For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವಿನ ಫೀಡಿಂಗ್ ಬಾಟಲ್ ನಿಜಕ್ಕೂ ಶುಚಿಯಾಗಿದೆಯೇ?

|

ಮಗುವಿನ ತಾಯಿಗೆ ತನ್ನ ಮಗುವನ್ನು ಪಾಲನೆ-ಪೋಷಣೆ ಮಾಡುವುದು ಬಹಳಷ್ಟು ಸಂತಸ ತರುವಂತಹ ಕೆಲಸ. ತನ್ನ ಮುದ್ದಾದ ಪುಟ್ಟ ಮಗು ತನ್ನ ಜೊತೆ ಆಡಿ ನಕ್ಕು ನಲಿಯುತ್ತಿದ್ದರೆ ಪ್ರಪಂಚವನ್ನೇ ಮರೆತುಬಿಡುತ್ತಾಳೆ. ಮಗುವಿನ ಆರೋಗ್ಯದ ವಿಚಾರದಲ್ಲಿ ತಾಯಿಯಷ್ಟು ಜಾಗರೂಕತೆ ಬೇರಾರೂ ವಹಿಸಲು ಸಾಧ್ಯವಿಲ್ಲ. ತನ್ನ ಮಗುವಿಗೆ ಹಾಲುಣಿಸುವುದರಿಂದ ಹಿಡಿದು ಪ್ರತಿಕ್ಷಣವೂ ನನ್ನ ಮಗು ಸದಾ ಜೊತೆಯಲ್ಲೇ ಇರಬೇಕೆಂದು ತಾಯಿ ಬಯಸುತ್ತಾಳೆ.

How TO Sterilize Baby Feeding Bottle

ಆದರೆ ದಿನ ಕಳೆದಂತೆ ಕಾರಣಾಂತರಗಳಿಂದ ಮಗುವಿಗೆ ಬಾಟಲ್ ಫೀಡಿಂಗ್ ಅತ್ಯಗತ್ಯವಾಗುತ್ತದೆ. ಮಗುವಿನ ಸಂಪೂರ್ಣ ಆಹಾರ ಮತ್ತು ಬೆಳವಣಿಗೆ ಹಾಲಿನ ಬಾಟಲ್ ಮೇಲೆಯೇ ಅವಲಂಬಿತವಾಗಿರುವುದರಿಂದ ಮಗುವಿಗೆ ಹಾಲು ಕುಡಿಯಲು ಕೊಡುವ ಬಾಟಲ್ ಬಗ್ಗೆ ತಾಯಿ ಸಾಕಷ್ಟು ಜಾಗರೂಕತೆ ವಹಿಸಿ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮಗುವಿನ ಪಾಲಿಗೆ ಅಮೃತದ ಬಟ್ಟಲಿನಂತಿರುವ ಹಾಲಿನ ಬಾಟಲ್ ದೊಡ್ಡವರು ಮೈಮರೆತರೆ ವಿಷಕಾರಿ ಬಾಟಲ್ ಆಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಪ್ರತಿ ಬಾರಿ ಬಾಟಲ್ ನಲ್ಲಿ ಹಾಲು ತುಂಬಿ ಮಗುವಿಗೆ ಕುಡಿಯಲು ಕೊಡುವ ಮುಂಚೆ ಹಾಲಿನ ಬಾಟಲ್ ನ ಶುಚಿತ್ವದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ. ಹಾಲಿನ ಬಾಟಲಿಯಲ್ಲಿ ಕೇವಲ ಜಿಡ್ಡು ಮಾಯವಾದರೆ ಸಾಕಾಗದು. ಮಗುವಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸೂಕ್ಶ್ಮಾಣುಗಳೂ ಸಹ ಇಲ್ಲದಂತಾಗಬೇಕು.

ಆದ್ದರಿಂದ ಮಗುವಿನ ಹಾಲಿನ ಬಾಟಲ್ ಸಂಪೂರ್ಣವಾಗಿ ಶುಚಿಗೊಳಿಸುವ ಸೂಪರ್ ಸ್ಟರಿಲೈಸೇಶನ್ ವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ನಿಮ್ಮ ಕನ್ನಡ ಬೋಲ್ಡ್ ಸ್ಕೈ ವತಿಯಿಂದ ತಿಳಿಸಿಕೊಡಲಾಗಿದೆ.

1. ಫಿಲ್ಟರ್ ವಾಟರ್ ಬಳಸಿ : -

1. ಫಿಲ್ಟರ್ ವಾಟರ್ ಬಳಸಿ : -

ನಿಮ್ಮ ಮಗುವಿನ ಆರೋಗ್ಯದ ವಿಚಾರ ಬಂದರೆ ನೀವು ಸಾಕಷ್ಟು ಜಾಗರೂಕತೆ ವಹಿಸಬೇಕು. ಮಕ್ಕಳ ಕುಡಿಯುವ ಹಾಲಿನ ಬಾಟಲ್ ಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯ ನಲ್ಲಿ ಅಥವಾ ಕೊಳಾಯಿ ನೀರಿನಿಂದ ತೊಳೆಯಬಾರದು. ಏಕೆಂದರೆ ನಲ್ಲಿ ನೀರನ್ನು ಹಾರ್ಡ್ ವಾಟರ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಹಲವಾರು ಬಗೆಯ ರೋಗ ರುಜಿನಗಳನ್ನು ತರುವಂತಹ ಕೀಟಾಣುಗಳ ಜೊತೆಗೆ ಬಹಳಷ್ಟು ಕಲುಷಿತ ಅಂಶಗಳು ಇದ್ದೇ ಇರುತ್ತವೆ.

ಜೊತೆಗೆ ನೀವು ಬಾಟಲ್ ತೊಳೆದ ಮೇಲೆ ತಳ ಭಾಗದಲ್ಲಿ ನೀರಿನಲ್ಲಿರುವ ಉಪ್ಪಿನ ಅಂಶಗಳು ಸಣ್ಣ ಸಣ್ಣ ಕಣಗಳಾಗಿ ಶೇಖರಣೆಗೊಳ್ಳುತ್ತವೆ. ಇವು ಮಗುವಿನ ಸೂಕ್ಷ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿಕರ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಸ್ಟೀಮ್ ಸ್ಟೆರಿಲೈಜ್ರ್ ಉಪಯೋಗ ಮಾಡಿದರೂ ಫಿಲ್ಟರ್ ವಾಟರ್ ಉಪಯೋಗಿಸುವುದನ್ನು ಮಾತ್ರ ಮರೆಯಬೇಡಿ.

