For Quick Alerts
ALLOW NOTIFICATIONS  
For Daily Alerts

ಹಾದಿ ತಪ್ಪುತ್ತಿರುವ ಮಕ್ಕಳ ವರ್ತನೆಯ ಬಗ್ಗೆ ಎಚ್ಚರ....

By Jaya subramanya
|

ಮಕ್ಕಳೊಂದಿಗೆ ನಿರಂತರ ವಾಗ್ವಾದಗಳು ಕಲಹಗಳು ನಡೆಯುತ್ತಿರುವಾಗ ನಿಮ್ಮ ಮನದಲ್ಲಿ ಮಕ್ಕಳ ಬಗೆಗಿನ ದಿಢೀರ್ ವರ್ತನೆಯ ಬಗೆಗೆ ಆತಂಕವುಂಟಾಗುವುದು ಸಹಜವೇ ಆಗಿದೆ. ಹಾಗಿದ್ದರೆ ಇದಕ್ಕೆ ಕಾರಣವೇನು ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯಲು ಹೆತ್ತವರು ಅವರಿಗೆ ಮಾರ್ಗದರ್ಶನವನ್ನು ನೀಡುತ್ತಾರೆ. ಮಕ್ಕಳ ಮುಂದೆ ವಾಗ್ವಾದ ಮಾಡುವ ಮುನ್ನ ಸ್ವಲ್ಪ ಯೋಚಿಸಿ

ಅದಾಗ್ಯೂ ನಿಮ್ಮ ಮಕ್ಕಳು ಕೆಟ್ಟ ಸ್ನೇಹಿತರನ್ನು ಆಯ್ಕೆಮಾಡಿಕೊಂಡಿದ್ದಾರೆ, ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದಾದಲ್ಲಿ ಆಕೆಯ/ಆತನ ಭವಿಷ್ಯ, ವಿದ್ಯಾಭ್ಯಾಸದ ಮೇಲೆ ಇದು ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಪೋಷಕರು ಕೂಡಲೇ ಜಾಗರೂಕರಾಗಬೇಕು. ಹೆಚ್ಚಿನ ಸಮಯಗಳಲ್ಲಿ, ವಿಶೇಷವಾಗಿ 13 ಮತ್ತು 18 ವರ್ಷಗಳ ನಡುವೆ, ಮಕ್ಕಳು ಹಠಾತ್ ಪ್ರವೃತ್ತಿಯ ವರ್ತನೆ ಮತ್ತು ದುಡುಕಿನಿಂದ ವರ್ತಿಸಲಿದ್ದು ಅಪೇಕ್ಷಣೀಯವಲ್ಲದ ಕೆಲಸಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಬಹುದು. ಮಗು ಕೋಪಗೊಂಡಿರುವಾಗ ಉಪದೇಶ ಮಾಡಲು ಹೋಗಬೇಡಿ!

ಸಮೀಪವರ್ತಿಗಳ ಒತ್ತಡವು, ತಾವು ಕೂಡ ಶಾಲೆಯಲ್ಲಿ ಮಿಂಚಬೇಕೆಂಬ ಆಸೆಯಿಂದ ತಮ್ಮ ಅಧ್ಯಯನ ಮತ್ತು ಮುಂದಿನ ಭವಿಷ್ಯಕ್ಕೆ ಸಂಚಕಾರಿಯಾಗಿರುವ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಅವರನ್ನು ಉತ್ತೇಜಿಸುತ್ತದೆ. ಉದಾಹರಣೆಗೆ, ಕೆಲವೊಂದು ಮಾರಕ ದುರಾಭ್ಯಾಸಗಳಾದ, ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ, ಅಸುರಕ್ಷಿತ ಲೈಂಗಿಕತೆಯನ್ನು ಹೊಂದುವುದು, ಹೀಗೆ ಜೀವನಕ್ಕೆ ತೊಡಕಾಗಿರುವ ಪ್ರವೃತ್ತಿಗಳನ್ನು ಅವರು ಬೆಳೆಸಿಕೊಳ್ಳಬಹುದು. ಒಂದು ವೇಳೆ ನಿಮ್ಮ ಮಕ್ಕಳು ಕೆಟ್ಟ ಹಾದಿಯಲ್ಲಿ ಮತ್ತು ಕೆಟ್ಟ ಸ್ನೇಹಿತರ ಸಹವಾಸವನ್ನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕೆಲವೊಂದು ಸುಳಿವುಗಳನ್ನು ನೀಡಿದ್ದು ಕೆಳಗಿನ ಸ್ಲೈಡರ್‎ಗಳಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಲಕ್ಷಣ #1

ಲಕ್ಷಣ #1

ಮುಗ್ಧ, ಶಾಂತ ಮತ್ತು ನಿಷ್ಟನಾಗಿದ್ದ ನಿಮ್ಮ ಮಗು ನಿಮ್ಮೊಂದಿಗೆ ಒರಟಾಗಿ ವರ್ತಿಸಲು ಅಂತೆಯೇ ಎದುರುತ್ತರ ಹೇಳಲು ಆರಂಭಿಸಿದಲ್ಲಿ ಅದೂ ಅವರ ಚಟುವಟಿಕೆಗಳು ಮತ್ತು ಸ್ನೇಹಿತರ ಬಗ್ಗೆ ನೀವು ಕೇಳಿದಾಗ.

