For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮಕ್ಕಳು ಕಾಯಿಲೆ ಬೀಳದಿರಬೇಕೆ? ಪೋಷಕರೇ ಹೀಗೆ ಮಾಡಿ

|

ಚಳಿಗಾಲದಲ್ಲಿ ಮಕ್ಕಳು ಆಗಾಗ ಕಾಯಿಲೆ ಬೀಳುತ್ತಿರುತ್ತಾರೆ. ಅದರಲ್ಲೂ 5 ವರ್ಷದೊಳಗಿನ ಮಕ್ಕಳಾದರೆ ವಾರದಲ್ಲಿ 2 ದಿನವಷ್ಟೇ ಸರಿಯಾಗಿ ಇರುತ್ತಾರೆ. ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಪೋಷಕರು ಈ ಸಮಯದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಂಡರೆ ಕಾಯಿಲೆ ಬೀಳುವುದನ್ನು ತಡೆಗಟ್ಟಬಹುದು, ಹೇಗೆ? ನೋಡೋಣ ಬನ್ನಿ:

Tips to boost your child’s immunity during winter in Kannada

* ಮಕ್ಕಳಿಗೆ ಬೆಚ್ಚಗಿನ ಉಡುಪು ಧರಿಸಿ: ಮಕ್ಕಳು ಸ್ವೆಟರ್, ಟೋಪಿ ಹಾಕಿಕೊಳ್ಳಲು ಕೇಳುವುದಿಲ್ಲ, ಆದರೂ ನೀವು ಧರಿಸಿಕೊಡಬೇಕಾಗುತ್ತದೆ. ಅವರ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಿ. ಮಕ್ಕಳಿಗೆ ಸ್ವಲ್ಪ ಜೀರಿಗೆ ಹಾಕಿ ಬಿಸಿ ಮಾಡಿದ ನೀರು ಕೊಡಿ, ಜೀರ್ಣಕ್ರಿಯೆಗೆ ಒಳ್ಳೆಯದು. ಒಂದು ಎಸಳು ತುಳಸಿ ಸೇರಿಸಿದರೆ ಒಳ್ಳೆಯದು.

* ಕರಿದ ಪದಾರ್ಥಗಳನ್ನು ಕೊಡಬೇಡಿ: ಮಕ್ಕಳು ಬೇಡದ ಆಹಾರಗಳನ್ನೇ ತಿನ್ನಲು ಇಷ್ಟಪಡುವುದು, ಆದರೆ ಕೊಡಲಿಕ್ಕೆ ಹೋಗಬೇಡಿ. ಮನೆಯಲ್ಲಿ ಬಿಸ್ಕೆಟ್‌, ಕುರುಕುರೆ ಇವೆಲ್ಲಾ ತಂದು ಇಡಬೇಡಿ, ಬದಲಿಗೆ ಡ್ರೈ ಫ್ರೂಟ್ಸ್‌ ತಂದಿಡಿ. ಹಠ ಮಾಡಿ ಅಳುತ್ತಾರೆ ಎಂದು ಕೊಡಲಿಕ್ಕೆ ಹೋಗಬೇಡಿ.

ಅನಗ್ಯತವಾಗಿ ಔಷಧ ಹಾಕಬೇಡಿ
ಸಣ್ಣ-ಪುಟ್ಟ ಶೀತ, ಕೆಮ್ಮು ಬರುತ್ತಿದ್ದಂತೆ ಕೆಲವರು ಆ್ಯಂಟಿಬಯೋಟಿಕ್ ಹಾಕಿ ಬಿಡುತ್ತಾರೆ, ಹೀಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಮತ್ತಷ್ಟು ಕಡಿಮೆಯಾಗುವುದು. ಆದ್ದರಿಂದ ಅನಗ್ಯತವಾಗಿ ಹಾಕಬೇಡಿ.
ವೈದ್ಯರು ಹೇಳುವಾಗ ಮಾತ್ರ ಹಾಕಿ.

ಹೊರಗಡೆ ಆಡಲು ಬಿಡಿ
ಹೊರಗಡೆ ಆಟ ಆಡಿಸುವುದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮನೆಯೊಳಗಡೇ ಕೂರಿಸಬೇಡಿ. ಮಕ್ಕಳು ದೈಹಿಕವಾಗಿ ಕುಣಿದು-ಕುಪ್ಪಳಿಸಿದಷ್ಟೂ ಅವರ ಆರೋಗ್ಯಕ್ಕೆ ಒಳ್ಳೆಯದು.

ತೆಂಗಿನೆಣ್ಣೆ/ ಸಾಸಿವೆಯೆಣ್ಣೆಯಿಂದ ದೇಹಕ್ಕೆ ಮಸಾಜ್‌ ಮಾಡಿ
ಮಕ್ಕಳಿಗೆ ಎಣ್ಣೆ ಮಸಾಜ್‌ ದೇಹಕ್ಕೆ ತುಂಬಾನೇ ಒಳ್ಳೆಯದು, ಅದರಲ್ಲೂ ಚಳಿಗಾಲದಲ್ಲಿ ಮೈ ಒಡಯುವುದು ತಡೆಗಟ್ಟಿ ತ್ವಚೆಯನ್ನು ನುಣಪಾಗಿ ಇಡುತ್ತದೆ.

