Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಎದೆಹಾಲುಣಿಸುವಾಗ ಆದಷ್ಟು ಎಚ್ಚರವಾಗಿರಿ! ಮಗುವಿನ ಆರೋಗ್ಯಕ್ಕೇ ಅಪಾಯವಾಗಬಹುದು!
ಗರ್ಭಧಾರಣೆ ಮತ್ತು ಪ್ರಸವದ ಬಳಿಕದ ಸಮಯದಲ್ಲಿ ಸೇವಿಸುವ ಪ್ರತಿಯೊಂದು ಆಹಾರವು ತುಂಬಾ ಮುಖ್ಯವಾಗಿರುತ್ತದೆ. ಯಾಕೆಂದರೆ ತಾಯಿಯು ತಿನ್ನುವಂತಹ ಪ್ರತಿಯೊಂದು ಆಹಾರವು ಮಗುವಿನ ಮೇಲೆ ಪರಿಣಾಮ ಬೀರುವುದು. ತಿನ್ನುವಂತಹ ಆಹಾರದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಸೇವಿಸುವಂತಹ ಆಹಾರವು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
ಮಗು ತಾನಾಗಿಯೇ ಆಹಾರ ಸೇವಿಸುವ ತನಕ ತಾಯಿಯ ಎದೆಹಾಲಿನಿಂದಲೇ ಅದಕ್ಕೆ ಬೇಕಾಗಿರುವ ಪ್ರತಿಯೊಂದು ಪೋಷಕಾಂಶಗಳು ಸಿಗುವುದು. ಇದರಿಂದ ಮಗುವಿಗೆ ಹಾನಿಯಾಗುವ ಯಾವುದೇ ಆಹಾರವನ್ನು ಬಾಣಂತಿ ಮಹಿಳೆಯರು ಸೇವಿಸಬಾರದು. ಮಗುವಿಗೆ ಎದೆಹಾಲು ನೀಡುವಂತಹ ಬಾಣಂತಿ ಮಹಿಳೆ ನೀವಾಗಿದ್ದರೆ ಬೋಲ್ಡ್ ಸ್ಕೈ ಹೇಳುವಂತಹ ಈ ಕೆಳಗಿನ ಸಲಹೆಗಳನ್ನು ಸರಿಯಾಗಿ ಪಾಲಿಸಬೇಕು...

ಎದೆಹಾಲುಣಿಸುವಾಗ ಏನನ್ನು ಕಡೆಗಣಿಸಬೇಕು?
ಕೆಲವು ಮಹಿಳೆಯರಿಗೆ ಕೂಡ ಧೂಮಪಾನ ಮಾಡುವ ಅಭ್ಯಾಸವಿರುವುದು. ಇಂತಹ ಮಹಿಳೆಯರು ಗರ್ಭಿಣಿಯಾಗಿರುವಾಗ ಮತ್ತು ಬಾಣಂತಿಯಾಗಿರುವ ಸಮಯದಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ಬಿಡಲೇಬೇಕು. ನಿಮ್ಮ ಮನೆಯಲ್ಲಿ ಅಥವಾ ಆಸುಪಾಸಿನಲ್ಲಿ ಧೂಮಪಾನಿಗಳು ಇದ್ದರೆ ಅವರ ಹತ್ತಿರ ನಿಲ್ಲಬೇಡಿ. ನಿಂತರೆ ಆ ಧೂಮದಿಂದ ಮಗುವಿಗೆ ತೊಂದರೆಯಾಗಬಹುದು. ಕೆಲವು ಸಂದರ್ಭದಲ್ಲಿ ಮಗು ಗರ್ಭದಲ್ಲೇ ಸಾಯಬಹುದು. ನಿಮ್ಮ ಪತಿ ಕೂಡ ಧೂಮಪಾನ ಮಾಡದಂತೆ ನೋಡಿಕೊಳ್ಳಿ.

ಮಾತ್ರೆಗಳು
ನೀವು ಬಳಸುವಂತಹ ಮಾತ್ರೆಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಎದೆಹಾಲುಣಿಸುವ ಸಮಯದಲ್ಲಿ ನೋವು ನಿವಾರಕ ಮಾತ್ರೆಗಳು ಮತ್ತು ಇತರ ಕೆಲವು ಮಾತ್ರೆಗಳ ಸೇವನೆ ಬಿಡಬೇಕು. ಯಾವುದೇ ಆರೋಗ್ಯ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿಯಾಗಿ ಅವರಿಂದ ಸರಿಯಾದ ಮಾಹಿತಿ ಪಡೆದುಕೊಂಡು ಮಾತ್ರೆಗಳನ್ನು ಸೇವಿಸಿ. ಎದೆಹಾಲುಣಿಸುವ ವೇಳೆ ಮಾತ್ರೆಗಳನ್ನು ಸೇವಿಸಿದರೆ ಅದರಿಂದ ಮಗುವಿನ ಮೇಲೆ ಪರಿಣಾಮವಾಗಬಹುದು.

ಚರ್ಮದ ಲೋಷನ್‌ಗಳು
ಚರ್ಮಕ್ಕೆ ಹಚ್ಚಿಕೊಳ್ಳುವ ಲೋಷನ್ ಮತ್ತು ಕ್ರೀಮ್‌ಗಳ ಬಗ್ಗೆ ಬಾಣಂತಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು. ಮಗು ನಿಮ್ಮ ಚರ್ಮ ಮತ್ತು ಸ್ತನದ ತೊಟ್ಟನ್ನು ಮುಟ್ಟುವುದರಿಂದ ವೈದ್ಯರು ಸೂಚಿಸಿರುವಂತಹ ಕ್ರೀಮ್ ಹಾಗೂ ಲೋಷನ್‌ಗಳನ್ನು ಬಳಸಿ.

ಡಿಯೋಡ್ರೆಂಟ್
ಆಂಟಿಪೆಸ್ಪಿರೆಂಟ್ ಗಳು ಮತ್ತು ಡಿಯೋಡ್ರೆಂಟ್ ಗಳನ್ನು ಎದೆಹಾಲುಣಿಸುವ ಸಮಯದಲ್ಲಿ ಕಡೆಗಣಿಸಬೇಕು. ಇದರಲ್ಲಿ ಇರುವಂತಹ ವಿಷಕಾರಿ ಅಂಶಗಳು ಚರ್ಮದ ಮೇಲೆ ಉಳಿಯುತ್ತದೆ ಮತ್ತು ಇದು ಮಗುವಿಗೆ ಹಾನಿ ಉಂಟು ಮಾಡಬಹುದು.



Click it and Unblock the Notifications