2. ಬಾಟಲ್ ಸ್ವಚ್ಛಗೊಳಿಸಿ : -

2. ಬಾಟಲ್ ಸ್ವಚ್ಛಗೊಳಿಸಿ : -

ನಿಮ್ಮ ಮಗುವಿನ ಹಾಲಿನ ಬಾಟಲಿಯನ್ನು ಸ್ಟೆರಿಲೈಜ್ ಮಾಡುವ ಮುಂಚೆ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಬಾಟಲ್ ನ ಪ್ರತಿ ಭಾಗಗಳನ್ನು ಬಾಟಲಿ ಬ್ರಷ್ ಬಳಸಿ ಶುದ್ಧವಾಗಿ ಯಾವುದೇ ಹಾಲಿನ ಕಣಗಳು ಅಥವಾ ಹಾಲಿನ ಪುಡಿಯ ಅಂಶಗಳು ಇಲ್ಲದಂತೆ ತೊಳೆಯಿರಿ. ಬಾಟಲ್ ಶುಚಿ ಮಾಡಲು ಡಿಶ್ ವಾಶರ್ ಸಹ ಬಳಸಬಹುದು. ಡಿಶ್ ವಾಶರ್ ನಲ್ಲಿ ಹಾಲಿನ ಬಾಟಲ್ ತೊಳೆಯುವುದೇ ಆದರೆ ಮೇಲಿನ ರಾಕ್ ನಲ್ಲಿ ಹಾಲಿನ ಬಾಟಲ್ ಇಟ್ಟು ತೊಳೆಯಲು ಬಿಸಿ ನೀರಿನ ಬಳಕೆ ಮಾಡಿ.

ಹಾಲಿನ ಬಾಟಲ್, ನಿಪ್ಪಲ್, ಮುಚ್ಚಳ ಎಲ್ಲವನ್ನೂ ಸ್ವಚ್ಛವಾಗಿ ಹಾಲಿನ ಅಂಶಗಳು ಇಲ್ಲದಂತೆ ತೊಳೆಯಿರಿ. ಒಂದು ವೇಳೆ ಶುಚಿಗೊಳಿಸಲು ಸೋಪಿನ ಬಳಕೆ ಮಾಡಿದ್ದರೆ, ಬಾಟಲ್ ನಲ್ಲಿ ಹಾಲು ತುಂಬುವ ಮುಂಚೆ ಮತ್ತೊಮ್ಮೆ ಫಿಲ್ಟರ್ ನೀರಿನಲ್ಲಿ ಮೊದಲು ನಿಮ್ಮ ಕೈ ಗಳನ್ನು ಚೆನ್ನಾಗಿ ತೊಳೆದುಕೊಂಡು ನಂತರ ಬಾಟಲ್ ತೊಳೆಯಲು ಮುಂದಾಗಿ.

3. ನಿಮ್ಮ ಆಯ್ಕೆ ಎಂದಿಗೂ ಫುಡ್ ಗ್ರೇಡ್ ಪ್ಲಾಸ್ಟಿಕ್ ಆಗಿರಲಿ : -

3. ನಿಮ್ಮ ಆಯ್ಕೆ ಎಂದಿಗೂ ಫುಡ್ ಗ್ರೇಡ್ ಪ್ಲಾಸ್ಟಿಕ್ ಆಗಿರಲಿ : -

ನಿಮ್ಮ ಮುದ್ದಾದ ಮಗುವಿಗೆ ಹಾಲು ಕುಡಿಸುವ ಬಾಟಲ್ ನ ಆಯ್ಕೆಯಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಸರ್ಕಾರ ಪ್ಲಾಸ್ಟಿಕ್ ನ ಬಳಕೆ ಬೇಡವೇ ಬೇಡ ಎಂಬ ಆಲೋಚನೆಯಲ್ಲಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಹಾಗಾಗಿ ಪ್ಲಾಸ್ಟಿಕ್ ಅಂಶಗಳಿಂದ ನಿಮ್ಮ ಪುಟ್ಟ ಮಗುವಿನ ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು BPA ಮುಕ್ತವಾಗಿರುವ ಪ್ಲಾಸ್ಟಿಕ್ ಬಾಟಲ್ ಅಥವಾ ಗಾಜಿನ ಬಾಟಲ್ ಕೊಂಡುಕೊಂಡರೆ ಉತ್ತಮ. ಹೊಸ ಬಾಟಲ್ ತೆಗೆದುಕೊಂಡ ನಂತರ ಯಾವುದೇ ಕಾರಣಕ್ಕೂ ಅದನ್ನು ಬಳಸುವ ಮುಂಚೆ ಸ್ಟೆರಿಲೈಜ್ ಮಾಡುವುದನ್ನು ಮರೆಯಬೇಡಿ. ಗಾಜಿನ ಬಾಟಲ್ ಗಳನ್ನು ಸಹ ಪ್ಲಾಸ್ಟಿಕ್ ಬಾಟಲ್ ಗಳ ರೀತಿಯಲ್ಲಿ ಸ್ಟೆರಿಲೈಜ್ ಮಾಡಿ.

ನೀವು ನಿಮ್ಮ ಮಗುವಿಗಾಗಿ ಬಳಸುವ ಹಾಲಿನ ಬಾಟಲ್ ಮತ್ತು ಅದರ ಭಾಗಗಳಲ್ಲಿ ಎಲ್ಲಿಯಾದರೂ ಒಡೆದು ಹೋಗಿದೆಯೇ ಎಂಬುದನ್ನು ಆಗಾಗ ಪರೀಕ್ಷಿಸುತ್ತಿರಿ. ಒಂದು ವೇಳೆ ಬಾಟಲಿನ ಯಾವುದೇ ಭಾಗದಲ್ಲಿ ಸೀಳು ಬಿಟ್ಟಂತಹ ಲಕ್ಷಣಗಳು ಕಂಡು ಬಂದರೆ ಮೊದಲು ಹಾಲಿನ ಬಾಟಲ್ ಬದಲಾಯಿಸಿ. ಏಕೆಂದರೆ ಸೀಳು ಬಿಟ್ಟ ಪ್ರದೇಶಗಳಲ್ಲಿ ಬ್ಯಾಕ್ಟೀರಿಯಾಗಳು ವಾಸಿಸುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ಮಗುವಿನ ಆರೋಗ್ಯಕ್ಕೆ ಮಾರಕ.

