For Quick Alerts
ALLOW NOTIFICATIONS  
For Daily Alerts

ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವ ಯೋಗಾಸನಗಳು

|

ಯೋಗ ಎನ್ನುವ ಅದ್ಭುತ ಕಲೆಯನ್ನು ಅಭ್ಯಾಸ ಮಾಡಿದರೆ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಯೋಗದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಇದರಿಂದ ಮನಸ್ಸು ಉಲ್ಲಾಸಗೊಳ್ಳುವುದು, ದೇಹಕ್ಕೆ ನವ ಚೈತನ್ಯ ದೊರೆಯುವುದು, ದೊರೆಯುವುದು, ಇನ್ನು ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುವುದು.

ಇನ್ನು ಮಕ್ಕಳಿಗೆ ಯೋಗಾಭ್ಯಾಸ ಮಾಡುವುದರಿಂದ ಅವರಿಗೆ ಅನೇಕ ಅನುಕುಲಗಳು ಉಂಟಾಗುತ್ತವೆ, ಯೋಗ ಅವರಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಇದರಿಂದ ಅಧ್ಯಯನಕ್ಕೆ ಸಹಕಾರಿಯಾಗುವುದು, ಇನ್ನು ಮಕ್ಕಳಲ್ಲಿ ಮನೋಬಲವನ್ನು ಹೆಚ್ಚಿಸುವುದರಿಂದ ಅವರು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುತ್ತಾರೆ.

Kids height

ಇನ್ನು ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಯೋಗ ತುಂಬಾ ಸಹಕಾರಿ. ಮಕ್ಕಳು ಎತ್ತರವಾಗಿ ಬೆಳೆಯಲು ಈ ಪುಡಿಯನ್ನು ಹಾಲಿನಲ್ಲಿ ಹಾಕು ಕುಡಿಸಿ, ಈ ಮಾತ್ರೆ ನೀಡಿ ಮುಂತಾದ ಜಾಹೀರಾತುಗಳನ್ನು ನೋಡಿರಬಹುದು. ಆದರೆ ಇಂಥ ಜಾಹೀರಾತಿಗೆ ಮಾರುಹೋಗಿ ಮಕ್ಕಳಿಗೆ ಅಗ್ಯವಿಲ್ಲದ ಪುಡಿ, ಮಾತ್ರೆಗಳನ್ನು ನೀಡುವ ಬದಲು ಅವರಿಗೆ ಆರೋಗ್ಯಕರವಾದ ಮನೆ ಆಹಾರ ನೀಡಿ ಜತೆಗೆ ಯೋಗಾಸನದ ಈ ಭಂಗಿಗಳನ್ನು ಅಭ್ಯಾಸ ಮಾಡಿದರೆ ಬೆಳೆಯುತ್ತಾ ಎತ್ತರದ ಮೈಕಟ್ಟನ್ನು ಪಡೆಯಬಹುದಾಗಿದೆ.

ಮಕ್ಕಳ ಬೆಳವಣಿಗೆ ಸರಿಯಾಗಿದೆ ಎಂದು ತಿಳಿಯುವುದು ಹೇಗೆ?

 1. ಭುಜಂಗಾಸನ: (ನಾಗರಹಾವಿನ ಭಂಗಿ)

1. ಭುಜಂಗಾಸನ: (ನಾಗರಹಾವಿನ ಭಂಗಿ)

ಹೆಸರೇ ಸೂಚಿಸಿದಂತೆ ಹೆಡೆ ಎತ್ತಿದ ಸರ್ಪದ ರೀತಿಯ ಭಂಗಿ ಇದಾಗಿದೆ. ಭುಜಂಗಾಸನವು ಭುಜ, ಎದೆ ಮತ್ತು ಕಿಬ್ಬೊಟ್ಟೆಯ ಭಾಗದ ಮಾಂಸಖಂಡಗಳನ್ನು ವಿಸ್ತರಿಸುವುದು. ಇದು ಉತ್ತಮವಾದ ನಿಲುವನ್ನು ಸಾಧಿಸುವುದರ ಮೂಲಕ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವುದು.

