Latest Updates
-
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ -
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ!
ಮಕ್ಕಳು ಎತ್ತರವಾಗಿ ಬೆಳೆಯಬೇಕೆ? ಇಲ್ಲಿವೆ ಕೆಲವು ಸರಳ ವಿಧಾನಗಳು
ಒಬ್ಬ ಮನುಷ್ಯನ ದೇಹದ ಕಡೆ ಆಯಸ್ಸಿರುವವರೆಗೂ ಅವನ ಸಂಪೂರ್ಣ ಆರೋಗ್ಯದ ಗುಣಮಟ್ಟ ಆತ ತನ್ನ ತಾಯಿಯ ಗರ್ಭದಲ್ಲಿದಾಗ ಸೇವಿಸಿದ ಆಹಾರದ ಗುಣಮಟ್ಟದ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ . ಯಾವುದೇ ತಾಯಿಯು ತಾನು ಗರ್ಭಾವಸ್ಥೆಯಲ್ಲಿದ್ದಾಗ ಒಳ್ಳೆಯ ಪೌಷ್ಟಿಕಾಂಶದ ಆಹಾರ ಸೇವಿಸಿದ್ದರೆ ಹುಟ್ಟುವ ಮಗು ಆರೋಗ್ಯವಾಗಿಯೂ , ದಷ್ಟ ಪುಷ್ಟವಾಗಿಯೂ ಮತ್ತು ಬುದ್ಧಿವಂತ ಮಗುವಾಗಿಯೂ ಜನನವಾಗುತ್ತದೆ ಮತ್ತು ಜೀವನ ಪೂರ್ತಿ ಹಾಗೆಯೇ ಇರುತ್ತದೆ ಕೂಡ. ಅದರಿಂದಲೇ ಪ್ರತಿಯೊಬ್ಬರೂ ಗರ್ಭಿಣಿಯ ಆಹಾರದ ಮೇಲೆ ಬಹಳ ಜಾಗರೂಕರಾಗಿ ನಿಗಾ ವಹಿಸುತ್ತಾರೆ. ಇದು ಸರ್ಕಾರದ ಸೂಚನೆಯೂ ಕೂಡ . ಪೋಷಕರೂ ಕೂಡ ತಮ್ಮ ಮಗುವಿನ ಅದರಲ್ಲೂ ಬಾಲ್ಯದ ಆರೋಗ್ಯದ ಮೇಲೆ ತುಂಬಾ ಭಯ ಪಡುತ್ತಿರುತ್ತಾರೆ . ಏಕೆಂದರೆ ಈಗಿನ ಕಾಲದ ಮಕ್ಕಳು ಮನೆ ಅಡುಗೆಗಿಂತ ಹೊರಗಿನ ಜಂಕ್ ಫುಡ್ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ . ಆದರೆ ಮನೆಯ ಅಡುಗೆಯಲ್ಲಿ ಸಿಗುವ ಪೋಷಕಾಂಶ ಹೊರಗಿನ ಆ ಜಂಕ್ ಫುಡ್ ನಲ್ಲಿ ಸಿಗುವುದಿಲ್ಲ ಎಂದು ಅವರುಗಳಿಗೆ ಗೊತ್ತಿರುವುದಿಲ್ಲ ಪಾಪ !!!
ಸಾಮಾನ್ಯವಾಗಿ ತಾಯಂದಿರು ತಮ್ಮ ಮಕ್ಕಳ ತಿಂಡಿ ತಿನಿಸುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೆ . ತಮ್ಮ ಮಗುವಿನ ಮುಂದಿನ ಆರೋಗ್ಯ ಚೆನ್ನಾಗಿ ಕಾಪಾಡಲೆಂದು ಆದಷ್ಟು ತರಕಾರಿಗಳ ಸೇವನೆಗೆ ಬಹಳ ಒತ್ತು ಕೊಡುತ್ತಾರೆ . ಇದರಿಂದ ತಮ್ಮ ಮಗು ಬೆಳೆಯುತ್ತಾ ಹೋದಂತೆ ದಪ್ಪವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಅವರಿಗೆ .ಅವರ ನಂಬಿಕೆಯಲ್ಲೂ ಒಳ್ಳೆಯ ಅರ್ಥವಿದೆ . ಏಕೆಂದರೆ ಈಗಿನ ಕಾಲದಲ್ಲಿ ಒಬ್ಬ ಮನುಷ್ಯ ನೋಡಲು ಚೆನ್ನಾಗಿ ದುಂಡು ದುಂಡಾಗಿ ಮತ್ತು ಉದ್ದವಾಗಿದ್ದರೆ ಆತನಿಗೆ ಒಳ್ಳೆಯ ಪರ್ಸನಾಲಿಟಿ ಇದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ . ಸಮಾಜದಲ್ಲಿ ಒಳ್ಳೆಯ ಗೌರವ ಸ್ಥಾನ ಮಾನಗಳೂ ಲಭ್ಯವಾಗುತ್ತವೆ . ಇದರಿಂದಲೇ ಅರ್ಥವಾಗುತ್ತದೆ ಅವನು ತಿನ್ನುವ ಆಹಾರ ಅವನ " ಬಾಡಿ ಮಾಸ್ ಇಂಡೆಕ್ಸ್ " ಗೆ ತನ್ನದೇ ಆದ ಕೊಡುಗೆ ಕೊಟ್ಟಿರುತ್ತದೆ ಎಂದು.

ಮಕ್ಕಳಲ್ಲಿ ಸಾಮಾನ್ಯವಾಗಿ ಅವರ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿ ಅವರ ದೇಹದಲ್ಲಿ ( ಹ್ಯೂಮನ್ ಗ್ರೋಥ್ ಹಾರ್ಮೋನ್ ) ಬಿಡುಗಡೆ ಗೊಳ್ಳುತ್ತಿರುತ್ತದೆ . ಈ ಪ್ರಕ್ರಿಯೆ 3 ರಿಂದ 11 ನೇ ವಯಸ್ಸಿನ ಮಕ್ಕಳಲ್ಲಿ ಸಾಧಾರಣವಾಗಿದ್ದು , ಆ ಸಮಯದಲ್ಲಿ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುವಂತಹ ಆಹಾರಗಳನ್ನು ಮತ್ತು ವ್ಯಾಯಾಮಗಳನ್ನು ಮಾಡಿದ್ದೇ ಆದರೆ ಅವರಲ್ಲಿ ಒಳ್ಳೆಯ ಫಲಿತಾಂಶ ನಿರೀಕ್ಷೆ ಮಾಡಬಹುದು . ಹಾಗಾದರೆ ಮಕ್ಕಳಿಗೆ ಬೆಳವಣಿಗೆಗೆ ಸಹಾಯವಾಗುವಂತಹ ಆಹಾರಗಳಾದರೂ ಯಾವುವು ? ವ್ಯಾಯಾಮಗಳಾದರೂ ಯಾವುವು ?