4. ಬಾಟಲ್ ಒಣಗಿಸುವುದರಲ್ಲಿ ಇರಲಿ ನಿಮ್ಮ ಜಾಣ್ಮೆ : -

4. ಬಾಟಲ್ ಒಣಗಿಸುವುದರಲ್ಲಿ ಇರಲಿ ನಿಮ್ಮ ಜಾಣ್ಮೆ : -

ಸ್ಟೆರಿಲೈಜ್ ಮಾಡಿದ ಹಾಲಿನ ಬಾಟಲ್ ಗಳನ್ನು ಒಣಗಿಸಲು ಪ್ರತ್ಯೇಕ ಬಟ್ಟೆ ಎತ್ತಿಡಿ. ನೀವು ಬಳಸುವ ಬಟ್ಟೆ ಹತ್ತಿಯದಾಗಿದ್ದರೆ ಉತ್ತಮ ಮತ್ತು ಹಾಲಿನ ಬಾಟಲ್ ಶುಚಿ ಮಾಡಲು ಬಳಸಿದ ಬಟ್ಟೆಯನ್ನು ಬೇರೆ ಇನ್ಯಾವ ಕೆಲಸಗಳಿಗೂ ಬಳಸಬೇಡಿ. ಹಾಲಿನ ಬಾಟಲ್ ಶುಚಿ ಮಾಡಿದ ನಂತರ ಬಟ್ಟೆಯನ್ನು ಒಂದು ಏರ್ ಟೈಟ್ ಕಾಂಟೇನರ್ ನಲ್ಲಿ ಭದ್ರವಾಗಿರಿಸಿ. ಬಟ್ಟೆಗೆ ಯಾವುದೇ ಧೂಳು ಅಥವಾ ಕಲ್ಮಶ ತಾಗಬಾರದು. ಬಟ್ಟೆಯನ್ನು ಜಿಪ್ ಲಾಕ್ ಬ್ಯಾಗ್ ನಲ್ಲಿ ಇಟ್ಟರೂ ಒಳ್ಳೆಯದು.

5. ಹಾಲು ಕುಡಿಸುವ ಮುಂಚೆಯಷ್ಟೇ ಬಾಟಲ್ ಸ್ಟೆರಿಲೈಸೆರ್ ನಿಂದ ಹೊರತೆಗೆಯಿರಿ : -

5. ಹಾಲು ಕುಡಿಸುವ ಮುಂಚೆಯಷ್ಟೇ ಬಾಟಲ್ ಸ್ಟೆರಿಲೈಸೆರ್ ನಿಂದ ಹೊರತೆಗೆಯಿರಿ : -

ಬಹಳಷ್ಟು ಮಹಿಳೆಯರು ಮಗುವಿಗೆ ಬಾಟಲ್ ನಲ್ಲಿ ಹಾಲು ಕುಡಿಸುವ ಒಂದು ಗಂಟೆ ಅಥವಾ ಎರಡು ಗಂಟೆ ಮುಂಚೆ ತೆಗೆದು ಮುಚ್ಚಳ ತೆಗೆದು ತುಂಬಾ ಹೊತ್ತು ಹಾಗೆ ಬಿಟ್ಟು ನಂತರ ಅದಕ್ಕೆ ಹಾಲು ಸುರಿದು ಮಗುವಿಗೆ ಕುಡಿಯಲು ಕೊಡುತ್ತಾರೆ. ಇದು ಖಂಡಿತ ತಪ್ಪು. ಹೀಗೆ ಮಾಡುವುದರಿಂದ ಗಾಳಿಯಲ್ಲಿನ ಹಲವಾರು ರೋಗಾಣುಗಳು ಮತ್ತು ಧೂಳಿನ ಕಣಗಳು ಬಾಟಲ್ ಒಳಗೆ ಶೇಖರಣೆಯಾಗುತ್ತವೆ ಮತ್ತು ಹಾಲಿನ ಜೊತೆ ಮಗುವಿನ ದೇಹ ಸೇರುತ್ತವೆ.

ಇದರಿಂದ ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತದೆ. ಆದ್ದರಿಂದ ಮಗುವಿಗೆ ಬಾಟಲ್ ನಲ್ಲಿ ಹಾಲು ಕೊಡುವ ಕೇವಲ ಕೆಲವೇ ಕ್ಷಣಗಳ ಮುಂಚೆ ಸ್ಟೆರಿಲೈಸೆರ್ ನಿಂದ ತೆಗೆದು ಹಾಲು ತುಂಬಿಸಿ ಕುಡಿಯಲು ಕೊಡಬೇಕು.

 6. ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ : -

6. ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ : -

ಸ್ಟೆರಿಲೈಸೆರ್ ನಿಂದ ಹಾಲಿನ ಬಾಟಲ್ ತೆಗೆಯುವ ಮುಂಚೆ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ನಿಮ್ಮ ಕೈಗಳಲ್ಲಿ ಯಾವುದೇ ಸೋಪಿನ ಅಂಶಗಳು ಇಲ್ಲವೆಂದು ಖಾತ್ರಿಪಡಿಸಿಕೊಳ್ಳಿ. ಬಾಟಲ್ ತೆಗೆದುಕೊಳ್ಳಲು ಸ್ಟೆರಿಲೈಸೆರ್ ಟೊಂಗ್ಸ್ ಇದ್ದರೆ ಇನ್ನೂ ಉತ್ತಮ. ಸ್ಟರಿಲಿಜರ್ ನಿಂದ ಬಾಟಲ್ ಹೊರಗೆ ತೆಗೆದ ನಂತರ ಒಂದು ವೇಳೆ ಮರೆತು ಹೆಚ್ಚಿನ ಸಮಯ ಹಾಗೆ ಬಿಟ್ಟಿದ್ದರೆ, ಹಾಲು ತುಂಬಿಸುವ ಮುಂಚೆ ಮತ್ತೊಮ್ಮೆ ಸ್ಟೆರಿಲೈಸ್ ಮಾಡಿ ನಂತರ ಬಳಕೆ ಮಾಡಿ.

