For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಸೆಕ್ಸ್‌ಲೈಫ್‌ ಯಾವಾಗ ಪ್ರಾರಂಭಿಸಬಹುದು?

|

ಸೆಕ್ಸ್‌ಲೈಫ್‌ ಎನ್ನುವುದು ದಾಂಪತ್ಯ ಬದುಕಿನ ಪ್ರಮುಖ ಭಾಗವಾಗಿದೆ. ಗಂಡ-ಹೆಂಡತಿ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಇಬ್ಬರಲ್ಲಿ ಲೈಂಗಿಕ ತೃಪ್ತಿ ಮುಖ್ಯ. ಗರ್ಭಿಣಿಯಾದಾಗ ಗಂಡ-ಹೆಂಡತಿ ಸೇರಬಹುದೇ, ಬೇಡ್ವೆ? ಎಂಬುವುದನ್ನು ವೈದ್ಯರು ಸೂಚಿಸುತ್ತಾರೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಯಾವುದೇ ತೊಂದರೆಯಿಲ್ಲ, ಆದರೆ ಕೆಲವೊಬ್ಬರಿಗೆ ಅವರ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟು ಸೇರಬಾರದು ಎಂದು ವೈದ್ಯರು ಸೂಚಿಸಿದ್ದಾರೆ.

Sex After child Birth

ಇನ್ನು ಮಗುವಾದ ಮೇಲೆ ಎಷ್ಟು ಸಮಯದ ಬಳಿಕ ಗಂಡ-ಹೆಂಡತಿ ಕೂಡಬಹುದು ಎಂದು ಚೊಚ್ಚಲ ಹೆರಿಗೆಯ ಬಳಿಕ ಗೊಂದಲ ಮೂಡುವುದು ಸಹಜ. ಏಕೆಂದರೆ ಹೆರಿಗೆಯ ಬಳಿಕ ದೇಹದಲ್ಲಿ ಅನೇಕ ಬದಲಾವಣೆಗಳಾಗಿರುತ್ತದೆ, ಮತ್ತೊಂದೆಡೆ ಮಗುವಿನ ಆರೈಕೆಯಲ್ಲಿ ಸರಿಯಾಗಿ ನಿದ್ದೆ ಇಲ್ಲದೆ ದೇಹ ಬಳಲಿರುತ್ತದೆ. ಆದ್ದರಿಂದ ತಮ್ಮ ಸೆಕ್ಸ್‌ಲೈಫ್‌ ಪುನಃ ಪ್ರಾರಂಭಿಸುವುದು ಯಾವಾಗ ಎಂದು ಎಷ್ಟೋ ದಂಪತಿಗಳಿಗೆ ತಿಳಿಯುವುದಿಲ್ಲ. ಈ ವಿಷಯದಲ್ಲಿ ವೈದ್ಯರು ಅಥವಾ ಸ್ನೇಹಿತರ ಸಲಹೆ ಪಡೆಯಲು ಸಂಕೋಚ ಅಡ್ಡಿಯಾಗಿರುತ್ತದೆ. ಈ ಲೇಖನದಲ್ಲಿ ಮಗುವಾದ ಬಳಿಕ ಮಿಲನಕ್ರಿಯೆ ಯಾವಾಗ ಪ್ರಾರಂಭಿಸಬಹುದು ಎಂಬ ಸಲಹೆ ನೀಡಿದ್ದೇವೆ ನೋಡಿ:
ಹೆರಿಗೆಯ ಬಳಿಕ ಸೆಕ್ಸ್‌ಲೈಫ್‌

ಹೆರಿಗೆಯ ಬಳಿಕ ಸೆಕ್ಸ್‌ಲೈಫ್‌

ಹೆರಿಗೆಯಾದ ಬಳಿಕ ಎಷ್ಟು ದಿನಗಳ ಬಳಿಕವೇ ಗಂಡ-ಹೆಂಡತಿ ಕೂಡಬೇಕು ಎಂಬುವುದು ಪ್ರಮುಖವಾಗಿ ಬಾಣಂತಿ ಆರೋಗ್ಯ ಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ಸಾಮಾನ್ಯವಾಗಿ ಹೆರಿಗೆಯಾಗಿ 4 ರಿಂದ 6 ವಾರದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಯಾವುದೇ ತೊಂದರೆಯಿಲ್ಲವೆಂದು ವೈದ್ಯರು ಹೇಳುತ್ತಾರೆ. ಸಹಜ ಹೆರಿಗೆಯಾಗಿರಲಿ, ಸಿ ಸೆಕ್ಷನ್ ಆಗಿರಲಿ ಹೆರಿಗೆಯಾಗಿ ತಿಂಗಳ ಬಳಿಕ ಗಂಡ ಹೆಂಡತಿ ಸೇರಬಹುದು.