ಆಹಾರದಲ್ಲಿ ಪೌಷ್ಟಿಕತೆಯನ್ನು ಕಾಪಾಡಿಕೊಳ್ಳುವುದು
ಒಂದು ಮಗುವು ಆರೋಗ್ಯವಾಗಿ ಮತ್ತು ಚೆನ್ನಾಗಿ ಬೆಳೆಯಬೇಕಾದರೆ ಮೇಲೆ ಹೇಳಿದಂತೆ ಅದರ ಆಹಾರ ಪೌಷ್ಟಿಕ ಸತ್ವಗಳಿಂದ ಕೂಡಿರಬೇಕು . ಬ್ಯಾಲೆನ್ಸ್ಡ್ ಡಯಟ್ ಅಥವಾ ಸಮತೋಲಿತ ಆಹಾರ ಎಂದು ನಾವೇನು ಕರೆಯುತ್ತೇವೆ ಅದರಲ್ಲಿ ಹಾಲು , ಮೊಟ್ಟೆ , ಹಸಿರು ಎಲೆ ತರಕಾರಿಗಳು , ಒಟ್ ಮೀಲ್ ಹೀಗೆ ಇನ್ನೂ ಹಲವಾರು ಆಹಾರಗಳು ಸೇರಿವೆ . ಇಂತಹ ಆಹಾರದಲ್ಲಿ ವಿಟಮಿನ್ , ಪ್ರೋಟೀನ್ , ಕಾರ್ಬೋ ಹೈಡ್ರೇಟು ಮಕ್ಕಳು ಜಂಕ್ ಫುಡ್ ಅನ್ನು ತಿನ್ನುವುದನ್ನು ತಡೆಯುವುದು ತಾಯಿಯ ಆದ್ಯ ಕರ್ತವ್ಯ.
ಏಕೆಂದರೆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಪಿಜ್ಜಾ , ಬರ್ಗರ್ , ಚಾಕಲೇಟ್ , ಕೂಲ್ ಡ್ರಿಂಕ್ಸ್ ಗಳ ಮೊರೆ ಹೋದರೆ ಅವರುಗಳಿಗೆ ಹೊರಗಿನಿಂದ ಸಿಗುವ ಪೋಷಕಾಂಶ ಗಳಿಗಿಂತ ದೇಹದಲ್ಲಿ ಮೊದಲೇ ಇರುವ ಪೋಷಕಾಂಶಗಳೇ ಮಾಯವಾಗುವ ಸಂಭವವೇ ಹೆಚ್ಚು . ಆದ್ದರಿಂದ ತಾಯಿಯಾದವಳು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಇಂತಹ ಹೊರಗಿನ ತಿಂಡಿಗಳನ್ನು ರೂಡಿ ಮಾಡುವುದನ್ನು ಬಿಟ್ಟು ಮನೆಯಲ್ಲೇ ಮಾಡುವ ತರಕಾರಿಗಳ ಖಾದ್ಯಗಳ ಕಡೆಗೆ ಒಲವು ತೋರುವುದನ್ನು ಮಕ್ಕಳಲ್ಲಿ ಬೆಳೆಸಬೇಕು . ಮಕ್ಕಳಿಗೆ ಬೆಳವಣಿಗೆಗೆ ಸಹಾಯಕವಾಗಿರುವ ಪ್ರೋಟೀನ್ ಕಾರ್ಬೋಹೈಡ್ರೇಟ್ ವಿಟಮಿನ್ ಗಳ ಅವಶ್ಯಕತೆಗೆ ಪೂರಕವಾಗುವಂತೆ ಮಕ್ಕಳ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ . ಹೆಚ್ಚು ಆಂಟಿ ಒಕ್ಸಿಡಂಟ್ ಗಳನ್ನು ಹೊಂದಿರುವ ಆಹಾರಗಳನ್ನು ಕೊಡುವುದರಿಂದ ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾಗಿರುವ " ಹ್ಯೂಮನ್ ಗ್ರೋಥ್ ಹಾರ್ಮೋನ್ " ಕೂಡ ಹೆಚ್ಚು ಉತ್ಪತ್ತಿಯಾಗಿ ಸರಿಯಾದ ವಯಸ್ಸಿನಲ್ಲಿ ಸರಿಯಾದ ಬೆಳವಣಿಗೆ ಕಂಡು ಬರುತ್ತದೆ .
ಪ್ರೋಟೀನ್ ಅಂಶದ ಸರಿಯಾದ ಪ್ರಮಾಣದ ಸೇವನೆ
ಒಂದು ಮನೆ ಕಟ್ಟಲು ಹೇಗೆ ಒಂದೊಂದು ಇಟ್ಟಿಗೆಯೂ ಸಹಾಯ ಮಾಡುತ್ತದೋ ಹಾಗೆ ಮನುಷ್ಯನ ದೇಹ ಬೆಳೆವಣಿಗೆ ಆಗಲು ಒಂದೊಂದು ಪ್ರೋಟೀನ್ ಅಂಶ ಪರಿಗಣಿಸಲ್ಪಡುತ್ತದೆ . ಉದಾಹರಣೆಗೆ ಮನುಷ್ಯ ಬಿದ್ದು ಗಾಯ ಮಾಡಿಕೊಂಡರೆ ಮತ್ತೆ ಚರ್ಮ ಕೂಡಿಕೊಳ್ಳುವುದಕ್ಕೆ ಸಹಾಯ ಮಾಡುವುದು ದೇಹದೊಳಗೆ ಅಡಗಿರುವ ಈ ಪ್ರೋಟೀನ್ ಅಂಶವೇ . ಇದರ ಜೊತೆ ವಿಟಮಿನ್ ' ಬಿ3 ' ಕೂಡ ಸೇರಿದೆ ಎಂದರೆ ನೀವು ನಂಬಲೇಬೇಕು . ಪ್ರೋಟೀನ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳೆಂದರೆ ಚಿಕನ್ , ಎಗ್ , ಸೋಯಾ ಬೀನ್ , ಲೆಂಟಿಲ್ , ಅಲಸಂದೆ ಕಾಳು ಇನ್ನೂ ಇತ್ಯಾದಿ . ವಿಟಮಿನ್ ' ಬಿ3 ' ಹೆಚ್ಚಿಗೆ ಇರುವ ಆಹಾರ ಪದಾರ್ಥಗಳೆಂದರೆ , ಹಣಬೆ , ಹಸಿರು ಬಟಾಣಿ , ಟುನ ಮೀನು , ಅವಕ್ಯಾಡೊ ಮತ್ತು ಕಡಲೆ ಬೀಜ.
