ತಾಯಿಯ ಎದೆಹಾಲು ಹೆಚ್ಚಿಸಲು ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

By: Deepu
Subscribe to Boldsky

ಮಗುವಿಗೆ ಜನನದ ಕ್ಷಣದಿಂದ ಅತ್ಯಂತ ಶ್ರೇಷ್ಠ ಆಹಾರವೆಂದರೆ ತಾಯಿಯ ಹಾಲು. ಮಗುವಿಗೆ ಆರು ತಿಂಗಳಾಗುವವರೆಗೂ ತಾಯಿಹಾಲು ಪ್ರಮುಖ ಆಹಾರವಾಗಿರಬೇಕು. ಬಳಿಕ ಇತರ ಮೃದುವಾದ ಆಹಾರಗಳ ಜೊತೆ ತಾಯಿಹಾಲನ್ನು ಮುಂದುವರೆಸಿ ಸುಮಾರು ಒಂದು ವರ್ಷದವರೆಗೂ ಮುಂದುವರೆಸಬೇಕು. ತದನಂತರ ಇಂತಹ ಆಹಾರಗಳನ್ನು ಕೊಂಚ ಹೆಚ್ಚಿಸಿ ತಾಯಿಹಾಲನ್ನು ಕೊಂಚ ಕಡಿಮೆ ನೀಡುವ ಮೂಲಕ ಎರಡು ವರ್ಷಗಳವರೆಗೂ ಮುಂದುವರೆಸಬಹುದು. ಇದಕ್ಕಾಗಿ ತಾಯಿಹಾಲಿನ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿರುವುದು ಅವಶ್ಯವಾಗಿದೆ. ಇದಕ್ಕಾಗಿ ದಿನನಿತ್ಯದ ಆಹಾರಗಳಲ್ಲಿ ತಾಯಿ ಹಾಲನ್ನು ಹೆಚ್ಚಿಸಲು ನೆರವಾಗುವ ಆಹಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.

ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?

ಈ ಬಗ್ಗೆ ನಿಮ್ಮ ವೈದ್ಯರು ಅತ್ಯುತ್ತಮ ಸಲಹೆ ನೀಡಬಲ್ಲರು. ತಾಯಿ ಹಾಲನ್ನು ಹೆಚ್ಚಿಸಲು ನೆರವಾಗುವ ಪ್ರಮುಖ ಆಹಾರಗಳನ್ನು ಇಲ್ಲಿ ವಿವರಿಸಲಾಗಿದೆ. ಇವುಗಳಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯವನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ನೈಸರ್ಗಿಕವಾಗಿ ಹೆಚ್ಚಿಸಲೂ ನೆರವಾಗುತ್ತವೆ. ನಿಮ್ಮ ವೈದ್ಯರು ಒಪ್ಪಿಗೆ ನೀಡಿದ ಆಹಾರಗಳನ್ನು ನಿಯಮಿತವಾಗಿ ಸೇವಿಸಿ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸಿ....

ಚೆನ್ನಾಗಿ ನೀರು ಮತ್ತು ಹಾಲು ಕುಡಿಯಿರಿ

ಚೆನ್ನಾಗಿ ನೀರು ಮತ್ತು ಹಾಲು ಕುಡಿಯಿರಿ

ನೀರು ಮತ್ತು ಹಾಲು ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿರುವಂತೆಯೇ ತಾಯಿಹಾಲಿನ ಉತ್ಪಾದನೆಯಲ್ಲಿಯೂ ನೀರು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸುವಲ್ಲಿ ಅತ್ಯುತ್ತಮವಾದುದು ಹಸುವಿನ ಹಾಲು. ಇದರಲ್ಲಿ ಶೇಖಡಾ ಎಂಭತ್ತು ಅಪ್ಪಟ ನೀರು ಇರುವುದರಿಂದ ಹಾಗೂ ಹಾಲಿನಲ್ಲಿರುವ ಇತರ ಪೋಷಕಾಂಶಗಳು ತಾಯಿಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಬೇರೆ ಸಮಯದಲ್ಲಿ ಎಂಟು ಲೋಟ ನೀರು ನಿಮಗೆ ಅಗತ್ಯವಿದೆ. ಪ್ರಥಮ ತಿಂಗಳುಗಳಲ್ಲಿ ಈ ಪ್ರಮಾಣವನ್ನು ಸುಮಾರು ಹನ್ನೆರಡು ಲೋಟಗಳಿಗೆ ಹೆಚ್ಚಿಸುವುದು ಒಳಿತು.

