For Quick Alerts
ALLOW NOTIFICATIONS  
For Daily Alerts

ನಿಮ್ಮಲ್ಲೂ ಈ ಲಕ್ಷಣಗಳು ಇದೆಯೇ? ಹಾಗಿದ್ದರೆ ನೀವೂ ಹೆಲಿಕಾಪ್ಟರ್ ಪೋಷಕರು!

|

ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಸಹಜ. ಪ್ರತಿಯೊಬ್ಬ ತಂದೆತಾಯಿಗೂ ತನ್ನ ಮಗುವನ್ನು ಚೆನ್ನಾಗಿ ಬೆಳೆಯಬೇಕು ಮತ್ತು ಆರೋಗ್ಯವಂತವಾಗಿರಬೇಕು ಎನ್ನುವಂತಹ ಇಚ್ಛೆ ಇರುವುದು. ಆದರೆ ಕೆಲವು ಪೋಷಕರು ಮಾತ್ರ ತುಂಬಾ ಅತಿಯಾಗಿಯೇ ಮಕ್ಕಳ ಬಗ್ಗೆ ಕಾಳಜಿ ವಹಿಸುವರು. ಇದು ಸ್ವಲ್ಪ ಅತಿರೇಕದ ವರ್ತನೆ ಎಂದು ನಮಗೆ ಅನಿಸುವುದುಂಟು. ಮಕ್ಕಳು ಎಲ್ಲಿ ಹೋದರೋ ಏನೋ? ಅವರು ಸರಿಯಾಗಿ ಊಟ ಮಾಡಿದ್ದಾರಾ ಇಲ್ಲವಾ ಅಥವಾ ಅವರಿಗೆ ಶಾಲೆಯಲ್ಲಿ ರಕ್ಷಣೆ ಸಿಗುತ್ತದೆಯಾ ಎನ್ನುವ ಬಗ್ಗೆ ತುಂಬಾ ಕಾಳಜಿ ಮಾಡುವರು. ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರೆ ಆಗ ಪೋಷಕರು ಅವರೊಂದಿಗೆ ಶಾಲೆ, ಅಂಗಡಿ ಮತ್ತು ಟ್ಯೂಷನ್ ಕ್ಲಾಸ್ ಗಳಿಗೆ ಜತೆಗೆ ತೆರಳುವರು.

ಮಕ್ಕಳ ಪೋಷಣೆ ಬಗ್ಗೆ ಜನರು ನೀಡುವಂತಹ ಸಲಹೆ ಬಗ್ಗೆ ನಿಮಗೆ ತೃಪ್ತಿಯಾಗದೆ ಇರಬಹುದು ಮತ್ತು ನೀವು ನಿಮ್ಮದೇ ಆಗಿರುವ ಪೋಷಣೆ ಶೈಲಿಯನ್ನು ಸರಿಯೆಂದು ಪರಿಗಣಿಸಬಹುದು. ಮಕ್ಕಳು ಅವರಾಗಿಯೇ ಸ್ನಾನ ಮಾಡಲು, ಊಟ ಮಾಡಲು ಮತ್ತು ಬಟ್ಟೆ ಧರಿಸುವಷ್ಟು ಸಾಮರ್ಥ್ಯ ಹೊಂದಿದ್ದರೂ ನೀವು ಅವರಿಗೆ ನೆರವಾಗಬೇಕು ಎಂದು ಬಯಸುವಿರಿ. ಹಾಗಾದರೆ ನಿಮ್ಮನ್ನು ಹೆಲಿಕಾಪ್ಟರ್ ಪೋಷಕರು ಎಂದು ಕರೆಯಲಾಗುತ್ತದೆ.