ದೇಹದ ಒಂದೊಂದು ಅಂಗಗಳನ್ನೂ ಸಾಧ್ಯವಾದಷ್ಟೂ ಸ್ಟ್ರೆಟ್ಚ್ ಮಾಡುವುದು
ಈ ರೀತಿಯ ವ್ಯಾಯಾಮಗಳಿಗೆ ಯಾವುದೇ ಹಣ ವ್ಯಯಿಸಬೇಕಾಗಿಲ್ಲ .ಆದರೆ ಫಲಿತಾಂಶ ಮತ್ತು ಪ್ರಯೋಜನ ಎರಡೂ ಜಾಸ್ತಿ . ಮಕ್ಕಳಲ್ಲಿ ಸಣ್ಣವರಿರುವಾಗಿನಿಂದಲೇ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಉತ್ತೇಜಿಸಿದರೆ ಅವರ ದೇಹ ಚೆನ್ನಾಗಿ ಬೆಳವಣಿಗೆ ಹೊಂದಿ ಸದೃಢವಾಗುತ್ತದೆ . ಸ್ಟ್ರೆಟ್ಚಿಂಗ್ ನಿಂದ ದೇಹದ ಬೆನ್ನುರಿ ಉದ್ದವಾಗುತ್ತದೆ . ಮಗು ನಿಂತುಕೊಳ್ಳುವ ಮತ್ತು ಕುಳಿತುಕೊಳ್ಳುವ ರೀತಿ ಸುಧಾರಣೆ ಕಾಣುತ್ತದೆ . ಸ್ಟ್ರೆಟ್ಚಿಂಗ್ ಎಕ್ಸರ್ಸೈಜ್ ಗಳಲ್ಲಿ ಹಲವಾರು ರೀತಿಯ ವ್ಯಾಯಾಮಗಳಿವೆ . ಗೋಡೆಗೆ ವಿರುದ್ಧವಾಗಿ ನಿಂತು ಕೇವಲ ಕಾಲಿನ ಬೆರೆಳುಗಳ ಮೇಲೆ ಬ್ಯಾಲೆನ್ಸ್ ಮಾಡುವುದು , ನೇರವಾಗಿ ನಿಂತುಕೊಂಡು ಬಗ್ಗಿ ಮಂಡಿ ಮಡಚದೇ ಹಾಗೆಯೇ ಕಾಲಿನ ಬೆರಳುಗಳನ್ನು ಕೈ ಬೆರಳುಗಳಿಂದ ಮುಟ್ಟಲು ಪ್ರಯತ್ನ ಮಾಡುವುದು , ಭೂಮಿ ಮೇಲೆ ನಿಂತು ತಲೆಯ ಮೇಲೆ ಸ್ವಲ್ಪ ದೂರದಲ್ಲಿ ಇರುವ ಯಾವುದಾದರೂ ವಸ್ತುವನ್ನು ಮುಟ್ಟಲು ಪ್ರಯತ್ನ ಮಾಡುವುದು ಹೀಗೆ ಹತ್ತು ಹಲವಾರು ರೀತಿಯ ಚಟುವಟಿಕೆಗಳನ್ನು ನಾವು ಇಲ್ಲಿ ಕಾಣಬಹುದು . 11 ವಯಸ್ಸಿನ ಮಕ್ಕಳಿಗೆ ಈ ಎಲ್ಲಾ ರೀತಿಯ ವ್ಯಾಯಾಮಗಳನ್ನು ಮಾಡಿದ್ದೆ ಆದರೆ ಅವರ ಎಳೆಯ ಮೂಳೆಗಳು ಬೆಳೆಯುತ್ತಾ ಚೆನ್ನಾಗಿ ಸದೃಢಗೊಳ್ಳುತ್ತವೆ .
ಮಕ್ಕಳಲ್ಲಿ ಹ್ಯಾಂಗಿಂಗ್ ಎಕ್ಸರ್ಸೈಜ್ ಅನ್ನು ರೂಡಿ ಮಾಡುವುದು
ಇದು ಮಕ್ಕಳ ಸಂಪೂರ್ಣ ದೇಹದ ಬಲಿಯುವಿಕೆಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ . ಹ್ಯಾಂಗಿಂಗ್ ಎಕ್ಸರ್ಸೈಜ್ ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಉಪಕಾರಿಯಾಗುತ್ತದೆ . ಇದರಿಂದಲೂ ಸಹ ಸ್ಪೈನಲ್ ಕಾರ್ಡ್ ಉದ್ದವಾಗುತ್ತದೆ . ಇದರಿಂದ ಮನುಷ್ಯನ ದೇಹ ಉದ್ದವಾಗುತ್ತದೆ . ಮಕ್ಕಳಿಗೆ ಪುಲ್ ಅಪ್ , ಪುಶ್ ಅಪ್ ಮತ್ತು ಚಿನ್ ಅಪ್ ಎಕ್ಸರ್ಸೈಜ್ ಗಳು ಅವರ ಬೆನ್ನು ಮತ್ತು ಭುಜದ ಮೂಳೆಗಳನ್ನು ಬಲಗೊಳಿಸುತ್ತವೆ . ಇದರಿಂದ ಅವರ ಇಡೀ ದೇಹ ಬಲಗೊಂಡು ಧೀರ್ಘ ಆಯುಷಿಗಳಾಗಿ ಜೀವನದಲ್ಲಿ ಆರೋಗ್ಯವಾಗಿ ಬದುಕುತ್ತಾರೆ .