ಮಾಡುವ ಕ್ರಮ:

ಮ್ಯಾಟ್‌ ಮೇಲೆ ಹೊಟ್ಟೆಯ ಮೇಲೆ ಮಲಗಿ. ಕಾಲುಗಳನ್ನು ಜೋಡಿಸಿ, ನಂತರ ಕೈಗಳನ್ನು ನೆಲಕ್ಕೆ ಊರಿ ಎದೆಯನ್ನು ಮೇಲಕ್ಕೆ ಎತ್ತಿ, ಕತ್ತನ್ನು ಹಿಂದಕ್ಕೆ ವಾಲಿ, ಕಣ್ಣುಗಳು ಆಕಾಶದ ಕಡೆಗೆ ನೋಡುವಂತಿರಲಿ. ದೃಷ್ಟಿ ಮೇಲೆ ಇದ್ದರೆ, ಎರಡು ಭುಜಗಳು ಹಿಂದಕ್ಕೆ, ಎರಡು ಮೊಣಕೈಗಳ ಮಧ್ಯದಲ್ಲಿ ನಾಭಿಯ ಭಾಗ ಬಂದಿರಬೇಕು. ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗದವರೆಗೆ ಶರೀರ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಭಂಗಿಯಲ್ಲಿ ಉಸಿರಾಟ ಸಹಜ ಸ್ಥಿತಿಯಲ್ಲಿರಬೇಕು. ಹೀಗೆ 1 ನಿಮಿಷವಿದ್ದು ನಿಧಾನಕ್ಕೆ ಮೊದಲಿನ ಸ್ಥಿತಿಗೆ ಬನ್ನಿ.

2. ತಾಡಾಸನ ( ಮರದ ಭಂಗಿ )

2. ತಾಡಾಸನ ( ಮರದ ಭಂಗಿ )

ಈ ಭಂಗಿಯು ಬೆನ್ನು ಮೂಳೆಯನ್ನು ನೇರವಾಗಿಸಲು ಸಹಾಯ ಮಾಡುತ್ತದೆ ಹಾಗೂ ಮಕ್ಕಳ ಬೆಳವಣಿಗೆಗೆ ತುಂಬಾ ಸಹಕಾರಿ.

ಮಾಡುವ ಕ್ರಮ

ತಾಡಾಸನ ಮಾಡಲು ಮೊದಲು ಲಂಬವಾಗಿ ನಿಲ್ಲಬೇಕು, ಹಿಮ್ಮಡಿಗಳು ಒಂದಕ್ಕೊಂದು ತಾಗುವಂತೆ ನಿಲ್ಲಿ, ಕೈಗಳನ್ನು ಎದೆಯ ಸಮನಾಂತರ ತಂದು ನಮಸ್ಕಾರ ಮುದ್ರೆಯಲ್ಲಿ ನಿಲ್ಲಿ ( ಇಲ್ಲಾ ಎರಡೂ ಕೈಗಳು ಶರೀರದ ಪಕ್ಕದಲ್ಲಿ ನೀಳವಾಗಿ ಚಾಚಿಕೊಂಡಂತೆ ಇರಲಿ). ಈಗ ನಿಧಾನಕ್ಕೆ ಉಸಿರು ಎಳೆಯುತ್ತಾ, ಕಾಲಿನ ಹಿಮ್ಮಡಿಯನ್ನು ಮೇಲಕ್ಕೆ ಎತ್ತಿ,ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳಿ, ನಂತರ ನಿಧಾನಕ್ಕೆ ಹೊರಗೆ ಬಿಡಿ, ಶರೀರದಲ್ಲಿ ಎಲ್ಲೂ ಸಡಿಲತೆ ಇರಬಾರದು, ಉಸಿರಾಟ ಕ್ರಿಯೆ ನಿಧಾನವಾಗಿರಲಿ. ಈ ಭಂಗಿಯಲ್ಲಿ ಒಂದು ನಿಮಿಷ ಇರಿ.

3. ನಟರಾಜಾಸನ

3. ನಟರಾಜಾಸನ

ಈ ಭಂಗಿಯು ನಾಟ್ಯದ ಒಂದು ಭಂಗಿಯಾಗಿದ್ದು ಈ ಆಸನ ಶ್ವಾಸಕೋಶ ಮತ್ತು ಎದೆಯನ್ನು ಹಿಗ್ಗಿಸಿ, ಪೃಷ್ಠ , ಕಾಲುಗಳು, ಮೀನುಖಂಡ, ಮಣಿಕಟ್ಟು, ತೋಳುಗಳು ಮತ್ತು ಬೆನ್ನು ಮೂಳೆಗಳ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ.

ಮಾಡುವ ವಿಧಾನ

ಈ ಆಸನ ಮಾಡಲು ಮ್ಯಾಟ್‌ ಮೇಲೆ ಮೊದಲು ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ನಂತರ ಸ್ವಲ್ಪ ಮುಂದೆ ಬಾಗಿ ಬಲಗಾಲನ್ನು ಹಿಂದೆಕ್ಕೆ ತಂದು ಮೇಲೆ ಎತ್ತಿ ಬಲಗೈಯಲ್ಲಿ ಹಿಡಿದುಕೊಳ್ಳಿ. ಈಗ ಎಡಗೈಯನ್ನು ಮುಂದೆ ಚಾಚಿ. ಎಡಗಾಲಿನ ಮಂಡಿ ಮಡಚಿರಬಾರದು, ದೃಷ್ಟಿ ಮುಂದಕ್ಕೆ ನೆಟ್ಟಿರಲಿ. ಈ ರೀತಿ 30 ಸೆಕೆಂಡ್ ಇದ್ದು ಮತ್ತೊಂದು ಕಡೆ ಆಸನ ಮುಂದುವರೆಸಿ.

