ಆಟ ಪಾಠದ ಜೊತೆಗೆ ನಿತ್ಯದ ದಿನಚರಿಯೂ ಶಿಸ್ತು ಬದ್ಧವಾಗಿರಲಿ

By: manu
Subscribe to Boldsky

ಮಕ್ಕಳಲ್ಲಿ ಒಳ್ಳೆಯ ಅಭ್ಯಾಸವನ್ನು ಚಿಕ್ಕಂದಿನಲ್ಲಿಯೇ ಬೆಳೆಸುವ ಮೂಲಕ ದೊಡ್ಡವರಾದ ಬಳಿಕವೂ ಅವರು ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ತದ್ವಿರುದ್ಧವಾಗಿ ಕೆಟ್ಟ ಅಭ್ಯಾಸಗಳನ್ನು ಚಿಕ್ಕಂದಿನಲ್ಲಿಯೇ ಸರಿಪಡಿಸದೇ ಇದ್ದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಮಾತು ಸತ್ಯವಾಗುತ್ತದೆ.

ಆದ್ದರಿಂದ ಚಿಕ್ಕಂದಿನಲ್ಲಿಯೇ ಶಿಸ್ತು ಮತ್ತು ಉತ್ತಮ ಅಭ್ಯಾಸಗಳನ್ನು ಮಕ್ಕಳಲ್ಲಿ ಅಳವಡಿಸುವ ಮೂಲಕ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ. ಶಿಸ್ತು ಎಂದರೆ ಮಕ್ಕಳ ಸ್ವಾತಂತ್ರ್ಯವನ್ನೇ ಕಸಿದಂತಲ್ಲ, ಅವರಿಗೆ ಅಗತ್ಯವಿದ್ದಷ್ಟು ಸ್ವಾತಂತ್ರ್ಯವನ್ನೂ ನೀಡಬೇಕು. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...

ಒಂದು ವೇಳೆ ಮಕ್ಕಳಿಗೆ ತೀರಾ ಹೆಚ್ಚು ಶಿಸ್ತು ಮೂಡಿಸಿದರೆ ಮಕ್ಕಳು ದೊಡ್ಡವರ ಪ್ರತಿ ದ್ವೇಶಭಾವನೆಯನ್ನು ಬೆಳೆಸಿಕೊಳ್ಳಬಹುದು. ಗಾಳಿಪಟವನ್ನು ಅಗತ್ಯಕ್ಕೂ ಹೆಚ್ಚು ಬಿಗಿಯಾಗಿಸಿದರೆ ದಾರವೇ ತುಂಡಾಗಿಸಿ ಹೋಗುವಂತೆ ಮಕ್ಕಳು ಪಾಲಕರಿಂದ ಕೈತಪ್ಪಿ ಹೋಗಬಹುದು. ನಿಮ್ಮ ದುರ್ಗುಣಗಳನ್ನು ಮಕ್ಕಳೆದುರು ತೋರ್ಪಡಿಸಬೇಡಿ!

ಆದ್ದರಿಂದ ಮಕ್ಕಳ ದಿನಚರಿಯನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಅಳವಡಿಸಿ ಈ ವೇಳಾಪಟ್ಟಿಯನ್ನು ಇಷ್ಟಪಟ್ಟು ಅನುಸರಿಸುವಂತೆ ನೋಡಿಕೊಂಡರೆ ಮಕ್ಕಳು ಹೆಚ್ಚು ತನ್ಮಯದಿಂದ ಪಾಲಿಸುವುದು ಮಾತ್ರವಲ್ಲ, ಉತ್ತಮ ವ್ಯಕ್ತಿಗಳಾಗಿಯೂ ಹೊರಹೊಮ್ಮುತ್ತಾರೆ. ಬನ್ನಿ, ಐದು ವರ್ಷದಿಂದ ಹನ್ನೊಂದು ವರ್ಷದ ಮಕ್ಕಳ ದಿನಚರಿ ಹೇಗಿರಬೇಕು ಎಂಬುದನ್ನು ನೋಡೋಣ....    