ಬಾದಾಮಿ ಮತ್ತು ಗೋಡಂಬಿ

ಬಾದಾಮಿ ಮತ್ತು ಗೋಡಂಬಿ

ಪ್ರತಿದಿನ ಕೆಲವು ಬಾದಾಮಿ ಮತ್ತು ಗೋಡಂಬಿಗಳನ್ನು ಕುರುಕುವ ಮೂಲಕವೂ ತಾಯಿಹಾಲನ್ನು ಹೆಚ್ಚಿಸಬಹುದು. ಆದರೆ ಒಂದು ದಿನಕ್ಕೆ ಹತ್ತಕ್ಕಿಂತ ಹೆಚ್ಚು ಬಾದಾಮಿ ಅಥವಾ ಗೋಡಂಬಿಯನ್ನು ಸೇವಿಸಬೇಡಿ.

ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳನ್ನು ಹೆಚ್ಚಾಗಿ ಸೇವಿಸಿ

ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳನ್ನು ಹೆಚ್ಚಾಗಿ ಸೇವಿಸಿ

ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳಲ್ಲಿ ತಾಯಿಹಾಲನ್ನು ಹೆಚ್ಚಿಸುವ ಪೋಷಕಾಂಶಗಳಿವೆ. ಇವುಗಳನ್ನು ಸಾಧ್ಯವಾದಷ್ಟು ಹಸಿಯಾಗಿ ಸೇವಿಸಿ. ತೆಳುವಾದ ಬಿಲ್ಲೆಗಳಂತೆ ಕತ್ತರಿಸಿ ಪ್ರತಿ ಊಟದಲ್ಲಿ ಸಲಾಡ್ ರೂಪದಲ್ಲಿ ಸೇವಿಸಿ. ಇದರಲ್ಲಿ ಬೀಟ್ ರೂಟ್ ಅತ್ಯುತ್ತಮವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿಗೆ ತಾಯಿಹಾಲನ್ನು ಹೆಚ್ಚಿಸುವ ಶಕ್ತಿಯೂ ಇದೆ. ಮೂರು ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಲೋಟ ನೀರಿನಲ್ಲಿ ಕುದಿಸಿ. ಕುದಿಬಂದ ಬಳಿಕ ಜ್ವಾಲೆಯನ್ನು ಚಿಕ್ಕದಾಗಿಸಿ ಈ ನೀರು ಕಾಲುಭಾಗವಾಗುವವರೆಗೂ ಮುಂದುವರೆಸಿ. ಈಗ ಒಂದು ಕಪ್ ಹಸುವಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿ ಬರಿಸಿ. ಕುದಿಬಂದ ಬಳಿಕ ಇಳಿಸಿ ಸೋಸಿ ಅರ್ಧ ಚಮಚ ಜೇನು ಸೇರಿಸಿ ಕಲಕಿ. ಈ ದ್ರವವನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಸುಮಾರು ಆರು ತಿಂಗಳವರೆಗೂ ಇದನ್ನು ಕುಡಿಯುವುದು ಶ್ರೇಯಸ್ಕರ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳಲ್ಲಿ ಅತ್ಯುತ್ತಮ ಪ್ರಮಾಣದ ವಿಟಮಿನ್ ಕೆ. ಇದೆ. ಈ ಪೋಷಕಾಂಶ ರಕ್ತಹೆಪ್ಪುಗಟ್ಟುವ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ಹೆಚ್ಚಿಸಲೂ ನೆರವಾಗುತ್ತದೆ. ಈಗ ತಾನೇ ಹೂಬಿಟ್ಟ ತುಳಸಿ ಗಿಡದ ಎಲೆಗಳು ತಾಯಿಹಾಲಿಗೆ ಅತ್ಯುತ್ತಮವಾಗಿವೆ. ಹೂಗಳ ಕೆಳಭಾಗದ ಸುಮಾರು ಹತ್ತು ಎಲೆಗಳನ್ನು ಚೆನ್ನಾಗಿ ಕೊಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಒಂದು ನಿಮಿಷ ಕುದಿದ ಬಳಿಕ ಉರಿಯನ್ನು ತುಂಬಾ ಚಿಕ್ಕದಾಗಿಸಿ ಐದು ನಿಮಿಷ ಬಿಡಿ. ಬಳಿಕ ಈ ನೀರನ್ನು ನೋಸಿ ಎರಡು ಹನಿ ಜೇನುತುಪ್ಪವನ್ನು ಸೇರಿಸಿ. ತಣಿದ ಬಳಿಕ ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಬಾರಿಗೆ ಅರ್ಧ ಕಪ್). ಮಗುವಿಗೆ ಆರು ತಿಂಗಳು ತುಂಬುವವರೆಗೂ ಈ ನೀರನ್ನು ಕುಡಿಯಬಹುದು.