ಮಕ್ಕಳ ಜೀವನದಲ್ಲಿ ಯೋಗಕ್ಕಿದೆ ಮಹತ್ವ ಸ್ಥಾನ
ಯೋಗ ಎಂಬುದು ಇಂದು ನೆನ್ನೆಯದಲ್ಲ . ಇದು ಬಹಳ ಪುರಾತನ ಪದ್ಧತಿ . ಈಗಲೂ ಚಾಲ್ತಿಯಲ್ಲಿರುವ ಮತ್ತು ದೇಹದ ಬಗ್ಗೆ ಯಾರಿಗೆ ಒಲವಿದ್ದು ಆರೋಗ್ಯವಂತರಾಗಿ ಬದುಕಬೇಕು ಎಂದು ಅಂದುಕೊಳ್ಳುವವರೆಲ್ಲ ಅನುಸರಿಸುವ ಒಂದು ಪ್ರಕ್ರಿಯೆ . ಯೋಗಕ್ಕೆ ತನ್ನದೇ ಆದ ಹಲವಾರು ಮಜಲುಗಳಿದ್ದು , ಕೇವಲ ದೈಹಿಕ ಸದೃಡತೆಯಲ್ಲಿ ಮಾತ್ರವಲ್ಲದೆ ಮನಸ್ಸಿನ ತಳಮಳವನ್ನು ಸಹ ದೂರ ಮಾಡಿ ಶಾಂತಗೊಳಿಸುತ್ತದೆ . ಇದೊಂದು ಮಕ್ಕಳಲ್ಲಿ ಬೆಳೆಸಬೇಕಾದ ಒಳ್ಳೆಯ ಅಭ್ಯಾಸವಾಗಿದ್ದು , ಮಕ್ಕಳನ್ನು ಎಲ್ಲಾ ವಿಧದಲ್ಲೂ ಅತಿ ಎತ್ತರಕ್ಕೆ ಕೊಂಡೊಯ್ಯುತ್ತದೆ . ಸೂರ್ಯ ನಮಸ್ಕಾರದ ಬಗ್ಗೆ ಎಲ್ಲರೂ ಕೇಳಿರುತ್ತೇವೆ . ಇದೊಂದು ನಮ್ಮ ಇಡೀ ದೇಹವನ್ನು ಕಾರ್ಯಗತಗೊಳಿಸುವ ವ್ಯಾಯಾಮ . ಧೀರ್ಘವಾಗಿ ಉಸಿರು ತೆಗೆದುಕೊಂಡು ನಮ್ಮ ಕೈಗಳು , ಕಾಲುಗಳು , ಬೆನ್ನು , ಭುಜ ಮತ್ತು ಇತರ ಮಾಂಸ ಖಂಡಗಳನ್ನು ವ್ಯಾಯಾಮದಲ್ಲಿ ತೊಡಗಿಸಿ ಚೆನ್ನಾಗಿ ರಕ್ತ ಸಂಚಾರ ಆಗುವಂತೆ ಮಾಡುವುದು ಈ ವ್ಯಾಯಾಮದ ಉದ್ದೇಶ . ಇನ್ನು ಚಕ್ರಾಸನಕ್ಕೆ ಬಂದರೆ ಮಕ್ಕಳು ನೆಲದ ಮೇಲೆ ಆಕಾಶ ನೋಡುತ್ತಾ ಮಲಗಿ ತಮ್ಮ ಬೆನ್ನು ಮತ್ತು ಸೊಂಟದ ಸಮೇತ ಮೇಲೆತ್ತಿ ' U ' ಆಕಾರದಲ್ಲಿ ಬರುವಂತೆ ತಮ್ಮ ಕಾಲುಗಳು ಮತ್ತು ತೋಳಿನ ಸಹಾಯದಿಂದ ಈ ವ್ಯಾಯಾಮ ಮಾಡುತ್ತಾರೆ . ಇದರಿಂದಲೂ ಸಹ ಮಕ್ಕಳ ಬೆನ್ನು ಹುರಿ ಬಲಗೊಂಡು , ಮಾಂಸ ಖಂಡಗಳು ಬಲಿತು ಮಕ್ಕಳು ಬಹು ಬೇಗನೆ ಬೆಳವಣಿಗೆ ಕಾಣುತ್ತಾರೆ .
ನಿಯಮಿತವಾದ ಸ್ಕಿಪ್ಪಿಂಗ್ ಮಾಡುವುದು
ಸ್ಕಿಪ್ಪಿಂಗ್ ಹೃದಯದ ಆರೋಗ್ಯಕ್ಕೆ ಸಂಬಂಧಪಟ್ಟ ಒಂದು ವ್ಯಾಯಾಮ ಆಗಿದೆ . ಇದೂ ಸಹ ಮಕ್ಕಳ ದೇಹ ಉದ್ದ ಬೆಳೆಯುವುದರಲ್ಲಿ ಚಮತ್ಕಾರಿ ಪರಿಣಾಮವನ್ನು ಬಹಳ ಬೇಗನೆ ಬೀರುತ್ತದೆ . ಕೈ ಕಾಲುಗಳನ್ನು ಉಪಯೋಗಿಸಿ ಒಂದು ರೋಪ್ ಮೇಲೆ ಜಂಪ್ ಮಾಡುವ ಈ ವ್ಯಾಯಾಮ ಮಗುವಿನ ಇಡೀ ದೇಹಕ್ಕೆ ಕೆಲಸ ಕೊಟ್ಟು ಅದರ ಆರೋಗ್ಯವನ್ನು ಕಾಪಾಡುತ್ತದೆ.
ಸ್ವಲ್ಪ ಜಾಗಿಂಗ್ ಮತ್ತು ರನ್ನಿಂಗ್
ಇದು ಬೆಳೆಯುವ ಮಕ್ಕಳಿಗೆ ಬಹಳ ಉಪಕಾರಿಯಾದ ಮತ್ತು ಎಲ್ಲಾ ಮಕ್ಕಳೂ ಬಹಳ ಇಷ್ಟ ಪಡುವ ಒಂದು ದೈಹಿಕ ಚಟುವಟಿಕೆ . ಪ್ರತಿ ದಿನ ಇದನ್ನು ಅಭ್ಯಾಸ ಮಾಡಿಕೊಂಡಿದ್ದೆ ಆದರೆ ಮಕ್ಕಳ ಮೂಳೆಗಳು ಬಲಿಯುತ್ತವೆ ಹಾಗು ಮಕ್ಕಳಲ್ಲಿ ಕಾನ್ಫಿಡೆನ್ಸ್ ಮನೆ ಮಾಡುತ್ತದೆ ಎಂದು ಹಲವಾರು ಮಂದಿ ಹೇಳುತ್ತಾರೆ . ಮಕ್ಕಳು ದಿನ ಓದುವ ಅಭ್ಯಾಸದ ಜೊತೆಗೆ ಓಡುವ ಮತ್ತು ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡರೆ ಮಕ್ಕಳಲ್ಲಿ ಹ್ಯೂಮನ್ ಗ್ರೋಥ್ ಹಾರ್ಮೋನ್ ಇನ್ನಷ್ಟು ಬಿಡುಗಡೆಗೊಂಡು ಮಕ್ಕಳನ್ನು ಬೆಳವಣಿಗೆಯಲ್ಲಿ ಸದೃಢರನ್ನಾಗಿ ಮಾಡುತ್ತದೆ . ವಾಕಿಂಗ್ ಮತ್ತು ಜಾಗಿಂಗ್ ನಲ್ಲಿ ತಂದೆ ತಾಯಂದಿರು ಮಕ್ಕಳ ಜೊತೆ ಸೇರಿಕೊಂಡರೆ ಅವರ ಖುಷಿ ಇನ್ನಷ್ಟು ಜಾಸ್ತಿ ಆಗುತ್ತದೆ .