ಬೆಳಿಗ್ಗೆ ಏಳುವುದು

ಬೆಳಿಗ್ಗೆ ಏಳುವುದು

ಮಕ್ಕಳು ಬೆಳಿಗ್ಗೆ ಸೂರ್ಯಾಸ್ತಕ್ಕೂ ಮುನ್ನ ಏಳುವಂತೆ ಅಭ್ಯಾಸ ಮಾಡಿಸಿ. ಬೆಳಿಗ್ಗೆ ಆರು ಗಂಟೆಗೆ ಎದ್ದೇಳುವುದು ಅತ್ಯುತ್ತಮ ಸಮಯವಾಗಿದೆ. ಆದರೆ ಮಕ್ಕಳಿಗೆ ನಿದ್ದೆ ಕಡಿಮೆಯೂ ಆಗಬಾರದು. ಆದ್ದರಿಂದ ರಾತ್ರಿ ಕ್ಲುಪ್ತ ಸಮಯಕ್ಕೆ ಮಲಗುವಂತೆ ಮಾಡುವುದು ಅವಶ್ಯ.

ಹಲ್ಲುಜ್ಜುವುದು

ಹಲ್ಲುಜ್ಜುವುದು

ಬೆಳಿಗೆದ್ದ ತಕ್ಷಣ ಮಕ್ಕಳು ಹಲ್ಲುಜ್ಜಿಕೊಳ್ಳುವುದನ್ನು ಅಭ್ಯಾಸ ಮಾಡಿಸಿ. ಬಾಯಿಯ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ.

ಕೊಂಚ ವ್ಯಾಯಾಮ

ಕೊಂಚ ವ್ಯಾಯಾಮ

ಪ್ರಾತಃವಿಧಿಯ ಬಳಿಕ ಕೊಂಚ ದೈಹಿಕ ವ್ಯಾಯಮವನ್ನು ಅನುಸರಿಸುವಂತೆ ಮಾಡಿ.

ಸ್ನಾನ

ಸ್ನಾನ

ವ್ಯಾಯಾಮ ಅಥವಾ ಆಟದ ಬಳಿಕ ಕಡ್ಡಾಯವಾಗಿ ಸ್ನಾನ ಮಾಡಿಕೊಳ್ಳುವ ಅಭ್ಯಾಸ ಮಾಡಿಸಿ. ಸ್ನಾನ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿ, ಮುಂದಿನ ದಿನಗಳಲ್ಲಿ ತಾವೇ ಸ್ವತಃ ಸ್ನಾನ ಮಾಡಿಕೊಳ್ಳುವಂತೆ ಮಾಡಿ.

ಉಪಾಹಾರ

ಉಪಾಹಾರ

ಸ್ನಾನದ ಬಳಿಕವೇ ಉಪಾಹಾರ ಮಾಡುವ ಅಭ್ಯಾಸ ಮಾಡಿ. ಸರ್ವಥಾ ಸ್ನಾನಕ್ಕೂ ಮೊದಲು ಉಪಾಹಾರ ಕೂಡದು. ಉಪಾಹಾರ ಅಲ್ಪವಾಗಿರಲಿ. ಅತಿ ಹೆಚ್ಚಾಗಿರಬಾರದು. ಬೇಯಿಸಿದ ಮೊಟ್ಟೆ, ಸಾಲಾಡ್, ಹಸಿರು ಮತ್ತು ಹಸಿಯಾಗಿ ಸೇವಿಸಬಹುದಾದ ತರಕಾರಿ, ಬ್ರೆಡ್ ಮೊದಲಾದವು ಉತ್ತಮ. ಆದರೆ ಸಕ್ಕರೆಯ ಪ್ರಮಾಣ ಹೆಚ್ಚಿರುವ ಯಾವುದೇ ಆಹಾರ ಅತ್ಯಲ್ಪವಿರಲಿ.

ಶಾಲೆಗೆ ಹೋಗುವುದು

ಶಾಲೆಗೆ ಹೋಗುವುದು

ಶಾಲೆಗೆ ಹೋಗುವ ಮುನ್ನ ಆ ದಿನದ ಅಗತ್ಯದ ಎಲ್ಲಾ ಪುಸ್ತಕ ಮತ್ತು ಪಠ್ಯ ಸಾಮಾಗ್ರಿಗಳು

ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳುವ ಅಭ್ಯಾಸ ಮಾಡಿಸಿ. ಅಂತೆಯೇ ಅಂದಿನ ಸಮವಸ್ತ್ರ, ಹಿಂದಿನ ದಿನ ಶಿಕ್ಷಕರು ಏನಾದರೂ ಹೇಳಿದ್ದರೆ ಅದನ್ನು ನೆನಪಿಸಿಕೊಂಡು ತಪ್ಪದೇ ಅನುಸರಿಸಲು ಅಭ್ಯಾಸ ಮಾಡಿಸಿ. ಅಲ್ಲದೇ ಮಧ್ಯಾಹ್ನದ ಊಟವನ್ನು ತಪ್ಪದೇ ಮಾಡಲು ಜ್ಞಾಪಿಸಿ.

