ಸಣ್ಣ ಮಕ್ಕಳ ತಲೆ ನೋವು, ನಿರ್ಲಕ್ಷಿಸಬೇಡಿ!, ಇದು ಮಾಮೂಲಿ ತಲೆ ನೋವಲ್ಲ!

Posted By: Hemanth
Subscribe to Boldsky

ತಲೆನೋವು ತುಂಬಾ ಕಿರಿಕಿರಿ ಉಂಟು ಮಾಡುವ ಹಾಗೂ ದೈನಂದಿನ ಕಾರ್ಯಚಟುವಟಿಕೆ ಮೇಲೆ ಪ್ರಭಾವ ಬೀರುವಂತಹ ಸಮಸ್ಯೆ. ತಲೆನೋವು ಕಾಣಿಸಿಕೊಂಡರೆ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ ಮತ್ತು ಇಡೀ ದಿನ ನೋವು ಕಾಡುವುದು. ದೊಡ್ಡವರಲ್ಲಿ ಸಾಮಾನ್ಯವಾಗಿ ತಲೆನೋವು ಬರುತ್ತಾ ಇರುವುದು. ಆದರೆ ಮಕ್ಕಳಿಗೂ ಈ ಸಮಸ್ಯೆ ಕಾಡುವುದು. 5-14ರ ಹರೆಯದ ಸುಮಾರು 15-20 ಶೇ. ಮಕ್ಕಳಿಗೆ ತಲೆನೋವಿನ ಸಮಸ್ಯೆಯಾಗುವುದು.

ಇದನ್ನು ಮಕ್ಕಳ ತಲೆನೋವು' ಎಂದು ಕರೆಯಲಾಗುವುದು. ಈ ತಲೆನೋವಿಗೆ ಕಾರಣವೇನೆಂದು ತಿಳಿಯಬೇಕು. ವಿವಿಧ ರೀತಿ ತಲೆನೋವುಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಇದಕ್ಕೆ ಕಾರಣಗಳು ಕೂಡ ಭಿನ್ನವಾಗಿರುವುದು. ಕೆಲವು ತಲೆನೋವು ನೋವು ಉಂಟು ಮಾಡುವುದು. ಇನ್ನು ಕೆಲವು ದೀರ್ಘಕಾಲದವರೆಗೆ ಇರುವುದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆನೋವಿನ ಬಗ್ಗೆ ಇರುವ ಸತ್ಯಗಳು....

ತಲೆನೋವಿದೆ ಇದೇ ಕಾರಣ!

ತಲೆನೋವಿದೆ ಇದೇ ಕಾರಣ!

ಕೆಲವು ಮಕ್ಕಳಲ್ಲಿ ಅತಿಯಾಗಿ ಅಳುವುದರಿಂದ, ನಿರ್ಜಲೀಕರಣ, ಊಟ ಮಾಡದೆ ಇರುವುದು, ಒತ್ತಡ ಮತ್ತು ದೇಹಕ್ಕೆ ದಣಿವು ಆಗಿರುವುದರಿಂದ ತಲೆನೋವು ಕಾಣಿಸಿಕೊಳ್ಳುವುದು.

ತಲೆನೋವಿನಲ್ಲೂ ಇದೆ ಎರಡು ವಿಧ!

ತಲೆನೋವಿನಲ್ಲೂ ಇದೆ ಎರಡು ವಿಧ!

ತಲೆನೋವನ್ನು ಮೊದಲ ಹಾಗೂ ದ್ವಿತೀಯ ಹಂತವೆಂದು ವಿಂಗಡಿಸಲಾಗಿದೆ. ಎರಡನೇ ಹಂತದ ತಲೆನೋವು ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬರಬಹುದು. ಅದೇ ಮೊದಲ ಹಂತದ ತಲೆನೋವು ಯಾವುದೇ ಅನಾರೋಗ್ಯವಿಲ್ಲದೆಯೂ ಬರಬಹುದು.

ತಲೆನೋವಿನಲ್ಲೂ ಇದೆ ಎರಡು ವಿಧ!

ತಲೆನೋವಿನಲ್ಲೂ ಇದೆ ಎರಡು ವಿಧ!

ಮೈಗ್ರೇನ್ ಮೊದಲ ಹಂತದ ತಲೆನೋವಾಗಿದೆ. ದೈಹಿಕ ಒತ್ತಡದಿಂದ ಬರುವ ತಲೆನೋವು ಕೂಡ ಮೊದಲ ಹಂತದೆಂದು ಹೇಳಲಾಗುತ್ತದೆ. ಒತ್ತಡದಿಂದ ಬರುವ ತಲೆನೋವಿನಿಂದ ತಲೆ ಹಾಗೂ ಹಣೆಯಲ್ಲಿ ನೋವು ಕಾಣಿಸಿಕೊಳ್ಳುವುದು.