ಒಳ್ಳೆಯ ನಿದ್ದೆ ಮಾಡುವುದು
ದುಡಿದು , ದಣಿದು ಆಯಾಸವಾಗಿರುವ ವ್ಯಕ್ತಿಗೆ ವೈದ್ಯರು ದಿನಕ್ಕೆ ಕನಿಷ್ಠ ಎಂಟು ಗಂಟೆಯಾದರೂ ಮಲಗಬೇಕು . ಆಗ ದೇಹದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸೂಚಿಸಿರುತ್ತಾರೆ . ಆದರೆ ಇದು ಕೇವಲ ದೊಡ್ಡವರಿಗೆ ಮಾತ್ರವಲ್ಲದೆ ಬೆಳೆಯುವ ಮಕ್ಕಳಿಗೂ ಅನ್ವಯಿಸುತ್ತದೆ . ಮಕ್ಕಳು ದಿನಕ್ಕೆ 8 ಗಂಟೆ ಗಳ ಕಾಲ ನಿದ್ದೆ ಮಾಡಿದರೆ ಸರಿಯಾದ ಬೆಳವಣಿಗೆ ಹೊಂದಿ ಆಯಾಸದಿಂದ ಮುಕ್ತಿ ಪಡೆಯುತ್ತದೆ . ಇಲ್ಲಿ ಮುಖ್ಯವಾದ ಒಂದು ಅಂಶವನ್ನು ಗಮನಿಸಬೇಕೆಂದರೆ , ನಾವು ಆಗಿನಿಂದ ಹ್ಯೂಮನ್ ಗ್ರೋಥ್ ಹಾರ್ಮೋನ್ ಬಗ್ಗೆ ಮಾತನಾಡುತ್ತಿದ್ದೇವೆ . ಈ ಗ್ರೋಥ್ ಹಾರ್ಮೋನ್ ಮಕ್ಕಳಲ್ಲಿ ಮಾತ್ರ ಉತ್ಪತ್ತಿ ಆಗುತ್ತದೆ ಎಂದು ನಮಗೆಲ್ಲಾ ಗೊತ್ತು ಆದರೆ ಯಾವ ಸಮಯದಲ್ಲಿ ಉತ್ಪತ್ತಿ ಆಗುತ್ತದೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ . ಅದು ಕೇವಲ ಮಕ್ಕಳು ಮಲಗಿ ನಿದ್ರಿಸುತ್ತಿದ್ದಾಗ ಎಂದರೆ ನಿಮಗೆ ಆಶ್ಚರ್ಯ ಆಗಿರಬೇಕು ಅಲ್ಲವೇ !!! ಖಂಡಿತ . ಆದ್ದರಿಂದ ಮಕ್ಕಳು ಮಾತ್ರ ಯಾವುದೇ ಕಾರಣಕ್ಕೂ ತಾವು ನಿದ್ದೆಯ ಸಮಯವನ್ನು ಹಾಳು ಮಾಡಿಕೊಳ್ಳದೆ ನಿದ್ದೆ ಮಾಡುವುದಕ್ಕೆ ಮಾತ್ರವೇ ಮೀಸಲಿಡಬೇಕು ಎಂಬುದು ಗಮನಾರ್ಹ ಸೂಚನೆ . ಮಕ್ಕಳ ಜೀವನ ಶೈಲಿ ಸಂಪೂರ್ಣವಾಗಿ ಪೋಷಕರ ಜೀವ ಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ . ಒಂದು ಮಗು ಒಂದು ರೀತಿಯಲ್ಲಿ ಹೇಳಬೇಕೆಂದರೆ ಭೂಮಿಗೆ ಬಂದ ಖಾಲಿ ಹಾಳೆ ಮಾತ್ರ . ಅದರ ಮೇಲೆ ನಾವು ಹೇಗೆ ಬರೆಯುತ್ತೇವೆಯೋ ಅದು ಹಾಗೆ ಬೆಳೆಯುತ್ತಾ ಹೋಗುತ್ತದೆ . ಪೋಷಕರು ಸ್ವಲ್ಪ ಈ ಜಡ ಜೀವನದಿಂದ ಹೊರ ಬಂದು ತಾವೂ ಆರೋಗ್ಯಕರ ಜೀವನಕ್ಕೆ ಯಾವ ಯಾವ ಅಭ್ಯಾಸ ಬೇಕೋ ಅವನ್ನು ರೂಡಿಸಿಕೊಂಡು ತಮ್ಮ ಮಕ್ಕಳಿಗೂ ಅದನ್ನೇ ಹೇಳಿಕೊಟ್ಟರೆ ಒಂದು ಸುಖ ಸಂಸಾರ ನಿಮ್ಮದಾಗುತ್ತದೆ .
ಈಗ ನಾವು ಯಾವ ರೀತಿ ಪೋಷಕಾಂಶವಿರುವ ಆಹಾರ ಮಗುವಿನ ಬೆಳವಣಿಗೆಯ ಸಫಲತೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ನೋಡೋಣ .
