For Quick Alerts
ALLOW NOTIFICATIONS  
For Daily Alerts

ಈ ವ್ಯಾಯಾಮವನ್ನು 10 ನಿಮಿಷ ಮಾಡಿದರೆ, ನಿಮ್ಮ ಮಗುವಿನ ಬುದ್ಧಿಶಕ್ತಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ!

|

ವ್ಯಾಯಾಮ ಮಾಡೋದು ಕೇವಲ ವಯಸ್ಕರಿಗೆ ಮಾತ್ರ ಎಂದು ಹೇಳಿದವರಾರು? ನಿಮ್ಮ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಯನ್ನು ಮಾಡುವುದು ಮಕ್ಕಳು ಸೇರಿದಂತೆ ಎಲ್ಲರಿಗೂ ಅವಶ್ಯಕವಾಗಿದೆ. ಆದರೆ ನಿಮ್ಮ ಮಕ್ಕಳು ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಮಕ್ಕಳ ಬುದ್ಧಿಶಕ್ತಿಗೆ ಸಂಬಂಧಿಸಿದ ಲಾಭವಿದೆ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಹಾಗಾದ್ರೆ ಏನದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮಕ್ಕಳಿಗೆ ಯಾವ ರೀತಿಯ ವ್ಯಾಯಾಮ ಪ್ರಯೋಜನಕಾರಿಯಾಗಿದೆ?:

ಮಕ್ಕಳಿಗೆ ಯಾವ ರೀತಿಯ ವ್ಯಾಯಾಮ ಪ್ರಯೋಜನಕಾರಿಯಾಗಿದೆ?:

ಮಕ್ಕಳು ಸಾಮಾನ್ಯವಾಗಿ ದಿನವಿಡೀ ತುಂಬಾ ಸಕ್ರಿಯರಾಗಿರುತ್ತಾರೆ. ಇದು ಅವರನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಪ್ರತಿದಿನ ವ್ಯವಸ್ಥಿತ 10 ನಿಮಿಷಗಳ ತ್ವರಿತ ಹೈ-ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್ (ಎಚ್‌ಐಐಟಿ) ಸೆಷನ್ ಅವರ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಆಕ್ಲೆಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

ಏನಿದು ಎಚ್‌ಐಐಟಿ ಸೆಷನ್?:

ಏನಿದು ಎಚ್‌ಐಐಟಿ ಸೆಷನ್?:

ಇದೊಂದು ವ್ಯಾಯಾಮ ವಿಧಾನವಾಗಿದ್ದು, ನಿಮ್ಮನ್ನು ಕಡಿಮೆ ಅವಧಿಯಲ್ಲಿ ಸಕ್ರಿಯರಾಗಲು ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುವ ಏರೋಬಿಟಿಕ್ ಶೈಲಿ ಆಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟ ಸಲಕರಣೆಗಳ ಅವಶ್ಯಕತೆ ಇಲ್ಲ, ಮೇಲ್ವಿಚಾರಣೆ ಅಥವಾ ಸಮಯದ ಅಗತ್ಯವೂ ಇಲ್ಲ. ವೇಗವಾಗಿ ಓಡುವುದು, ಮೆಟ್ಟಿಲು ಹತ್ತಿ-ಇಳಿಯುವುದು, ಸೈಕ್ಲಿಂಗ್ ಒಳಾಂಗಣದಲ್ಲಾದರೆ, ನಿಂತಲ್ಲೇ ಓಡುವುದು, ಕುಣಿಯುವುದು ಹೀಗೆ ನಾನಾ ವ್ಯಾಯಾಮಗಳು ಸೆಷನ್ ನಲ್ಲಿ ಸೇರಿವೆ. ನೀವು ಯಾವುದಾದರೂ ಸೆಷನ್ ಸೇರಿಕೊಂಡು ಅದರಲ್ಲಿ ಹೇಳಿಕೊಡುವ ವ್ಯಾಯಾಮವನ್ನು ಪ್ರತಿನಿತ್ಯ 10 ನಿಮಿಷ ಮಾಡಿದರೆ ಸಾಕು. ಕಡಿಮೆ ಅವಧಿಯಲ್ಲಿ ಹೆಚ್ಚು ವೇಗವಾಗಿ ಮಾಡುವುದರಿಂದ ಕ್ಯಾಲೋರಿ ಸುಡಲು ಸಹಾಯವಾಗುತ್ತದೆ ಜೊತೆಗೆ ಹೃದಯ ಮಾಡುತ್ತದೆ.