ಮೈಗ್ರೇನ್ ತಲೆನೋವು...

ಮೈಗ್ರೇನ್ ತಲೆನೋವು...

ಮೈಗ್ರೇನ್ ಮೊದಲ ಹಂತದ ತಲೆನೋವಾಗಿದೆ. ದೈಹಿಕ ಒತ್ತಡದಿಂದ ಬರುವ ತಲೆನೋವು ಕೂಡ ಮೊದಲ ಹಂತದೆಂದು ಹೇಳಲಾಗುತ್ತದೆ. ಒತ್ತಡದಿಂದ ಬರುವ ತಲೆನೋವಿನಿಂದ ತಲೆ ಹಾಗೂ ಹಣೆಯಲ್ಲಿ ನೋವು ಕಾಣಿಸಿಕೊಳ್ಳುವುದು.

ಮಕ್ಕಳಿಗೂ ಕಾಡಬಹುದು ಮೈಗ್ರೇನ್ ತಲೆನೋವು

ಮಕ್ಕಳಿಗೂ ಕಾಡಬಹುದು ಮೈಗ್ರೇನ್ ತಲೆನೋವು

ಶೇ.10ರಷ್ಟು ಮಕ್ಕಳಲ್ಲಿ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುವುದು. ಇಂತಹ ತಲೆನೋವಿನಿಂದ ತಲೆಯಲ್ಲಿ ಮೆದು ಸ್ಪರ್ಶದ ಸಂವೇದನೆಯಾಗುವುದು. ಇದು ತೀವ್ರ ನೋವು ಉಂಟುಮಾಡಿ ಗಂಟೆಗಟ್ಟಲೆ ಮಕ್ಕಳಿಗೆ ಸಮಸ್ಯೆಯಾಗಬಹುದು. ಮಕ್ಕಳು ವಾಂತಿ ಕೂಡ ಮಾಡಿಕೊಳ್ಳಬಹುದು.

ಇದು, ದ್ವಿತೀಯ ಹಂತದ ತಲೆನೋವು..

ಇದು, ದ್ವಿತೀಯ ಹಂತದ ತಲೆನೋವು..

ಎರಡನೇ ಹಂತದ ತಲೆನೋವು ಸೋಂಕು, ಆತಂಕ, ಖಿನ್ನತೆ, ಸೈನಸ್ ಸಮಸ್ಯೆ ಮತ್ತು ಕುತ್ತಿಗೆ ಹಾಗೂ ತಲೆಯಲ್ಲಿ ಸೌಮ್ಯ ಆಘಾತದಿಂದ ಆಗಬಹುದು.

ಮಕ್ಕಳಲ್ಲಿ ತಲೆನೋವು ಕೆಲವು ದಿನಗಳ ಕಾಲ ಕಾಣಿಸಿಕೊಳ್ಳಬಹುದು

ಮಕ್ಕಳಲ್ಲಿ ತಲೆನೋವು ಕೆಲವು ದಿನಗಳ ಕಾಲ ಕಾಣಿಸಿಕೊಳ್ಳಬಹುದು

ದೀರ್ಘವಾದ ತಲೆನೋವು ಹತ್ತು ವರ್ಷ ದಾಟಿದ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಇಂತಹ ತಲೆನೋವು ಏಳು ದಿನ ಅಥವಾ ಅದಕ್ಕಿಂತ ಹೆಚ್ಚು ಸಮಯವಿರಬಹುದು. ನೋವು ಕಣ್ಣಿನ ಹಿಂಭಾಗದಲ್ಲಿ ಕಾಣಿಸಬಹುದು. ಕಣ್ಣು ಕೆಂಪಾಗುವುದು ಮತ್ತು ನೀರು ಬರುವುದು ಇದರ ಲಕ್ಷಣಗಳು. ಕಣ್ಣುಗಳು ಹಾಗೂ ಹಣೆಯಲ್ಲಿ ಊತ ಕಾಣಿಸಬಹುದು.

ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ...

ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ...

ಪದೇ ಪದೇ ತಲೆನೋವು ಬಂದರೆ ಇದಕ್ಕೆ ಗಡ್ಡೆಗಳು ಕಾರಣವಾಗಿರಬಹುದು. ಮಗು ಆಗಾಗ ತಲೆನೋವಿನ ಬಗ್ಗೆ ಹೇಳುತ್ತಾ ಇದ್ದರೆ ವೈದ್ಯರಲ್ಲಿ ಹೋಗಿ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.

English summary

What Causes Headaches For Kids

Most of us see only adults suffering from headaches but even children do suffer pain in the head sometimes. Around 15-20% of the kids between 5-14 years tend to experience headaches. They are categorsied as pediatric headaches. But what causes them? Well, there are types of headaches and each one has a different cause behind it. Some headaches are throbbing and pounding pains whereas some are chronic headaches. Here are more facts about headaches in children.