Sure Signs That You Are A Helicopter Parent

ಹೌದು, ಇದು ಕ್ರಿಕೆಟಿನಲ್ಲಿ ಧೋನಿ ಬಾರಿಸುವ ಹೆಲಿಕಾಪ್ಟರ್ ಶಾಟ್ ಅಲ್ಲ! ಇದೇನಪ್ಪಾ ಹೆಲಿಕಾಪ್ಟರ್ ಪೋಷಕರು ಎಂದು ತಿಳಿಯುವ ಹಂಬಲವಿದ್ದರೆ ಆಗ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಈ ಲೇಖನವು ಕಾಜಲ್ ನಟನೆಯ ಹಿಂದಿ ಸಿನೆಮಾ ಹೆಲಿಕಾಪ್ಟರ್ ಈಲಾದಿಂದ ಬಂದಿರುವುದು. ಈ ಸಿನಿಮಾದಲ್ಲಿ ಆಕೆ ಅತೀ ರಕ್ಷಣಾತ್ಮಕ ತಾಯಿಯಂತೆ ಮಗನ ಕಾಳಜಿ ಮಾಡುತ್ತಾಳೆ. ತನ್ನ ಮಗನ ಪ್ರತಿಯೊಂದು ಚಟುವಟಿಕೆಯಲ್ಲೂ ಆಕೆ ಭಾಗಿಯಾಗುತ್ತಾಳೆ ಮತ್ತು ತನ್ನ ಮಗ ಚೆನ್ನಾಗಿದ್ದಾನೆ ಮತ್ತು ಸರಿಯಾಗಿ ಕಲಿಯುತ್ತಿದ್ದಾನೆ ಎನ್ನುವುದನ್ನು ದೃಢಪಡಿಸಿಕೊಳ್ಳಲು ಬಯಸುತ್ತಿದ್ದರು.

ಹೆಲಿಕಾಪ್ಟರ್ ಪೋಷಕರು ಎಂದರೆ ಯಾರು?

ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ತೀರ ಹತ್ತಿರದಿಂದ ಗಮನಹರಿಸುವಂತಹ ಪೋಷಕರನ್ನು ಹೆಲಿಕಾಪ್ಟರ್ ಪೋಷಕರು ಎಂದು ಕರೆಯಲಾಗುತ್ತದೆ ಅಥವಾ ನೆತ್ತಿಯ ಮೇಲಿಟ್ಟು ಅತೀವ ಕಾಳಜಿ ಮಾಡುವ ಪೋಷಕರು ಎನ್ನಬಹುದು. ಆಕೆ ಅಥವಾ ಆತ ತಮ್ಮ ಮಗ ಅಥವಾ ಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುವರು ಮತ್ತು ಸಣ್ಣ ಸಣ್ಣ ವಿಷಯಗಳಲ್ಲೂ ಅವರಿಗೆ ನೆರವಾಗುತ್ತಲಿರುವರು. ಹೆಲಿಕಾಪ್ಟರ್ ಪೋಷಕರು ತಮ್ಮ ಮಕ್ಕಳಿಗೆ ಮನೆಗೆಲಸ ಮಾಡಲು ನೆರವಾಗುವ ಬದಲು ಅವರೇ ಅದನ್ನು ಮಾಡಿ ಮುಗಿಸುವರು. ಹೆಚ್ಚಿನ ಸಂದರ್ಭದಲ್ಲಿ ಇವರು ಮಕ್ಕಳ ಶಾಲೆಯ ಪ್ರಿನ್ಸಿಪಾಲ್ ಅಥವಾ ಶಿಕ್ಷಕರಿಗೆ ಕರೆ ಮಾಡಿ ಮಕ್ಕಳು ಸುರಕ್ಷಿತವಾಗಿದ್ದಾರೆಯಾ ಮತ್ತು ಅವರಿಗೆ ಮನೆಯ ನೆನಪು ಬರುತ್ತಿದೆಯಾ ಎಂದು ಕೇಳುವರು. ಮಕ್ಕಳ ದೈನಂದಿನ ಚಟುವಟಿಕೆ, ಅನುಭವ, ವೈಫಲ್ಯ ಮತ್ತು ಯಶಸ್ಸಿನಲ್ಲಿ ಹೆಲಿಕಾಪ್ಟರ್ ಪೋಷಕರು ಗಮನವಿಡುವರು. ಇದಕ್ಕೆ ಮುಖ್ಯ ಕಾರಣವೇನೆಂದರೆ ತನ್ನ ಅನುಪಸ್ಥಿತಿಯಲ್ಲಿ ಮಕ್ಕಳಿಗೆ ಏನಾದರೂ ಆದರೆ ಎನ್ನುವ ಆತಂಕ.

ಹೆಲಿಕಾಪ್ಟರ್ ಪೋಷಕರ ಲಕ್ಷಣಗಳು

ಮಕ್ಕಳ ಕಾಳಜಿ ಮತ್ತು ಅವರ ಬಗ್ಗೆ ಚಿಂತೆ ಮಾಡುವ ವಿಚಾರದ ಬಗ್ಗೆ ಪೋಷಕರು ಗೊಂದಲಕ್ಕೆ ಒಳಗಾಗಿರುವ ಕಾರಣದಿಂದಾಗಿ ಹೆಲಿಕಾಪ್ಟರ್ ಪೋಷಕರ ಲಕ್ಷಣಗಳು ಯಾವಾಗಲೂ ಸ್ಪಷ್ಟವಾಗಿ ಇರುವುದಿಲ್ಲ.