ಮಗುವಿನ ದೈಹಿಕ ಎತ್ತರದ ಬೆಳವಣಿಗೆ ಸಂಪೂರ್ಣವಾಗಿ ಆಯಾ ಪೋಷಕರ ಮತ್ತು ಕುಟುಂಬದ ಜೆನೆಟಿಕ್ಸ್ ನ ಆಧಾರದ ಮೇಲೆ ನಿಂತಿರುತ್ತದೆ . ನೀವು ಗಮನಿಸಿರಬಹುದು . ಅಪ್ಪ ಅಮ್ಮ ಉದ್ದವಾಗಿದ್ದರೆ , ಮಗುವು ತಾನೂ ಬೆಳೆದ ಮೇಲೆ ಧೀರ್ಘ ಕಾಯನಾಗಿರುತ್ತದೆ . ಇದು ಕೇವಲ ಉದಾಹರಣೆಯಾದರೂ ಸತ್ಯ . ಹಲವಾರು ತಂದೆ ತಾಯಂದಿರು ಇದರ ಬಗ್ಗೆ ಗಮನ ಹರಿಸುವುದಿಲ್ಲ . ಕೇವಲ ಒಳ್ಳೆಯ ಆರೋಗ್ಯಕರವಾದ ಮತ್ತು ಪೋಷಕಾಂಶ ತುಂಬಿರುವ ಆಹಾರ ತಮ್ಮ ಮಗುವಿನ ಸಂಪೂರ್ಣ ದೈಹಿಕ ಬೆಳವಣಿಗೆಗೆ ಸಹಕಾರಿ ಎಂದು ನಂಬಿದ್ದಾರೆ . ಆದರೆ ಇದರಿಂದ ದೊಡ್ಡ ಪವಾಡ ವೇನೂ ನಡೆಯುವುದಿಲ್ಲ . ಮಗುವಿನ ದೈಹಿಕ ಬೆಳವಣಿಗೆಯ ಕೆಲವು ಇಂಚ್ ಗಳಷ್ಟು ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು . ಈ ನಿರ್ದಿಷ್ಟ ಪೋಷಕಾಂಶಗಳು ಮಕ್ಕಳ ದೈಹಿಕ ಬೆಳವಣಿಗೆಗೆ ಬಲು ಸಹಕಾರಿ :
1 . ಪ್ರೋಟೀನ್‌ಗಳು
ಪ್ರೋಟೀನ್ ಅಂಶ ಮಗುವಿನ ಆಹಾರದಲ್ಲಿ ಸೇರಿರಬೇಕಾದ ಅತ್ಯಂತ ಅವಶ್ಯವಿರುವ ಒಂದು ಪೌಷ್ಟಿಕ ಅಂಶ . ಪ್ರೋಟೀನ್ ಅಂಶದ ಆಹಾರದ ಸೇವನೆಯಿಂದ ಮಕ್ಕಳ ಮಾಂಸ ಖಂಡಗಳು ಬಲಿಯುತ್ತವೆ ಮತ್ತು ಅಂಗಾಂಶಗಳ ಬೆಳವಣಿಗೆ ಮತ್ತು ನಿರ್ವಹಣೆಯಲ್ಲೂ ಸಹಕಾರಿಯಾಗುತ್ತದೆ . ಪ್ರೋಟೀನ್ ಅಂಶ ದೇಹದಲ್ಲಿ ಕಡಿಮೆ ಆದರೆ ಹ್ಯೂಮನ್ ಗ್ರೋಥ್ ಹಾರ್ಮೋನ್ ನ ಉತ್ಪತ್ತಿ ಕಡಿಮೆ ಆಗಿ ಮಗುವಿನ ಬಾಡಿ ಮಾಸ್ ಇಂಡೆಕ್ಸ್ ಕೂಡ ಕಡಿಮೆ ಆಗುತ್ತದೆ .
2 . ಕೆಲವು ಖನಿಜಾಂಶಗಳಾದ ಕಬ್ಬಿಣ , ಪುಟ್ಟ್ಯಾಷಿಯಂ , ಅಯೋಡೀನ್ , ಫೋಸ್ಫೋರಸ್ಸ್ ಮತ್ತು ಫ್ಲೂರೈಡ್ ಮಕ್ಕಳ ದೇಹದ ಎತ್ತರದ ಬೆಳವಣಿಗೆಯಲ್ಲಿ ಉಪಯೋಗಕ್ಕೆ ಬರುತ್ತವೆ . ಕ್ಯಾಲ್ಸಿಯಂ ಇದರಲ್ಲಿ ಇನ್ನೊಂದು ಖನಿಜಾಂಶವಾಗಿದ್ದು , ಕೇವಲ ಮೂಳೆಗಳ ಬೆಳವಣಿಗೆಯಲ್ಲಿ ಮಾತ್ರ ಸಹಕಾರಿಯಾಗದೆ , ದೇಹದ ಸಮಗ್ರ ಬೆಳವಣಿಗೆಯಲ್ಲೂ ತನ್ನ ಹಿರಿಮೆ ಸಾಧಿಸಿದೆ.
3 . ವಿಟಮಿನ್ ' ಡಿ ' : ವಿಟಮಿನ್ ' ಡಿ ' ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ . ದೇಹದಲ್ಲಿ ವಿಟಮಿನ್ ' ಡಿ ' ಅಂಶ ಕಡಿಮೆ ಆದಂತೆ ಮೂಳೆಗಳು ಮತ್ತು ಮಾಂಸ ಖಂಡಗಳು ಬಲಹೀನವಾಗುತ್ತವೆ ಮತ್ತು ದೇಹಕ್ಕೆ ಆಯಾಸ ಹೆಚ್ಚಾಗುತ್ತದೆ . ಇದರಿಂದ ದೇಹದ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀರಿದಂತೆ ಆಗುತ್ತದೆ . ಯಾವ ತರಕಾರಿ ಮತ್ತು ಹಣ್ಣುಗಳಲ್ಲಿ ಯಥೇಚ್ಛವಾಗಿ ವಿಟಮಿನ್ ' ಎ ' , ವಿಟಮಿನ್ ' ಬಿ 1 ' , ವಿಟಮಿನ್ ' ಬಿ 2 ' , ವಿಟಮಿನ್ ' ಸಿ ' , ವಿಟಮಿನ್ ' ಎಫ್ ' ಮತ್ತು ರಿಬೋಫ್ಲಾವಿನ್ ಅಂಶ ಹೆಚ್ಚಿಗೆ ಇರುತ್ತದೋ ಅವುಗಳು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಕಾರಿ .
4 . ಅತಿಯಾದ ಕಾರ್ಬೋಹೈಡ್ರೇಟ್ ಅಂಶ ಮಕ್ಕಳ ದೇಹ ಸೇರಿದರೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿರುವ ಅಂಶ . ಆದರೆ ಮಕ್ಕಳ ಬೆಳೆಯುವ ವಯಸ್ಸಿನಲ್ಲಿ ಇದು ಅವರ ದೇಹಕ್ಕೆ ಶಕ್ತಿ ಮತ್ತು ನವ ಚೈತನ್ಯ ಒದಗಿಸುತ್ತದೆ . ಪೋಷಕರು ಆದಷ್ಟು ಧಾನ್ಯ ಮತ್ತು ಸಿರಿ ಧಾನ್ಯ ಗಳ ಮೇಲೆ ಹೆಚ್ಚು ಒತ್ತು ಕೊಟ್ಟು ಪಿಜ್ಜಾ ,ಬರ್ಗರ್ ನಂತಹ ಅತಿಯಾದ ಕೊಬ್ಬಿನಂಶ ತುಂಬಿರುವ ಆಹಾರಗಳನ್ನು ತಡೆದಿದ್ದೆ ಆದರೆ ಮಕ್ಕಳು ಆರೋಗ್ಯವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ .
ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪಾತ್ರವಹಿಸಿರುವ ಆಹಾರಗಳು
*ಡೇರಿ ಉತ್ಪನ್ನಗಳಾದ ಹಾಲು , ಮೊಸರು , ಬೆಣ್ಣೆ ಗಳಲ್ಲಿ , ಪ್ರೋಟೀನ್ , ಮಿನರಲ್ , ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳಾದ ವಿಟಮಿನ್ ' ಎ ' , ವಿಟಮಿನ್ ' ಬಿ ' , ವಿಟಮಿನ್ ' ಡಿ ' ಮತ್ತು ವಿಟಮಿನ್ ' ಈ ' ಅಂಶಗಳು ಹೆಚ್ಚಾಗಿ ಸೇರಿದ್ದು ಮಕ್ಕಳ ಸಂಪೂರ್ಣ ದೇಹದ ಬೆಳವಣಿಗೆಯಲ್ಲಿ ಸಹಕಾರಿ .
*ಕೋಳಿ ಮೊಟ್ಟೆಗಳಲ್ಲಿ ಹೆಚ್ಚಾಗಿ ಪ್ರೋಟೀನ್ , ಕ್ಯಾಲ್ಸಿಯಂ , ರಿಬೋಫ್ಲಾವಿನ್ ಮತ್ತು ವಿಟಮಿನ್ ಗಳಾದ ವಿಟಮಿನ್ ' ಡಿ ' ಮತ್ತು ವಿಟಮಿನ್ ' ಬಿ 12 ' ಇದ್ದು , ಪ್ರತಿ ದಿನ ತಿನ್ನುವ ಆಹಾರದಲ್ಲಿ ಮೊಟ್ಟೆಯನ್ನು ತಾಯಂದಿರು ಸೇರಿಸಿ ಅದರಿಂದ ಮಾಡಿರುವ ಅನೇಕ ಖಾದ್ಯಗಳನ್ನು ತಮ್ಮ ಮಕ್ಕಳಿಗೆ ಕೊಟ್ಟಿದ್ದೇ ಆದರೆ ಮಕ್ಕಳು ತಿನ್ನಲು ಬೇಸರ ಪಡದೆ ದಷ್ಟ ಪುಷ್ಟವಾಗಿಯೂ ಆರೋಗ್ಯವಾಗಿಯೂ ಬೆಳೆಯುತ್ತಾರೆ .
*ಚಿಕನ್ ನ ಎಲ್ಲ ಭಾಗಗಳೂ ಅದರಲ್ಲೂ ಚಿಕನ್ ಬ್ರೆಸ್ಟ್ ಪ್ರೊಟೀನ್ ಅಂಶದಲ್ಲಿ ಹೆಚ್ಚಿದೆ . ಇದು ಟಿಶ್ಯೂ ರಿಪೇರ್ ಮತ್ತು ಮಾಂಸ ಖಂಡಗಳ ಬೆಳೆವಣಿಗೆಗೆ ಸಹಾಯ ಮಾಡಿ ಮಕ್ಕಳ ದೇಹದ ಎತ್ತರ ಬೆಳೆಯುವಿಕೆಯಲ್ಲಿ ಸಹಕಾರಿಯಾಗುತ್ತದೆ ಕೂಡ .
*ಸಸ್ಯಾಹಾರಿಗಳಿಗೆಂದೇ ಸೋಯಾ ಬೀನ್ಸ್ ತಯಾರಿದೆ . ಇದರಲ್ಲೂ ಸಹ ಪ್ರೋಟೀನ್ , ವಿಟಮಿನ್ , ಫೈಬರ್ , ಫೋಲೇಟ್ ಮತ್ತು ಕಾರ್ಬೋ ಹೈಡ್ರೇಟು ಗಳ ಅಂಶ ಹೆಚ್ಚಿದ್ದು ಮಕ್ಕಳ ದೇಹ ಉದ್ದ ಆಗುವುದರಲ್ಲಿ ಸಹಾಯ ಮಾಡುತ್ತದೆ .
*ಬಾಳೆ ಹಣ್ಣು ಸುಲಭವಾಗಿ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಎಲ್ಲರಿಗೂ ಸಿಗುತ್ತದೆ . ಇದರಲ್ಲಿ ಪುಟ್ಟ್ಯಾಷಿಯಂ , ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ ಹೆಚ್ಚಿದ್ದು ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡಿ ಅವರ ಚೈತನ್ಯವನ್ನು ಹೆಚ್ಚು ಮಾಡುತ್ತದೆ .
*ಇನ್ನು ಓಟ್ ಮೀಲ್ , ಕಾಳುಗಳು ಮತ್ತು ಬೀಜಗಳು ಒಮೇಗಾ 3 ಫ್ಯಾಟಿ ಆಸಿಡ್ ಗಳಲ್ಲಿ ಮತ್ತು ಪ್ರೋಟೀನ್ ಅಂಶದಲ್ಲಿ ಹೆಚ್ಚಿದ್ದು ಮಕ್ಕಳ ಬೆಳವಣಿಗೆಯಲ್ಲಿ ಹೊಸ ಚೈತನ್ಯವನ್ನು ಉಂಟು ಮಾಡುತ್ತದೆ . ಇವುಗಳನ್ನು ಪ್ರತಿ ದಿನ ಬೆಳಗಿನ ಉಪಹಾರದ ಸಮಯದಲ್ಲಿ ಅಥವಾ ಸಂಜೆಯ ಸ್ನ್ಯಾಕ್ ರೀತಿ ತಿನ್ನಬಹುದು .
