For Quick Alerts
ALLOW NOTIFICATIONS  
For Daily Alerts

ಅಪ್ಪ-ಅಮ್ಮನ ಮುದ್ದಿನ ಒಂದೇ ಕೂಸಿದ್ದರೆ ಏನೆಲ್ಲಾ ಲಾಭವಿದೆ ಗೊತ್ತಾ?

|

ಮೊದಲೆಲ್ಲಾ ಮನೆಯಲ್ಲಿ ಕನಿಷ್ಠ 5 ರಿಂದ 6 ಮಕ್ಕಳಿರುವ ಕುಟುಂಬವಿರುತ್ತಿತ್ತು, ಕಾಲ ಬದಲಾದಂತೆ ಮಕ್ಕಳನ್ನು ಹೊರುವ ಸಂಖ್ಯೆ ಕ್ಷೀಣಿಸುತ್ತಾ ಇದೀಗ ದಂಪತಿಗಳು 'ಒಂದೇ ಮಗು ಸಾಕಪ್ಪ, ಅದನ್ನೇ ಚೆನ್ನಾಗಿ ಬೆಳೆಸೋಣ' ಎನ್ನುತ್ತಿದ್ದಾರೆ, ಇದಕ್ಕೆ ಕಾರಣ ಸಾಕಷ್ಟು. ಹಿಂದಿನಂತೆ ಈಗ ಕೂಡು ಕುಟುಂಬಗಳಿಲ್ಲ, ದಂಪತಿಗಳಿಬ್ಬರು ಕೆಲಸ ಮಾಡುವುದರಿಂದ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಪೋಷಕರು ತಮ್ಮ ಹಳ್ಳಿ-ಊರುಗಳನ್ನು ಬಿಟ್ಟು ನಗರಗಳಿಗೆ ಬರಲು ಇಷ್ಟವಿಲ್ಲ ಹೀಗೆ ಸಾಲು ಸಾಲು ಕಾರಣಗಳಿವೆ.

ಈ ಎಲ್ಲಾ ಕಾರಣಗಳ ನಡುವೆ ಮನೆಯಲ್ಲಿ ಅಪ್ಪ-ಅಮ್ಮನ ಜತೆ ಸಹೋದರ-ಸಹೋದರಿಯರಿಲ್ಲದೆ ಒಂಟಿಯಾಗಿ ಬೆಳೆಯುವ ಮಗುವಿಗೆ ಮನೆಮಂದಿಯೆಲ್ಲಾ ಎಗ್ಗಿಲ್ಲದ ಪ್ರೀತಿ-ಕಾಳಜಿ ತೋರುತ್ತಾರೆ. ಅಪ್ಪ ಅಮ್ಮನ ಜತೆ ಮುದ್ದಾಗಿ ಬೆಳೆಯುವ ಮಗುವು ಸಹೋದರರನ್ನು ಹೊಂದದೇ ಇರುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?, ತಾನು ಒಂಟಿಯಾಗಿರುವುದು ಹೇಗೆ ಪ್ರಯೋಜನಕಾರಿ ಇಲ್ಲಿದೆ ನೋಡಿ ಉತ್ತರ:

1. ನಿಮಗೇ ಸಂಪೂರ್ಣ ಗಮನ

1. ನಿಮಗೇ ಸಂಪೂರ್ಣ ಗಮನ

ಪೋಷಕರು ಮತ್ತು ಸಂಪೂರ್ಣ ಕುಟುಂಬವು ನಿಮ್ಮ ಮೇಲೆ ಮಾತ್ರ ಕೇಂದ್ರೀಕರಿಸುತ್ತಾರೆ. ಅವರು ನಿಮ್ಮ ಬಗ್ಗೆ ಮತ್ತು ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲದರ ಬಗ್ಗೆ ಸಾಕಷ್ಟು ಗಮನ ಹರಿಸುತ್ತಾರೆ. ಆದ್ದರಿಂದಲೇ ಒಬ್ಬಂಟಿಯಾಗಿ ಬೆಳೆಯುವ ಮಕ್ಕಳು ಅವರ ಹೆತ್ತವರೊಂದಿಗೆ ನಿಕಟವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಪೋಷಕರು ಸಹ ಮಗುವಿನ ಜತೆ ಸ್ನೇಹಿತರಂತೆ ವರ್ತಿಸುತ್ತಾರೆ. ಇನ್ನು ಪಾಕೆಟ್‌ ಮನಿಗೇನೂ ಇವರಿಗೆ ಕಡಿಮೆ ಇರುವುದಿಲ್ಲ, ಅಲ್ಲದೆ ಆಗಾಗ್ಗೆ ಆಶ್ಚರ್ಯಕರ ಉಡುಗೊರೆಗಳು ಸಹ ನಿಮ್ಮದಾಗುತ್ತದೆ. ಅಂತೆಯೇ, ಕೆಲವು ಬಾರಿ ಇದು ಕಟ್ಟುನಿಟ್ಟಾದ ಪಾಲನೆಗೆ ಸಹ ಕಾರಣವಾಗಬಹುದು.

2. ಇವರ ಸಹೋದರಿ ಅಥವಾ ಸಹೋದರ ಎಂದು ಯಾರೂ ನಿಮ್ಮನ್ನು ಉಲ್ಲೇಖಿಸುವುದಿಲ್ಲ

2. ಇವರ ಸಹೋದರಿ ಅಥವಾ ಸಹೋದರ ಎಂದು ಯಾರೂ ನಿಮ್ಮನ್ನು ಉಲ್ಲೇಖಿಸುವುದಿಲ್ಲ

ನೀವು ಎಂದಿಗೂ ನಿಮ್ಮ ಸಹೋದರ ಅಥವಾ ಸಹೋದರಿಯ ನೆರಳಿನಲ್ಲಿ ಇರುವುದಿಲ್ಲ. ನಿಮ್ಮ ಒಡಹುಟ್ಟಿದವರ ಹೆಸರು ಸೂಚಿಸಿ ಶಾಲೆಯಲ್ಲಿ ಯಾವುದೇ ಶಿಕ್ಷಕರು ನಿಮ್ಮನ್ನು ನಿರ್ಣಯಿಸುವುದಿಲ್ಲ. ಕುಟುಂಬ ಕಾರ್ಯಗಳಲ್ಲಿ ಯಾರೂ ನಿಮ್ಮನ್ನು ಒಡಹುಟ್ಟಿದವರೊಂದಿಗೆ ಹೋಲಿಸುವುದಿಲ್ಲ. ಅಂತಿಮವಾಗಿ, ಯಾರೂ ನಿಮ್ಮನ್ನು "ಅವರ ಸಹೋದರಿ" ಅಥವಾ "ಇವರ ಸಹೋದರ" ಎಂದು ಉಲ್ಲೇಖಿಸುವುದಿಲ್ಲ. ಇದು ನಿಮಗೆ ಇರುವ ಅತ್ಯಂತ ಲಾಭದಾಯಕ ಅಂಶ, ನಿಮ್ಮನ್ನು ನೀವು ನಂಬಿ ಮುನ್ನಡೆಯಿರಿ.