ಮಗುವಿನ ಹಾಲಿನ ಬಾಟಲ್ ಅನ್ನು ಸ್ಟೇಟಸ್ ಮಾಡುವ ವಿವಿಧ ವಿಧಾನಗಳು : -

ಮಗುವಿನ ಹಾಲಿನ ಬಾಟಲ್ ಅನ್ನು ಸ್ಟೇಟಸ್ ಮಾಡುವ ವಿವಿಧ ವಿಧಾನಗಳು : -

ಸಾಮಾನ್ಯವಾಗಿ ಮಗುವಿನ ಹಾಲಿನ ಬಾಟಲ್ ಸ್ಟೆರಿಲೈಸ್ ಮಾಡಲು ಅನೇಕ ವಿಧಾನಗಳಿವೆ. ಅದರಲ್ಲಿ ಪ್ರಮುಖವಾದವನ್ನು ಇಲ್ಲಿ ಕೊಡಲಾಗಿದೆ. ಜೊತೆಗೆ ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಸಹ ತಿಳಿಸಿಕೊಡಲಾಗಿದೆ.

1. ಕುದಿಸುವುದು : -

1. ಕುದಿಸುವುದು : -

ಇದು ಎಲ್ಲಾ ಕಡೆಗಳಲ್ಲಿಯೂ ಸ್ಟೆರಿಲೈಸ್ ಮಾಡಲು ಉಪಯೋಗಿಸುವ ಸಾಮಾನ್ಯ ವಿಧಾನವಾಗಿದೆ. ಆದರೆ ಮುಖ್ಯವಾಗಿ ತಾಯಂದಿರು ಹಾಲಿನ ಬಾಟಲ್, ನಿಪ್ಪಲ್ ಮತ್ತೆ ಇತರ ಭಾಗಗಳು ಹೆಚ್ಚು ತಾಪಮಾನವನ್ನು ತಡೆದುಕೊಳ್ಳಲು ಶಕ್ತಿಯುತ ಆಗಿವೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು.

ಮೊದಲಿಗೆ ಒಂದು ದೊಡ್ಡದಾದ ಮುಚ್ಚಳ ಹೊಂದಿದ ಸ್ಟೀಲ್ ಪಾತ್ರೆಯನ್ನು ತೆಗೆದುಕೊಳ್ಳಿ. ಹಾಲಿನ ಬಾಟಲ್ ಮತ್ತು ಬಾಟಲಿನ ಪರಿಕರಗಳು ಮುಳುಗುವಷ್ಟು ನೀರು ಹಾಕಿ. ಕೇವಲ ಹಾಲಿನ ಬಾಟಲ್ ತೊಳೆಯಲು ಮಾತ್ರ ಈ ಪಾತ್ರೆಯನ್ನು ಬಳಸಿ. ಕುದಿಯುವ ನೀರಿನಲ್ಲಿ ಹಾಲಿನ ಬಾಟಲ್ ಸದಾ ಮುಳುಗಿರುವಂತೆ ಯಾವುದಾದರೂ ಭಾರವಾದ ವಸ್ತುವನ್ನು ಬಾಟಲ್ ಮೇಲಿಡಲು ಪ್ರಯತ್ನಿಸಿ. ತೂಕ ಕಡಿಮೆ ಇರುವ ಕಾರಣ ನೀರಿನ ಬಾಟಲ್ ಕುದಿಯುವ ನೀರಿನಲ್ಲಿ ಮೇಲೇರಲು ಪ್ರಾರಂಭವಾಗುತ್ತದೆ. ಇದರಿಂದ ಬಾಟಲ್ ಸಾಕಷ್ಟು ಶುಚಿಯಾಗಿದೆ ಎನಿಸುವುದಿಲ್ಲ.

ಪ್ಲಾಸ್ಟಿಕ್ ಹಾಲಿನ ಬಾಟಲ್ ಯಾವುದೇ ಕಾರಣಕ್ಕೂ ಸ್ಟೀಲ್ ಪಾತ್ರೆಯ ತಳ ಭಾಗಕ್ಕೆ ಸ್ಪರ್ಶಿಸಬಾರದು. ಏಕೆಂದರೆ ವಿಪರೀತ ಹೆಚ್ಚಿನ ತಾಪಮಾನದಿಂದ ಹಾಲಿನ ಬಾಟಲ್ ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗಾಜಿನ ಬಾಟಲ್ ಆದರೆ ಪಾತ್ರೆಯ ಬಿಸಿಗೆ ಒಡೆದು ಹೋಗುವ ಸಾಧ್ಯತೆ ಇರುತ್ತದೆ, ಪ್ಲಾಸ್ಟಿಕ್ ಬಾಟಲ್ ಕರಗುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಮನಗಂಡು ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಿ ಹಾಲಿನ ಬಾಟಲ್ ಅನ್ನು ಕುದಿಯುವ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ.

ಕುದಿಸಿದ ನಂತರ ನೀವು ಹಾಲಿನ ಬಾಟಲ್ ಮತ್ತೊಮ್ಮೆ ಬಳಸುವವರೆಗೂ ಸ್ಟೀಲ್ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ. 24 ಗಂಟೆಗಳ ಒಳಗೆ ನೀವು ಹಾಲಿನ ಬಾಟಲ್ ಬಳಸದೇ ಇದ್ದರೆ, ಬಳಸುವ ಮುಂಚೆ ಮತ್ತೊಮ್ಮೆ ಸ್ಟರಲೈಸ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

ಈ ಪದ್ಧತಿಯಲ್ಲಿನ ಅನಾನುಕೂಲಗಳು : -

ಪ್ಲಾಸ್ಟಿಕ್ ಬಾಟಲ್ ಅಥವಾ ಗಾಜಿನ ಬಾಟಲ್ ನೇರವಾಗಿ ಕುದಿಯುವ ನೀರಿನ ಒಳಗೇ ಇರುವುದರಿಂದ ಬಾಟಲ್ ಅಥವಾ ಅದರ ಬಿಡಿ ಭಾಗಗಳು ಬಹಳ ಬೇಗನೆ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

