For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಏಕಾಗ್ರತೆ ಕೊರತೆಯೇ? ಪೋಷಕರು ಹೀಗೆ ಮಾಡಿ ನೋಡಿ

|

ಮಕ್ಕಳ ಗಮನವನ್ನು ಸೆಳೆಯುವುದು ಎಷ್ಟು ಸುಲಭವೋ, ಅವರ ಗಮನವನ್ನು ವಿಚಲಿತಗೊಳಿಸುವುದು ಸಹ ಕ್ಷಣ ಮಾತ್ರ ಅಷ್ಟೇ. ಮಕ್ಕಳು ಬಹಳ ಸಣ್ಣ ವಿಷಯಗಳಿಗೆ ಗಮನ ಕಳೆದುಕೊಳ್ಳುತ್ತಾರೆ. ಮಕ್ಕಳಲ್ಲಿ ಕುತೂಹಲ ಹೆಚ್ಚು, ಅವರು ಈವರೆಗೂ ನೋಡಿರದ, ಗೊತ್ತಿಲ್ಲದ ಅಥವಾ ಅನುಭವಿಸದ ವಿಷಯಗಳಿಂದ ಹೆಚ್ಚಾಗಿ ಆಮಿಷಕ್ಕೆ ಒಳಗಾಗುತ್ತಾರೆ.

ಈ ಲಾಕ್‌ಡೌನ್‌ ಸಮಯದಲ್ಲಿ ಪೋಷಕರಿಗೆ ಮಕ್ಕಳ ಗಮನವನ್ನು ಸೆಳೆದು, ಅವರ ಗಮನವನ್ನು ಕೇಂದ್ರಿಕರಿಸುವುದು ಅತ್ಯಂತ ಕಷ್ಟದ ಕೆಲಸವೇ ಆಗಿರುತ್ತದೆ. ಹಾಗಿದ್ದರೆ ಮಕ್ಕಳ ಗಮನವನ್ನು ಸುಲಭವಾಗಿ ಸೆಳೆಯುವುದು ಹೇಗೆ, ಯಾವೆಲ್ಲಾ ವಿಧಾನಗಳನ್ನು ಬಳಸಿ ಅವರನ್ನು ನಿತ್ಯ ಚಟುವಟಿಕೆಗಳಲ್ಲಿ ನಿರತರಾಗಿರಿಸುವುದು ಎಂಬುದನ್ನು ತಿಳಿಯೋಣ:

ಮಕ್ಕಳ ದಿನಚರಿ ರಚಿಸಿ

ಮಕ್ಕಳ ದಿನಚರಿ ರಚಿಸಿ

ಪೋಷಕರು ವೇಳಾಪಟ್ಟಿಯನ್ನು ಅನುಸರಿಸುವುದು ಬಹಳ ಮುಖ್ಯ. ದಿನಚರಿಯು ನಿಮ್ಮ ಸಮಯವನ್ನು ನಿರ್ವಹಿಸಲು ಸಹಾಯ ಮಾಡುವುದಲ್ಲದೆ, ಮಗು ಒಂದು ದಿನದಲ್ಲಿ ಏನನ್ನು ಕಲಿಯಬೇಕು ಎಂಬ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಅಧ್ಯಯನದ ಸಮಯವಾಗಲಿ ಅಥವಾ ಆಟದ ಸಮಯವಾಗಲಿ, ಅವರು ಯೋಜನೆಯನ್ನು ಅನುಸರಿಸಿದರೆ ಯಾವಾಗ ಏನು ಮಾಡಬೇಕೆಂದು ಅವರಿಗೆ ತಿಳಿಯುತ್ತದೆ.

ಆರೋಗ್ಯಕರ, ಪೌಷ್ಟಿಕ ಆಹಾರದಲ್ಲಿ ಹೂಡಿಕೆ ಮಾಡಿ

ಆರೋಗ್ಯಕರ, ಪೌಷ್ಟಿಕ ಆಹಾರದಲ್ಲಿ ಹೂಡಿಕೆ ಮಾಡಿ

ನಿಮ್ಮ ಮಗುವಿನ ಏಕಾಗ್ರತೆಯ ಶಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಗುವಿಗೆ ಹಸಿವಾಗಿದ್ದರೆ, ಅವರು ಯಾವಾಗಲೂ ವಿಚಲಿತರಾಗುತ್ತಾರೆ. ಅವರ ಹೊಟ್ಟೆ ತುಂಬಿಸುವುದರ ಜೊತೆಗೆ, ನೀವು ಅವರಿಗೆ ಏನು ಆಹಾರ ನೀಡುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ಹಸಿರು ತರಕಾರಿಗಳು, ಕೊಬ್ಬಿನ ಮೀನುಗಳು, ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಮಗುವಿನ ಮೆದುಳಿನ ಆರೋಗ್ಯ ಮತ್ತು ಸ್ಮರಣೆಗೆ ಉತ್ತಮವಾಗಿದೆ.

