For Quick Alerts
ALLOW NOTIFICATIONS  
For Daily Alerts

ಮಗುವಿಗೆ ಎದೆ ಹಾಲುಣಿಸುವ ವಿಷಯದಲ್ಲಿ, ನಿರ್ಲಕ್ಷ್ಯ ಸಲ್ಲದು

By Hemanth
|

ಮಹಿಳೆಯ ಜೀವನ ಪೂರ್ತಿಗೊಳ್ಳುವುದೇ ಆಕೆ ಮಗುವಿಗೆ ಜನ್ಮ ನೀಡಿದಾಗ. ಆ ಸಂದರ್ಭದಲ್ಲಿ ಆಕೆ ಸಾವಿರಪಟ್ಟು ನೋವನ್ನುಂಡರೂ ಮಗುವಿನ ಮುಖವನ್ನು ನೋಡಿ ಮುಗುಳ್ನಗುತ್ತಾಳೆ. ಈ ಸಂಭ್ರಮದೊಂದಿಗೆ ಆಕೆಯ ಹೊಸ ಜೀವನವೊಂದು ಇಲ್ಲಿಂದಲೇ ಆರಂಭವಾಗುತ್ತದೆ. ತನ್ನ ಮಗುವಿಗಾಗಿ ಆಕೆ ಜೀವನವನ್ನೇ ಮುಡಿಪಾಗಿಡಬೇಕೆಂದು ಮನದಲ್ಲೇ ಶಪಥ ಮಾಡಿಕೊಳ್ಳುತ್ತಾಳೆ. ಇದಕ್ಕಾಗಿ ಆಕೆ ರಾತ್ರಿ ನಿದ್ರೆ ಬಿಟ್ಟು ಅಳುತ್ತಿರುವ ಮಗುವನ್ನು ಆಡಿಸುತ್ತಾಳೆ, ಅದನ್ನು ಮುದ್ದು ಮಾಡಿ ಹಾಲುಣಿಸುತ್ತಾಳೆ. ಮಗುವಿನ ಲಾಲನೆಪಾಲನೆಗಾಗಿ ತನ್ನ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುತ್ತಾಳೆ.

Signs Your Baby Needs To Be Breast Fed Now!

ಇದಕ್ಕಾಗಿ ಆಕೆ ಎಲ್ಲವನ್ನು ಬಿಟ್ಟು ಮಗುವಿನ ಆರೈಕೆ ಹೇಗೆ ಮಾಡಬೇಕು ಎನ್ನುವುದನ್ನು ಮೊದಲು ಕಲಿತುಕೊಳ್ಳುತ್ತಾಳೆ. ಮೊದಲ ಸಲ ತಾಯಿಯಾಗುವ ಮಹಿಳೆಯರು ಸಂತೋಷದೊಂದಿಗೆ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ತಮ್ಮ ಮಗುವನ್ನು ಬೆಳೆಸುತ್ತಾರೆ. ಬೋಲ್ಡ್ ಸ್ಕೈ ಹಿಂದಿನಿಂದಲೂ ತಾಯಿಯಂದರಿಗೆ ಸಲಹೆಗಳನ್ನು ನೀಡುತ್ತಲೇ ಬಂದಿದೆ. ಈಗ ಮಗುವಿಗೆ ಯಾವ ಸಮಯದಲ್ಲಿ ಹಾಲುಣಿಸಬೇಕು ಎನ್ನುವುದನ್ನು ಇಲ್ಲಿ ಹೇಳಿಕೊಡಲಿದೆ.

1. ಮಗು ತುಂಬಾ ಸಮಯದ ತನಕ ಅಳುತ್ತಾ ಇದ್ದರೆ ಆಗ ಮಗುವಿನ ಹೊಟ್ಟೆ ಪೂರ್ತಿಯಾಗಿ ತುಂಬಿಲ್ಲವೆಂದು ಅರ್ಥಮಾಡಿಕೊಳ್ಳಬೇಕು. ಈ ಸಮಯದಲ್ಲಿ ಮಗುವಿಗೆ ಹಾಲುಣಿಸಬೇಕು. ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?

2. ನಿಮ್ಮ ಮಗುವು ತುಂಬಾ ಕಡುಬಣ್ಣದ ಹಾಗೂ ಗಟ್ಟಿ ಮಲವಿಸರ್ಜನೆ ಮಾಡುತ್ತಲಿದ್ದರೆ ಆಗ ಮಗುವಿಗೆ ಸರಿಯಾಗಿ ಹಾಲು ಸಿಗುತ್ತಿಲ್ಲವೆಂದರ್ಥ. ಇದರಿಂದ ಮಲಬದ್ಧತೆ ಉಂಟಾಗಬಹುದು. ಮಗುವಿಗೆ ತಾಯಿಯ ಹಾಲು ಮಾತ್ರ ಪೋಷಕಾಂಶ ಒದಗಿಸುತ್ತದೆ.

3. ನಿಮ್ಮ ಮಗುವು ತುಂಬಾ ನಿದ್ರೆ ಮಾಡುತ್ತಿದ್ದರೆ ಅದು ಒಳ್ಳೆಯ ಸೂಚನೆ. ಆದರೆ ಮಗುವಿನ ಹೊಟ್ಟೆ ಖಾಲಿಯಾಗಿ ಶಕ್ತಿಯಿಲ್ಲದೆ ಮಗು ನಿದ್ರಿಸುತ್ತಿರಬಹುದು. ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಫಲಪ್ರದ ಸಲಹೆ

4. ನಿಮ್ಮ ಮಗುವಿನ ತೂಕ ಒಂದೇ ರೀತಿಯಲ್ಲಿದ್ದಾಗ ಅದರ ಕಡೆ ಗಮನ ಹರಿಸಬೇಕು. ಯಾಕೆಂದರೆ ಮಗುವಿನ ತೂಕ ಪ್ರತೀ ತಿಂಗಳು ಹೆಚ್ಚುತ್ತಿರಬೇಕು. ಆಗ ಆರೋಗ್ಯವಾಗಿರುತ್ತದೆ. ಮಗುವಿನ ತೂಕ ಒಂದೇ ಸಮನವಾಗಿದ್ದರೆ ಅಥವಾ ಮಗು ತೂಕ ಕಳೆದುಕೊಳ್ಳುತ್ತಿದ್ದರೆ ಆಗ ಮಗುವಿಗೆ ಸರಿಯಾಗಿ ಹಾಲು ಸಿಗುತ್ತಿಲ್ಲವೆಂದರ್ಥ.

5. ನಿಮ್ಮ ಸ್ತನ ಮೃದು ಹಾಗೂ ಹಗುರವಾಗಿ ಕಾಣಿಸದಿದ್ದರೆ ಆಗ ಉತ್ಪಾದನೆಯಾದ ಹಾಲನ್ನು ಮಗು ಸರಿಯಾಗಿ ತಿನ್ನುತ್ತಲಿಲ್ಲ ಎಂದು ತಿಳಿದುಕೊಳ್ಳಬೇಕು. ಇದರಿಂದ ಮಗುವಿನ ಹೊಟ್ಟೆ ತುಂಬಿಲ್ಲವೆಂದರ್ಥ.

Read more about: baby milk ಮಗು ಹಾಲು
English summary

Signs Your Baby Needs To Be Breast Fed Now!

If you are a new mother trying to understand the feeding need of your baby, then you should ...
X
Desktop Bottom Promotion