2. ಕೋಲ್ಡ್ ವಾಟರ್ ಸ್ಟೆರಿಲೈಸಿಂಗ್ : -

2. ಕೋಲ್ಡ್ ವಾಟರ್ ಸ್ಟೆರಿಲೈಸಿಂಗ್ : -

ಈ ಪದ್ಧತಿಯಲ್ಲಿ ಮಗುವಿನ ಹಾಲಿನ ಬಾಟಲ್ ಸ್ಟೆರಿಲೈಸ್ ಮಾಡಲು ಸ್ಟೆರಿಲೈಸಿಂಗ್ ದ್ರಾವಣವನ್ನು ಅಥವಾ ಡೈಲ್ಯೂಟ್ ಮಾಡಿದ ಸ್ಟರಿಲೈಸೇಶನ್ ಟ್ಯಾಬ್ಲೆಟ್ ಅನ್ನು ತಣ್ಣನೆಯ ನೀರಿನಲ್ಲಿ ಬಳಸಬೇಕು ಈ ರೀತಿ ಮಾಡುವುದರಿಂದ ಬ್ಯಾಕ್ಟೀರಿಯಗಳು ಬಹಳ ಬೇಗನೆ ಸಾಯುತ್ತವೆ. ಆದರೆ ಒಂದು ಅಂಶ ನೆನಪಿರಲಿ. ಈ ಪದ್ಧತಿ ಕೇವಲ 24 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತದೆ. ನಂತರ ಬಳಸಲು ನೀವು ಮೇಲಿನ ಪದಾರ್ಥಗಳನ್ನು ಮತ್ತೊಮ್ಮೆ ಬೇರೆ ನೀರಿನಲ್ಲಿ ಬಳಸಬೇಕಾಗುತ್ತದೆ.

ಕೋಲ್ಡ್ ವಾಟರ್ ಸ್ಟರಿಲೈಸೇಶನ್ ಪ್ರಕ್ರಿಯೆ ಬಳಸಲು ಮಾರುಕಟ್ಟೆಯಲ್ಲಿ ಇದುವರೆಗೂ ಸೂಕ್ತವಾದ ಉತ್ಪನ್ನಗಳು ಬಹಳಷ್ಟು ವಿಧಗಳಲ್ಲಿ ಲಭ್ಯವಾಗುತ್ತವೆ. ನೀವು ಬೇಕಾದರೆ ಮುಚ್ಚಳವಿರುವ ಪ್ಲಾಸ್ಟಿಕ್ ಕಂಟೈನರ್ ಬಳಸಬಹುದು.

ಆದರೆ ಯಾವುದೇ ಕಾರಣಕ್ಕೂ ಎರಡು ಬಾರಿ ಒಂದೇ ಕಂಟೇನರ್ ಬಳಸಬಾರದು. ನೀವು ಸ್ಟೆರಿಲೈಸೆರ್ ದ್ರಾವಣ ಬಳಸಿರುವ ಕಾರಣ, ಇದು ಪ್ಲಾಸ್ಟಿಕ್ ಕಂಟೈನರ್ ನ ಪದರಗಳಿಗೆ ಹಾನಿ ಮಾಡುವ ಸಂಭವ ಹೆಚ್ಚಿರುತ್ತದೆ ಮತ್ತು ಇದರಿಂದ ನೀವು ಬಳಸುವ ಪ್ಲಾಸ್ಟಿಕ್ ಕಂಟೈನರ್ ನಿರುಪಯುಕ್ತ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೋಲ್ಡ್ ವಾಟರ್ ಸ್ಟರಿಲೈಸೇಶನ್ ಬಳಸುವ ಪ್ರಕ್ರಿಯೆ : -

ಕೋಲ್ಡ್ ವಾಟರ್ ಸ್ಟರಿಲೈಸೇಶನ್ ಬಳಸುವ ಪ್ರಕ್ರಿಯೆ : -

ಮೊದಲಿಗೆ ಪ್ಲಾಸ್ಟಿಕ್ ಕಂಟೈನರ್ ನಲ್ಲಿ ನೀರು ತೆಗೆದುಕೊಂಡು ನಿಮ್ಮ ಹಾಲಿನ ಬಾಟಲನ್ನು ಅದರಲ್ಲಿ ಸಂಪೂರ್ಣವಾಗಿ ಮುಳುಗುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಗುಳ್ಳೆಗಳು ಇಲ್ಲದಂತೆ ಎಚ್ಚರ ವಹಿಸಿ.

ಸ್ಟರಿಲೈಸಿಂಗ್ ದ್ರಾವಣವನ್ನು ಅಥವಾ ಸ್ಟೆರಿಲೈಸಷನ್ ಟ್ಯಾಬ್ಲೆಟ್ ಅನ್ನು ಯಾವ ಪ್ರಮಾಣದಲ್ಲಿ ಬಳಸಬೇಕು, ನೀರಿನ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ತಯಾರಕರು ನೀಡಿರುವ ಸೂಚನೆಗಳನ್ನು ಓದಿ ತಿಳಿದುಕೊಳ್ಳಿ.

ಕೋಲ್ಡ್ ಸ್ಟರಿಲೈಸೇಶನ್ ಪ್ರಕ್ರಿಯೆಯಲ್ಲಿ ನಿಮ್ಮ ಹಾಲಿನ ಬಾಟಲ್ ಸುಮಾರು ಅರ್ಧ ಗಂಟೆಯ ಕಾಲ ಸ್ಟೆರಿಲೈಸೇಷನ್ ನೀರಿನಲ್ಲಿ ಹಾಗೆ ಇರಲಿ. ಮಗುವಿಗೆ ಹಾಲು ಕುಡಿಸುವ ಸಮಯದಲ್ಲಿ ಮಾತ್ರ ಹಾಲಿನ ಬಾಟಲ್ ಹೊರ ತೆಗೆದು ಚೆನ್ನಾಗಿ ಬಿಸಿ ನೀರು ಮತ್ತು ತಂಪಾದ ನೀರಿನಲ್ಲಿ ಎರಡು ಬಾರಿ ಶುಚಿ ಮಾಡಿ ನಂತರ ಹಾಲು ತುಂಬಿಸಿ ಮಗುವಿಗೆ ಕುಡಿಯಲು ಕೊಡಿ

24 ಗಂಟೆಗಳ ನಂತರ ಸ್ಟೆರಿಲೈಸಿಂಗ್ ದ್ರಾವಣವನ್ನು ಚೆಲ್ಲಿ ಬಿಡಿ ಮತ್ತು ನೀವು ಕೋಲ್ಡ್ ಸ್ಟೆರಿಲೈಸಷನ್ ಪ್ರಕ್ರಿಯೆಗೆ ಬಳಸಿದ ಪ್ಲಾಸ್ಟಿಕ್ ಕಂಟೈನರ್ ಅನ್ನು ಮರುಬಳಕೆಗೆ ಮುಂಚೆ ಉಗುರು ಬೆಚ್ಚಗಿನ ಸೋಪಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

ಪ್ಲಾಸ್ಟಿಕ್ ಕಂಟೈನರ್ ಅನ್ನು ಒಂದು ಅದಕ್ಕಾಗಿಯೇ ಮೀಸಲಿಟ್ಟ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸಿ ಒಣಗಿಸಿ.