ಮಗುವಿನ ಸಾಮರ್ಥ್ಯ ಮತ್ತು ಮಿತಿ ಗುರುತಿಸಿ

ಮಗುವಿನ ಸಾಮರ್ಥ್ಯ ಮತ್ತು ಮಿತಿ ಗುರುತಿಸಿ

ನಿಮ್ಮ ಮಗುವನ್ನು ಕೇಂದ್ರೀಕರಿಸಲು ಒತ್ತಾಯಿಸಬೇಡಿ. ಬದಲಾಗಿ ಅವರ ಸಾಮರ್ಥ್ಯವನ್ನು ಗುರುತಿಸಿ ಮತ್ತು ಅವರಿಗೆ ಸೂಕ್ತವಾದ ಕಲಿಕಾ ವಿಧಾನವನ್ನು ಪರಿಚಯಿಸಿ. ಜ್ಞಾನವು ಹಲವು ರೂಪಗಳಲ್ಲಿ ಬರಬಹುದು, ಇದು ಪುಸ್ತಕಗಳಿಗೆ ಸೀಮಿತವಾಗಬೇಕಿಲ್ಲ ಎಂಬುದನ್ನು ಪೋಷಕರು ನೆನಪಿಡಬೇಕು. ಇದು ದೃಶ್ಯ, ಕಲಾತ್ಮಕ, ಶ್ರವಣೇಂದ್ರಿಯವಾಗಿರಬಹುದು ಮತ್ತು ನೃತ್ಯ, ಸಂಗೀತವನ್ನು ಕೇಳುವುದು ಮುಂತಾದ ಮೋಜಿನ ಚಟುವಟಿಕೆಗಳು ಸಹ ಮಕ್ಕಳನ್ನು ಹೆಚ್ಚು ಆಕರ್ಷಿಸಬಹುದು. ಇದನ್ನು ಪೋಷಕರು ತಿಳಿಯುವುದು ಮುಖ್ಯ.

ಏಕಾಗ್ರತೆಯ ಅಗತ್ಯವಿರುವ ಆಟ ಮತ್ತು ಒಗಟುಗಳನ್ನು ಪರಿಚಯಿಸಿ

ಏಕಾಗ್ರತೆಯ ಅಗತ್ಯವಿರುವ ಆಟ ಮತ್ತು ಒಗಟುಗಳನ್ನು ಪರಿಚಯಿಸಿ

ಮಕ್ಕಳು ಮುಗ್ಧರಾಗಿದ್ದರೂ, ಅವರ ಮನಸ್ಸಿಗೆ ಜ್ಞಾನವನ್ನು ಸುಲಭವಾಗಿ ಗ್ರಹಿಸುವ ಶಕ್ತಿ ಇದೆ. ಅವರ ಏಕಾಗ್ರತೆಯನ್ನು ಸುಧಾರಿಸಲು, ಸದಾ ಚಟುವಟಿಕೆಯಿಂದ ಇರುವಂಥ ಆಟ ಆಡಲು ಪ್ರೇರಣೆ ನೀಡಿ, ಗಮನ ಮತ್ತು ಏಕಾಗ್ರತೆಯ ಅಗತ್ಯವಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಚಿಂತನೆಯ ಆಟಗಳು, ಒಗಟುಗಳು, ಕ್ರಾಸ್‌ವರ್ಡ್, ಚಿತ್ರ ಒಗಟುಗಳು ಅವುಗಳ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೆ, ಚೆಸ್, ಲುಡೋ ಮತ್ತು ನಾಲಿಗೆ ಟ್ವಿಸ್ಟರ್‌ಗಳನ್ನು ಅವರಿಗೆ ಪರಿಚಯಿಸಿ.

