For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಆಟಿಸಂ: ಲಕ್ಷಣಗಳು, ಕಾರಣ, ಚಿಕಿತ್ಸೆ ಏನು?

|

ಪ್ರತೀವರ್ಷ ಏಪ್ರಿಲ್ 2ನ್ನು ವಿಶ್ವ ಆಟಿಸಂ ಡೇ ಎಂದು ಆಚರಿಸಲಾಗುವುದು. ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಹಾಗೂ ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗಿದೆ. ಸಾವಿರಲ್ಲಿ ಒಂದೋ, ಎರಡು ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಾಣುತ್ತದೆ. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

Autism: Symptoms, Causes, Risk Factors, Diagnosis And Treatment

ಮಕ್ಕಳಲ್ಲಿ ವಿಭಿನ್ನವಾಗಿರುವ ಇಂಥ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅವರಿಗೆ ಸಹಾಯ ಅವಶ್ಯಕ. ಇನ್ನುಅಂಥ ಮಕ್ಕಳ ಪೋಷಕರಿಗೆ ಆತ್ಮಸ್ಥೈರ್ಯ ನೀಡುವ ಅಗ್ಯತ ಕೂಡ ಇದೆ. ಈ ಕುರಿತು ಅರಿವು ಮೂಡಿಸುವ ಸಲುವಾಗಿ ಆಟಿಸಂ ಪ್ರೈಡ್ ಡೇ ಆಚರಿಸಲಾಗುವುದು.

ಆಟಿಸಂ ಇರುವ ಮಕ್ಕಳಲ್ಲಿ ಸಾಮಾಜಿಕ, ಭಾವನಾತ್ಮಕ ಕೌಶಲ್ಯಗಳ ಸಮಸ್ಯೆ ಎದುರಾಗುತ್ತದೆ. ಇಂಥ ಮಕ್ಕಳ ವರ್ತನೆ, ಗ್ರಹಿಕೆ ಸಾಮಾರ್ಥ್ಯ ಎಲ್ಲವೂ ಭಿನ್ನವಾಗಿರುತ್ತದೆ. ಇಲ್ಲಿ ನಾವು ಮಕ್ಕಳಲ್ಲಿ ಆಟಿಸಂ ಇದೆ ಎಂದು ಗುರುತಿಸುವುದು ಹೇಗೆ, ಆಟಿಸಂ ಸಮಸ್ಯೆಗೆ ಕಾರಣಗಳೇನು, ಇದಕ್ಕೆ ಚಿಕಿತ್ಸೆ ಏನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

1. ಮಕ್ಕಳಲ್ಲಿ ಸಂವಹನದ ಹಾಗೂ ಭಾಷೆಯ ಕೊರತೆ

1. ಮಕ್ಕಳಲ್ಲಿ ಸಂವಹನದ ಹಾಗೂ ಭಾಷೆಯ ಕೊರತೆ

  • ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ
  • ಬೇರೆಯವರ ಭಾವನೆಗಳನ್ನು ಈ ಮಕ್ಕಳು ಅರ್ಥ ಮಾಡಿಕೊಳ್ಳುವುದಿಲ್ಲ
  • ಕಣ್ಣಿಗೆ ಕಣ್ಣಿಟ್ಟು ನೋಡಲು ಹಿಂಜರಿಯುತ್ತಾರೆ
  • ಮಾತನಾಡಲು ತೊಂದರೆ
  • ಶಬ್ದಗಳನ್ನು ಮತ್ತೆ ಹೇಳಲು, ಯಾವುದಾದರೂ ಸಾಲುಗಳನ್ನು ನೆನಪಿಟ್ಟು ಹೇಳಲು ತೊಂದರೆ ಪಡುತ್ತಾರೆ.
  • ಧ್ವನಿಯಲ್ಲಿ ವ್ಯತ್ಯಾಸ
  • ಅವರ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ
  • ಬೇರೆ ಮುಖದ ಭಾವನೆಗಳನ್ನಾಗಲಿ, ಧ್ವನಿಯಲ್ಲಿ ಆಗುವ ವ್ಯತ್ಯಾಸವನ್ನಾಗಲಿ ಗುರುತಿಸಲು ಸಾಧ್ಯವಾಗುವುದಿಲ್ಲ(ಗದರುವುದು, ಖುಷಿ ವ್ಯಕ್ತ ಪಡಿಸುವುದು...)
  • 2.ವರ್ತನೆ ಹಾಗೂ ಭಾವನೆಗಳಲ್ಲಿ ವ್ಯತ್ಯಾಸ