ಓಟ್ಸ್

ಓಟ್ಸ್

ಓಟ್ಸ್ ಕಾಳುಗಳನ್ನು ಬೆಳಗ್ಗಿನ ಉಪಾಹಾರದಲ್ಲಿ ಸೇವಿಸುವ ಮೂಲಕ ತಾಯಿಹಾಲನ್ನು ಹೆಚ್ಚಿಸಬಹುದು. ಹಾಲಿನೊಂದಿಗೆ ಕುದಿಸಿ ಸಕ್ಕರೆ ಸೇರಿಸಿದ ಖಾದ್ಯ ರುಚಿಕರವೂ ಆರೋಗ್ಯಕರವೂ ಹೌದು. ಒಂದು ವೇಳೆ ಓಟ್ಸ್ ಲಭ್ಯವಿಲ್ಲದಿದ್ದರೆ ನವಣೆಯನ್ನೂ ಬಳಸಬಹುದು.

ಮೆಂತೆಕಾಳುಗಳು

ಮೆಂತೆಕಾಳುಗಳು

ಮೆಂತೆಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ತಾಯಿಹಾಲನ್ನು ಹೆಚ್ಚಿಸಬಹುದು. ಒಂದು ಕಪ್ ಕುದಿಯುವ ನೀರಿನಲ್ಲಿ ಸುಮಾರು ಇಪ್ಪತ್ತು ಮೆಂತೆಕಾಳುಗಳನ್ನು ಹಾಕಿ ಅರ್ಧ ಗಂಟೆ ಬಿಡಿ. ಬಳಿಕ ಇದನ್ನು ಸೋಸಿ ಟೀ ಯಂತೆ ದಿನಕ್ಕೆರಡು ಬಾರಿ ಕುಡಿಯಿರಿ. ಇದನ್ನು ಪ್ರಥಮ ಒಂದು ಅಥವಾ ಎರಡು ತಿಂಗಳು ಮಾತ್ರ ಸೇವಿಸಿ. ಇನ್ನೊಂದು ವಿಧಾನದಲ್ಲಿ ಅರ್ಧ ಕಪ್ ಜೀರಿಗೆ, ಅರ್ಧ ಕಪ್ ಮೆಂತೆ ಮತ್ತು ಒಂದು ಚಿಕ್ಕ ತುಂಡು ಕಲ್ಲುಸಕ್ಕರೆಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಅರೆದು ಪುಡಿಮಾಡಿ. ಈ ಪುಡಿಯನ್ನು ತಣ್ಣನೆಯ ಹಾಲಿನಲ್ಲಿ ಸೇರಿಸಿ ಪ್ರತಿದಿನ ಮೂರು ಬಾರಿ ಹದಿನೈದು ದಿನಗಳ ಕಾಲ ಕುಡಿಯಿರಿ.