3. ಸ್ಟೀಮ್ ಸ್ಟೆರಿಲೈಸಿಂಗ್ : -

3. ಸ್ಟೀಮ್ ಸ್ಟೆರಿಲೈಸಿಂಗ್ : -

ಈ ಪದ್ಧತಿಗೆ ಅಗತ್ಯವಾಗಿ ವಿದ್ಯುತ್ ಅಥವಾ ಮೈಕ್ರೋವೇವ್ ಸ್ಟರಿಲೈಜರ್ ಅಗತ್ಯವಿದೆ. ಇದು ಬಹಳ ಸುಲಭವಾಗಿ ಮತ್ತು ಬೇಗನೆ ಮುಗಿಯುವ ಪ್ರಕ್ರಿಯೆ. ಪ್ರಥಮ ಬಾರಿಗೆ ನೀವು ಈ ಪದ್ಧತಿಯಲ್ಲಿ ನಿಮ್ಮ ಮಗುವಿನ ಹಾಲಿನ ಬಾಟಲ್ ತೊಳೆಯಲು ಪ್ರಯತ್ನ ಪಡುತ್ತಿದ್ದರೆ, ಉತ್ಪಾದಕರ ಮಾರ್ಗಸೂಚಿಗಳನ್ನು ಓದಿ ಚೆನ್ನಾಗಿ ತಿಳಿದುಕೊಳ್ಳಿ.

ಎಲೆಕ್ಟ್ರಿಕ್ ಸ್ಟೀಮ್ ಸ್ಟೆರಿಲೈಸಿಂಗ್ ಪ್ರಕ್ರಿಯೆ : -

ಎಲೆಕ್ಟ್ರಿಕ್ ಸ್ಟೀಮ್ ಸ್ಟೆರಿಲೈಸಿಂಗ್ ಪ್ರಕ್ರಿಯೆ : -

ನಿಮ್ಮ ಮಗುವಿನ ಹಾಲಿನ ಬಾಟಲನ್ನು ಕೇವಲ 12 ನಿಮಿಷಗಳಲ್ಲಿ ಈ ಪದ್ಧತಿ ಬಳಸಿ ಸ್ಟೆರಿಲೈಸ್ ಮಾಡಬಹುದು. ಮೊದಲಿಗೆ ನೀವು ಉಪಯೋಗಿಸುವ ಎಲೆಕ್ಟ್ರಿಕ್ ಸ್ಟೀಮರ್ ಗೆ ನೀರು ತುಂಬಿ ಅದರಲ್ಲಿ ಹಾಲಿನ ಬಾಟಲ್ ಮತ್ತು ಇನ್ನಿತರ ಬಾಟಲ್ ಪರಿಕರಗಳನ್ನು ಹಾಕಿ.

ಎಲೆಕ್ಟ್ರಿಕ್ ಸ್ಟೀಮರ್ ನ ಮುಚ್ಚಳ ಮುಚ್ಚಿ ಕೆಲವು ನಿಮಿಷಗಳ ಕಾಲ ಸ್ಟೀಮ್ ಮಾಡಿ. ಮುಚ್ಚಳ ಮುಚ್ಚಿದ ಸ್ಥಿತಿಯಲ್ಲಿದ್ದರೆ, ಈ ಪದ್ಧತಿಯಲ್ಲಿ ಸ್ಟೆರಿಲೈಸ್ ಮಾಡಿದ ನಿಮ್ಮ ಹಾಲಿನ ಬಾಟಲ್ ಸುಮಾರು ಆರು ಗಂಟೆಗಳವರೆಗೆ ಯಾವುದೇ ರೋಗಾಣು ಅಥವಾ ಸೂಕ್ಷ್ಮಾಣುಗಳು ಇಲ್ಲದೇ ಶುದ್ಧವಾಗಿರುತ್ತದೆ.

ಎಲೆಕ್ಟ್ರಿಕ್ ಸ್ಟೀಮರ್ ನಲ್ಲಿ ನಿಮ್ಮ ಹಾಲಿನ ಬಾಟಲ್ ಬಿಡುವುದಕ್ಕೆ ಮುಂಚೆ ಸ್ಟೀಮ್ ಮಾಡಲು ಪ್ರಯತ್ನ ಪಡಿ. ಸ್ಟೀಮ್ ಸ್ಟೆರಿಲೈಸಿಂಗ್ ಸಾಧನಗಳು ಒಂದು ಬಾರಿಗೆ ಆರು ಬಾಟಲ್ ಗಳನ್ನು ಸ್ಟ್ರೆರಿಲೈಸ್ ಮಾಡಬಲ್ಲವು ಮತ್ತು ಚಿಕ್ಕ ಪುಟ್ಟ ವಸ್ತುಗಳಿಗೆ ಸ್ಟೆರಿಲೈಸ್ ಮಾಡಲು ಅದರಲ್ಲಿ ಬೇರೆ ಬೇರೆ ರಾಕ್ ಗಳಿರುತ್ತವೆ.

ಎಲೆಕ್ಟ್ರಿಕ್ ಸ್ಟೀಮರ್ ನಲ್ಲಿ ಹಾಲಿನ ಬಾಟಲನ್ನು ಮುಚ್ಚಳ ತೆಗೆಯುವ ಭಾಗ ಕೆಳಗಡೆಗೆ ಬರುವಂತೆ ಇಡಬೇಕು. ಇದರಿಂದ ಹಾಲಿನ ಬಾಟಲ್ ಬಹಳ ಚೆನ್ನಾಗಿ ಸ್ಟೆರಿಲೈಸ್ ಆಗುತ್ತದೆ.