3. ನೀವು ಏನನ್ನೂ ಹಂಚಿಕೊಳ್ಳಬೇಕಿಲ್ಲ

3. ನೀವು ಏನನ್ನೂ ಹಂಚಿಕೊಳ್ಳಬೇಕಿಲ್ಲ

ಒಂದೇ ಮಗುವಾಗಿರುವುದರಿಂದ ಇರುವ ಲಾಭಗಳಲ್ಲಿ ಇದು ಸಹ ಒಂದು. ನೀವು ಎಂದಿಗೂ, ಏನನ್ನೂ ಯಾರೊಂದಿಗೂ ಹಂಚಿಕೊಳ್ಳಬೇಕಾಗಿಲ್ಲ. ನಿಮ್ಮ ಹೊಚ್ಚ ಹೊಸ ಬಟ್ಟೆ, ರುಚಿಕರವಾದ ತಿಂಡಿ, ನಿಮ್ಮ ಪಾಕೆಟ್ ಮನಿ, ಇಷ್ಟವಾದ ವಸ್ತುಗಳು ಎಲ್ಲದ್ದಕ್ಕಿಂತ ಮುಖ್ಯವಾಗಿ ನಿಮ್ಮ ಹೆತ್ತವರ ಗಮನ ಎಲ್ಲವೂ ನಿಮ್ಮೊಬ್ಬರದೇ. ನೀವು ಇನ್ನೂ ಸಾಕಷ್ಟು ಅದೃಷ್ಟವಂತರಾಗಿದ್ದರೆ, ನಿಮ್ಮದೇ ಪ್ರತ್ಯೇಕ ಕೋಣೆಯನ್ನು ಸಹ ಪಡೆಯುತ್ತೀರಿ. ನಿಮ್ಮ ಖಾಸಗೀತನವನ್ನು ನೀವು ಯಾವುದೇ ಕಿರಿಕಿರಿ ಇಲ್ಲದೆ ಅನುಭವಿಸಬಹುದು.

4. ನೀವು ಯಾವಾಗಲೂ ನೆಚ್ಚಿನ ಮಗು

4. ನೀವು ಯಾವಾಗಲೂ ನೆಚ್ಚಿನ ಮಗು

ನೀವು ಎಂದಿಗೂ ಅಪ್ಪ-ಅಮ್ಮ ಅಥವಾ ಕುಟುಂಬದ ಅಚ್ಚುಮೆಚ್ಚಿನ ಮಗುವಾಗಿರುತ್ತೀರಿ. ಎಲ್ಲರ ಮೆಚ್ಚಿಗೆ ಪಡೆಯುವುದು ನಿಜವಾಗಿಯೂ ಅದ್ಭುತ ಹಾಗೂ ಹೆಮ್ಮೆಯ ಭಾವನೆ. ನಿಮ್ಮ ಹೆತ್ತವರಿಗೆ ನಿಮಗಿಂತ ಉತ್ತಮವಾದವ ಯಾರೂ ಇಲ್ಲ ಎಂದು ತಿಳಿದುಕೊಳ್ಳುವುದು ನಿಮ್ಮಲ್ಲಿ ಸ್ವಲ್ಪ ಅಹಂಕಾರವನ್ನು ಹೆಚ್ಚಿಸುತ್ತದೆ. ಆದರೂ ಇದು ನೀವು ಇನ್ನಷ್ಟು ಮುನ್ನುಗ್ಗಲು ಪ್ರೇರಣೆಯಾಗುತ್ತದೆ.

5. ಬಯಸುವುದಕ್ಕಿಂತ ಮುನ್ನವೇ ಎಲ್ಲ ನಿಮ್ಮದಾಗುತ್ತದೆ

5. ಬಯಸುವುದಕ್ಕಿಂತ ಮುನ್ನವೇ ಎಲ್ಲ ನಿಮ್ಮದಾಗುತ್ತದೆ

ಒಂದೇ ಮಗು ಇದ್ದರೆ ಮಗು ಬಯಸುವ ಮುನ್ನವೇ ಎಲ್ಲವೂ ಇವರದ್ದಾಗಿರುತ್ತದೆ. ಪ್ರತಿ ವರ್ಷದ ಹುಟ್ಟುಹಬ್ಬ ಅದ್ದೂರಿ ಆಚರಣೆಯಾಗಿರುತ್ತದೆ. ಬ್ರೆಸ್‌ಲೆಟ್‌, ವಾಚ್‌, ಬಟ್ಟೆ ಏನೇ ಬೇಕಾದರೂ ಕೇಳಿದಾಕ್ಷಣ ಅಂಗೈಯಲ್ಲಿರುತ್ತದೆ. ಸ್ನೇಹಿತರ ಜತೆ ಪ್ರವಾಸಕ್ಕೆ ಸಾಕಷ್ಟು ಮುನ್ನೆಚ್ಚರಿಕೆಗಳ ನಡುವೆ ಒಪ್ಪಿಗೆ ಸಿಗುತ್ತದೆ. ನೀವು ಹಾಳಾಗಲು ನಿಮ್ಮ ಪೋಷಕರೇ ಕಾರಣವಾಗುವುದು ಇಲ್ಲಿ ವಿಶೇಷ.