ಈ ಕೆಳಗಿನ ಲಕ್ಷಣಗಳಿಂದ ಹೆಲಿಕಾಪ್ಟರ್ ಪೋಷಕರೇ ಅಥವಾ ಅಲ್ಲವಾ ಎಂದು ತಿಳಿಯಬಹುದು.

1. ಮಕ್ಕಳ ಮನೆಗೆಲಸವನ್ನು ತಾವೇ ಮಾಡಿ ಮುಗಿಸುವರು

1. ಮಕ್ಕಳ ಮನೆಗೆಲಸವನ್ನು ತಾವೇ ಮಾಡಿ ಮುಗಿಸುವರು

ಮಕ್ಕಳಿಗೆ ತಮ್ಮ ಮನೆಗೆಲಸ ಮತ್ತು ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಲು ಪೋಷಕರು ಯಾವಾಗಲೂ ನೆರವು ಹಾಗೂ ಮಾರ್ಗದರ್ಶನ ನೀಡುವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಪೋಷಕರು ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಮನೆಗೆಲಸ ಮಾಡಿ ಮುಗಿಸಬೇಕೆಂದು ಬಯಸುವರು. ಆದರೆ ಹೆಲಿಕಾಪ್ಟರ್ ಪೋಷಕರು ಇದಕ್ಕೆ ಭಿನ್ನವಾಗಿ ಇರುವರು. ಇವರು ಮಕ್ಕಳಿಗೆ ನೆರವಾಗುವುದರಲ್ಲಿ ಮುಂಚೂಣಿಯಲ್ಲಿರುವರು ಮತ್ತು ಮಕ್ಕಳ ಮನೆಗೆಲಸ ಮತ್ತು ಪ್ರಾಜೆಕ್ಟ್ ನ್ನು ತಾವೇ ಮುಗಿಸುವರು.

2. ತುದಿಗಾಲಲ್ಲಿ ನಿಲ್ಲುವರು

2. ತುದಿಗಾಲಲ್ಲಿ ನಿಲ್ಲುವರು

ತಮ್ಮ ಮಕ್ಕಳು ಚೆನ್ನಾಗಿದ್ದಾರೆ ಎಂದು ಪರೀಕ್ಷೆ ಮಾಡಲು ಹೆಲಿಕಾಪ್ಟರ್ ಪೋಷಕರು ತುದಿಗಾಲಲ್ಲಿ ನಿಲ್ಲುವರು. ಮಕ್ಕಳು ಹೊರಗಡೆ ಆಟವಾಡಿದರೆ ಆಗ ಬಿದ್ದು ಗಾಯ ಮಾಡಿಕೊಳ್ಳುವರು ಎನ್ನುವ ಕಾರಣಕ್ಕಾಗಿ ಹೊರಗಡೆ ಆಡಲು ಬಿಡಲ್ಲ. ಶಾಲೆಯಲ್ಲಿ ಸಹಪಾಠಿಗಳು ತಮ್ಮ ಮಗನಿಗೆ ಹೊಡೆದಿದ್ದಾರೆಯಾ ಅಥವಾ ಯಾವುದೇ ರೀತಿಯ ಸಮಸ್ಯೆಯು ಶಾಲೆಯಲ್ಲಿ ಇದೆಯಾ ಎನ್ನುವುದನ್ನು ತಿಳಿಯಲು ಹೆಲಿಕಾಪ್ಟರ್ ಪೋಷಕರು ಆಗಾಗ ಶಿಕ್ಷಕರನ್ನು ಭೇಟಿ ಮಾಡುತ್ತಲಿರುವರು.