 ಮೈಕ್ರೋವೇವ್ ಸ್ಟರಿಲೈಸೇಶನ್ ಪ್ರಕ್ರಿಯೆ : -

ಮೈಕ್ರೋವೇವ್ ಸ್ಟರಿಲೈಸೇಶನ್ ಪ್ರಕ್ರಿಯೆ : -

ಸ್ಟೀಮ್ ಸ್ಟರಿಲೈಸೇಶನ್ ವಿಧಾನದಲ್ಲಿ ಇದು ಇನ್ನೊಂದು ಅತ್ಯಂತ ಪರಿಣಾಮಕಾರಿಯಾದ ಪದ್ಧತಿ. ಸೀಲ್ ಹೊಂದಿರದ ಮಗುವಿನ ಬಾಟಲ್ ಗಳು ಸುಮಾರು 90 ಸೆಕೆಂಡುಗಳವರೆಗೆ ಮೈಕ್ರೋವೇವ್ ಸ್ಟರಿಲೈಸೇಶನ್ ಪ್ರಕ್ರಿಯೆಗೆ ಒಳಪಡಬಹುದು. ಇದು ಬಹಳ ಬೇಗನೆ ಹಾಲಿನ ಬಾಟಲಿಗಳನ್ನು ಸ್ಟೆರಿಲೈಸ್ ಮಾಡುತ್ತದೆ. ಆದರೆ ಬಳಕೆಗೆ ಮುಂಚೆ ನಿಮ್ಮ ಮೈಕ್ರೋವೇವ್ ಉಪಕರಣ ಶುದ್ಧವಾಗಿದೆಯೇ ಎಂಬ ಖಾತ್ರಿ ಮಾಡಿಕೊಳ್ಳಿ

ಮಗುವಿನ ಹಾಲಿನ ಬಾಟಲಿಯನ್ನು ಮೈಕ್ರೋವೇವ್ ಸ್ಟೆರಿಲೈಸ್ ಮಾಡುವ ವಿಧಾನ : -

ಮಗುವಿನ ಹಾಲಿನ ಬಾಟಲಿಯನ್ನು ಮೈಕ್ರೋವೇವ್ ಸ್ಟೆರಿಲೈಸ್ ಮಾಡುವ ವಿಧಾನ : -

ಮೊದಲಿಗೆ ನಿಮ್ಮ ಮಗುವಿನ ಹಾಲಿನ ಬಾಟಲ್ ಗೆ ಅರ್ಧ ಭಾಗಕ್ಕೆ ಬರುವಂತೆ ನೀರು ತುಂಬಿ. ಮೈಕ್ರೋವೇವ್ ನಲ್ಲಿ ನೀರು ತುಂಬಿದ ಹಾಲಿನ ಬಾಟಲ್ ನೇರವಾಗಿ ನಿಲ್ಲಿಸಿ. ಹಾಲಿನ ಬಾಟಲ್ ನ ನಿಪ್ಪಲ್ ಮತ್ತು ಉಂಗುರಗಳನ್ನು ಮೈಕ್ರೋವೇವ್ ಸೇಫ್ ಬೌಲ್ ನಲ್ಲಿ ಸಾಕಷ್ಟು ನೀರು ತುಂಬಿ ಹಾಕಿಡಿ. ನಿಮ್ಮ ಹಾಲಿನ ಬಾಟಲ್ ಮತ್ತು ಬಾಟಲ್ ಪರಿಕರಗಳನ್ನು ಸ್ಟೆರಿಲೈಸ್ ಮಾಡಲು ಒಂದರಿಂದ ಒಂದೂವರೆ ನಿಮಿಷ ಸಾಕಾಗುತ್ತದೆ.

ಗಮನಿಸಿ :

ಮೈಕ್ರೋವೇವ್ ಸ್ಟೀಮರ್ ಬಳಸುವ ಮುಂಚೆ ನಿಮ್ಮ ಕೈಗಳ ಬಗ್ಗೆ ಎಚ್ಚರವಿರಲಿ. ಮಗುವಿನ ಹಾಲಿನ ಬಾಟಲ್ ಮೈಕ್ರೋವೇವ್ ನಲ್ಲಿ ಇಡುವಾಗ ಮತ್ತು ಹೊರತೆಗೆಯುವಾಗ ಕೈ ಸುಟ್ಟುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಆದ್ದರಿಂದ ಸ್ಟೀಮರ್ ಗಳನ್ನು ಒಳಗೊಂಡ ಮೈಕ್ರೋವೇವ್ ಸ್ಟೀಮಿಂಗ್ ಪ್ರಕ್ರಿಯೆ ಬಳಸುವ ವಿಧಾನದಲ್ಲಿ ಎಚ್ಚರ ವಹಿಸಿ. ಅತಿ ಮುಖ್ಯವಾಗಿ ಮಗುವಿನ ಹಾಲಿನ ಬಾಟಲ್ ಸ್ಟೆರಿಲೈಸ್ ಮಾಡಲೆಂದೇ ತಯಾರಾಗಿರುವ ಮೈಕ್ರೋವೇವ್ ಸ್ಟೀಮರ್ ಗಳನ್ನು ಮಾತ್ರ ಬಳಸಿ.

ಸ್ಟೆರಿಲೈಸೇಶನ್ ಪ್ರಕ್ರಿಯೆ ಪೂರ್ಣಗೊಳ್ಳಲು 3 ರಿಂದ 8 ನಿಮಿಷಗಳು ಸಾಕಾಗುತ್ತದೆ ಮತ್ತು ಹೆಚ್ಚಾದ ತಾಪಮಾನ ತಂಪಾಗಲು ಕೆಲವು ನಿಮಿಷಗಳು ಹಿಡಿಯುತ್ತವೆ.

ಇದು ನೀವು ಬಳಸುವ ಸ್ಟೀಮರ್ ನ ಮಾಡೆಲ್ ಮತ್ತು ವ್ಯಾಟೇಜ್ ಮೇಲೆ ಅವಲಂಬಿತವಾಗಿರುತ್ತದೆ.

ಮೈಕ್ರೋವೇವ್ ಸ್ಟೀಮರ್ ಬಳಸುವ ವಿಧಾನ : -

ಮೈಕ್ರೋವೇವ್ ಸ್ಟೀಮರ್ ಬಳಸುವ ವಿಧಾನ : -

ಮೊದಲು ಸ್ಟೀಂ ಸ್ಟೆರಿಲೈಸೆರ್ ಗೆ ನೀರು ತುಂಬಿ.

ನಿಮ್ಮ ಮಗುವಿನ ಹಾಲಿನ ಬಾಟಲ್ ಗಳನ್ನು ಮೈಕ್ರೋವೇವ್ ನಲ್ಲಿ ಇಡಿ.