ಏನಿದು ಅಧ್ಯಯನ?:

ಏನಿದು ಅಧ್ಯಯನ?:

7-13 ವರ್ಷ ವಯಸ್ಸಿನ 318 ಮಕ್ಕಳ ಬುದ್ಧಿಶಕ್ತಿಯ ಮೇಲೆ ನಿಯಮಿತವಾದ ಏರೋಬಿಕ್ ವ್ಯಾಯಾಮದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಸಂಶೋಧಕರು ಅಧ್ಯಯನ ನಡೆಸಿದ್ದರು. ಆಗ ಮಕ್ಕಳ ಮೆದುಳಿನ ಆರೋಗ್ಯದ ಮೇಲೆ ಎಚ್‌ಐಐಟಿ ಸೆಷನ್ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂತು. ಅಧ್ಯಯನಕ್ಕಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಮತ್ತು ಮೆದುಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೀಡಲಾಯಿತು. ಇದನ್ನ ಆರು ತಿಂಗಳವರೆಗೆ ಪ್ರತಿ ವಾರ ನಡೆಸಲಾಗುತ್ತಿತು.

ಫಲಿತಾಂಶ:

ಫಲಿತಾಂಶ:

ಅಧ್ಯಯನದ ಕೊನೆಯಲ್ಲಿ, ಪ್ರತಿದಿನ ಎಚ್‌ಐಐಟಿ ವ್ಯಾಯಾಮ ನಡೆಸಿದ ಮಕ್ಕಳು ಮೌಲ್ಯಮಾಪನ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕಂಡುಬಂದಿದೆ. ಅಧ್ಯಯನದ ಆಧಾರದ ಮೇಲೆ, ಸಂಶೋಧಕರು ವ್ಯಾಯಾಮದ ಮಹತ್ವವನ್ನು ಒತ್ತಿಹೇಳಿದರು, ಆದರೆ ಅರಿವಿನ ಕೊರತೆಗೆ ವ್ಯಾಯಾಮವನ್ನು ಮಾತ್ರ ಪರಿಹಾರವೆಂದು ಪರಿಗಣಿಸಬಾರದು ಎಂದು ಅವರು ಹೇಳಿದರು. ವ್ಯಾಯಾಮದ ಜೊತೆಗೆ ಹಲವಾರು ವಿಷಯಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೆದುಳಿನ ಶಕ್ತಿಯನ್ನು ಸುಧಾರಿಸುವ ಇತರ ಮಾರ್ಗಗಳು:

ಮೆದುಳಿನ ಶಕ್ತಿಯನ್ನು ಸುಧಾರಿಸುವ ಇತರ ಮಾರ್ಗಗಳು:

ಮಕ್ಕಳು ಉತ್ತಮ ನೆನಪಿನ ಶಕ್ತಿ ಹೊಂದಿರುವುದು ಬಹಳ ಮುಖ್ಯ. ನಿಮ್ಮ ಮಗುವಿನ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ಕೆಲವು ವಿಷಯಗಳು ಇಲ್ಲಿವೆ.

ಧ್ಯಾನ ಮಾಡುವುದು:

ಧ್ಯಾನ ಮಾಡುವುದು:

ಧ್ಯಾನ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸಲು ಮತ್ತು ಅಧ್ಯಯನದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಧ್ವನಿ ಧ್ಯಾನ, ಲಘು ಧ್ಯಾನ ಅಥವಾ ಪಠಣವು ದಿನಚರಿಯಲ್ಲಿ ಧ್ಯಾನವನ್ನು ಸೇರಿಸಲು ಹಲವಾರು ಮಾರ್ಗಗಳಿವೆ.

ಡಿಜಿಟಲ್ ಬಳಕೆ ಕಡಿಮೆ ಮಾಡಿ:

ಡಿಜಿಟಲ್ ಬಳಕೆ ಕಡಿಮೆ ಮಾಡಿ:

ಟಿವಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಇದರಿಂದ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಮಾಹಿತಿಯನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪೋಷಕಾಂಶಯುಕ್ತ ಆಹಾರ:

ಪೋಷಕಾಂಶಯುಕ್ತ ಆಹಾರ:

ಮೆದುಳು ಸೇರಿದಂತೆ ದೇಹದಲ್ಲಿ ನಡೆಯುವ ಎಲ್ಲಾ ಪ್ರಮುಖ ಕಾರ್ಯಗಳಿಗೆ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಊಟ ಮಾಡುವುದರಿಂದ ಮೆಮೊರಿ ನಷ್ಟವನ್ನು ತಡೆಯಬಹುದು ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸಬಹುದು.

ಪಜಲ್ ಬಿಡಿಸುವುದು:

ಒಗಟು ಅಥವಾ ಪಜಲ್ ಗಳನ್ನು ಪರಿಹರಿಸುವುದು ಮೆದುಳಿಗೆ ಸವಾಲು ಹಾಕುವ ಮತ್ತೊಂದು ಅತ್ಯುತ್ತಮ ಮಾರ್ಗವಾಗಿದೆ. ಇದು ಬುದ್ಧಿಮಟ್ಟ ಮತ್ತು ಮೆದುಳಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಉತ್ತಮ ಮಾನಸಿಕ ವ್ಯಾಯಾಮವಾಗಿದೆ.

English summary

10 Minutes Exercises for Every Day Can Boost Your Child's Brain Health

Here we talking about 10 minutes Exercises for every day can boost your child's brain health, read on
Story first published: Saturday, May 29, 2021, 17:27 [IST]
X
Desktop Bottom Promotion