ಕನಿಷ್ಠ 4 ವಾರಗಳವರೆಗೆ ದಂಪತಿ ಕೂಡಬಾರದೆಂದು ಏಕೆ ಹೇಳುತ್ತಾರೆ ಎಂದರೆ ಆ ಸಮಯದಲ್ಲಿ ರಕ್ತಸ್ರಾವ ಅಧಿಕವಿರುತ್ತದೆ, ಜನನೇಂದ್ರೀಯದಲ್ಲಿ ಸ್ಟಿಚ್ಚಿಂಗ್ ಹಾಕಲಾಗಿರುತ್ತದೆ. ಇದು ಒಣಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಅಲ್ಲದೆ ಹೆರಿಗೆಯಾಗಿ ಕೆಲವೇ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮೂತ್ರದಲ್ಲಿ ಸೊಂಕು ಉಂಟಾಗಿ ಉರಿಮೂತ್ರ, ನೋವು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕನಿಷ್ಠ ನಾಲ್ಕು ವಾರಗಳು ಅಂತರ ಕಾಯ್ದುಕೊಳ್ಳಲು ವೈದ್ಯರು ಸೂಚಿಸುತ್ತಾರೆ.

ಮಿಲನಕ್ರಿಯೆ ಸಂದರ್ಭದಲ್ಲಿ ಕಾಣಿಸುವ ನೋವು

ಮಿಲನಕ್ರಿಯೆ ಸಂದರ್ಭದಲ್ಲಿ ಕಾಣಿಸುವ ನೋವು

ಹೆರಿಗೆಯ ಬಳಿಕ ಮೊದ ಮೊದಲು ಮಿಲನಕ್ರಿಯೆ ನಡೆಸುವಾಗ ನೋವು ಉಂಟಾಗುತ್ತದೆ. ಒಂದುಸಮೀಕ್ಷೆಯಲ್ಲಿ ಮೊದಲ ಮೂರು ತಿಂಗಳವರೆಗೆ ಮಿಲನಕ್ರಿಯೆ ಮಾಡುವಾಗ ನೋವು ಉಂಟಾಗುವುದು ಎಂದು ಶೇ. 83ರಷ್ಟು ಮಹಿಳೆಯರು ಹೇಳಿದ್ದಾರೆ. ಎದೆಹಾಲುನಿಸುವುದರಿಂದ ಹಾಗೂ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಜನನೇಂದ್ರೀಯ ಒಣಗುವುದು, ಲೈಂಗಿಕಕ್ರಿಯೆ ಮಾಡಿದಾಗ ನೋವು, ರಕ್ತಸ್ರಾವ ಕಂಡು ಬರುವುದು ಮುಂತಾದ ತೊಂದರೆ ಕಂಡು ಬರುತ್ತದೆ.

ಹೆರಿಗೆಯ ಬಳಿಕ ಕೆಲವು ಮಹಿಳೆಯರಿಗೆ ಒಂದು ಅಥವಾ ಎರಡು ತಿಂಗಳಿಗೆ ಮುಟ್ಟು ಮರುಕಳಿಸಿದರೆ ಇನ್ನು ಕೆಲವರಿಗೆ ಆರು ಅಥವಾ ಒಂದು ವರ್ಷದವರೆಗೆ ಮುಟ್ಟಾಗುವುದಿಲ್ಲ. ಮುಟ್ಟಾಗದೇ ಇರುವುದರಿಂದ ಗರ್ಭಧಾರಣೆಯಾಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು, ಸುರಕ್ಷತೆ ಕ್ರಮ ಅನುಸರಿಸದಿದ್ದರೆ ಈ ಸಂದರ್ಭದಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ.