ನಿದ್ದೆ ಚೆನ್ನಾಗಿ ಮಾಡಿಸಿ
ಮಕ್ಕಳಿಗೆ ನಿದ್ದೆ ಕಡಿಮೆಯಾದರೂ ಅನಾರೋಗ್ಯ ಬೀಳುತ್ತವೆ, ಆದ್ದರಿಂದ ನಿದ್ದೆ ಚೆನ್ನಾಗಿ ಮಾಡಿಸಿ. ದಿನದಲ್ಲಿ 10-12 ತಾಸು ನಿದ್ದೆ ಮಾಡಿದರೆ ಒಳ್ಳೆಯದು. ಮಕ್ಕಳು ಬೆಳೆಯುತ್ತಿದ್ದಂತೆ ನಿದ್ದೆ ಕಡಿಮೆಯಾಗುತ್ತದೆ, ಆದರೆ ಕನಿಷ್ಠ 8 ಗಂಟೆ ನಿದ್ದೆ ಅವಶ್ಯಕ.

ಮಕ್ಕಳಿಗೆ ಹಾಲಿಗೆ ಅರಿಶಿಣ ಹಾಕಿ ಕೊಡಿ
ಮಲಗುವ ಮೊದಲು ಹಾಲು ಕೊಡುವಾಗ ಹಾಲಿಗೆ ಅರಿಶಿಣ ಹಾಕಿ ಕೊಡಿ. ಇದರಿಂದ ಮಕ್ಕಳಲ್ಲಿ, ಶೀತ-ಕೆಮ್ಮು ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.

ಎದೆ ಹಾಲುಣಿಸುತ್ತಿದ್ದೀರಾ?
ನಿಮ್ಮ ಮಗು ಚಿಕ್ಕದಾಗಿದ್ದರೆ ಎದೆಹಾಲುಣಿಸುವುದು ಕಡಿಮೆ ಮಾಡಬೇಡಿ, ಎದೆಹಾಲು ಕೂಡ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

* ಮನೆಯ ವಾತಾವರಣ ಸ್ವಚ್ಛವಾಗಿಡಿ

ಮನೆಯೊಳಗಡೆ ಸೊಳ್ಳೆ ಬರದಂತೆ ನೋಡಿಕೊಳ್ಳಿ. ಸಂಜೆ ಮತ್ತು ಬೆಳಗ್ಗೆ ಮನೆಯ ಬಾಗಿಲು-ಕಿಟಕಿ ಮುಚ್ಚಿಟ್ಟರೆ ಸೊಳ್ಳೆ ಬರುವುದು ತಡೆಗಟ್ಟಬಹುದು. ಮಕ್ಕಳನ್ನು ಮಲಗಿಸುವಾಗಲೂ ಅಷ್ಟೇ ಸೊಳ್ಳೆ ಪರದೆ ಅಡಿಯಲ್ಲಿ ಮಲಗಿಸಿ. ಆಟ ಆಡುವಾಗ ಸೊಳ್ಳೆ ಕಚ್ಚದಿರಲು ತುಂಬು ತೋಳಿನ ಬಟ್ಟೆ ಧರಿಸಿಕೊಡಿ.

ಮಕ್ಕಳ ಆಟಿಕೆಗಳನ್ನು ಸ್ವಚ್ಛವಾಗಿಡಿ
ಮಕ್ಕಳು ಆಟಿಕೆಗಳನ್ನು ಕಚ್ಚುತ್ತಾ ಇರುತ್ತವೆ, ಆದ್ದರಿಂದ ಆಟಿಕೆಗಳನ್ನು ತೊಳೆದು ಸ್ವಚ್ಛವಾಗಿಡಿ.

ಅನಗ್ಯತ ಪ್ರಯಾಣ ಮಾಡಿ
ಮಕ್ಕಳನ್ನು ಕರೆದುಕೊಂಡು ಅನಗ್ಯತ ಪ್ರಯಾಣ ಮಾಡಬೇಡಿ. ಈಗ ಎಲ್ಲಾ ಕಡೆ ಫ್ಲೂ ಹೆಚ್ಚಾಗಿದೆ, ಆದ್ದರಿಂದ ಹೊರಗಡೆ ಸುತ್ತಾಡುವುದು ಮಾಡಿದರೆ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚು. ಇನ್ನು ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೆ ಅವರು ಮಕ್ಕಳಿಂದ ದೂರವಿರಿ.

ಈ ರೀತಿ ಜಾಗ್ರತೆವಹಿಸಿದರೆ ಸಾಕು ಕಾಯಿಲೆ ಬೀಳುವುದು ತುಂಬಾನೇ ಕಡಿಮೆಯಾಗುತ್ತದೆ.

English summary

Tips to boost your child’s immunity during winter in Kannada

How to boost immunity in Kids: Here are tips to take care kids health during winter, have a look...
Story first published: Tuesday, November 22, 2022, 12:25 [IST]
X
Desktop Bottom Promotion