ಶುಂಠಿಯ ಪೇಸ್ಟ್

ಶುಂಠಿಯ ಪೇಸ್ಟ್

ನಿಮ್ಮ ನಿತ್ಯದ ಅಡುಗೆಗಳಲ್ಲಿ ಶುಂಠಿ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ಹಸಿಶುಂಠಿಯ ಪೇಸ್ಟ್ ಮಾಡಿಕೊಂಡು ನಿಮ್ಮ ನಿತ್ಯದ ಅಡುಗೆಗಳಾದ ಸಾರು, ಪಲ್ಯ ಮೊದಲಾದವುಗಳ ಜೊತೆ ಸೇರಿಸುವ ಮೂಲಕ ರುಚಿಯನ್ನು ಹೆಚ್ಚಿಸುವ ಜೊತೆಗೆ ತಾಯಿಹಾಲಿನ ಉತ್ಪಾದನೆಯಲ್ಲಿಯೂ ಹೆಚ್ಚಳವಾಗುತ್ತದೆ.

ಎಲೆಗಳ್ಳುಳ್ಳ ತರಕಾರಿಗಳ ಸೇವನೆ

ಎಲೆಗಳ್ಳುಳ್ಳ ತರಕಾರಿಗಳ ಸೇವನೆ

ಹಸಿರನ್ನು ಹೆಚ್ಚು ಸೇವಿಸುವುದು ಸೂಕ್ತ. ಗಾಢ ವರ್ಣದ ಎಲೆಗಳುಳ್ಳ ತರಕಾರಿಗಳು ಅಂದರೆ ಪಾಲಾಕ್ ಮತ್ತು ಸಬ್ಬಸಿಗೆ ಎಲೆಗಳು ಪೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶವನ್ನು ಒಳಗೊಂಡಿರುವುದರಿಂದ ಹಾಲುಣಿಸುವುದಕ್ಕೆ ಸಹಕಾರಿಯಾಗಿದೆ. ಭಾರತದಲ್ಲಿ ಊಟದ ನಂತರ ಎಲೆಅಡಿಕೆ ಹಾಕುವುದು ಸರ್ವೇ ಸಾಮಾನ್ಯವಾದ ಪದ್ಧತಿ ಎಂದೆನಿಸಿದ್ದು ಈ ಎಲೆಯಲ್ಲಿ ಕ್ಯಾಲ್ಶಿಯಮ್, ಕ್ಯಾರೊಟಿನ್, ರಿಬೋಫ್ಲಾವಿನ್, ನಿಯಾಸಿನ್, ಅಯೋಡಿನ್, ಹಾಲುಣಿಸಲು ನೆರವಾಗುವ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಅಂಶಗಳಿವೆ. ಇದರೊಂದಿಗೆ ತುಳಸಿಯನ್ನೂ ಸೇವಿಸಬಹುದಾಗಿದೆ.

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹಣ್ಣುಗಳಾದ ಕಲ್ಲಂಗಡಿ, ಆಪ್ರಿಕೋಟ್ಸ್ ತರಕಾರಿಗಳಾದ ಹಸಿರು ಪಪ್ಪಾಯ, ಸೋರೆಕಾಯಿ ಹಾಲು ಉತ್ಪತ್ತಿಯನ್ನು ವರ್ಧಿಸಲು ಸಹಕಾರಿಯಾಗಿದೆ. ಕ್ಯಾರೇಟ್‎ನಲ್ಲಿ ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಾಗಿರುವುದರಿಂದ ತಾಯಿಯ ಆಹಾರದಲ್ಲಿ ಇದನ್ನು ಬಳಸಿಕೊಳ್ಳಲೇಬೇಕು. ಶತಾವರಿಯಲ್ಲಿ ಖನಿಜಗಳು ಹೇರಳವಾಗಿದ್ದು, ಇದನ್ನು ಶಿಫಾರಸು ಮಾಡುತ್ತಾರೆ. ಅಂತೆಯೇ ಶುಂಠಿಯ ಸೇವನೆಯನ್ನು ಕೂಡ ಮಾಡಬಹುದಾಗಿದೆ.

