For Quick Alerts
ALLOW NOTIFICATIONS  
For Daily Alerts

ಶಾಲೆಯಲ್ಲಿ ಯೋಗ ಕಲಿಸಿದರೆ ಆತಂಕ ಪೀಡಿತ ಮಕ್ಕಳ ಮಾನಸಿಕ ಆರೋಗ್ಯ ಹೆಚ್ಚುತ್ತದೆ

By Sushma Charhra
|

ಶಾಲೆಗೆ ತೆರಳುವ ಮಕ್ಕಳ ಬಗ್ಗೆ ಸರಿಯಾದ ಕಾಳಜಿ ಇದ್ದಾಗ ಮಾತ್ರ ಅವರು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಹಾಯಕವಾಗುತ್ತದೆ. ಸದ್ಯ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಓದು ಮತ್ತು ಗ್ರೇಡ್ ಗಳ ವಿಚಾರಕ್ಕಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಶೈಲಿಯಲ್ಲಿ ವಿಭಿನ್ನವಾಗಿರುತ್ತಾನೆ.ಎಲ್ಲಾ ವಿದ್ಯಾರ್ಥಿಗಳ ಆಸಕ್ತಿಯನ್ನು ಸರಿಯಾದ ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಆ ಮೂಲಕ ಯಾವುದೇ ವಿದ್ಯಾರ್ಥಿಯೂ ಮಾನಸಿಕವಾಗಿ ಬಳಲದಂತೆ ಮತ್ತು ಒತ್ತಡಕ್ಕಾಗಲಿ ಇಲ್ಲವೇ ಉದ್ವೇಗಕ್ಕಾಗಲಿ ಒಳಗಾಗದಂತೆ ನೋಡಿಕೊಳ್ಳಬೇಕು.

ಶಿಕ್ಷಕರು ಮತ್ತು ಪಾಲಕರು ಇಬ್ಬರೂ ಕೂಡ ತಮ್ಮ ಮಕ್ಕಳ ವರ್ತನೆಯನ್ನು ಅರ್ಥೈಸಿಕೊಂಡು, ಸರಿಯಾದ ಮಟ್ಟದ ಮಾತುಕತೆಯನ್ನು ಅವರೊಂದಿಗೆ ಹೊಂದಿರಬೇಕಾಗುತ್ತದೆ. ಶಾಲೆಗಳು ಸರಿಯಾದ ರೀತಿಯ ಮತ್ತು ಕಾರ್ಯರೂಪಕ್ಕೆ ತರಬಹುದಾದ ಉಪಾಯಗಳ ಮುಖಾಂತರ ದುರ್ಬಲವಾಗಿರುವ ಮತ್ತು ಉದ್ವೇಗ ಪೀಡಿತ ವಿದ್ಯಾರ್ಥಿಗಳನ್ನು ತಮ್ಮ ಪ್ರತ್ಯೇಕ ವಲಯದಿಂದ ಹೊರಬರುವಂತೆ ಮಾಡಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಹಕರಿಸಬೇಕಾಗಿದೆ.

yoga and mental health therapy

ಕೆಲವು ವಿದ್ಯಾರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುತ್ತಿರುತ್ತಾರೆಯೇ ವಿನಃ ಅವರು ಬೆರೆಯವರೊಂದಿಗೆ ಬೆರೆತು ಬದುಕುವುದಿಲ್ಲ ಮತ್ತು ಅಷ್ಟೇ ಯಾಕೆ, ಅವರ ಪೋಷಕರೊಂದಿಗೂ ಕೂಡ ಅವರು ಬೆರೆಯಲು ಇಚ್ಛಿಸುವುದಿಲ್ಲ. ಇಂತಹ ಸಂದರ್ಬದಲ್ಲಿ, ಈ ವಿದ್ಯಾರ್ಥಿಗಳು ಅಂತಮುರ್ಖಿಗಳಾಗಿ ಗುರುತಿಸಲ್ಪಡುವುದರಿಂದಾಗಿ, ಇತರರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ ಮತ್ತು ಬೇರೆಯವರು ಯಾರೂ ಕೂಡ ಅವರೊಂದಿಗೆ ಮಾತನಾಡಲು ಪ್ರಯತ್ನಿಸುವುದೂ ಇಲ್ಲ.