ವಿಶ್ರಾಂತಿಗೂ ಸಮಯ ನೀಡಿ

ವಿಶ್ರಾಂತಿಗೂ ಸಮಯ ನೀಡಿ

ಅಧ್ಯಯನ ಅಥವಾ ಚಟುವಟಿಕೆಗಳ ನಡುವೆ, ನಿಮ್ಮ ಮಗುವಿಗೆ ಆಗಾಗ್ಗೆ ವಿರಾಮ ನೀಡಬೇಕು. ವಿಶ್ರಾಂತಿಯಿಲ್ಲದೆ, ನಿಮ್ಮ ಮಗು ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಅವರ ಏಕಾಗ್ರತೆಯ ಶಕ್ತಿಯನ್ನು ಕಳೆದುಕೊಳ್ಳಬಹುದು. ಅಂತೆಯೇ, ಅವರು ರಾತ್ರಿಯಲ್ಲಿ ಸಾಕಷ್ಟು ನಿದ್ದೆ ಮಾಡುವಂತೆ ನೋಡಿಕೊಳ್ಳಿ. ಮಕ್ಕಳಲ್ಲಿ ಮಾತ್ರವಲ್ಲ ವಯಸ್ಕರೂ ಸಹ ಸಕ್ರಿಯ ಮನಸ್ಸನ್ನು ಹೊಂದಲು ಸಾಕಷ್ಟು ನಿದ್ರೆ ಪ್ರಮುಖವಾಗಿದೆ. ರಾತ್ರಿಯ ಹೊತ್ತಿನಲ್ಲಿ ಉತ್ತಮ ವಿಶ್ರಾಂತಿಯು ಮಕ್ಕಳನ್ನು ಹೆಚ್ಚಿನ ಹುರುಪು, ಉತ್ಸಾಹ ಮತ್ತು ಹೆಚ್ಚಿನ ಗಮನದಿಂದ ಆಕರ್ಷಿಸುತ್ತದೆ.

ಮಕ್ಕಳಿಗೆ ಉಡುಗೊರೆ ನೀಡಿ ಪ್ರೋತ್ಸಾಹಿಸಿ

ಮಕ್ಕಳಿಗೆ ಉಡುಗೊರೆ ನೀಡಿ ಪ್ರೋತ್ಸಾಹಿಸಿ

ಕೆಲವರು ಇದನ್ನು ಲಂಚವೆಂದು ಸಹ ಪರಿಗಣಿಸಬಹುದು, ಆದರೆ ಇದು ಮಕ್ಕಳಲ್ಲಿ ಸಕಾರಾತ್ಮಕವಾಗಿ ಪ್ರೇರಣೆ ನೀಡುತ್ತದೆ. ಮಕ್ಕಳಿಗೆ ಬಹುಮಾನಗಳು ಕೇವಲ ಹಣವಾಗಿರಬೇಕಾಗಿಲ್ಲ, ನೆನಪಿನ ಶಕ್ತಿ ವೃದ್ಧಿಸುವಂಥ ಆಟಿಕೆಗಳು, ಮಕ್ಕಳಿಗೆ ಇಷ್ಟವಾಗುವಂಥ ಹೊಗಳಿಕೆಯ ಮಾತುಗಳು ಒಟ್ಟಾರೆ ಮಕ್ಕಳಿಗೆ ಇಷ್ಟವಾಗುವ ವಸ್ತುಗಳನ್ನು ನೀಡುವುದು. ಇದು ಮುಂದಿನ ಬಾರಿ ಅವರಿಗೆ ಇನ್ನಷ್ಟು ಆಧ್ಯಯನದತ್ತ ಗಮನಹರಿಸಲು ಪ್ರೇರಣೆ ನೀಡುತ್ತದೆ. ತಮ್ಮ ಕೆಲಸವನ್ನು ಹೆಚ್ಚು ಏಕಾಗ್ರತೆಯಿಂದ, ಹೆಚ್ಚು ಶ್ರದ್ಧೆಯಿಂದ ಮುಗಿಸಲು ಗಮನಹರಿಸುತ್ತಾರೆ.

English summary

How to help your child build concentration in Kannada

Here we are discussing about How to help your child build concentration in Kannada. Read more.
Story first published: Saturday, September 25, 2021, 15:28 [IST]
X
Desktop Bottom Promotion