ಸೋರೆಕಾಯಿ

ಸೋರೆಕಾಯಿ

ಸ್ತನದ ಹಾಲು ಉತ್ಪಾದನೆಗೆ ಎಲ್ಲಾ ಸುವಾಸನೆಯ ಪ್ರಭೇದಗಳು ಒಳ್ಳೆಯದು. ಆದರೆ ಏಕೆ ನಿರ್ದಿಷ್ಟವಾಗಿ ಸೋರೆಕಾಯಿ ಎಂದರೆ ಈ ಸಸ್ಯವು 96% ನಷ್ಟು ನೀರು ಹೊಂದಿದೆ ಮತ್ತು ಈಗಾಗಲೇ ಹೇಳಿದಂತೆ, ಸ್ತನ್ಯಪಾನದಲ್ಲಿ ನೀರು ಪ್ರಧಾನವಾಗಿರುತ್ತದೆ. ಸೋರೆ ಹಾಲುಣಿಸುವಿಕೆಯನ್ನು ಪ್ರಚೋದಿಸುತ್ತದೆ. ಇದನ್ನು ಜ್ಯೂಸ್‌, ಮೇಲೋಗರ, ಅಥವಾ ಸಿಹಿತಿಂಡಿ ರೂಪದಲ್ಲಿ ಸೇವಿಸಬಹುದು.

ಹಣ್ಣಿನ ರಸಗಳು

ಹಣ್ಣಿನ ರಸಗಳು

ನೀರನ್ನು ಹೊರತುಪಡಿಸಿ ಮತ್ತೊಂದು ದ್ರವ ಪದಾರ್ಥಗಳು ನಿಸ್ಸಂಶಯವಾಗಿ ರಸವನ್ನು ಹೊಂದಿರುವುದಿಲ್ಲ ಆದರೆ ಹಣ್ಣಿನಲ್ಲಿ ನೀರಿನ ಅಂಶ ಇರುತ್ತದೆ ಆದ್ದರಿಂದ ತಾಯಂದಿರು ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಕು. ಸಮಯಕ್ಕೆ ಸರಿಯಾಗಿ ದೊರೆಯುವ ಹಣ್ಣುಗಳ ಲಭ್ಯತೆಯನ್ನು ಪರಿಗಣಿಸಬಹುದು. ಕಲ್ಲಂಗಡಿ, ಕಿತ್ತಳೆ, ದಾಳಿಂಬೆ, ಮೊದಲಾದ ಹಣ್ಣುಗಳನ್ನು ಜ್ಯೂಸ್ ರೂಪದಲ್ಲಿ ಸೇವಿಸಿ. ಹೆಚ್ಚಿನ ನೀರಿನ ಅಂಶದೊಂದಿಗೆ ಹಣ್ಣುಗಳನ್ನು ಆರಿಸಿಕೊಳ್ಳುವುದು ಒಳ್ಳೆಯದು.

ಸರಿಯಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ

ಸರಿಯಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ

ಕ್ಯಾರೆಟ್ ವಿಟಮಿನ್ ಎ ಅನ್ನು ಹೇರಳವಾಗಿ ಒಳಗೊಂಡಿದೆ. ಎರಡು ಲೋಟ ಕ್ಯಾರೆಟ್ ರಸವನ್ನು ಸೇವಿಸುವುದು ಉಪಹಾರ ಮತ್ತು ಊಟದ ಸಮಯದಲ್ಲಿ ಒಳ್ಳೆಯದು.

English summary

how to increase breast milk naturally at home

There are certain foods that increase breast milk and enhance lactation. Breast milk contains all the prime nutrients required for an overall growth and brain development of a newborn baby. Here is a list of the top foods that you must include in your diet to increase breast milk. These are best foods to increase breast milk production & are great in terms of bringing you back to health, as well as aid in milk production.
Please Wait while comments are loading...
Subscribe Newsletter