    2.ವರ್ತನೆ ಹಾಗೂ ಭಾವನೆಗಳಲ್ಲಿ ವ್ಯತ್ಯಾಸ

    • ಮಾತನಾಡಲು ತೊಂದರೆ
    • ಕೆಲವೊಂದು ವಸ್ತುಗಳ ಕಡೆ ತುಂಬಾ ಅಟ್ಯಾಚ್‌ಮೆಂಟ್
    • ಸುಮ್ಮನೆ ಅಳುವುದು, ನಗುವುದು
    • ಸಾಮಾಜಿಕವಾಗಿ ಬೆರೆಯುವುದಿಲ್ಲ
    • ಎಲ್ಲಾ ರುಚಿ ಇಷ್ಟಪಡಲ್ಲ
    • ಕೋಪ, ಹಠ, ವಿನಾಕಾರಣ ಕಿರುಚುವುದು
    • ತಮ್ಮ ಕಾರ್ಯಗಳನ್ನು ತಾವೇ ನಿಭಾಯಿಸಲು ಅಸಮರ್ಥರಾಗಿರುವುದು
    • ಆಟಿಸಂ ಸಮಸ್ಯೆಗೆ ಕಾರಣಗಳು

      ಆಟಿಸಂ ಸಮಸ್ಯೆಗೆ ಕಾರಣಗಳು

      ಆಟಿಸಂ ಸಮಸ್ಯೆಗೆ ಇಂಥದ್ದೇ ನಿಖರ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಮೆದುಳಿನ ಬೆಳವಣಿಗೆ ಸರಿಯಾದ ರೀತಿಯಲ್ಲಿ ಬೆಳೆಯದೇ ಇರುವುದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾರೆ. ಅವುಗಳೆಂದರೆ

      1. ವಂಶವಾಹಿ ತೊಂದರೆ: ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಈ ಸಮಸ್ಯೆಯಿದ್ದರೆ ವಂಶವಾಹಿಯಾಗಿ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆ ಇದೆ.

      2. ಪರಿಸರ: ಅನಾರೋಗ್ಯಕರ ಆಹಾರ ಶೈಲಿ, ಜೀವನಶೈಲಿ, ಕಲುಷಿತ ವಾತಾವರಣ ಇವೆಲ್ಲಾ ಕೂಡ ಆಟಿಸಂ ಸಮಸ್ಯೆಗೆ ಒಂದು ಕಾರಣವಾಗಿದೆ.

      3. ವಯಸ್ಸಾದ ಬಳಿಕ ಮಕ್ಕಳಾಗುವುದು: ವಯಸ್ಸು 40 ವರ್ಷ ದಾಟಿದ ಮೇಲೆ ಗರ್ಭಧಾರಣೆಯಾಗುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು.

      4. ಅವಧಿ ಪೂರ್ವ ಹೆರಿಗೆ: ಅವಧಿಗೆ ಮೊದಲೇ ಹರಿಗೆಯಾದರೆ ಕೆಲ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಮಡು ಬರುವುದು.

      5. ಔಷಧಗಳು: ಗರ್ಭಾವಸ್ಥೆಯಲ್ಲಿ valproic acid ಮತ್ತು thalidomide ಔಷಧ ತೆಗೆದುಕೊಳ್ಳುತ್ತಿದ್ದರೆ ಮಕ್ಕಳಲ್ಲಿ ಆಟಿಸಂ ಕಾಣಿಸುವ ಸಾಧ್ಯತೆ ಹೆಚ್ಚು.

      ಆಟಿಸಂ ತೊಂದರೆಗಳು

      ಆಟಿಸಂ ತೊಂದರೆಗಳು

      • ಮಕ್ಕಳು ಸಾಮಾಜಿಕವಾಗಿ ಬೆರೆಯುವುದಿಲ್ಲ
      • ಕಲಿಕೆಯಲ್ಲಿ ಇತರ ಮಕ್ಕಳಂತೆ ಇರುವುದಿಲ್ಲ
      • ಸ್ವತಂತ್ರವಾಗಿ ಬೆಳೆಯಲು ಸಾಧ್ಯವಿಲ್ಲ
      • ಅಂಥ ಮಕ್ಕಳು ಮಾತ್ರವಲ್ಲ, ಆ ಕುಟುಂಬದವರು ಕೂಡ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ
      • ಮಕ್ಕಳು ಬೆಳವಣಿಗೆಯಾದರೂ ಸಾಮಾಜಿಕವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ.
      • ಮಕ್ಕಳಲ್ಲಿ ಪತ್ತೆ ಹೇಗೆ?