6. ನಿಮ್ಮದೇ ಸ್ವಾತಂತ್ರ್ಯ

6. ನಿಮ್ಮದೇ ಸ್ವಾತಂತ್ರ್ಯ

ನಿಮ್ಮ ಜೀವನದಲ್ಲಿ ಮುಂದೆ ಬರಲು ಅಥವಾ ಸಾಧನೆ ಮಾಡಲು ನಿಮಗೆ ಯಾರ ಸಹಾಯವೂ ಇರುವುದಿಲ್ಲ, ಅದು ನಿಮ್ಮ ಒಬ್ಬರೇ ಪ್ರಯತ್ನದ ಯಶಸ್ಸಿನ ಹಾದಿಯಾಗಿರುತ್ತದೆ, ಅಲ್ಲದೇ ನೀವು ಸಾಕಷ್ಟು ಸ್ವತಂತ್ರರೂ ಆಗಿರುತ್ತೀರಿ. ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮತ್ತು ಹೆಚ್ಚು ಸ್ವಾವಲಂಬಿಯಾಗಿ ನಿಮ್ಮ ಕೆಲಸಗಳನ್ನು ಹೇಗೆ ಮಾಡಬೇಕೆಂದು ನೀವು ಕಲಿಯುತ್ತೀರಿ.

7. ನೀವು ಉತ್ತಮ ಜೀವನ ಶೈಲಿಯನ್ನು ಹೊಂದಿರುತ್ತೀರಿ

7. ನೀವು ಉತ್ತಮ ಜೀವನ ಶೈಲಿಯನ್ನು ಹೊಂದಿರುತ್ತೀರಿ

ಒಂದೇ ಮಗು ಇದ್ದ ಪೋಷಕರು ತಮ್ಮ ಮಗುವನ್ನು ಶಾಲಾ ಶಿಕ್ಷಣದಿಂದ ಹಿಡಿದು, ವೈದ್ಯಕೀಯ ವೆಚ್ಚಗಳು, ಕಾಲೇಜು, ಮದುವೆ ಮತ್ತು ರಜಾದಿನಗಳು ಎಲ್ಲದರಲ್ಲೂ ಅತ್ಯುತ್ತಮವಾದ ಆಯ್ಕೆಯೇ ನಿಮ್ಮ ಪೋಷಕರು ಮಾಡಿರುತ್ತಾರೆ. ನಿಮಗೆ ಆದಷ್ಟು ಆರ್ಥಿಕ ಸಮಸ್ಯೆಗಳು ಕಾಡದಿರದು. ಉತ್ತಮ ಜೀವನಶೈಲಿ ನಿಮ್ಮದಾಗಿರುತ್ತದೆ. ಶಿಕ್ಷಣ ಮತ್ತು ವಿವಾಹದ ವಿಷಯ ಬಂದಾಗಲೂ ಪೋಷಕರು ನಿಮಗಾಗಿ ಉತ್ತಮ ಆಯ್ಕೆಯನ್ನೇ ಮಾಡುತ್ತಾರೆ.

English summary

Undeniable Perks Of Being An Only Child in Kannada

Here we are discussing about Undeniable Perks Of Being An Only Child in Kannada. Being an only child is a lot of fun and contrary to popular belief, it isn’t all about feeling lonely and longing for company. Read more.
Story first published: Friday, June 4, 2021, 16:30 [IST]
X