

Here are some categories of drugs that are pregnancy safe and certain others for which you need your doctor's advice.
Story first published: Monday, March 5, 2012, 15:33 [IST]
X
Desktop Bottom Promotion