ಇಂತಹ ಮಕ್ಕಳನ್ನು ಸಮಾಜಮುಖಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಶಾಲೆಗಳ ಜವಾಬ್ದಾರಿಯಾಗಲಿದೆ. ಇದಕ್ಕಿರುವ ಒಂದು ಉತ್ತಮ ಔಷಧಿ ಎಂದರೆ ಯೋಗ. ಹಲವಾರು ವರ್ಷಗಳಿಂದ ಯೋಗ ಪ್ರಚಲಿತದಲ್ಲಿರುವ ಒಂದು ಅಭ್ಯಾಸ ಕ್ರಮವಾಗಿದೆ. ಯೋಗವು ನಮ್ಮ ದೇಹ ಮತ್ತು ಮನಸ್ಸನ್ನು ಸ್ಥಿಮಿತದಲ್ಲಿಡಲು ಉತ್ಯುತ್ತಮ ಮಾರ್ಗವಾಗಿದೆ. ನಮ್ಮನ್ನು ಆಧ್ಯಾತ್ಮಿಕವಾಗಿ ನಮ್ಮ ಆಲೋಚನೆಗಳ ಜೊತೆ ಸಂಬಂಧ ಬೆಸೆದು, ದೈಹಿಕವಾಗಿ ಬಲಿಷ್ಟಗೊಳಿಸುವ ಒಂದು ಪದ್ದತಿಯಾಗಿದೆ ಯೋಗವನ್ನು, ತಮ್ಮ ಶಾಲೆಯ ಪಠ್ಯಕ್ರಮದಲ್ಲಿ ಅಳವಡಿಸಿದರೆ ಖಂಡಿತವಾಗಿಯೂ ಮಕ್ಕಳ ಮಾನಸಿಕ ಮತ್ತು ದೈಹಿಕ ಬಲವರ್ಧನೆಗೆ ಬಹಳವಾಗಿ ನೆರವಿಗೆ ಬರುತ್ತದೆ. ಯೋಗವು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವಲ್ಲಿಯೂ ಕೂಡ ನೆರವಿಗೆ ಬರುತ್ತದೆ.

ಕೆಳಗೆ ನೀಡಲಾಗಿರುವ ವಿವರಗಳಿಂದಾಗಿ ಹೇಗೆ ಆತಂಕ ಪೀಡಿದ ಮಕ್ಕಳನ್ನು ಯೋಗವು ಪರಿವರ್ತಿಸುತ್ತೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ:

1. ಯೋಗವು ಮಕ್ಕಳ ದೇಹದ ಒಳಗಿನ ಅರ್ಥವನ್ನು ಅರಿಯಲು ನೆರವು ಮಾಡಿಕೊಡುತ್ತದೆ. ಒಮ್ಮೆ ಅವರನ್ನು ಯೋಗಕ್ಕೆ ಪರಿಚಯಿಸಿದರೆ ಖಂಡಿತವಾಗಿಯೂ ಅವರು ಅವರ ಮನಸ್ಸ ಮತ್ತು ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದರ ನಿಟ್ಟಿನಲ್ಲಿ ಪ್ರಚೋದನೆಗೆ ಒಳಪಟ್ಟಿರುತ್ತಾರೆ. ಯಾವ ಮಕ್ಕಳು ಆತಂಕಕ್ಕೆ ಒಳಗಾಗಿರುತ್ತಾರೋ, ಅಂತವರು ಧ್ಯಾನ, ಉಸಿರಾಟ ಪ್ರಕ್ರಿಯೆಗಳಲ್ಲಿ ಸರಿಯಾಗಿ ತೊಡಗಿಸಿಕೊಂಡರೆ, ಅವರು ಅವರ ಒತ್ತಡದಿಂದ ಮುಕ್ತಿ ಪಡೆದು ಆರಾಮಾಗಿ ಜೀವಿಸಲು ಸಹಾಯಕವಾಗಲಿದೆ.

