ಮಗುವಿಗೆ ಎದೆ ಹಾಲು ಉಣಿಸುವಾಗ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡದಿರಿ...

Posted By: Divya Pandith
Subscribe to Boldsky

ಎದೆಹಾಲು ನವಜಾತ ಶಿಶುಗಳಿಗೆ ಜೀವನಾಧಾರ. ಎದೆಹಾಲು ಉಣಿಸುವಾಗ ತಾಯಿ ಅನೇಕ ಬಗೆಯ ಕಾಳಜಿ ಅಥವಾ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯವು ಸೂಕ್ತ ರೀತಿಯಲ್ಲಿ ಇರುತ್ತದೆ. ಹಾಗೊಮ್ಮೆ ನಿಷ್ಕಾಳಜಿ ವಹಿಸಿದರೆ ಅಥವಾ ಕೆಲವು ತಪ್ಪುಗಳನ್ನು ಮಾಡುವುದರಿಂದ ಗಂಭೀರವಾದ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಸ್ತನಪಾನ ಮಾಡಿಸುವಾಗ ತಾಯಿ ಸ್ತನಬಂಧ ಧರಿಸುವುದು ಸೂಕ್ತವೇ? ಇದರಿಂದ ಯಾವ ತೊಂದರೆ ಉಂಟಾಗದೆ? ಎನ್ನುವ ಪ್ರಶ್ನೆಗಳು ಅನೇಕ ತಾಯಂದಿರಿಗೆ ಕಾಡುವ ಪ್ರಶ್ನೆಯಾಗಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು.

ಎದೆಹಾಲು ಉಣಿಸುವ ಸಂದರ್ಭದಲ್ಲಿ ತಾಯಿಯ ಸ್ತನ ಗಾತ್ರವು ಮೊದಲಿನ ಗಾತ್ರಕ್ಕಿಂತ ಹೆಚ್ಚಳವನ್ನು ಪಡೆದು ಕೊಂಡಿರುತ್ತದೆ. ಈ ಸಂದರ್ಭದಲ್ಲಿ ಸ್ತನಬಂಧ ಯಾವೆಲ್ಲಾ ಬದಲಾವಣೆಯನ್ನು ಉಂಟುಮಾಡ ಬಹುದು? ಎನ್ನುವ ಕಲ್ಪನೆಯೂ ಇರುವುದಿಲ್ಲ. ಕೆಲವು ಸಂಶೋಧನೆಯ ಆಧಾರವಾಗಿ ಹೇಳುವುದಾದರೆ ಸ್ತನ ಬಂಧವು ಹಾಲಿನ ಉತ್ಪಾದನೆಯು ಕಡಿಮೆಯಾಗುತ್ತದೆ ಮತ್ತು ಕೆಲವು ಸಮಸ್ಯೆಗಳನ್ನು ಹುಟ್ಟಿಸುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಇಂತಹ ಸಂದರ್ಭದಲ್ಲಿ ಯಾವೆಲ್ಲಾ ಬಗೆಯ ಕಾಳಜಿಯನ್ನು ವಹಿಸಬೇಕು? ಎನ್ನುವ ಮಾಹಿತಿಯನ್ನು ಬೋಲ್ಡ್ ಸ್ಕೈ ಈ ಮುಂದೆ ನಿಮಗೆ ಪರಿಚಯಿಸಿದೆ.....

ತಜ್ಞರು ಏನು ಹೇಳುತ್ತಾರೆ?

ತಜ್ಞರು ಏನು ಹೇಳುತ್ತಾರೆ?

ಸ್ತನ್ಯಪಾನ ಹಂತದ ಸಮಯದಲ್ಲಿ ಸ್ತನಬಂಧವನ್ನು ಬಳಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನೀವು ಆಶ್ಚರ್ಯ ಪಡುವಿರಾ? ನಿಜ, ಸ್ತನ್ಯಪಾನ ಹಂತದಲ್ಲಿ ಸ್ತನಗಳು ಕೋಮಲವಾಗುತ್ತವೆ. ಕೆಲವು ವಿಧದ ಬ್ರಾ ಗಳು ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಮತ್ತು ಆದ್ದರಿಂದ ಕನಿಷ್ಠ ಶುಶ್ರೂಷಾ ಹಂತಗಳಲ್ಲಿ ತೊಂದರೆ ಉಂಟುಮಾಡುವುದು. ಸ್ತನಬಂಧವನ್ನು ಧರಿಸುವುದನ್ನು ತಪ್ಪಿಸುವುದು ಉತ್ತಮ ಎಂದು ಹೇಳುತ್ತಾರೆ.

