Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗರ್ಭಿಣಿಯರಿಗೆ ಆರೋಗ್ಯಕರ ಸ್ನ್ಯಾಕ್ಸ್ ಇಲ್ಲಿದೆ

ಊಟವಾದ 3-4 ಗಂಟೆಗಳ ಅಂತರದಲ್ಲಿ ಸ್ವಲ್ಪ ಹಸಿವು ಶುರುವಾದಾಗ ಈ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಿದರೆ ತುಂಬಾ ಪ್ರಯೋಜನವಿದೆ.
ಗರ್ಭಿಣಿಯರು ಸೇವಿಸಬಹುದಾದ ಪೌಷ್ಟಿಕ ಮತ್ತು ಆರೋಗ್ಯಕರ ಸ್ನ್ಯಾಕ್:
* ಪಾಪ್ ಕಾರ್ನ್: ಪಾಪ್ ಕಾರ್ನ್ ಗರ್ಭಿಣಿಯರಿಗೆ ಒಳ್ಳೆಯ ತಿಂಡಿ. ಆದರೆ ಪಾಪ್ ಕಾರ್ನನ್ನು ಕಡಿಮೆ ಉಪ್ಪು ಬೆರೆಸಿ ತಿನ್ನಬೇಕು. ಗ್ರೀನ್ ಟೀ ಅಥವಾ ತಣ್ಣಗಿನ ಮಿಲ್ಕ್ ಶೇಕ್ ಜೊತೆ ಪಾಪ್ ಕಾರ್ನ್ ಸೇವಿಸಿದರೆ ಒಳ್ಳೆಯ ಸ್ನ್ಯಾಕ್ ಆಗುವುದಲ್ಲದೆ ನಾಲಿಗೆಗೆ ರುಚಿಯನ್ನೂ ನೀಡುತ್ತೆ.
* ರಾಗಿ ಅಥವಾ ಧಾನ್ಯಗಳ ಬಿಸ್ಕೆಟ್: ಕಡಿಮೆ ಕ್ಯಾಲೊರಿ ಹೊಂದಿರುವ ಮತ್ತು ಸುಲಭವಾಗಿ ಜೀರ್ಣಗೊಳ್ಳುವ ಧಾನ್ಯಗಳಿಂದ ತಯಾರಿಸಿದ ಬಿಸ್ಕೆಟ್ಟನ್ನು ಜ್ಯಾಮ್ ಅಥವಾ ಕಡಿಮೆ ಕೊಬ್ಬಿನಂಶದ ಚೀಸ್ ಜೊತೆ ಸೇವಿಸಿದರೆ ಪೌಷ್ಟಿಕಾಂಶ ದೊರೆಯುತ್ತೆ. ಇದು ಹೊಟ್ಟೆ ತುಂಬುವಂತೆಯೂ ಮಾಡುತ್ತೆ. ಬಿಸ್ಕೆಟ್ ಖಾರವಾಗಿರಬೇಕೆಂದರೆ ಚೀಸ್ ಮತ್ತು ಮೆಣಸಿನ ಪುಡಿ ಉದುರಿಸಿ ಸೇವಿಸಬಹುದು. ಕಡಿಮೆ ಕ್ಯಾಲೊರಿಯ ಓಟ್ ಮೀಲ್ ಕುಕ್ಕೀಸ್ ಒಳ್ಳೆಯದು.
* ಮೊಸರು: ಗರ್ಭಿಣಿಯಾದವರಿಗೆ ಮೊಸರಿನ ಸೇವನೆ ಉತ್ತಮ ಪ್ರಯೋಜನ ನೀಡುತ್ತೆ. ಇದು ಹೊಟ್ಟೆ ತುಂಬುವಂತೆ ಮಾಡುವುದಲ್ಲದೆ ಪೌಷ್ಟಿಕತೆಯನ್ನೂ ನೀಡುತ್ತೆ. ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಇನ್ನಿತರ ಪ್ರೊಟೀನ್ ಗಳು ಅಧಿಕವಾಗಿದೆ. ಮೊಸರಿನೊಂದಿಗೆ ಬಾದಾಮಿ, ಗೋಡಂಬಿ ಬೀಜಗಳನ್ನು ಬೆರೆಸಿ ಸೇವಿಸಿದರೆ ಇನ್ನೂ ಹೆಚ್ಚು ಉಪಯೋಗ ಪಡೆಯಬಹುದು.
* ಚೀಸ್ ಜೊತೆ ಫ್ರ್ಯೂಟ್ ಸಲಾಡ್: ಗರ್ಭಿಣಿಯರು ತಿನ್ನಬಹುದಾದ ಕೆಲವು ಹಣ್ಣುಗಳನ್ನು ಸಲಾಡ್ ಮಾಡಿ ತಿಂದರೆ ರುಚಿ ಹೆಚ್ಚು. ಹಣ್ಣುಗಳನ್ನು ಕ್ರೀಂ ಮತ್ತು ಚೀಸ್ ಜೊತೆ ಬೆರೆಸಿ ತಿಂದರೆ ಅಧಿಕ ಕೊಬ್ಬನ್ನೂ ಕರಗಿಸಿಕೊಳ್ಳಬಹುದು. ಆದರೆ ಪಪ್ಪಾಯ ಮತ್ತು ಅನಾನಸ್ ಹಣ್ಣನ್ನು ಗರ್ಭಿಣಿಯಾದವರು ಸೇವಿಸಬಾರದು.



Click it and Unblock the Notifications