ಲಕ್ಷಣ #2

ಲಕ್ಷಣ #2

ನೀವು ಆಗಾಗ್ಗೆ ಕರೆಮಾಡಿದ ನಂತರವೇ ನಿಮ್ಮ ಮಗು ಮನೆಗೆ ಬಂದು ಸೇರುತ್ತಿದ್ದಲ್ಲಿ ಅಂತೆಯೇ ಇಷ್ಟು ಹೊತ್ತು ಎಲ್ಲಿದ್ದಿ ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡದೇ ಇದ್ದಲ್ಲಿ....

ಲಕ್ಷಣ #3

ಲಕ್ಷಣ #3

ಚೆನ್ನಾಗಿ ಕಲಿಯುತ್ತಿದ್ದ ಮಗು ಒಮ್ಮೆಲೇ ಕಲಿಕೆಯಲ್ಲಿ ಹಿಂದೆ ಬಿದ್ದಾಗ, ಶಿಕ್ಷಕರಿಂದ ಮಗುವಿನ ವರ್ತನೆಯ ಬಗ್ಗೆ ನಿಮಗೆ ದೂರು ಬಂದಲ್ಲಿ ಈ ಬಗ್ಗೆ ನಿಮಗೆ ತಿಳಿದೇ ಇರದ ಸಂದರ್ಭದಲ್ಲಿ ನೀವು ಎಚ್ಚರಗೊಳ್ಳಬೇಕು.

ಲಕ್ಷಣ #4

ಲಕ್ಷಣ #4

ಕೊಠಡಿಯನ್ನು ಲಾಕ್ ಮಾಡಿ ಅದರೊಳಗೆ ನಿಮ್ಮ ಮಗು ಮಗಳು ತುಂಬಾ ಹೊತ್ತು ಕುಳಿತಿದ್ದರೆ ಅಂತೆಯೇ ಕುಟುಂಬ ಸುತ್ತಾಟ, ಊಟಕ್ಕೆ ಜೊತೆಯಾಗಲು ನಿರಾಕರಿಸಿದಲ್ಲಿ ಕೊಠಡಿಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಲ್ಲಿ ಎಚ್ಚರಗೊಳ್ಳಿ.

ಲಕ್ಷಣ #5

ಲಕ್ಷಣ #5

ನಿಮ್ಮ ಮಗು ತಡರಾತ್ರಿ ಮನೆಗೆ ಬಂದಲ್ಲಿ, ಮದ್ಯಪಾನ, ಸಿಗರೇಟಿನ ವಾಸನೆ ಅವರ ಬಾಯಿಂದ ಬರುತ್ತಿದ್ದಲ್ಲಿ ನೀವು ಇದನ್ನು ಕೂಡಲೇ ತಡೆಗಟ್ಟಬೇಕು ಇಲ್ಲದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.

ಲಕ್ಷಣ #6

ಲಕ್ಷಣ #6

ಶಾಲಾ ಸಮಯಗಳು, ಅವರುಗಳು ಇರುವಿಕೆ, ಕಲಿಕೆ ಮೊದಲಾದವುಗಳಲ್ಲಿ ನಿರಂತರ ಸುಳ್ಳು ಹೇಳುವುದು, ಹಣ ಕದಿಯುವುದೂ ಇವೆಲ್ಲವೂ ಮಕ್ಕಳ ಬದಲಾದ ಪ್ರವೃತ್ತಿಯನ್ನು ತೋರಿಸುತ್ತಿರುತ್ತದೆ.

ಲಕ್ಷಣ #7

ಲಕ್ಷಣ #7

ನೀವು ಮಕ್ಕಳನ್ನು ವಿನಂತಿಸಿಕೊಂಡಾಗ ತಮ್ಮ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬರಲು ಅವರು ತಿರಸ್ಕರಿಸಿದಲ್ಲಿ ಈ ಬಗ್ಗೆ ಗಮನ ನೀಡಿ. ತಾವು ಕೆಟ್ಟವರ ಸಹವಾಸವನ್ನು ಮಾಡುತ್ತಿದ್ದೇವೆ ಎಂಬ ಸಂಗತಿ ಅವರಿಗೆ ತಿಳಿದಿದ್ದೂ ಇದನ್ನು ನಮ್ಮ ಹೆತ್ತವರು ಸ್ವೀಕರಿಸುವುದಿಲ್ಲ ಎಂಬುದನ್ನು ಮನಗಂಡೇ ಅವರು ಸ್ನೇಹಿತರನ್ನು ಮನೆಗೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂದರ್ಥ.

English summary

Signs That Show Your Teenage Kid Is In Bad Company

Many a times, especially between the ages of 13 and 18 years, children tend to develop an impulsive attitude and a reckless behaviour, which may lead them into doing certain things that are not desirable. Peer pressure, the desire to "fit in" with the so called "cool" kids of their age, may lead a teenager to take some decisions that may affect his/her studies, health and life in general.
X
Desktop Bottom Promotion