ಸಮಸ್ಯೆ ಏನು?

ಸಮಸ್ಯೆ ಏನು?

ಈ ಅವಧಿಯಲ್ಲಿ ಹಿಗ್ಗಿರುವ ಸ್ತನಗಳನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳಲು ನಿಮ್ಮ ನಿತ್ಯದ ಬ್ರಾಗಳಿಗೆ ಸಾಧ್ಯವಾಗಲಾರದು. ಏಕೆಂದರೆ ಬ್ರಾಗಳ ಅಂಚುಗಳು ಹೆಚ್ಚಿನ ಒತ್ತಡ ಹೇರಿ ನೋವುಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ಈ ಒತ್ತಡ ಅತಿ ಹೆಚ್ಚಾಗಿದ್ದು ನಿದ್ರೆ ಆವರಿಸಲೂ ಅಡ್ಡಿಯಾಗಬಹುದು. ಅಲ್ಲದೇ ಬಿಗಿಯಾಗಿರುವ ಭಾವನೆ ಇಡಿಯ ದಿನ ಸತತವಾಗಿ ಕಾಡುತ್ತಾ ನಿತ್ಯದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲೂ ಅಡ್ಡಿಯುಂಟುಮಾಡಬಹುದು. ನಾಲ್ಕು ಜನರೆದುದು ಇದನ್ನು ಸರಿಪಡಿಸಲಾಗದೇ ಮುಜುಗರವನ್ನೂ ಎದುರಿಸಬೇಕಾಗಿಬರಬಹುದು.

ಅಸ್ವಸ್ಥತೆ ಉಂಟಾಗುತ್ತದೆ

ಅಸ್ವಸ್ಥತೆ ಉಂಟಾಗುತ್ತದೆ

ಎದೆಹಾಲು ಗಾತ್ರವು ಸ್ತನ್ಯಪಾನ ಹಂತದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡಬಹುದು. ಮಗು ಹಾಲುಣ್ಣುವ ಮುಂಚೆ ಸ್ತನದ ಗಾತ್ರವು ಹೆಚ್ಚಾಗುತ್ತದೆ ಮತ್ತು ಆಹಾರದ ನಂತರ ಗಾತ್ರ ಸ್ವಲ್ಪ ಕಡಿಮೆಯಾಗುತ್ತದೆ. ಸ್ತನಬಂಧವನ್ನು ಧರಿಸುವುದರಿಂದ ಹಾಲು ಉತ್ಪಾದನೆಯ ಕಾರಣ ಸ್ತನಗಳ ಗಾತ್ರ ಹೆಚ್ಚಾಗುವಾಗ ಅಸ್ವಸ್ಥತೆ ಉಂಟುಮಾಡಬಹುದು.

 ಸ್ತನ ಛೇದನಕ್ಕೆ ಕಾರಣವಾಗುತ್ತದೆ

ಸ್ತನ ಛೇದನಕ್ಕೆ ಕಾರಣವಾಗುತ್ತದೆ

ಕೆಲವು ಮಹಿಳೆಯರಲ್ಲಿ ಸ್ತನ್ಯಪಾನ ಹಂತದ ಸಮಯದಲ್ಲಿ ಸ್ತನಬಂಧದ ಬಳಕೆ ಕೂಡಾ ಸ್ತನಛೇದನಕ್ಕೆ ಕಾರಣವಾಗುತ್ತದೆ. ತಜ್ಞರು ಅವರನ್ನು ಶುಶ್ರೂಷಾ ಹಂತದಲ್ಲಿ ಬಳಸಬಾರದು ಎಂದು ಸಲಹೆ ನೀಡುತ್ತಾರೆ. ಸ್ತನಪಾನ ಹಂತದ ಸಮಯದಲ್ಲಿ ಉರಿಯೂತವನ್ನು ನಿರ್ವಹಿಸುವುದು ಸುಲಭವಲ್ಲ. ನೀವು ಮಕ್ಕಳನ್ನು ಬೆಳೆಸುತ್ತಿರುವಾಗ ಯಾವುದೇ ಆರೋಗ್ಯ ಸಮಸ್ಯೆಗೆ ಒಳಗಾಗಬಾರದು. ಸಮಸ್ಯೆ ಉಂಟಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.