*ಮಕ್ಕಳಿಗೆ ಹಸಿರು ಎಲೆ ತರಕಾರಿಗಳಾದ ಪಾಲಕ್ ಸೊಪ್ಪು , ಬ್ರೊಕೋಲಿ , ಓಕ್ರಾ , ಹಸಿ ಬಟಾಣಿ , ಬೊಕ್ ಚೊಯ್ ಇತ್ಯಾದಿ ಆಹಾರಗಳನ್ನು ಚಿಕ್ಕವರಿಂದಲೇ ರೂಡಿ ಮಾಡಿದರೆ ಮುಂದೆ ಬೆಳೆದು ದೊಡ್ಡವರಾದ ಮೇಲೆ ಆರೋಗ್ಯಕರವಾದ ಆಹಾರಕ್ಕೆ ಅವರೇ ಹೊಂದಿಕೊಂಡು ಹೋಗುತ್ತಾರೆ . ಹಸಿರು ಎಲೆ ತರಕಾರಿಗಳಲ್ಲಿ ವಿಟಮಿನ್ , ಮಿನರಲ್ ಮತ್ತು ಫೈಬರ್ ನ ಅಂಶ ಯಥೇಚ್ಛವಾಗಿದ್ದು , ದಿನ ನಿತ್ಯದ ಆಹಾರ ಬಳಕೆಯಲ್ಲಿ ಇವುಗಳು ಬಹಳ ಸೂಕ್ತ .
*ಹಣ್ಣುಗಳಾದ ಪಪಾಯ , ಆಪಲ್ , ಕಲ್ಲಂಗಡಿ ಹಣ್ಣು ಮತ್ತು ಆಪ್ರಿಕಾಟ್ ಗಳಲ್ಲಿ ಮಕ್ಕಳ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶಗಳೂ ಇವೆ . ಕ್ಯಾರಟ್ ಗಳಲ್ಲಿ ವಿಟಮಿನ್ ' ಎ ' ಮತ್ತು ವಿಟಮಿನ್ ' ಸಿ ' ಹೆಚ್ಚಾಗಿದ್ದು ಕ್ಯಾಲ್ಸಿಯಂ ಅಂಶ ಕೂಡ ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ .
*ಕಾಳುಗಳಲ್ಲಿ ಐರನ್ , ಮೆಗ್ನೀಷಿಯಂ , ಫೈಬರ್ ಮತ್ತು ಸೆಲೆನಿಯಮ್ ಅಂಶ ಹೆಚ್ಚಿದ್ದು ಮಕ್ಕಳ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುವುದರ ಜೊತೆಗೆ ಅವರ ದೈಹಿಕ ಬೆಳೆವಣಿಗೆಯಲ್ಲೂ ತನ್ನ ಪ್ರಾಬಲ್ಯ ಮೆರೆದಿವೆ .
ಫ್ಯಾಟಿ ಫಿಶ್ ಗಳಾದ ಸಾಲ್ಮನ್ , ಟುನ ಮತ್ತು ಕಾಡ್ ಮೀನುಗಳು ಪ್ರೋಟೀನ್ ಮತ್ತು ವಿಟಮಿನ್ ' ಡಿ ' ಅಂಶದಲ್ಲಿ ಮುಂದಿವೆ . ಇವು ಮಕ್ಕಳ ಬೆಳವಣಿಗೆಯಲ್ಲಿ ಬಹಳ ಉಪಯೋಗಕ್ಕೆ ಬರುತ್ತವೆ . ಕೆಂಪು ಮಾಂಸಾಹಾರವನ್ನೂ ಕೂಡ ಮಕ್ಕಳಿಗೆ ಪ್ರೋಟೀನ್ ಅಂಶಕ್ಕೆ ಅನುಗುಣವಾಗಿ ನಿಯಮಿತವಾಗಿ ಕೊಡಬಹುದು .
*ಟರ್ನಿಪ್ ಗಳನ್ನು ಮಕ್ಕಳ ಗ್ರೋಥ್ ಹಾರ್ಮೋನ್ ಹೆಚ್ಚಿಸಲು ತಿನ್ನಿಸಬಹುದು . ಏಕೆಂದರೆ ಇದರಲ್ಲೂ ಸಹ ಮಕ್ಕಳ ದೇಹಕ್ಕೆ ಅವಶ್ಯವಾಗಿ ಬೇಕಾಗಿರುವ ವಿಟಮಿನ್ ಗಳು ಮತ್ತು ಖನಿಜಾಂಶಗಳಿವೆ .
*ಮಕ್ಕಳ ಮಾನಸಿಕ ಬೆಳವಣಿಗೆಗೆ ಉಪಯೋಗವಾಗುವಂತೆ ಅವರ ದೈಹಿಕ ಬೆಳೆವಣಿಗೆಗೂ ಕೂಡ ಹಲವಾರು ರೀತಿಯ ಮನೆಯಲ್ಲೇ ತಯಾರು ಮಾಡಿದ ಆಹಾರಗಳಿವೆ . ಅದರಲ್ಲಿ ಒಂದು ಈ ರೀತಿ ಇದೆ . ಒಂದು ಮೊಟ್ಟೆಯನ್ನು ಒಂದು ಕಪ್ ಬಿಸಿ ಹಾಲಿಗೆ ಹಾಕಿ ಮಿಕ್ಸರ್ ಜಾರ್ ನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ . ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ಚೆನ್ನಾಗಿ ತಿರುಗಿಸಿ ಆ ಮಿಶ್ರಣವನ್ನು ಬೆಳೆಯುವ ಮಕ್ಕಳಿಗೆ ಕುಡಿಯಲು ಕೊಡಿ . ಮೊಟ್ಟೆ ಮತ್ತು ಹಾಲಿನಲ್ಲಿ ಅಧಿಕ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶ ಇದ್ದು ಮಕ್ಕಳ ಬೆಳವಣಿಗೆಗೆ ಇದೊಂದು ನೈಸರ್ಗಿಕವಾದ ಆಹಾರವಾಗಿದೆ . ಇದನ್ನು ಪ್ರತಿ ದಿನ ಕುಡಿಯುತ್ತಾ ಬಂದರೆ ಮಕ್ಕಳು ತಮ್ಮ ಎತ್ತರದಲ್ಲಿ ಗಣನೀಯ ಏರಿಕೆ ಕಾಣಬಹುದು .



Click it and Unblock the Notifications