ಮಧ್ಯಾಹ್ನದ ಊಟ

ಮಧ್ಯಾಹ್ನದ ಊಟ

ಮಧ್ಯಾಹ್ನ ಸರಿಯಾಗಿ ಒಂದು ಘಂಟೆಗೆ ಮಕ್ಕಳು ಊಟ ಮಾಡುವಂತೆ ಆಗ್ರಹಿಸಿ. ಈ ಊಟ ಸಾಕಷ್ಟು ಪೌಷ್ಟಿಕ ಹಾಗೂ ಸತ್ವಯುತವಾಗಿರಬೇಕು. ಅನಾರೋಗ್ಯಕರ ಸಿದ್ಧ ಆಹಾರಗಳತ್ತ ಒಲವು ತೋರದಿರುವಂತೆ ಚಿಕ್ಕಂದಿನಿಂದಲೇ ಮನವೊಲಿಸಿ.

ಆಟೋಟಗಳು

ಆಟೋಟಗಳು

ಶಾಲೆಯ ಪಾಠಗಳ ಬಳಿಕ ಶಾಲೆಯ ಬಯಲಿನಲ್ಲಿ ಅಥವಾ ಮನೆಗೆ ಹಿಂದಿರುಗಿದ ಬಳಿಕ ಮನೆಯ ಹತ್ತಿರವಿರುವ ಬಯಲಿನಲ್ಲಿ ಸಮವಯಸ್ಕ ಮಕ್ಕಳೊಂದಿಗೆ ಆಡುವ ಅಭ್ಯಾಸ ಮಾಡಿಸಿ. ಅದರೆ ಸರ್ವಥಾ ಸೂರ್ಯ ಮುಳುಗುವ ಮುನ್ನ ಮನೆಯಲ್ಲಿರಬೇಕೆಂಬ ನಿಬಂಧನೆಗೆ ಒಳಗಾಗಲು ತಿಳಿಸಿ, ಆಟದ

ಹುಮ್ಮಸ್ಸಿನಲ್ಲಿ ತಡವಾಗದಂತೆ ಕೊಂಚ ಗದರಿಸಿ ಸರಿಯಾದ ಸಮಯಕ್ಕೆ ಮನೆ ಸೇರುವ ಅಭ್ಯಾಸ ಮಾಡಿಸಿ.

ರಾತ್ರಿಯ ಊಟ ಮತ್ತು ನಿದ್ದೆ

ರಾತ್ರಿಯ ಊಟ ಮತ್ತು ನಿದ್ದೆ

ಆಟದ ಬಳಿಕ ಕೈ ಕಾಲು ತೊಳೆದುಕೊಂಡು ಅಂದಿನ ಪಾಠದ ಪುನರಾವರ್ತನೆ, ಮನೆಲೆಕ್ಕ, ಧಾರ್ಮಿಕ ಅಧ್ಯಯನ ಮೊದಲಾದವುಗಳ ಮೂಲಕ ರಾತ್ರಿಯ ವೇಲೆ ಕಳೆಯಲಿ. ಬಳಿಕ ಸತ್ವಯುತ ಆಹಾರ ಸೇವಿಸಿ ಮಲಗುವ ಉಡುಗೆಗಳನ್ನು ತಾನೇ ತೊಡುವ ಅಭ್ಯಾಸ ಮಾಡಿಸಿ. ಮಲಗುವ ಮುನ್ನ ಪುಸ್ತಕದ ಕೆಲವು ಪುಟಗಳನ್ನಾದರೂ ಓದುವ ಅಭ್ಯಾಸ ಮಾಡಿಸಿ. ರಾತ್ರಿ ಒಂಬತ್ತಕ್ಕೆಲ್ಲಾ ಮಲಗುವ ಅಭ್ಯಾಸ ಮಾಡಿಸಿ.

 
English summary

Daily Routine Of Your Kid

Being too strict or harsh will make the kid hate childhood. So, maintain the right balance. The main objective of cultivating a routine is to allow the kid perform all his tasks on time and grow well.So, here is a simple routine followed by kids between the age of 5 and 11. Read on...
Please Wait while comments are loading...
Subscribe Newsletter