ಯಾವ ವಿಧದ ಸ್ತನಬಂಧ ಧರಿಸಬೇಕು?

ಯಾವ ವಿಧದ ಸ್ತನಬಂಧ ಧರಿಸಬೇಕು?

ಮಗು ಮತ್ತು ತಾಯಿಯ ಆರೋಗ್ಯ ಈ ಹಂತದಲ್ಲಿ ಬಹುಮುಖ್ಯವಾಗಿರುತ್ತದೆ. ತಾಯಿಯ ಆರೋಗ್ಯದಲ್ಲಿ ಕೊಂಚ ಬದಲಾವಣೆ ಉಂಟಾದರೂ ಅದು ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀಳುತ್ತದೆ. ಹಾಗಾಗಿ ತಾಯಿ ತನಗೆ ಒತ್ತಡ ಹಾಗೂ ಅನಾರೋಗ್ಯವನ್ನುಂಟುಮಾಡುವ ಸ್ತನಬಂಧವನ್ನು ಧರಿಸುವ ಬದಲು ಹಾಲುಣಿಸಲು ಅನುಕೂಲವಾಗುವ ಅಥವಾ ಅದಕ್ಕಾಗಿಯೇ ವಿಶೇಷವಾಗಿ ದೊರೆಯುವ ಸ್ತನಬಂಧಗಳನ್ನು ಧರಿಸುವುದು ಸೂಕ್ತ. ಸೂಕ್ತವಲ್ಲದ ಸ್ತನಬಂಧವನ್ನು ಧರಿಸುವುದರಿಂದ ಉಂಟಾಗುವ ಅನಾಹುತಗಳನ್ನು ಅಥವಾ ಸಮಸ್ಯೆಗಳನ್ನು ತಡೆಗಟ್ಟಬಹುದು.

ಕುಟುಂಬ ವೈದ್ಯರ ಸಲಹೆ ಪಡೆಯಿರಿ

ಕುಟುಂಬ ವೈದ್ಯರ ಸಲಹೆ ಪಡೆಯಿರಿ

ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಗರ್ಭಿಣಿಯ ದೇಹದ ಸಹಿತ ಸ್ತನಗಳೂ ಹಲವಾರು ಬದಲಾವಣೆಗೆ ಒಳಗಾಗುತ್ತದೆ. ವಿಶೇಷವಾಗಿ ಕಡೆಯ ಮೂರು ತಿಂಗಳುಗಳಲ್ಲಿ ಮಗುವಿಗೆ ಅಗತ್ಯವಿರುವ ಹಾಲಿನ ಉತ್ಪಾದನೆ ಹೆಚ್ಚುತ್ತದೆ ಹಾಗೂ ಹಾಲು ತುಂಬಿಕೊಂಡ ಪರಿಣಾಮವಾಗಿ ಸ್ತನಗಳ ಗಾತ್ರ ಹಿಗ್ಗುತ್ತದೆ. ಆರು ತಿಂಗಳು ಕಳೆದ ಬಳಿಕ ಪ್ರತಿದಿನವು ಸ್ತನಗಳ ಗಾತ್ರ ಕೊಂಚವೇ ಹೆಚ್ಚುತ್ತಾ ಬರುವ ಮೂಲಕ ಗರ್ಭಿಣಿಗೆ ತನ್ನ ನಿತ್ಯದ ಗಾತ್ರದ ಬ್ರಾಗಳನ್ನು ಧರಿಸುವುದು ಬಿಗಿ ಎಂದು ಅನ್ನಿಸಬಹುದು. ಆದ್ದರಿಂದ ಈ ಅವಧಿಯಲ್ಲಿಯೇ ತಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ಮೆಟರ್ನಿಟಿ ಬ್ರಾಗಳನ್ನೇ ಕೊಂಡು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಾದ ಕ್ರಮವಾಗಿದೆ.

English summary

During Breastfeeding is it safe to safe wear Bra...

As the size of the breasts tends to increase during that phase, one may need to carefully choose the bra to avoid certain minor issues. One reason to be very choosy is because you need to wear it for the whole day. A wrong choice could also affect the milk production which is another important concern of any nursing mother. Another reason to be picky about the bra is the variations in the supply and production of milk during the nursing stage. The supply isn't the same all the time. Read on to know more.