4. ಸೂರ್ಯ ನಮಸ್ಕಾರ

4. ಸೂರ್ಯ ನಮಸ್ಕಾರ

ಸೂರ್ಯನಮಸ್ಕಾರದ 12 ಬಗೆಯ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಕೀಲುಗಳು ಮತ್ತು ಮಾಂಸಖಂಡಗಳು ಸಡಿಲವಾಗುತ್ತವೆ ಇದರಿಂದ ಎತ್ತರ ಬೆಳೆಯಲು ಸಹಕಾರಿ. ಸುರ್ಯನಮಸ್ಕಾರದಲ್ಲಿ ಕಿಬ್ಬೊಟ್ಟೆಯ ಅಂಗಗಳನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಈ ಆಸನ ಸಹಕಾರಿಯಾಗಿದೆ.

ಶರೀರದ ಬೆಳವಣಿಗೆಯು ಮಕ್ಕಳಿಂದ ಮಕ್ಕಳಿಗೆ ಬೇರೆ-ಬೇರೆ ರೀತಿಯಲ್ಲಿ ಇರುತ್ತದೆ. ಯೋಗಾಭ್ಯಾಸವು ಮಕ್ಕಳ ಶರೀರವನ್ನು ನಯಗೊಳಿಸಿ ಎತ್ತರ ಹೆಚ್ಚಿಸುವಲ್ಲಿ ಖಂಡಿತವಾಗಿಯೂ ಸಹಾಯಕವಾಗುತ್ತದೆ ಆದರೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶದ ಕಡೆಗೂ ನಾವು ಗಮನಹರಿಸಬೇಕು.

ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ಆಹಾರಗಳು

ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ಆಹಾರಗಳು

ಈ ವ್ಯಾಯಾಮದ ಜತೆಗೆ ಈ ಆಹಾರಗಳನ್ನು ನೀಡಿದರೆ ಮಕ್ಕಳು ನೀಳಕಾಯದ ಜತೆಗೆ ಗಟ್ಟಿಮುಟ್ಟಾಗಿ ಇರುತ್ತಾರೆ.

* ಮಕ್ಕಳಿಗೆ ದಿನದಲ್ಲಿ ಎರಡು ಲೋಟ ಹಾಲು ತಪ್ಪದೆ ಕೊಡಿ, ಹಾಲು ಜತೆ ಸ್ವಲ್ಪ ಡ್ರೈಫ್ರೂಟ್ಸ್ ಹಾಕಿ ಕೊಟ್ಟರೆ ಮತ್ತಷ್ಟು ಒಳ್ಳೆಯದು.

* ಚೀಸ್‌ನಲ್ಲಿ ಕ್ಯಾಲ್ಸಿಯಮ ಅಧಿಕವಿರುವುದರಿಂದ ಮಕ್ಕಳಿಗೆ ನೀಡಬೇಕಾದ ಆಹಾರಗಳಲ್ಲಿ ಇದು ಕೂಡ ಒಂದಾಗಿದೆ.

* ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ, ಕ್ಯಾಲ್ಸಿಯಂ ಇದ್ದು ಮಾಂಸಾಹಾರ ಸೇವಿಸುವವರು ಮಕ್ಕಳಿಗೆ ಇದನ್ನು ನೀಡಬಹುದು.

* ಸೊಪ್ಪು ಹೆಚ್ಚಾಗಿ ಕೊಡಿ, ಇದರಿಂದ ಕಬ್ಬಿಣದಂಶದ ಕೊರತೆ ಉಂಟಾಗುವುದಿಲ್ಲ.

* ಮಕ್ಕಳಿಗೆ ಮೊಸರು ಕೊಡುವುದು ಅವರ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.

* ಇನ್ನು ಮೊಳಕೆ ಬರಿಸಿದ ಕಾಳುಗಳನ್ನು ನೀಡಿ.

English summary

Yoga Poses To Increase Height in Kids

If you are thinking about your kids growth, ask them to practice Yoga. Yoga Will help over all development of kids. Here we have explained some yogasana which will help to grow tall and also increase the concentration. To Know more go through this article.
X
Desktop Bottom Promotion