2. ಯೋಗವು ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ನೆರವು ನೀಡುತ್ತದೆ. ಪ್ರಮುಖ ವಿಚಾರಗಳ ಬಗ್ಗೆ ಅವರು ಯಾವಾಗಲೂ ಸಂಬಂಧ ಹೊಂದಿರುವಂತೆ ಇದು ನೋಡಿಕೊಳ್ಳುತ್ತದೆ. ಅದರಲ್ಲೂ ಪ್ರಮುಖವಾಗಿ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಲ್ಲಿ ಅವರ ಮನಸ್ಸು ಗುರಿಯಿಲ್ಲದ ಆಲೋಚನೆಗಳಲ್ಲಿ ಸಂಚರಿಸುತ್ತಿರುತ್ತದೆ.ಆಗ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವ ತಾಕತ್ತು ಯೋಗಕ್ಕಿದೆ

3. ಯೋಗವು ಮಕ್ಕಳ ವಿಶ್ವಾಸವನ್ನು ಹೆಚ್ಚಿಸುತ್ತದೆ. ಅಂತಮುರ್ಖಿಯಾಗುವ ವಿದ್ಯಾರ್ಥಿಗಳಿಗೆ ಇದು ಬಹಳವಾಗಿ ಬೇಕಾಗುತ್ತದೆ. ಯಾಕೆಂದರೆ ಅವರು ಯಾವಾಗಲೂ ಅವರ ಭಾವನೆಗಳನ್ನು ಹಂಚಿಕೊಳ್ಳದೇ ಕೊರಗುತ್ತಿರುತ್ತಾರೆ. ಅವರ ವಿಸ್ವಾಸವು ಅಧಿಕವಾದರೆ, ಅವರು ಅವರ ಸಮಸ್ಯೆಗಳ ಬಗ್ಗೆ ಟೀಚರ್ ಬಳಿ ಇಲ್ಲವೇ ಪಾಲಕರ ಬಳಿ ತಿಳಿಸುತ್ತಾರೆ ಮತ್ತು ಚರ್ಚಿಸುತ್ತಾರೆ

4. ಯೋಗವು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತೆ ಮತ್ತು ಆ ಮೂಲಕ ದುರ್ಬಲವಾಗಿದ್ದ ವಿದ್ಯಾರ್ಥಿಯು ಯಾವುದೇ ಕೆಲಸವನ್ನು ತೆಗೆದುಕೊಳ್ಳುವ ತಾಕತ್ತು ಬೆಳೆಸಿಕೊಳ್ಳುತ್ತಾನೆ ಮತ್ತು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಆತ ಸನ್ನದ್ಧವಾಗುತ್ತಾನೆ

5. ವಿದ್ಯಾರ್ಥಿಗಳು ದಿನ ಪೂರ್ತಿ ಸಾಕಷ್ಟು ಶಕ್ತಿಯನ್ನು ಬಯಸುತ್ತಾರೆ. ಯಾಕೆಂದರೆ ಅವರು ಶಾಲೆಯಲ್ಲಿ ಮತ್ತು ಮನೆಯಲ್ಲಿ ಹಲವು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಸಾಕಷ್ಟು ಶಕ್ತಿ ಬೇಕಾಗುತ್ತದೆ ಮತ್ತು ಇದು ಯೋಗದ ಸಹಾಯದಿಂದಾಗಿ ಅವರು ಪಡೆದುಕೊಳ್ಳಬಹುದಾಗಿದೆ. 6. ಯೋಗವು ವಿದ್ಯಾರ್ಥಿಗಳನ್ನು ಅವರ ಕೀಳರಿಮೆಯ ವಲಯದಿಂದ ಅವರನ್ನು ಹೊರತರಲು ಸಹಾಯವಾಗಿರುತ್ತದೆ. ಅವರನ್ನು ಯಾವಾಗಲೂ ಶಕ್ತಿಯುತರನ್ನಾಗಿಸುತ್ತದೆ.. ಇದು ಅವರಿಗೆ ಅವರ ಗುರಿ ಮತ್ತು ಅವರ ಕಾರ್ಯಕ್ಷಮತೆ ಬಗ್ಗೆ ಹೆಚ್ಚು ಜಾಗರೂಕರಾಗುವಂತೆ ಮಾಡುತ್ತದೆ.