ಕೆಲವು ನಿಮಿಷಗಳು ಕಳೆದ ನಂತರ ಮೈಕ್ರೋವೇವ್ ಉಪಕರಣದಿಂದ ' ಬೀಪ್ ' ಶಬ್ದ ಕೇಳಿ ಬರುತ್ತದೆ. ತದನಂತರ ನಿಮ್ಮ ಹಾಲಿನ ಬಾಟಲ್ ಉಪಕರಣದಿಂದ ಹೊರಗೆ ತೆಗೆದುಕೊಳ್ಳಿ.

ಎಲೆಕ್ಟ್ರಿಕ್ ಸ್ಟರಿಲೈಸೇಶನ್ ಅಥವಾ ಮೈಕ್ರೋವೇವ್ ಸ್ಟರಿಲೈಸೇಶನ್ ಪದ್ಧತಿ ಬಳಸುವ ನಂತರದ ಉಪಯೋಗವೆಂದರೆ, ಹಾಲಿನ ಬಾಟಲ್ 6 ಗಂಟೆಗಳವರೆಗೂ ಸ್ಟೆರಿಲೈಸ್ ಆಗಿರುತ್ತವೆ. ಸ್ಟರಿಲೈಸೇಶನ್ ಪ್ರಕ್ರಿಯೆಯ ನಂತರ ಹಾಲಿನ ಯಾವುದೇ ವಾಸನೆ ಬಾಟಲ್ ಗಳಲ್ಲಿ ಕಂಡುಬರುವುದಿಲ್ಲ.

4. ಅತಿ ನೇರಳೆ ಬೆಳಕಿನಿಂದ ಸ್ಟೆರಿಲೈಸ್ ಮಾಡುವುದು (UV ಸ್ಟೆರಿಲೈಸಷನ್) : -

4. ಅತಿ ನೇರಳೆ ಬೆಳಕಿನಿಂದ ಸ್ಟೆರಿಲೈಸ್ ಮಾಡುವುದು (UV ಸ್ಟೆರಿಲೈಸಷನ್) : -

ಅಲ್ಟ್ರಾವೈಲೆಟ್ ಲೈಟ್ ಅಥವಾ ಅತಿ ನೇರಳೆ ಕಿರಣಗಳು ಬ್ಯಾಕ್ಟೀರಿಯಗಳನ್ನು, ವೈರಸ್ಗಳನ್ನು ಮತ್ತು ಫಂಗಸ್ ಬೆಳವಣಿಗೆಗಳನ್ನು ಕೊಲ್ಲುವುದರ ಮುಖಾಂತರ ನೀರನ್ನು ಶುದ್ಧೀಕರಿಸುತ್ತದೆ.

ಈ ಕಾರಣದಿಂದ ಮಕ್ಕಳ ಉತ್ಪನ್ನಗಳ ಶುದ್ಧೀಕರಣಕ್ಕೂ ಈ ತಂತ್ರಜ್ಞಾನವನ್ನು ಇತ್ತೀಚಿಗೆ ಬಳಸಲಾಗುತ್ತಿದೆ.

ಮಕ್ಕಳು ಹಾಲು ಕುಡಿಯುವ ಬಾಟಲ್ ಸ್ಟೆರಿಲೈಸ್ ಮಾಡಲು ಇದೊಂದು ಹೊಸ ಪದ್ಧತಿಯಾಗಿದ್ದು, ಇದರಲ್ಲಿ ಸಂಪೂರ್ಣವಾಗಿ ಬಾಟಲ್ ಶುಚಿ ಮಾಡಲು ಯಾವುದೇ ಉಪಕರಣಗಳಿಲ್ಲ.

ಕೇವಲ ಹಾಲಿನ ಬಾಟಲ್ ನ ನಿಪ್ಪಲ್ ಗಳನ್ನು ಈ ತಂತ್ರಜ್ಞಾನದಿಂದ ಸ್ಟೆರಿಲೈಸ್ ಮಾಡಬಹುದು.

ಇದರ ನಡುವೆ ಅಲ್ಟ್ರಾವೈಲೆಟ್ ಸ್ಟರಿಲೈಸಿಂಗ್ ಡಿವೈಸ್ ತುಂಬಾ ಹಗುರವಾಗಿದ್ದು, ಎಲ್ಲಿಗೆ ಬೇಕಾದರೂ ಸುಲಭವಾಗಿ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು.

ಈ ಪ್ರಕ್ರಿಯೆಯಲ್ಲಿ ಕೇವಲ 3 ನಿಮಿಷದಲ್ಲಿ ಸ್ಟರಿಲೈಸೇಶನ್ ಸಂಪೂರ್ಣವಾಗಿಸಬಹುದು.

ಸ್ಟೆರಿಲೈಸ್ ಮಾಡದೇ ಇರುವ ಬಾಟಲ್ ಗಳಲ್ಲಿ ಮಗುವಿಗೆ ಹಾಲನ್ನು ಕುಡಿಯಲು ಕೊಡುವುದರಿಂದ ಸಾಕಷ್ಟು ಬ್ಯಾಕ್ಟೀರಿಯಾ ಗಳು, ವೈರಸ್ ಗಳು ಮತ್ತು ಪರಾವಲಂಬಿ ಜೀವಿಗಳು ನಿಮ್ಮ ಮಗುವಿನ ದೇಹ ಪ್ರವೇಶಿಸಿ ಹಲವು ಸೋಂಕುಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಈ ಮೇಲಿನ ನಿಮಗೆ ಸುಲಭವಾಗಿ ಲಭ್ಯವಾಗುವಂತಹ ಯಾವುದಾದರೂ ಪದ್ಧತಿಯಲ್ಲಿ ನಿಮ್ಮ ಮಗುವಿನ ಹಾಲಿನ ಬಾಟಲ್ ಅನ್ನು ಚೆನ್ನಾಗಿ ಸ್ಟೆರಿಲೈಸ್ ಮಾಡಿ ನಂತರ ಮಗುವಿಗೆ ಹಾಲು ಕುಡಿಯಲು ಕೊಡಿ. ನಿಮ್ಮ ಜಾಗರೂಕತೆಯ ಜೊತೆಗೆ ನಿಮ್ಮ ಮಗುವಿನ ಆರೋಗ್ಯದ ಕಾಳಜಿಯೂ ಮುಖ್ಯ ಅಲ್ಲವೇ?

English summary

How To Sterilise Baby Feeding Bottle

Here are how to sterilize baby feeding bottle, everything you need to know, Read on.
X
Desktop Bottom Promotion