ಸಿ ಸೆಕ್ಷನ್ ಹೆರಿಗೆಯ ಬಳಿಕ

ಸಿ ಸೆಕ್ಷನ್ ಹೆರಿಗೆಯ ಬಳಿಕ

ಸಿ ಸೆಕ್ಷನ್ ಹೆರಿಗೆಯ ಬಳಿಕ ಸೆಕ್ಸ್ ಲೈಫ್‌ಗೆ ಮರಳುವುದು ಸ್ವಲ್ಪ ಕಷ್ಟವಾಗುವುದು. ಮೇಲಿನ ಗಾಯ 4-6ವಾರಗಳ ಒಂಗೆ ಒಣಗುತ್ತದೆ ಆದರೆ ಸರ್ಜರಿಯಿಂದ ಸಂಪುರ್ಣ ಗುಣವಾಗಲು ಕನಿಷ್ಠ ಆರು ತಿಂಗಳು ಬೇಕಾಗುವುದು. ಆದರೆ ಹಾಗಂತ ಗಂಡ-ಹೆಂಡತಿ ಕೂಡಲು ತುಂಬಾ ಸಮಯ ಬೇಕಾಗಿಲ್ಲ. ಸಹಜ ಹೆರಿಗೆಯಾಗಿರಲಿ, ಸಿ ಸೆಕ್ಷನ್‌ ಆಗಿರಲಿ 6 ವಾರಗಳಲ್ಲಿ ಜನನೇಂದ್ರೀಯ ಸಹಜ ಸ್ಥಿತಿಗೆ ಮರಳುತ್ತದೆ, ಆದ್ದರಿಂದ ಸೆಕ್ಸ್‌ಲೈಫ್‌ಗೆ ತೊಂದರೆಯಿಲ್ಲ. ಆದರೆ ಕುಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಹೆರಿಗೆಯ ಬಳಿಕ ಲೈಂಗಿಕ ಜೀವನದಲ್ಲಿ ಆಗುವ ಬದಲಾವಣೆಗಳು

ಹೆರಿಗೆಯ ಬಳಿಕ ಲೈಂಗಿಕ ಜೀವನದಲ್ಲಿ ಆಗುವ ಬದಲಾವಣೆಗಳು

ಹೆರಿಗೆಯ ಬಳಿಕ ಅನೇಕ ವಿಷಯಗಳು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೆರಿಗೆಯ ಬಳಿಕ ಅನೇಕ ದೈಹಿಕ ಬದಲಾವಣೆಗಳಾಗುತ್ತವೆ ಹಾಗೂ ಮಾನಸಿಕ ಒತ್ತಡ ಉಂಟಾಗುತ್ತದೆ, ಇವು ಸೆಕ್ಸ್ ಲೈಫ್‌ ಮೇಲೆ ಪರಿಣಾಮ ಬೀರುತ್ತವೆ. ಹೆರಿಗೆಯ ಬಳಿಕ ಸೆಕ್ಸ್‌ಲೈಫ್‌ನಲ್ಲಿ ಕಂಡು ಬರುವ ಬದಲಾವಣೆಗಳೆಂದರೆ:

*ಜನನೇಂದ್ರೀಯ ಹರಿದು ಸ್ಟಿಚ್‌ ಹಾಕಿರುವುದರಿಂದ ನೋವು ಉಂಟಾಗುವುದು.

*ಜನನೇಂದ್ರೀಯ ಸಡಿಲವಾಗಿರುತ್ತದೆ

* ಸ್ನಾಯುಗಳು ಬಲಹೀನವಾಗಿರುವುದರಿಂದ ಮಿಲನಕ್ರಿಯೆಯ ನಡುವೆ ಮೂತ್ರ ವಿಸರ್ಜನೆಯಾಗುವ ಸಾಧ್ಯತೆ ಇದೆ.

* ಸ್ಪರ್ಶದ ಅನುಭವ ಅಷ್ಟಾಗಿ ಆಗುವುದಿಲ್ಲ

* ಎದೆ ಹಾಲುಣಿಸುವುದರಿಂದ ಕಾಮೋದ್ರೇಕ ಅಷ್ಟಾಗಿ ಆಗುವುದಿಲ್ಲ

* ಕೆಲವೊಮ್ಮೆ ರಕ್ರಸ್ರಾವ ಕಂಡು ಬರುವುದು

* ಈ ಸಮಯದಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುವುದು

*ಲೈಂಗಿಕಕ್ರಿಯೆ ಸಮಯದಲ್ಲಿ ಎದೆಹಾಲು ಸೊರುವುದರಿಂದ ಕಿರಿಕಿರಿ ಉಂಟಾಗುವುದು.