ಬೇರೆಬೇರೆ ರೀತಿಯ ಯೋಗದ ಭಂಗಿಗಳು ಮಕ್ಕಳಿಗೆ ಹಲವು ರೀತಿಯಲ್ಲಿ ಸಹಾಯಕವಾಗಲಿವೆ..

*ಉಸಿರಾಟದ ವ್ಯಾಯಾಮ

*ಸಮತೋಲನ

*ಸ್ಟ್ರೆಚ್ಚಿಂಗ್

* ಉಸಿರಾಟದ ವ್ಯಾಯಾಮ: ಇದು ಆರೋಗ್ಯಕಾರಿ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ನೆರವಾಗುತ್ತದೆ ಮತ್ತು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.ಉಸಿರಾಟ ಪ್ರಕ್ರಿಯೆಯು ವಿದ್ಯಾರ್ಥಿಗಳ ಕೇಂದ್ರೀಕರಣ ಮತ್ತು ಶ್ವಾಸಕೋಸದ ಆರೋಗ್ಯಕ್ಕೆ ನೆರವು ನೀಡುತ್ತದೆ.

*ಸಮತೋಲನ : ಸಮತೋಲನ ಕಾಯ್ದುಕೊಳ್ಳುವ ಭಂಗಿಗಳು ಮನಸ್ಸನ್ನು ಶಾಂತವಾಗಿ ಮತ್ತು ಆರೋಗ್ಯವಾಗಿ ಕಾಪಾಡುವಲ್ಲಿ ಸಹಾಯಕವಾಗಿರುತ್ತದೆ. ಇದು ಸ್ವಾಭಾವಿಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲ ಮಾಡಿ ಕೊಡುತ್ತದೆ.

*ಸ್ಟ್ರೆಚ್ಚಿಂಗ್: ಇದು ಅವರ ದೇಹದ ಮಾಂಸ ಖಂಡಗಳನ್ನು ಬಲಿಷ್ಠಗೊಳಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ ಚೀಲ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಸಂದರ್ಬದಲ್ಲಿ ಸ್ಟ್ರೆಚ್ಚಿಂಗ್ ಅವರ ಮಾಂಸಖಂಡಗಳನ್ನು ಬಲಿಷ್ಟಗೊಳಿಸಲು ಬಹಳವಾಗಿ ಸಹಕಾರಿಯಾಗಿರುತ್ತದೆ.

ಯೋಗವು ವಿದ್ಯಾರ್ಥಿಗಳ ಸಂಪೂರ್ಣ ದೇಹಕ್ಕೆ ಕೆಲಸ ಕೊಡುತ್ತದೆ. ಯೋಗವು ಕೇಲವ ಮಕ್ಕಳ ಮಾನಸಿಕ ಆರೋಗ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ ಬದಲಾಗಿ ಅವರನ್ನು ದೈಹಿಕವಾಗಿಯೂ ಬಲಿಷ್ಟರನ್ನಾಗಿ ಮಾಡುತ್ತದೆ.

English summary

Yoga At School Can Boost Mental Health Of Anxiety Prone Children 

Yoga helps us to connect our mind and our soul. It is a discipline used to link our spirit with our senses and make us physically strong. Yoga, if included in the school curriculum will surely help children to have a command over their body and their senses. Yoga will tend to improve the learning capacity of children.
Story first published: Saturday, June 16, 2018, 14:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more