        ಮಕ್ಕಳಲ್ಲಿ ಪತ್ತೆ ಹೇಗೆ?

        ಆಟಿಸಂ ಇರುವ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಾಣಬಹುದು:

        • ಮಕ್ಕಳು ಒಂದು ವಯಸ್ಸು ತುಂಬಿದರೂ ಅವರ ಹೆಸರು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ
        • 14 ತಿಂಗಳು ಇರುವಾಗ ಯಾವುದೇ ವಸ್ತುಗಳನ್ನು ನೋಡಿದರೂ ಕುತೂಹಲ ತೋರುವುದಿಲ್ಲ
        • 18 ತಿಂಗಳು ಆದರೂ ಆಟ ಆಡಲು ಯಾವುದೇ ಆಸಕ್ತಿ ತೋರುವುದಿಲ್ಲ
        • ಮಗುವಿನ ಕಣ್ಣಿಗೆ ಕಣ್ಣಿಟ್ಟು ನೋಡಿದಾಗ ಅದು ನಿಮ್ಮನ್ನು ನೋಡುವುದಿಲ್ಲ
        • ಇದ್ದಕ್ಕಿದ್ದಂತೆ ಮಗು ಹಠ ಮಾಡುತ್ತದೆ
        • ಒಂಟಿಯಾಗಿರಲು ಇಷ್ಟಪಡುತ್ತದೆ
        • ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಿ, ಸಣ್ಣ-ಪುಟ್ಟ ಸಮಸ್ಯೆಯಿದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡುವುದು ಸುಲಭ.

           ಚಿಕಿತ್ಸೆ:

          ಚಿಕಿತ್ಸೆ:

          ಆಟಿಸಂ ಮಕ್ಕಳ ತಂದೆ ತಾಯಿ ತುಂಬಾ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಬೇಕು.

          • ಮಗು ಮಾತನಾಡಲು ಹಾಗೂ ಸಾಮಾಜಿಕವಾಗಿ ಬೆರೆಯಲು ನೀವು ಪ್ರೋತ್ಸಾಹಿಸಬೇಕು.
          • ಮಕ್ಕಳಲ್ಲಿ ಸಂವಹನ ಕೌಶಲ್ಯ ಹೆಚ್ಚಲು ಚಿತ್ರ ತೋರಿಸುವುದು, ಆಂಗಿಕ ಭಾಷೆಯ ಮೂಲಕ ಹೇಳುವುದು ಮಾಡಿದರೆ ಅವರಲ್ಲಿ ಸಂವಹನ ಕಲೆ ವೃದ್ಧಿಯಾಗುತ್ತದೆ.
          • ದೃಶ್ಯಗಳನ್ನು ತೋರಿಸಿ, ವೀಡಿಯೋಗಳನ್ನು ತೋರಿಸಿ ಅವರಿಗೆ ಕಲಿಸಲು ಪ್ರಯತ್ನಿಸಬೇಕು
          • ಕಾಗ್ನಿಟಿವ್ ಬಿಹೇವರ್ ಥೆರಪಿ ಕೊಡಿಸಿ
          • ಅವರದ್ದೇ ವಯಸ್ಸಿನವರ ಜೊತೆ ಬೆರೆಯಲು ಕಲಿಸಿ
          • ಹೀಗೆಲ್ಲಾ ಮಾಡುವ ಮೂಲಕ ಆಟಿಸಂ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ.

English summary

Autism in Children: Symptoms, Causes, Risk Factors, Diagnosis And Treatment

Autism or Autism Spectrum Disorder (ASD) is an umbrella term for 4 different types of developmental disorders - autism, childhood disintegrative disorder, Asperger's syndrome, and pervasive development disorder-not otherwise specified (PDD-NOS).
X
Desktop Bottom Promotion