ಹೆರಿಗೆಯ ಬಳಿಕ ಆರೋಗ್ಯಕರ ಸೆಕ್ಸ್‌ಲೈಫ್‌ ಪ್ರಾರಂಭಿಸಲು ಟಿಪ್ಸ್:

ಹೆರಿಗೆಯ ಬಳಿಕ ಆರೋಗ್ಯಕರ ಸೆಕ್ಸ್‌ಲೈಫ್‌ ಪ್ರಾರಂಭಿಸಲು ಟಿಪ್ಸ್:

ನಿಧಾನಕ್ಕೆ ಪ್ರಾರಂಭಿಸಿ: ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ರೊಮ್ಯಾಂಟಿಕ್ ಚಟುವಟಿಕೆಯಲ್ಲಿ ತೊಡಗಿ. ಇದರಿಂದ ಲೈಂಗಿಕ ಭಾವನೆ ಉದ್ರೇಕಗೊಳ್ಳುವುದು. ಇದರಿಂದ ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಉತ್ಪತ್ತಿಯಾಗಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಳ್ಳುವುದರಿಂದ ನೋವು ಉಂಟಾಗುವುದಿಲ್ಲ.

ದೇಹದ ಆರೈಕೆಗೆ ಗಮನ ನೀಡಿ

ಹೆರಿಗೆಯ ಸಮಯದಲ್ಲಿ ಅಸಾಧ್ಯವಾದ ನೋವು ಉಂಟಾಗಿರುತ್ತದೆ. ಅದಾದ ಬಳಿಕ ಮಗುವಿನ ಆರೈಕೆ, ಮಗುವಾಗಿ ಎರಡು ಗಂಟೆಗೊಮ್ಮೆ ಹಾಲುಣಿಸಬೇಕಾಗಿರುವುದರಿಂದ ನಿದ್ದೆ ಇಲ್ಲದೆ ದೇಹ ತುಂಬಾ ಬಳಲಿ ಇರುತ್ತದೆ. ಆದ್ದರಿಂದ ದೇಹದ ಆರೈಕೆ ಎಣ್ಣೆ ಮಸಾಜ್ ಮಾಡಿಸಿಕೊಳ್ಳುವುದು ಒಳ್ಳೆಯದು. ದೇಹ ಬೇಗ ಆರೈಕೆಯಾದರೆ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳುವಾಗ ತೊಂದರೆ ಕಾಣಿಸಿಕೊಳ್ಳುವುದಿಲ್ಲ.

ವ್ಯಾಯಾಮ: ವ್ಯಾಯಾಮ ಮಾಡುವುದು ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತದೆ, ಸ್ನಾಯುಗಳು ಬಲವಾಗುವುದರಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ನೊವು ಉಂಟಾಗುವುದಿಲ್ಲ.

ಲೂಬ್ರಿಕಾಂಟ್ ಆಯ್ಕೆ: ಹೆರಿಗೆಯ ಬಳಿಕ ಈಸ್ಟ್ರೋಜಿನ್ ಪ್ರಮಾಣ ಕಡಿಮೆಯಾಗಿ ಜನನೇಂದ್ರೀಯ ಒಣಗುವುದು. ಅದನ್ನು ತೇವ ಮಾಡಲು ಲೂಬ್ರಿಕೇಷನ್ ಬಳಸಬಹುದು.

ಸಮಯವನ್ನು ಮೀಸಲಿಡಿ: ಮಗುವಾದ ಬಳಿಕ ಬಹುತೇಕ ಸಮಯ ಮಗುವಿನ ಲಾಲನೆ ಪಾಲನೆಯಲ್ಲೇ ಕಳೆದು ಕೊಳ್ಳುತ್ತದೆ. ಆದರೆ ಆರೋಗ್ಯಕರ ಸಂಬಂಧಕ್ಕೆ ಸೆಕ್ಸ್‌ಲೈಫ್‌ ಕೂಡ ಮುಖ್ಯ. ಆದ್ದರಿಂದ ನೀವು ನಿಮ್ಮ ಸಂಗಾತಿ ಜೊತೆ ಕಳೆಯಲು ಸ್ವಲ್ಪ ಸಮಯ ಮೀಸಲಿಡಿ.

English summary

When Is The Right Time To Have Intercourse After Childbirth?

Intercourse After Childbirth?
Story first published: Friday, January 17, 2020, 17:12 [IST]
X
Desktop Bottom Promotion