3. ಜನರ ಸಲಹೆ ಕಡೆಗಣಿಸುವರು

3. ಜನರ ಸಲಹೆ ಕಡೆಗಣಿಸುವರು

ಮಾತೃತ್ವ ಮತ್ತು ಪಾಲನೆ ಏನು ಎಂದು ಯಾರಾದರೂ ಇವರಿಗೆ ಸಲಹೆ ನೀಡಿದರೆ, ಆಗ ಅವರು ಇದನ್ನು ಸಂಪೂರ್ಣವಾಗಿ ಕಡೆಗಣಿಸುವರು. ಹೆಲಿಕಾಪ್ಟರ್ ಪೋಷಕರಿಗೆ ತಮ್ಮ ಪಾಲನೆಯು ಅತ್ಯುತ್ತಮವಾಗಿರುವುದು ಮತ್ತು ಅವರು ತಮ್ಮ ಮಕ್ಕಳನ್ನು ಬೆಳೆಸುವ ಮತ್ತು ಅವರ ಕಾಳಜಿ ವಹಿಸುವ ಬಗ್ಗೆ ಯಾವುದೇ ಪ್ರಯೋಗ ಮಾಡಲು ಬಯಸುವುದಿಲ್ಲ. ತಮ್ಮ ಮಕ್ಕಳು ಹೇಳುವ ಮಾತನ್ನು ಕೂಡ ಇವರು ಕೇಳಲ್ಲ.

4. ಪ್ರತಿಯೊಂದು ಕಡೆಯೂ ಅಪಾಯವಿದೆ ಎಂದು ಭಾವಿಸುವರು

4. ಪ್ರತಿಯೊಂದು ಕಡೆಯೂ ಅಪಾಯವಿದೆ ಎಂದು ಭಾವಿಸುವರು

ಮಕ್ಕಳ ಸುರಕ್ಷತೆ ಬಗ್ಗೆ ಯಾವುದೇ ಅಪಾಯವಿದ್ದರೂ ಅದನ್ನು ಪೋಷಕರು ಕಂಡುಹಿಡಿಯುವರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಹೆಲಿಕಾಪ್ಟರ್ ಪೋಷಕರಿಗೆ ಮಾತ್ರ ಪ್ರತಿಯೊಂದರಲ್ಲೂ ಮತ್ತು ಪ್ರತಿಯೊಂದು ಕಡೆಯೂ ಅಪಾಯ ಕಾಣಿಸುವುದು. ಮಕ್ಕಳು ಶಾಲೆಗೆ ತೆರಳಲು ಶಾಲೆಯ ಬಸ್ ನ್ನು ಸುರಕ್ಷಿತವಾಗಿ ಹತ್ತಿದರೂ ಅವರಿಗೆ ಮಾತ್ರ ಯಾವುದೇ ತೃಪ್ತಿ ಇರಲ್ಲ ಮತ್ತು ಅಪಘಾತವಾದರೆ ಏನು ಮಾಡುವುದು ಅಥವಾ ಮಗು ಸೀಟಿನಿಂದ ಬಿದ್ದರೆ ಗತಿಯೇನು ಎನ್ನುವ ನಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಲಿರುವರು. ಮಕ್ಕಳನ್ನು ಮೈದಾನದಲ್ಲಿ ಆಡಲು ಕೂಡ ಬಿಡುವುದಿಲ್ಲ. ಯಾಕೆಂದರೆ ಮಕ್ಕಳು ಬಿದ್ದು ಗಾಯಗೊಂಡರೆ ಏನು ಮಾಡುವುದು ಎನ್ನುವು ಭೀತಿ ಅವರಲ್ಲಿ ಇರುವುದು.

5. ಮಕ್ಕಳನ್ನು ವೈಯಕ್ತಿಕವಾಗಿರಲು ಬಿಡುವುದಿಲ್ಲ

5. ಮಕ್ಕಳನ್ನು ವೈಯಕ್ತಿಕವಾಗಿರಲು ಬಿಡುವುದಿಲ್ಲ

ಮಕ್ಕಳಿಗೆ ವೈಯಕ್ತಿಕವಾಗಿ ಇರಲು ಬಿಡುವುದು ಹೆಲಿಕಾಪ್ಟರ್ ಪೋಷಕರಿಗೆ ಸಾಧ್ಯವೇ ಇಲ್ಲ. ಕೆಲವರು ಇದನ್ನು ಮೂರ್ಖತನದ್ದು ಎಂದು ಭಾವಿಸುವರು. ಮಕ್ಕಳು ಸ್ನೇಹಿತರೊಂದಿಗೆ ಆಟವಾಡುವುದು ಅಥವಾ ಬೇರೆ ಕೋಣೆಯಲ್ಲಿ ಮಲಗುವುದು ಇವರಿಗೆ ಅದು ಸರಿಯೆಂದು ಅನಿಸದು. ಹೆಲಿಕಾಪ್ಟರ್ ಪೋಷಕರು ತಾವು ಶಾಪಿಂಗ್ ಗೆ ಹೋಗುವ ವೇಳೆ ಮಕ್ಕಳನ್ನು ಅಜ್ಜಅಜ್ಜಿ ಜತೆಗೆ ಅಥವಾ ಕುಟುಂಬದ ಬೇರೆಯವರ ಜತೆಗೆ ಬಿಡಲು ಹಿಂದೇಟು ಹಾಕುವರು.

6. ಮಕ್ಕಳು ಅವರಾಗಿಯೇ ಕೆಲಸ ಮಾಡುವುದನ್ನು ಬಿಡುವ ಬದಲು ಅದನ್ನು ತಾವೇ ಮಾಡುವರು

6. ಮಕ್ಕಳು ಅವರಾಗಿಯೇ ಕೆಲಸ ಮಾಡುವುದನ್ನು ಬಿಡುವ ಬದಲು ಅದನ್ನು ತಾವೇ ಮಾಡುವರು

ತಮ್ಮ ಮಕ್ಕಳ ಸಣ್ಣ ಕೆಲಸಗಳು ಮತ್ತು ಅವರ ದೈನಂದಿಕ ಚಟುವಟಿಕೆಗಳಲ್ಲಿ ಪೋಷಕರು ನೆರವು ನೀಡುವುದು ಸಾಮಾನ್ಯ ವಿಚಾರ. ಆದರೆ ಮಕ್ಕಳು ಬೆಳೆಯುತ್ತಿರುವಂತೆ, ಪೋಷಕರು ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ಮತ್ತು ತಮ್ಮ ದೈನಂದಿನ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂದು ಅವರಿಗೆ ತರಬೇತಿ ನೀಡಬೇಕು. ಆದರೆ ಹೆಲಿಕಾಪ್ಟರ್ ಪೋಷಕರು,ಮಕ್ಕಳು ಬಟ್ಟೆ ಧರಿಸುವುದು, ಕೂದಲು ಬಾಚುವುದು, ಊಟ ಮಾಡಿಸುವುದು, ಮಲಗಿಸುವುದು, ಪುಸ್ತಕ ಸರಿಯಾಗಿ ಇಟ್ಟುಕೊಳ್ಳುವುದು ಹೀಗೆ ಪ್ರತಿಯೊಂದು ಕೆಲಸ ಕಾರ್ಯಗಳನ್ನು ತಾವೇ ಮಾಡುವರು.

ಮಕ್ಕಳ ಬಗ್ಗೆ ಕಾಳಜಿ ಇಟ್ಟುಕೊಳ್ಳುವುದು ಮತ್ತು ಅವರ ಪೋಷಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಮಕ್ಕಳ ಶ್ರೇಯೋಭಿವೃದ್ಧಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಂಪೂರ್ಣ ಹಕ್ಕಿದೆ. ಆದರೆ ಅತಿಯಾದ ಕಾಳಜಿ ಮತ್ತು ಗಮನಹರಿಸುವ ಪರಿಣಾಮವಾಗಿ ಮಕ್ಕಳಿಗೆ ಉಸಿರು ಗಟ್ಟಿಸುವ ವಾತಾವರಣದಲ್ಲಿ ಬದುಕುವಂತೆ ಆಗಬಹುದು. ಅವರಿಗೂ ವೈಯಕ್ತಿಕ ಸಮಯ ಬೇಕು. ಇದರಿಂದಾಗಿ ನೀವು ಹೆಲಿಕಾಪ್ಟರ್ ಪೋಷಕರಾಗುವುದನ್ನು ತಡೆಯಿರಿ ಮತ್ತು ಮಕ್ಕಳು ತಮ್ಮ ಚಟುವಟಿಕೆಗಳನ್ನು ತಾವಾಗಿಯೇ ಮಾಡಲು ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿ ಉತ್ತಮ ಪೋಷಕರಾಗಿ.

English summary

Sure Signs That You Are A Helicopter Parent

No! Caring and worrying about your child are not the same thing. But, you can certainly check for yourself whether you care for your kids or end up worrying about them too much. Do you constantly fret about anything and everything that is related to your child? Like whether your child is safe in the school or if they have done their homework properly. The list doesn't end here. At times, you walk with your children to school, tuitions, shops, probably everywhere simply because you are worried about them.
X
Desktop Bottom Promotion